||ಕೋಟ್ಯಂತರ ಆಗಂತುಕರ ದರ್ಪದ ಕಾಲ್ತುಳಿತಕ್ಕೆ ಸಿಕ್ಕಿ ನಲುಗಿದರೂ ತನ್ನವರಂತೆ ನೋಡುವ ತಾಯಿ ಭಾಷೆ|
ಅನ್ಯಭಾಷಿಕರಿಗೂ ಬೇಲಿಯಾಗದೇ ಸಹನೆಯ ಸಂಬಂಧವಾಗುವ,ನನ್ನ ಭಾಷೆ|
ನೋಡಲು ಕಣ್ಮನದ ತೃಷೆಯನಿಳಿಸಿ ಮನಸೂರೆಗೊಳಿಸುವ, ನನ್ನ ಭಾಷೆ|
ನೆನೆಯಲು ರುಧಿರದ ಕಣಗಳಲ್ಲೂ ಕರಗದ ಆತ್ಮಸ್ಥೈರ್ಯವನ್ನು ತುಂಬುವ, ನನ್ನ ಭಾಷೆ|
ಬರೆಯಲು ಸ್ವಚ್ಚಂದ, ಅಕುಂಠಿತ,ಅವಿಸ್ಮರಣೀಯ ದೃಶ್ಯಕಾವ್ಯ ನನ್ನ ಭಾಷೆ|
ಆರಾಧಿಸುವ ಕೋಟಿ ಮನಗಳಲಿ ಆಚಂದ್ರಾರ್ಕವಾಗಿ ನಿಲ್ಲುವ ನನ್ನ ಭಾಷೆ|
ಉತ್ಕೃಷ್ಟ ಸಾಂಸ್ಕೃತಿಕ, ಚರಿತ್ರಾತ್ಮಕ,ಚಾರಿತ್ರ್ಯ ಬದ್ಧ, ಕಲಾತ್ಮಕ ಪರಂಪರೆಯ ಸೆಲೆ,ನನ್ನ ಭಾಷೆ||
ತಾಯಿ ಪ್ರೀತಿ ಮುಂದೆ ಯಾವ ಪ್ರೀತಿನೂ ದೊಡ್ಡದಲ್ವಾ?
ನಿಜಾನಾ? ತಾಯಿ ದೇವತೇನಾ?
ಮಗುವಿನ ದುಃಖ ಅವಳಿಗೆ ಮಾತ್ರ ತಿಳಿಯುತ್ತಾ?
ಹಂಗಾದ್ರೆ ನಾನೇ ನತದೃಷ್ಟೇನಾ?
ಇಲ್ಲಾ ತಪ್ಪಾದ ಗರ್ಭದಲ್ಲಿ ಬೆಳೆದು ಹೊರಗಿನ ಪ್ರಪಂಚಕ್ಕೆ ಕಾಲಿಟ್ಟಿದೀನ?
ಸತ್ಯ ಮರೆಮಾಚಿ ಕುಳಿತಿದೆಯಾ?
ನನ್ನ ಕಣ್ಣಿಗೆ ಪೊರೆ ಆವರಿಸಿದೆಯಾ?
ಗೊತ್ತಿಲ್ಲ! ಹುಡುಕಿದರೂ ಸಿಗುವುದಿಲ್ಲ!!!
ನಿಜಾನಾ?
ಬರುತಿದೆ ಬೆಳಕಿನ ಹಬ್ಬ ಕತ್ತಲಲ್ಲಿ ಬೆಳಕು ಕಾಣುವ ಅಬ್ಬ
ಪಟಾಕಿ ಸಿಡಿಸಬೇಕು ಯಾರಿಗೂ ಹಾನಿಯಾದ ನಂತರ ಬೇಕು
ಬರುತ್ತಿದೆ ಬೆಳಕಿನ ಹಬ್ಬ ಕತ್ತಲಲ್ಲಿ ಬೆಳಕು ಕಾಣುವ ಹಬ್ಬ ಬರುತ್ತಿದೆ
ಸುರುಸುರು ಬತ್ತಿಯ ಹಚ್ಚಬೇಕು ಯಾರ ಬಟ್ಟೆಗೂ ಗೊತ್ತಾಗದಂತೆ ಇರಬೇಕು
ಬರುತ್ತಿದೆ ಬೆಳಗ್ಗಿನ ಹಬ್ಬ ಕತ್ತಲಲ್ಲಿ ಬೆಳಕು ಕಾಣುವ ಹಬ್ಬ
ಮಂಡಾಳ ಬಾಣವ ಹಚ್ಚಬೇಕು ನಾವು ದೂರ ಸರಿಯಬೇಕು
ಬರುತ್ತಿದೆ ಬೆಳಕಿನ ಹಬ್ಬ ಕತ್ತಲಲ್ಲಿ ಬೆಳಕು ಕಾಣುವ ಹಬ್ಬ
ರಾಕೆಟ್ ಬಿಡಬೇಕು ನಾವು ಒಳ್ಳೆಯ ಜಾಗ ನೋಡಿಬಿಡಬೇಕು
ಬರುತ್ತಿದೆ ಬೆಳಗಿನ ಹಬ್ಬ ಕತ್ತಲಲ್ಲಿ ಬೆಳಕು ಕಾಣುವ ಹಬ್ಬ
ಅಟಮ್ ಬಾಂಬ್ ಹಚ್ಚಬೇಕು ನಾವು
ಹಿರಿಯರೋಡನೆ ಹಚ್ಚಬೇಕು
ಬರುತ್ತಿದೆ ಬೆಳಕಿನ ಹಬ್ಬ ಕತ್ತಲಲ್ಲಿ ಬೆಳಕು ಕಾಣುವ ಹಬ್ಬ
ಹಚ್ಚಬೇಕು ಹೆಣ್ಣು ಮಕ್ಕಳು ಸೇರಿ ದೀಪವ
ಹಚ್ಚಬೇಕು ಬೆಳಕಿನ ದೀಪವ ಹಚ್ಚಬೇಕು ನಾವು
ನಮ್ಮ ಬಾಳು ಬೆಳಗಬೇಕಾದರೆ ಚೌಕಿಯಿಂದ ಇರಬೇಕು
ಅಂದಾಗ ಬೆಳಕಿನ ಹಬ್ಬಕ್ಕೆ ಕಳೆಬರುವುದು
ಮಂಜುಗಡ್ಡೆಯಂತೆ ಇರುವಳೋ ......
ಮಾನಸ ಗಂಗೆಯಂತೆ ಇರುವಳೂ .....
ಕಾಣೆ
ಕನಸಿನಲ್ಲಿ ಬಂದು ಮರೆಯಾದವಳು
ಎಲ್ಲಿ ಹೊದಳು ಅನುವಷ್ಟರಲ್ಲಿ
ಬೇರೆ ಮನೆಗೆ ದೀಪ ಬೆಳಗಿಸಲು ಹೊರಟವಳು......
ನನ್ನವಳು?.....