ಬಚ್ಚಲ್ಮನೆ ಆಗಿದೆ ಬೇವರ್ಸಿ ಮನಸ್ಸು
ರಾತ್ರಿಯೆಲ್ಲಾ ಒದ್ದಾಡಿದ್ರು ಬೀಳಬಾರದ
ಒಂದು ಪೋಲಿ ಕನಸು,
ಈ ಲೇವೆಲ್ಗೆ ಹಾಳಗೋಕೆ ಕಾರಣ
ಅದುನಿಕ ಹೆಂಗಸ್ರು,
ಎಸ್ಟು ದುಡಿದ್ರು ತುಂಬಿಲ್ಲ
ಕಿತ್ತೋದ ಪರ್ಸು ಯಾರಾದ್ರೂ ತೋರ್ಸಿ...
ಪುಣ್ಯ ಕಟ್ಕೊಳಿ ಸಾರಾಯಿ ಅಂಗಡಿ
ಅಡ್ರೆಸ್ಸು....
ಎಮ್.ಎಸ್.ಭೋವಿ...✍️
.
.
- mani_s_bhovi
21 Oct 2024, 12:30 pm
ಹುನ್ನಬೇಕು ಅನ್ನ
ತಿನ್ನಲು ಬೇಕು ರೊಟ್ಟಿ
ರೊಟ್ಟಿಯನ್ನ ತಿನ್ನಲು ಬೇಕು ಕೆಲಸ
ಕೆಲಸ ಸಿಕ್ಕ ಮೇಲೆ ಬೇಕು ಹೆಂಡತಿ
ಹೆಂಡತಿಯಾದ ಮೇಲೆ ಬೇಕು ಮಕ್ಕಳು
ಮಕ್ಕಳು ಆದ ಮೇಲೆ ಬೇಕು ಅತಿಯಾದ ದುಡ್ಡು
ದುಡ್ಡು ಬಂದ ಮೇಲೆ ಬೇಕು ಗಾಡಿ
ಆಸೆಗೆ ಸ್ಮಿತಿಯೇ ಇಲ್ಲ ನಮ್ಮ ಬದುಕಿನಲ್ಲಿ
ಜೀವನ ಒಂದು ರಣರಂಗ
ಸಂಸಾರ ಒಂದು ಯುದ್ಧರಂಗ
ಬದುಕು ಒಂದು ಚದುರಂಗ
ಈ ಆಟದಲ್ಲಿ ಗೆದ್ದು ಜೀವಿಸಬೇಕು ನಾವು
ಇನ್ನೊಬ್ಬರಿಗೆ ಮಾದರಿಯಾಗಬೇಕು ನಾವು
ರಣರಂಗದ ಆಟದಲ್ಲಿ: ತಾಳ್ಮೆಯಿಂದ ಇರಬೇಕು
ಯುದ್ಧ ರಂಗದ ಆಟದಲ್ಲಿ : ನಗುವಿನಿಂದ ಗೆಲ್ಲಬೇಕು
ಚದುರಂಗದ ಆಟದಲ್ಲಿ : ಮೌನದಿಂದಿರಬೇಕು
ಭೀಮರಾಯ ಬಾಡಿಯಲ್
ಅವಳು..
ನಗುಮೊಗದ ಬಾಲೆ
ಮಗು ಮನಸಿನ ಹೊಂಬಾಳೆ
ಜಗತ್ತಿನ ತೋರಿಕೆಗಷ್ಟೆ ಆ ನಗು ಆಗಿತ್ತೆ ಹೊರತು.. ಅವಳ ಜೀವನಕ್ಕಲ್ಲ...
ಎಲ್ಲಾ ಇದ್ದು ಯಾರು ಇರದ ಜೀವನ
ಅವಳದು...?️
ವಿಷಯ ಅವಳ ಮನಸಿನದು...
ಆಕೆಯ ಕಣ್ಣೀರ ಅರಿತವರೆಷ್ಟೋ ನಾ ಕಾಣೆ... ಆದರೆ ಅವಳ ಕೋಪವ ಕಠುರವಾಗಿ
ದೂರಿದರಲ್ಲೇನೆ....
ಸೂಕ್ಷ್ಮ ಮನಸು ಅವಳದು... ಅದು ಅವಳ ತಪ್ಪ...❤️
ಎಷ್ಟಾದರೂ ಹೆಣ್ಣು ಮನಸದು... ನೋಂದೊಡನೆ ಕಣ್ಣಿರೇ ತೆಪ್ಪ.. ಕಂಡವರ ಕಣ್ಣಿಗೆ ಹಟವಾದರೂ.. ಅದು ಅವಳ ನೋವಿನ ಪ್ರತಿರೂಪವಾಗಿತ್ತು... ಪ್ರಪಂಚವೇ ಕಣ್ಣೆರೆದು ನೋಡುವುದರೊಳಗೆ... ಅವಳ ಮನಸು ಚಿದ್ರವಾಗಿತ್ತು...✨??
ನಿನ್ನ ನೋಡಿ ಹೇಳಬೇಕೆನ್ನಿಸುತಿದೆ ನನಗೆ ಕವನ..
ಒಮ್ಮೆ ನನ್ನ ಕವನವ ಕೇಳಿ ನೋಡು
ಹೋಗುವೆ ನೀ ಹೌಹಾರಿ..
ಮತ್ತೆ ಮತ್ತೆ ಕೇಳಬೇನ್ನುವ ಆಸೆ ಹುಟ್ಟುವುದು
ನಿನಗೆ ಪ್ರತಿಬಾರಿ...
ಹೇಳಿದರೆ ಕೇಳುವೆಯಾ ಆ ಕವನವ
ಒಂದೇ ಒಂದು ಸಾರಿ...
ಎಮ್.ಎಸ್.ಭೋವಿ...✍️
.
.
.
ಅತ್ತೆಯಾದವಳು ಹಿಂದೊಮ್ಮೆ ತಾನೂ
ಸೊಸೆಯಾಗಿದ್ದೆ ಎಂದು ಏಕೆ ಮರೆತಳು?
ಸೊಸೆಯಾದವಳು ಮುಂದೊಂದು ದಿನ
ಅತ್ತೆಯಾಗಲೇಬೇಕಲ್ಲವೇ ಎಂದು
ಏಕೆ ಅರಿತ್ತಿಲ್ಲ?
ಮಗಳಾದವಳು ತಾನೂ ಒಬ್ಬ
ತಾಯಿಯಾಗಬೇಕು ಎಂದು ಏಕೆ ತಿಳಿದಿಲ್ಲ?
ತಾಯಿಯಾಗಿದ್ದವಳು ನಾನೂ
ಹಿಂದೆ ಒಂದು ಮನೆಯ ಮಗಳಾಗಿದ್ದೆ
ಎಂದು ಏಕೆ ಮರೆತಳು?
ಮಗನು ಮುಂದೊಂದು ದಿನ
ತಂದೆಯಾಗಲೇಬೇಕೆಂಬ ಸತ್ಯವನ್ನೇಕೆ
ಮರೆಮಾಚುತ್ತಿದ್ದಾನೆ
ತಂದೆಯಾಗಿದ್ದವನು ತಾನೂ
ಮಗನಾಗಿದ್ದಾಗ ಹೀಗೇ ಇದ್ದೆ
ಎಂಬ ನಿಜವನ್ನೇಕೆ ಮರೆತ?.
ಶ್ರೀಮಂತನಾದವನು ತನ್ನ
ಬಹುಮಹಡಿ ಮನೆಯನ್ನು
ಯಾರು ಕಟ್ಟಿದರೆಂದೇಕೆ ಯೋಚಿಸುತಿಲ್ಲಾ?
ಕಾಲಚಕ್ರವನ್ನು ಯಾರಿಂದಲೂ
ನಿಲ್ಲಿಸಲಾಗಲ್ಲ. ಅದು ಎಲ್ಲರಿಗೂ
ಸರದಿಯಂತೆ ಪಾಠ ಕಲಿಸುತ್ತೆ.
ಸಮಯವೆಂಬ ಪಕ್ಷಿಯು
ನಮ್ಮನ್ನು ಕೆಲವೊಮ್ಮೆ ಬಹು
ದೂರ, ಬಹು ಎತ್ತರಕ್ಕೆ ಕರೆದೋಯ್ದು
ಸಮುದ್ರದಾಳಕ್ಕೆ ಬಿಟ್ಟುಬಿಡುತ್ತದೆ.
ಮನುಷ್ಯ ನೋವು, ನಲಿವು, ಅಳು
ನಗು,ದ್ವೇಷ, ಪ್ರೀತಿ ಇವೆಲ್ಲವನ್ನು
ಸಮನಾಗಿ ಸವಿದರೆ ಮಾತ್ರವಲ್ಲವೇ
ಅದಕ್ಕೊಂದು ಬೆಲೆಕಟ್ಟಲು ಸಾಧ್ಯ.