Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಡಿಜಿಟಲ್ ಕವಿತೆ

ನಾನೊಂದು ಬರೆದೆ ಸುಂದರವಾದ ಸಣ್ಣ ಕವಿತೆ ಅಧರೆ ತಪ್ಪಿ ಹೋದೆ ಬೇರೊಂದು ಕಡೆ ಅಗಲೇ ಮಾಯವಾಯಿತು ಯೆನ್ನ ಕವಿತೆ ಅದೇ ನನ್ನ ಕತೆ ವ್ಯತೆ!
ಯಾರೆದಿರು ಹೇಳಲಿ ಈ ವ್ಯತೆಯ ಕತೆ ಕವಿತೆಯ ನೆನೆದು ಮರುಗಿತು ಯೆನ್ನೆದೆ!
ಭೇಸಾರಧಿ ಕವಿತೆಯ ನೆನೆದು ಬರೆದಿರುವೆ ಈ ಕತೆ.
ಕೃಷ್ಣೆ?

- acchu

07 Jan 2025, 10:58 pm

ದೇವಕುಸುಮ

ನೀ ನಕ್ಕರೆ ಹಾಲೇ ಉಕ್ಕುವ ಸುರಭಿ
ನೀ ನುಡಿದರೆ ಕಲ್ಲುಸಕ್ಕರೆಯ ಸೌರಭ
ನೀ ನಡೆದರೂ ಅರಳುವ ಪಾರಿಜಾತ

ನಿನ್ನ ಮೊಗವು ಅರಳುವ ದೇವಕುಸುಮವು
ನಿನ್ನ ಕಣ್ಗಳ ನೋಟದಲಿ ವಿಶ್ವರೂಪವು
ನಿನ್ನ ಶುಷ್ಕ ಚೆಲುವಿನ ಒಲವು ಮಂದಾರ ಹೂ

ಯಾವ ದೇವ ಸೃಷ್ಟಿಸಿದ ನಿನ್ನ ರೂಪವ
ಆ ನಿನ್ನ ಕಿಲಕಿಲ ನಗುವಿನ ಕಲರವ ಭಾವ
ಬ್ರಹ್ಮ ಕಡೆದ ನಿನ್ನ ಹಾಲುಗಲ್ಲದ ಗುಳಿಗುಂಡಿ

ನಿನ್ನ ಭಾವ ನಿನ್ನ ಹಾವ ನಿನ್ನ ಹೆಜ್ಜೆ ನಿನ್ಮ ಲಜ್ಜೆ
ನೀ ನಡೆದರೂ ಅತ್ತರೂ ಆ ನಗುವಿನ ಸುಹಾಸದ
ಓ ಮಗುವೇ ನನ್ನ ದೃಷ್ಟಿ ತಾಕದಿರಲಿ ನಿನ್ನ ಸೃಷ್ಟಿಗೆ

*********** ದೇವಕುಸುಮ*************


------------------------




- ಕವಿಕೂಸು

07 Jan 2025, 10:33 pm

ಸರಸ್ವತಿ ನಮನ

ಮಂದಸ್ಮಿತ ಶೋಭಿತೆ
ಹಂಸವಾಸಿನಿ ಅಲಂಕೃತೆ

ವೀಣಾಪಾಣಿ ಜ್ಞಾನವಾಣಿ
ವಿರಿಂಚಿ ವಲ್ಲಭೆ ತಮೋಹರಿಣಿ

ಚತುರ್ಭುಜೆ ಧವಳಧಾರಿಣಿ
ಚತುರ್ಮುಖ ಶ್ರೀವಾಸಿನಿ

ತಮೋಹರಿ ಜ್ಞಾನಸಿರಿದಾಯಿನಿ
ಸರಸ್ವತಿ ಗುಪ್ತಗಾಮಿನಿ ವಾಣಿ

ವಿದ್ಯಾದಾಯಿನಿ ಬುದ್ಧಿದಾಯಿನಿ
ಸಿದ್ದಿಪ್ರದಾಯಿನಿ ಮತಿದಾಯಿನಿ

ನಮೋ ನಮೋ ತಾಯಿ ಶಾರದೆ
ಜಗಪೂಜಿತೆ ಸರ್ವ ವಿಶಾರದೆ

******?️******?️******

ಇಂದು ಸರಸ್ವತಿ ಆವಿರ್ಭವಿಸಿದ ದಿನ
ವೀಣಾಪಾಣಿಯ ಸ್ಮರಣೆ ಮಾಡೋಣ
*******************************

ಜಿ.ಹೆಚ್.ಸಂಕಪ್ಪ
೦೨.೦೨.೨೦೨೫

- ಕವಿಕೂಸು

07 Jan 2025, 10:32 pm

ಮರೆತು ಹೋದೆ ನಾನು ನನ್ನನೇ...

ನಿನ್ನಿಂದಲೇ ನಿನ್ನಿಂದಲೇ
ಎಂದು ನೀನು ಹಾಡಿರುವೆ..
ನಿನ್ನ ಹಾಡು ಕೇಳುತ್ತಾ ಕೇಳುತ್ತಾ
ನನ್ನ ಮನಸ್ಸು ನಿನಗೆ ಕೊಟ್ಟಿರುವೆ...
ಆ ನಿನ್ನ ಕಣ್ಣುಗಳ ನೋಟದಲ್ಲಿ
ಕಾಣದ ಸೆಳೆತ ಒಂದಿದೆ..
ಆ ಸೆಳೆತದಿಂದ ಒಲವು
ಶುರುವಾಗಿದ್ದು ನಿನ್ನಿಂದಲೇ...
ಬೇಕಂತೆಲೇ ಹೃದಯವು
ಜಪಿಸಿದೆ ನಿನ್ನನ್ನೇ..
ನಿನ್ನ ನಗುವ ಕಂಡು
ಮರೆತು ಹೋದೆ ನಾನು ನನ್ನನೇ...
ಎಮ್.ಎಸ್.ಭೋವಿ...✍️


- mani_s_bhovi

07 Jan 2025, 01:27 pm

ಸ್ವಪ್ನಾ ಮಾಲಿಕಾ?

ನಾ ಕಂಡೆ ಕನಸ ಬಹು ವರುಷದ ಹಿಂದೆ ಇಧ್ಹಾ ಜೊತೆಗೇ ಓರ್ವ ಕನಸಿನ ಕಾವಲುಗಾರ ಕಾಲಕೆ ಮಾಯ ಆದನೋ ಅವ ಯೆನ್ನ ಕನಸ ತನ್ನ ಕನಸೆಂದು ತಿಳಿಸಿ ಓ ಮಾಯೆ ಸಫಲ ಆಗಿಸುವೆ ನಿನ್ನ ಕನಸ ಮರದ ನೆರಳಲಿ ಕುಳಿತು ರಾಜಕುಮಾರನ ಒಡನೆ?

- acchu

06 Jan 2025, 11:18 pm

ಸಂಬಂಧ


ರಕ್ತ ಸಂಬಂಧದ ನುಲಿನಲಿ ಸಿಲುಕಿದ ರೇಶಿಮೆಯ ಜೋಡು ನೂಲುಬಿಡುತಿರಲು ಕಂಡು ಕಂಡರಿಯನೆಂದು ಕದವ ಮುಚ್ಚಿ ಕುತರಯ್ಯ ಇ ದೃಶ್ಯವ ಕಂಡ ರೇಶಿಮೆ ಮರಿಯ ಧುಮ್ಹನವ ನಾ ಅದೆವ ಕರದಿಂದ ಆಲಿಸಲಿ ಹರಿಯೆ! ಬೀಡು ಇರದ ಆ ಗುಡಲ್ಲಿ ಅರಿವಿಲ್ಲದ ಮುಗ್ಧ ಹುಲು ಮರಿಯ ಕಂಡು ಮರುಗಿತೋ ಅದೇಸ್ತೋ ಮನವ್ ನಾ ಕಾಣದಾಗಿ ಹೋದೆನೋ ಹರಿಯೆ ಈ ಯೆನ್ನ ನೇತ್ರವ ನಿನ್ನ ಚರಣದಲಿ ನಮಿಸಿ ಕೇಳಿಕೊಂಬೆ ಒಂದು ಮಾತ ಕಾಯೋ ಆ ಮರಿಯನಿನ್ನ ರೆಪ್ಪೆಯಂತೆ.
krishne?

- acchu

06 Jan 2025, 10:57 pm

ಗೆಳೆತನ

ಇರಬೇಕು ಒಬ್ಬಳು ಗೆಳತಿ ನೋವುಗಳಿಗೆ ಸ್ಪಂದಿಸುತ್ತಾ, ತಪ್ಪುಗಳನ್ನು ತಿದ್ದುತ್ತ ಖುಷಿಯನ್ನು, ಹಂಚಿಕೊಳ್ಳುತ್ತಾ, ಆಗಾಗ ರೇಗಿಸುತ್ತಾ ಬದುಕಿಗೆ ಸ್ಫೂರ್ತಿ ತುಂಬುವಂತ ನಿ ನ್ನಂತ ಗೆಳತಿರಬೇಕು.!!



ಇರಬೇಕು ಒಬ್ಬನು ಗೆಳೆಯ ನೋವುಗಳಿಗೆ ಸ್ಪಂದಿಸುತ್ತಾ, ತಪ್ಪುಗಳನ್ನು ತಿದ್ದುತ್ತ ಖುಷಿಯನ್ನು, ಹಂಚಿಕೊಳ್ಳುತ್ತಾ, ಆಗಾಗ ರೇಗಿಸುತ್ತಾ ಬದುಕಿಗೆ ಸ್ಫೂರ್ತಿ ತುಂಬುವಂತ ನಿ ನ್ನಂತ ಗೆಳೆಯ ಇರಬೇಕು ಬೇಕು.!!

- Jyoti Kanavi

05 Jan 2025, 12:20 am

ಭೂಮಿ

ಪಂಚಮಹಭೂತಗಳ ತತ್ವದಲ್ಲಿ ಈ ಭೂಮಿ ಒಂದು,
ಬೇರೆಲ್ಲ ತತ್ವಗಳನ್ನು ಹೊಂದಿರುವ ತತ್ವ ಇದೊಂದು!
ಭೂಮಿಯ ತತ್ವದಲ್ಲಿ ಇರುವೆವು ನಾವು ಇಂದು,
ತಾಯಿಯಂತೆ ಇರುವ ತತ್ವ ಇಲ್ಲ ಮತ್ತೊಂದು!

-Rakshitha M Umadi

- Rakshitha M Umadi

01 Jan 2025, 04:45 pm

ಅವನಿ

ಅವನಿ ಎಂಬುದರ ಅರ್ಥ ಧರಣಿ,
ಧ್ರವ್ಯನ್ಯದಿ ವರ್ಗದಲ್ಲಿ ಮೂಡಿಬಂದ ಸರಣಿ;
ಭೂಮಿಯ 53 ಪದಗಳಲ್ಲೊಂದು ಅವನಿ,
ನಾವು ಜೀವಿಸುತ್ತಿರುವ ಈ ಭೂಮಿ;
ಅವ್ ಎನ್ನಲು ಇದುವೇ ಸಂರಕ್ಷಿಣಿ,
ತಾಯಿಯ ರೂಪ ಈ ನಮ್ಮೆಲ್ಲರ ತರುಣಿ;
ಕೋಲಾರದ ಒಂದು ಬೆಟ್ಟದ ಹೆಸರು ಅವನಿ,
ಅವನಿಸುತೆ ಸೀತೆಗೆ ಇದುವೇ ಜನನಿ;
ಎಲ್ಲವನ್ನು ಸಹಿಸಿಕೊಂಡು ಕ್ಷಮಿಸುವ ಕರುಣಿ,
ವಿವಿಧ ಅರ್ಥ ತುಂಬಿರುವ ಪದ ಈ ಅವನಿ!

-Rakshitha M Umadi

- Rakshitha M Umadi

01 Jan 2025, 04:44 pm

ಹೊಸ ವರ್ಷದ ಶುಭಾಶಯಗಳು

ಹೊಸದಾಗುತಿದೆ ಅಷ್ಟೇ ಕ್ಯಾಲೆಂಡರ್ ಲೆಕ್ಕ...ಅ

ಹಳೇದಾಗಿಯೇ ಉಳಿದಿದೆ ಎದೆಯೊಳಗಿನ ದುಃಖ.

ಅಳಬಾರದಷ್ಟೇ ಅತ್ತಷ್ಟು TEAR :

ಹೇಳಬಹುದಿಷ್ಟೇ ಹ್ಯಾಪಿ ನ್ಯೂ YEAR
ಹೊಸದಾಗುತಿದೆ ಅಷ್ಟೇ ಕ್ಯಾಲೆಂಡರ್ ಲೆಕ್ಕ...ಅ

ಹಳೇದಾಗಿಯೇ ಉಳಿದಿದೆ ಎದೆಯೊಳಗಿನ ದುಃಖ...

ಅಳಬಾರದಷ್ಟೇ ಅತ್ತಷ್ಟು TEAR :

ಹೇಳಬಹುದಿಷ್ಟೇ ಹ್ಯಾಪಿ ನ್ಯೂ YEAR

- Sunil Bgm kannada

01 Jan 2025, 06:13 am