Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕವನ ನವ ವರ್ಷ..



ಭೂರಮೆಯ ಸುಪ್ತ ಬೆಳಕು,
ಕಿತ್ತೊಗೆಯಲಿ ಎಲ್ಲರೆದೆಯ ಕೊಳಕು.

ರಥವೇರಿ ಬರುತಿಹ ಕನಸುಗಳ ನೋಡಿ
ಕರ್ನಾಟ ಬಲದಿಂದ ಜಯಭೇರಿ ಹಾಡಿ.

ಮನವೊಂದು ಭಾವದ ಕಡಲು,
ನವ ವರ್ಷ ತುಂಬಲಿ ಮಲ್ಲಿಗೆಯ ಘಮಲು.

ಕಹಿ ಕೊನೆಯದಾಗಿ ಸಿಹಿ ಸುದ್ದಿ ಹರಡಲಿ,
ಸಾರ್ಥಕತೆಯ ಜೀವನದ ಪಯಣ ಮುಂದುವರೆಯಲಿ.

ಸಂಪ್ರದಾಯ ನಿಷ್ಠೆಯ ಆಚರಣೆ,
ಮನುಜರಿಗೆ ಮುದ ನೀಡುವ ಶಿವರಾತ್ರಿಯ ಜಾಗರಣೆ.

ಕಲಹಗಳ ಕಳಚಿಟ್ಟು ಕುಪ್ಪಳಿಸೊ ಭರದಲ್ಲಿ,
ಹೊಸ ವರ್ಷ ಬರಡಾಯ್ತು ಸಿಡಿ ಮದ್ದ ಹೊಗೆಯಲ್ಲಿ.

ಬಾಂದಳದ ತಾರೆಗಳಿಗೆ ಬೆಳದಿಂಗಳಊಟ,
ಮೈಗೂಡಲಿ ನಾಳೆ ಸಹ ಬಾಳ್ವೆ ಪಾಠ.

ಹೊಸ ವರ್ಷ ಬದುಕಿನ ಭವಣಿಗಳ ನೀಗಿ,
ಸಾಕ್ಷರತೆ ಫಲಿಸಲಿ ಸನ್ನಡತೆಗಾಗಿ.

ಹ್ಯಾಪಿ ನ್ಯೂ ಇಯರ್ ಹೇಳುವ ಸಂಭ್ರಮದಂದು,
ಹಸನ್ಮುಖಿಯಾಗಿ ಮನಸೇರು ಬಂದು.

ಹೊಳೆವ ಮುತ್ತಾಗಲಿ ಹೊಸ ವರ್ಷದ ಆಗಮನ,
ಲೇಖನಿಗೆ ನೆನಪಾಗಲಿ ನಾವ್ ಪಣತೊಟ್ಟ ದಿನ.

- nagamani Kanaka

01 Jan 2025, 05:52 am

ಹೃದಯದ ಬೆಳಕು

ನೀನೆಂದರೆ ಆಸೆಯಲ್ಲ..ಆಕರ್ಷಣೆಯೂ ಅಲ್ಲ. ನೀನೆಂದರೆ ಮೋಹವಲ್ಲ..ವ್ಯಾಮೋಹವೂ ಇಲ್ಲ ನೀನೆಂದರೆ ಮನದಲ್ಲಿ ಮೂಡಿದ ಮಧುರ ಭಾವನೆ ಆತ್ಮದಲ್ಲಿ ಒಂದಾದ ದಿವ್ಯ ಕಲ್ಪನೆ
ಪಡೆಯುವ ಹಂಬಲವಿಲ್ಲ..ಕಳೆದು ಕೊಳ್ಳುವ ಭಯವಿಲ್ಲ..
ಆದರೂ ಹೊಳಪ್ಪಿಲ್ಲದ ಬೆಳಕಾಯಿತು ..
ನಿರಾಸೆಗು ಚಿಗುರಾಯಿತು ...

'ಪ್ರೇಮವೆಂದರೆ ಮುಖದ ಹೊಳಪಲ್ಲಾ ಹೃದಯದ ಬೆಳಕು...'.

- Jyoti Kanavi

31 Dec 2024, 03:53 pm

ಹಣತೆ

ಹಣತೆ ಹಚ್ಚಬೇಕೆಂದು ಕೊಂಡೆ
ಹುಡುಕಾಡಿದೆ ಮನೆಯ ತುಂಬೆಲ್ಲಾ
ಪರಿಕರಗಳು ಬೇಕಾದವು ಒಂದೇ? ಎರಡೇ?
ಕತ್ತಲಿಲ್ಲದೆ ಬೆಳಕಿಗೆ ಮಹತ್ವವಿಲ್ಲ;
ಮನದೊಳ ಅಂಕಣದಲ್ಲಿ
ನೂರು ದೀಪಗಳ ಬೆಳಕಿದೆ
ಆದರೂ ನಿನ್ನ ಒಂದು ಬಯಕೆ ......
ತೋಟದಲ್ಲಿನ ಹಕ್ಕಿ ಬಾರದ ಮರವಾದ ಜೀವಕೆ
ನಿನ್ನ ಒಂದು ಸ್ಪರ್ಶ ಸ್ಪೂರ್ತಿ ಆಯಿತು ...

- Jyoti Kanavi

31 Dec 2024, 03:28 pm

ನಾ ಕಂಡ ಕನಸು..

ಅಂದು ಕನಸು ಕಂಡೆ ನಾ .... ಇಂದು ನನಸಾಗಬಹುದೆಂಬ ಆಸೆ ಹೊತ್ತು
ನಾ ಅರಿಯದಾದೇ ಆ ಕನಸು ಇಂದು ಆಗದೇ ಹೋಗುವ ನೀರಾಸೇ ಹುಟ್ಟಿಸುತ್ತದೆ ಎಂದು...
ಅದಂತು ನೀಜ ಅಂದು ಕಂಡ ಕನಸು ಅಂದು ನೀರಿಕ್ಷೆಗೂ ಮೀರಿದ ಖುಷಿ ಕೊಟ್ಟು ಬದುಕುವ ಆಸೇ ಹುಟ್ಟಿಸಿತು ಆ ದಿನ ನಾ ಕಂಡ ಕನಸು. ......

- Jyoti Kanavi

31 Dec 2024, 01:03 pm

ನನ್ನವನು

ಅಂಬರದಲ್ಲಿನ ನೇಸರ ನೀನು
ಆ ನೇಸರನ ಬರುವುವಿಕೆ ಕಾದು ಕುಳಿತ ಕಲ್ಪವೃಕ್ಷ ನಾನು ..
ನೀ ಬಂದು ಹೋದರು ಮತ್ತೆ ಮರಳಿ ಬರುವೆ ಹೊಸ ಚೇತನವಾಗಿ ನೀನು ....
ಆ ಚೇತನದ ಚಿಲುಮೆ ನಾನಾಗುವಆಸೆ..
ನಿನ್ನ ನೆನಪೆ ಬದುಕಲು ಬಯಕೆ
ತಿನ್ನಲಾಗದ ಹಣ್ಣು ನೀನು
ನೋಡಿದರೂ ಮುಟ್ಟಲಾಗದ ಹೂವು ನೀನು
ಆಗದ.. ಹೋಗದ... ನೆನಪಾದೆ ನೀನು..
ಆದರೂ ನನ್ನವನು ನೀನು..



- Jyoti Kanavi

31 Dec 2024, 12:54 pm

ಕವಿ ನಾನಲ್ಲ...

ಆಕಾಶ ಭೂಮಿಗೆ ಹೋಲಿಸಲು
ಕವಿ ನಾನಲ್ಲ..
ಕವಿಯಾಗಲು ನಿನಗೆ ಸರಿ ಹೊಂದುವ
ಪದಗಳೇ ಇಲ್ಲ..
ನನ್ನ ಬಾಳಿನ ದೇವತೆ
ನೀನಾಗಿರಲು ಕವಿಯ ಬದಲು
ಓದುವ ಪ್ರೇಮಿಯಾಗಿದ್ದೇನೆ...
ಎಮ್.ಎಸ್.ಭೋವಿ...✍️
.
.
.
.
‌.
.
.
.
‌.
.
.

- mani_s_bhovi

30 Dec 2024, 07:34 am

ನನ್ನ ಮುದ್ದಿನ ರಾಣಿ...

ನಾಚಿಕೆಯನ್ನು ಸ್ವಲ್ಪ ಮರೆಮಾಚಿಸಿ
ಸದ್ದಿಲ್ಲದೆ ನನ್ನೊಲವ ಅವಳ ಎದೆಗಿಳಿಸಿ
ಒಳಗೊಳಗೇ ಸಂಚನ್ನು ಹೂಡಿ..
ಕಣ್ಣಲೆ ನನ್ನನ್ನು ರಮಿಸಿ
ಪ್ರೀತಿಯಿಂದಲೇ ಜಾಡಿಸಿ ಒದ್ದು
ತನ್ನ ಎದೆಯಲ್ಲಿ ಬಚ್ಚಿಟ್ಟುಕೊಂಡಳು
ನನ್ನ ಮುದ್ದಿನ ರಾಣಿ...
ಎಮ್.ಎಸ್.ಭೋವಿ...✍️
.
‌.
.
‌.
‌.
.
.
.

- mani_s_bhovi

30 Dec 2024, 07:26 am

ಕನಸುಗಳು ಇರಬೇಕು....


ಎಲ್ಲವನ್ನೂ ಅರಿಯಲಾಗದು ಬದುಕಲ್ಲಿ
ಕೆಲವಕ್ಕೆ ಅರ್ಥವೇ ಇರುವುದಿಲ್ಲ ಇಲ್ಲಿ ..
ಅನಿಸಿದ್ದನ್ನು ಹಂಚಿಕೊಳ್ಳಲು ಹಿಂಜರಿಯದೆ
ಚಿಕ್ಕ ಚಿಕ್ಕ ಖುಷಿಗಳಿಗೆ ಚೌಕಾಸಿ ಮಾಡದೆ ...

ಸಂತಸದ ಕ್ಷಣಗಳನ್ನು ಮನಸಾರೆ ಅನುಭವಿಸಿ
ದುಃಖದ ಅನುಭವಕ್ಕೂ ಸೋಲದೆ ಜೀವಿಸಿ ..
ಮತ್ತೆ ಎದ್ದು ನಿಲ್ಲಬೇಕು ಹೊಸ ನಾಳೆಗಳಿಗಾಗಿ
ಬದುಕೇ ಆಗ ನೋಡಬೇಕು ನಮ್ಮ ನಿಬ್ಬರಗಾಗಿ..

ಜಗದ ಜಂಜಾಟಗಳಿಗೆಲ್ಲ ಹೆಗಲು ಕೊಡದೆ
ನಿನ್ನೆಗಳ ನೆನಪುಗಳಿಗೆ, ಖಿನ್ನತೆಗೆ ಜಾರದೆ
ಒಂದೊಂದೇ ದಿನವ ನಮ್ಮದಾಗಿಸಿಕೊಳ್ಳುತ್ತಾ
ಕಲಿಯಬೇಕು ತಪ್ಪುಗಳನ್ನೂ ಒಪ್ಪವಾಗಿಸಿಕೊಳ್ಳುತ್ತಾ

ಒಂಟಿತನದ ಭಾವ ಸುಮ್ಮನೆ ಕಾಡದಂತೆ
ಇದ್ದುಬಿಡಲಿ ಕೆಲಸ್ನೇಹಗಳು ಕೈಗೆಟುಕುವಂತೆ
ಸಾಧಿಸಲು ಇನ್ನೂ ಬಹಳಷ್ಟು ಇದೆ ಬದುಕಿನಲ್ಲಿ
ಕನಸು ಕಾಣುವುದನ್ನು ಮಾತ್ರ ನಿಲ್ಲಿಸಬಾರದಲ್ಲ..


- Shivu Puranikamath

30 Dec 2024, 05:25 am

ಜಯ ರಾಜೇಶ್ವರಿ ಜಯ ಭುವನೇಶ್ವರಿ

*ಕರುನಾಡ ಕನ್ನಡ ರಾಜೇಶ್ವರಿ
ಕದಂಬ ಕಲಿನಾಡ ಭುವನೇಶ್ವರಿ

ನಿನ್ನ ಭಾಷೆಗೆ ಶಾಸ್ತ್ರೀಯ ಸಮ್ಮಾನ
ನಿರುಪಮ ಅನುಪಮ ಅಭಿಮಾನ

ಅಷ್ಟ ಜ್ಞಾನಪೀಠ ನಿನ್ನ ಮಡಿಲಿಗೆ
ಅಗ್ಗಳಿಕೆ ಚಂದನನಾಡಿನ ನುಡಿಗೆ

ಭಾರತೀಯ ಚಲಾವಣೆ ನೋಟಿನಲಿ
ನಾಲ್ಕರ ನೋಟವು ಕಸ್ತೂರಿಯಲಿ

ಕನ್ನಡತಿ ಸುಂದರ ಲಿಪಿಗಳ ರಾಣಿ
ಸನ್ನಡತೆಯ ಸಂಸ್ಕಾರಗಳಗ್ರಣಿ

ವಿಧಾನಸೌಧದಂಗಳದಿ ನಿನ್ನ ವೈಭವ
ವಿಶ್ವಕೆ ಬೆರಗು ನಿನ್ನ ದರ್ಶನ ಸ್ವರೂಪ

ಕನ್ನಡಿಗನಿಗಿದು ಗರ್ವ ಪ್ರತಿಷ್ಠಾನ ಪರ್ವ
ಜಯ ರಾಜೇಶ್ವರಿ ಜಯ ಭುವನೇಶ್ವರಿ



ಜಿ.ಹೆಚ್.ಸಂಕಪ್ಪ

- ಕವಿಕೂಸು

29 Dec 2024, 01:55 pm

ಯುಗದ ಕವಿ ಜಗದ ಕವಿ

ಯುಗದ ಕವಿ ಜಗದ ಕವಿ
( ಕುವೆಂಪು )
ಜನನ : 29.12.1904 ಗುರುವಾರ
ವಿವಾಹ: 30.04.1937ಶುಕ್ರವಾರ
ನಿಧನ : 11.11.1994 ಶುಕ್ರವಾರ
*************
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಮಲೆನಾಡಿನ ಮಳೆನಾಡಿನ
ಕವಿಶೈಲದಲಿ ಅಮಲನ ಕತೆಯ
ಕೊಳಲಲಿ ಕನ್ನಡ ಕಂಪಕಸ್ತೂರಿಯ
ಪಕ್ಷಿಕಾಶಿಯಲಿವರ ಕಾವ್ಯವಿಹಾರ

ಬೊಮ್ಮನಹಳ್ಳಿಯ ಕಿಂದರ ಜೋಗಿ
ಬಾರಿಸಿದರು ಕನ್ನಡ ಡಿಂಡಿಮವ
ಕತೆ ಕಾದಂಬರಿ ಕವನಗಳಲಿವರು
ಕುವೆಂಪು ಕಾವ್ಯನಾಮದಲಿ ಕನ್ನಡ
ಪಾಂಚಜನ್ಯದ ಕಹಳೆಯೂದಿದರು

ಹೇಮಾವತಿ ಮದುಮಗಳೊಂದಿಗೆ
ಕವಿಲಗ್ನವಾಗಿ ಪ್ರೇಮಕಾಶ್ಮೀರದಲಿ ವಿಹರಸಿ
ಪೂರ್ಣಚಂದ್ರತೇಜಸ್ವಿ ಕೋಕಿಲೋದಯ ಚೈತ್ರ
ಇಂದುಕಲಾ ತಾರಿಣಿಯರು ಜನಿಸಿದರು
ಮಲೆನಾಡಿನ ಚಿತ್ರಗಳ ಚಿತ್ರಿಸಿದರು

ಕನ್ನಡ ಸಾಹಿತ್ಯಲೋಕದ ಸಾಗರದಲಿವರ
ನೆನಪಿನ ದೋಣಿಯ ವಿಹಾರದಲಿ
ನಾಡಗೀತೆಯ ಮಂತ್ರಾಕ್ಷತೆಯಲಿ
ಜೈ ಭಾರತ ತನುಜಾತೆ ಜಯಹೇ
ಕರ್ನಾಟಕ ಮಾತೆ ಹಾಡಿದರು

ನುಡಿರಾಣಿಯ ಗುಡಿ ಕುವೆಂಪು ಲೋಕವು
ಗುರುವಿನೊಡನೆ ದೇವರ ಕಡೆಗೆ ಸಾಗಿತು
ಕನ್ನಡವೇ ಕುವೆಂಪು ಕಂಪು ಇಂಪು ಸೊಂಪು
ಶಿಲಾತಪಸ್ವಿಯಲಿ ಶೂದ್ರತಪಸ್ವಿಯ ರಕ್ತಾಕ್ಷಿ
ಶ್ರೀ ರಾಮಾಯಣ ದರ್ಶನಂ ದರ್ಶಿಸಿದರು

ವಿಶ್ವ ಮಾನವ ಯುಗದಕವಿ ಜಗದಕವಿ
ರಾಷ್ಟ್ರಕವಿ ಕರ್ನಾಟಕ ರತ್ನ ಕುವೆಂಪು
ಜ್ಞಾನಪೀಠದಗ್ರಜನ ಜನುಮದಿನವಿಂದು
ಏನಾದರಾಗು ಮೊದಲು ಮಾನವನಾಗು
ಜಗಕೆ ಸಾರಿದ ಯುಗಪುರುಷನಿಗೆನ್ನಪ್ರಣಾಮ

********‌ಕುವೆಂಪು ಜನ್ಮ ದಿನ***********


ಜಿ.ಹೆಚ್. ಸಂಕಪ್ಪ
ಮೈಸೂರು
೨೯.೧೨.೨೦೨೪













- ಕವಿಕೂಸು

29 Dec 2024, 12:34 pm