Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿಯ ಪರ್ಮನೆಂಟ್ ಸಾಲ

ಹೇ ಪ್ರೇಯಸ.... ಎಲ್ಲರಂತೆ ಹಣದ ಸಂಬಂಧಪಟ್ಟ ಸಾಲಗಾರ್ತಿ ಅಲ್ಲ ನಾನು... ಒಂದು ಮುಗ್ಧ ಮನಸಿನ ಪ್ರೀತಿ ಕೊಟ್ಟ ಸಾಲಗಾರ್ತಿ ನಾನು... ನಿನ್ನಲ್ಲಿ ಹಣ ಕೇಳಲಿಲ್ಲ ನಾನು...
ನಿನ್ನಲ್ಲಿ ಪ್ರೀತಿಯ ಸಾಲ ಕೇಳುವೆ ಕೊಡೋವೆಯ?

ಪ್ರೀತಿಯ ರುಚಿ ತೋರಿಸಿ ದೂರ ಸರಿಬೇಡ ಸಹಿಸುವ ಶಕ್ತಿ ಇಲ್ಲದ ಜೀವಿ ನಾನು....
ಡಾಕ್ಟರ್ ಇಂಜಿನಿಯರ್ ಅಲ್ಲ ಕೂಲಿ ಕೆಲಸ ಮಾಡೋ ಜೀವಿ ಎಂದು ದೂರ ಸರಿಬೇಡ ಸಹಿಸುವ ಶಕ್ತಿ ಇಲ್ಲದ ಜೀವಿ ನಾನು.... ಮದುವೆ ಆಗುವೆ ಆಸೆ ಹುಟ್ಟಸಿ ದೂರ ಸರಿಬೇಡ ಸಹಿಸುವ ಶಕ್ತಿ ಇಲ್ಲದ ಜೀವಿ ನಾನು...
ಕಷ್ಟ ಅಂತ ಇಷ್ಟದಂತೆ ವರ್ತಿಸಬೇಡ ಸಹಿಸುವ ಶಕ್ತಿ ಇಲ್ಲದ ಜೀವಿ ನಾನು....



-ಅಂಬಿಕಾ ಕುಲಕರ್ಣಿ

- Ambika Kulkarni

10 Nov 2024, 08:18 am

ಮಳೆ


ಮೋಡ ಮುಸುಗಿದೆ ಭೂಮಿ ಒಣಗಿದೆ
ನಿನ್ನ ಬರುವಿಕೆಗೆ ಎಲ್ಲರೂ ದಾರಿ ಕಾದಿದ್ದಾರೆ
ಆಕಾಶ ತುಂಬೆಲ್ಲ ಚಿತ್ತಾರ ಸಡಗರ
ನೀ ಬಂದರೆ ಅದು ನಮಗೆ ಸಂತೋಷ ಸುಂದರ..

ಹೇ ಜೀವವೇ ದಯಮಾಡಿ ಬಂದು ಬಿಡು
ನೀ ಇಳೆಗೆ ...!


ಇಂತಿ ನಿಮ್ಮ ನVi❤️

- Naveen

09 Nov 2024, 11:32 pm

ಅವಳು ಅವಳಷ್ಟೇ!,....

ಅವಳೇನು !
ಡಿಂಪಲ್ ಇರೋ
ರಚಿತಾ ರಾಮ್ ಅಲ್ಲ !,
ಮಳೆ ಬಂದ ಕುಡ್ಲೆ
ನೆನಪಾಗೋ ಪೂಜಾಗಾಂಧಿ ಏನಲ್ಲ !,
ನ್ಯಾಚುರಲ್ ಕ್ವೀನ್
ಸಾಯಿಪಲ್ಲವಿ ಅಂತ್ರು
ನಿಮ್ಮಣೆಗೂ ಅಲ್ವೇ ಅಲ್ಲ !,
ಬರಿ ಅವಳು ಅವಳಷ್ಟೇ !,
ಈ ಜನ್ಮಕ್ಕೆ ನನಗೆ ಅಂತಾ
ಪ್ರಿಂಟ್ ಆಗಿರೋ ಸಿಮೆಂಟ್
ಕಲರ್ ಹುಡ್ಗಿ ಅವಳು !....
ಎಮ್.ಎಸ್.ಭೋವಿ...✍️

- mani_s_bhovi

08 Nov 2024, 11:03 pm

ದಾರಿ ನೀರೆ

||ಅಕ್ಷಿಗಳವು ಖಡ್ಗದ ತೀಕ್ಷ್ಣತೆಯೋ, ಶರಧಿಯ ಸೌಮ್ಯತೆಯೋ|
ನಸುನಗಲು ಭ್ರಮರದ ಕಡಿತವೋ,ಅನಿರೀಕ್ಷಿತ ತುಡಿತವೋ|
ಗುಳಿ ಕೆನ್ನೆಯದು ಅಸಾಧ್ಯ ಕೂಪವೋ,ದೈವ ಕಲೆಯ ರೂಪವೋ|
ಕಾಯವದು ಮದ್ದುಗಳ ಸರಪಳಿಯೋ,ಚಂದಿರನ ಲೇಪನವೋ|
ಮುಂಗುರುಳದು ಅಂತಕನ ಪಾಶವೋ,ಸಾಂಗತ್ಯದ ಕೋಶವೋ|
ನುಡಿಸಲೆನಿತು ನುಡಿವೆಯೋ,ಮುನಿವೆಯೋ ಧೈರ್ಯ ಸಾಲದು ನನಗೆ|
ಪರಿವೆ ಇದ್ದರೂ ಸಮೀಪಿಸಲು ಪರಿಮಿತಿ ನಿನಗೆ|


-ಹಿತೇಶ್


- Hithesh Kumar

07 Nov 2024, 01:11 pm

ದೇವತೆ

ನಿನ್ನ ನೋಡಿದಾಗ ನಿನ್ನ ಮೇಲೆ
ಹುಟ್ಟುವುದು ಅನುರಕ್ತಿ ತುಸು
ಅದನ್ನು ನೀ ಒಮ್ಮೆ ಅನುಲಕ್ಷಿಸು
ನಾ ಕಷ್ಟದಲ್ಲಿದ್ದಾಗ ಅನುವರಿಸಿ ನನ್ನ ರಕ್ಷಿಸು
ನನ್ನ ಪ್ರೀತಿಗೆ ಅನೂನ ಇಲ್ಲ
ನಿನ್ನ ನೋಟ ಸವಿದಂತೆ ಸಿಹಿಯಾದ ಬೆಲ್ಲ
ನೋಡುತ್ತಿದ್ದರೆ ನಿನ್ನ ನೇತ್ರ
ನನ್ನ ಗಮನ ಹೋಗುವುದ್ದಿಲ್ಲ ಅನ್ಯತ್ರ

ಸಂಜು ಗುಬ್ಬಿ ....

- Sanju gubbi Bhagya

06 Nov 2024, 09:18 pm

ನನ್ನ ಹೆಂಡತಿ

ನೀನು ನನ್ನ ಹೆಂಡತಿ
ಯಾಕೆ ನನ್ನ ಪ್ರಾಣ ಹಿಂಡತಿ ಯಾಕೆ ದ್ವೇಷಿಸುತ್ತಿ
ನೀ ಎಷ್ಟೇ ದ್ವೇಷಿಸಿದರು ನೀ ನನ್ನ ಹೆಂಡತಿ ಊಟ ಮಾಡುತ್ತಿ ಮಾಡಿದ್ಮೇಲೆ ನನ್ನ ಬೈಯುತ್ತಿ
ಯಾಕೆ ಹಿಂಗಾಡ್ತಿ
ನನ್ನ ಮುದ್ದಿನ ಹೆಂಡತಿ
ನನ್ನ ಜೀವನ ಬೆಳಗುವ ಬಾಳ ಸಂಗಾತಿ ಮುಟ್ಟಿದರೆ ಗುರುರಂತಿ
ಮಾತಾಡಿಸಿದರೆ ಉರ್ರ ಅನ್ನುತ್ತಿ
ನಾ ಸಾಯೋತನಕ ನೀ ನನ್ನ ಜೊತೆ ಇರುತ್ತೆ
ನೀ ನನ್ನ ಬಾಳ ಸಂಗಾತಿ
ಭೀಮರಾಯ ಬಡಿಯಲ್

- bheemaraya badiyal

06 Nov 2024, 05:16 pm

guin

o henne ninu yastu kruri

- somu Biradar

06 Nov 2024, 12:31 pm

ಬಾಳಿನ ದೀಪ


ದೀಪವ ಹಚ್ಚಿ ಬೆಳಗುವ
ಜ್ಯೋತಿಯು ಆನಂದದ ಪ್ರತೀಕ
ಕತ್ತಲನು ಕಳೆಯುವ ಬೆಳಕಿನ
ಕಿರಣವು ಮೂಡಲಿ ಬಲು ಬೇಗ

ಬೆಳೆಯುವ ಮನವ ಬೆಳಗಲಿ ಎಂದೂ
ಬಾಳಿನ ಬೆಳಕು ಮೂಡಲಿ ಎಂದೂ
ನೋವು ನಲಿವಿನ ತೋರಣದಲ್ಲಿ
ಹಚ್ಚಿರಿ ನಲಿವಿನ ದೀಪ

ಅಂಧಕಾರವ ತೊರೆಯಲಿ ಎಂದು
ದುರಹಂಕಾರವ ಬಿಡಲಿ ಎಂದು
ಒಲುಮೆ ಪ್ರೀತಿಯ ಹನಿಯೂ ಮೂಡಲು
ಹಚ್ಚಿರಿ ಸಂತಸದ ದೀಪ

ಎಲ್ಲರ ಸಲಹುವ ಎಲ್ಲರನ್ನು ಮರಗುವ
ಎಲ್ಲರೆಲ್ಲರಲ್ಲೂ ಕಾಳಜಿ ತೋರಲು
ನಮ್ಮಯ ಸಂತಸದ ಜೀವನ ನಡೆಸಲು
ಹಚ್ಚಿರಿ ಪ್ರೀತಿಯ ದೀಪ

ಜಡದ ಮನಸಿನ ಪುಟಗಳ ತೆರೆಯಲು
ದುಃಖದ ಬದುಕು ಕ್ಷಮನ ಮಾಡಲು
ಒಡೆದ ಹೃದಯವ ಒಂದು ಗೂಡಲು
ಹಚ್ಚಿರಿ ನವ ದೀಪ

ಕನಸು ಕಾಣುವ ರೆಕ್ಕೆಗೆ ಸ್ಪೂರ್ತಿ ನೀಡುವ
ಮನದ ಕತ್ತಲೆಯ ದೂರವ ಮಾಡುವ
ಸುಜ್ಞಾನದಿಂದ ಅಜ್ಞಾನವ ಕಳೆಯುವ
ಹಚ್ಚಿರಿ ಬೆಳಕಿನ ದೀಪ

ಗಿರೀಶಚಾರ S
ಸಹಶಿಕ್ಷಕರು
SJM ಕನ್ನಡ ಮಾಧ್ಯಮ ಶಾಲೆ
ಮುರುಘಾ ಮಠ ಚಿತ್ರದುರ್ಗ

- Girishachara S

06 Nov 2024, 07:24 am

ಮುಗಿದ ಪಾತ್ರ



ಹುಟ್ಟಿದೆ ನೀನು ಜಗವ ನೋಡಲು
ಜಗಕೆ ನಿನ್ನ ಪಾತ್ರ ತಿಳಿಸಲು
ತೊದಲ ನುಡಿಯನು ಕಲಿತು
ಅಂಬೆಗಾಲನಿಟ್ಟು ನಡೆದಾಡಿ
ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು
ಭುವಿಯ ತುಂಬಾ ಓಡಾಡಿ
ಕುಣಿದು ಕುಪ್ಪಳಿಸಿ ನಲಿದಾಡುವೆ
ಜಿಂಕೆಯಂತೆ ಓಡೋಡುವೆ
ನಿನ್ನ ಪಾತ್ರವ ಜಗಕೆ ತಿಳಿಯಲು ಯತ್ನಿಸುವೆ
ಹಮ್ಮು ಬಿಮ್ಮುಗಳ ತೋರಿ
ಅಹಂಕಾರದಿ ನೀ ಮೆರೆದಾಡುವೆ
ಪ್ರೀತಿ ಪ್ರೇಮ ನೀ ಬೆಳೆಸುವೆ
ಕರುಣೆ ತೋರಿ ಕೈಯಿಡಿಯುವೆ
ಏನೂ ಮಾಡಿದರೇನು
ಏನೂ ಬಿಟ್ಟರೇನು
ಏನೇನು ಮಾಡಿದರು
ನಿನ್ನ ಪಾತ್ರವ ನೀ ಮುಗಿಸಿಕೊಂಡು
ನೀ ಹೊರಡಬೇಕು ನಿನ್ನ ದೇಹವ ಬಿಟ್ಟು
ಈ ನಶ್ವರದ ದೇಹ ಭೌತಿಕತೆ ತೊರೆದು
ಚಿರಸ್ಥಾಯಿಯಂತ ಪಾತ್ರವ ನೀ ಮುಗಿಸಬೇಕು

- Girishachara S

06 Nov 2024, 07:20 am



ಬಾಳು ಒಂದು ಸುಂದರ ಕವನ
ಬೇಕು ಒಂದು ವರ ಜೊತೆ ನಮನ
ನೀ ಬಂದ ಮೇಲೆ ನನ್ನ ಬಾಳ ಸಂಪೂರ್ಣ
ಅದಕ್ಕೆ ನಿನ್ ತಾನೇ ಕಾರಣ

ಹೇಳು ನಾನಾ ಪ್ರಿಯ ಕಾವ್ಯ
ಈ ಮದುವೆ ನಿನಗೆ Ok Naaa?

- Naveen

04 Nov 2024, 06:53 pm