ಶ್ರೀಮಂತ ಏನಲ್ಲ ನನ್ನ ವ..
ಆದರೂ ಪ್ರೀತಿಯಲ್ಲಿ ಸಾಹುಕಾರ ನನ್ನವ..
ನನ್ನ ಹೃದಯದ ಶ್ರೀಮಂತ ಕಾವ್ಯ ನನ್ನವ...
ಕೋಪದಲ್ಲಿ ಶ್ರೀಮಂತ ನನ್ನವ..
ಕೋಪದಲ್ಲೂ ಕಾಳಜಿ ತೋರಿಸುವ ನನ್ನವ...
ನನ್ನ ಅಂತರಾಳದಿ ಹೃದಯ ಕದ್ದವ....
ಮಂದಾನಿಲವೇ ನೀನು
ಮುಂದೆ ಮುಂದೆ ಏಕೆ ಓಡುವೆ?
ನನ್ನವಳ ವದನಾರವಿಂದದ
ಮೇಲಿರುವ ಮುಂಗುರುಳನೊಮ್ಮೆ
ಕೆಣಕಿ ನೋಡು. ಎಷ್ಟು ಮುದ್ದಾಗಿ ಕಾಣುವಳು.
ನೀನು ಅವಳಿಗಾಗಿ ಒಂದು ಜೋಗುಳ ಹಾಡು. ನನ್ನ ನೆನಪಿನಲ್ಲಿ ನಿದ್ರಿಸಿ
ಅವಳಿಗೆ ಎಷ್ಟು ದಿನವಾಯಿತು ಕಾಣೆ
ನನ್ನ ಮೇಲಿನ ಕೋಪಕ್ಕೆ
ನಿನ್ನನ್ನೊಮ್ಮೆ ಬೈದರು ಕೋಪಗೊಳ್ಳಬೇಡ. ಏಕೆಂದರೆ
ಕನಸಿನಲ್ಲಿಯೂ ಕೂಡ
ಅವಳಿಗೆ ನನ್ನನ್ನು ಬಿಟ್ಟರೆ
ಬೇರೆ ಯಾವುದೂ ಸೇರದು.
ಓ ನೀಲಿಯ ಆಗಸವೇ, ನೀನು
ಕಾರ್ಮೋಡಗಳಿಗೆ ಸ್ವಲ್ಪ ನಿಂತು,
ನಂತರ ಹೊರಡಿ ಎಂದು ಹೇಳಬಾರದೇ?
ಏಕೆಂದರೆ ನನ್ನಾಕೆ ನಿನ್ನ ಮೇಲೆ
ಕಲ್ಪನೆಗಳ ಚಿತ್ತಾರಗಳನ್ನು
ಬರೆಯುತ್ತಿರುವಳು. ಅಲ್ಲಿ
ಕೇವಲ ನನ್ನ ಚಿತ್ರಗಳೇ ಉಂಟು.
ಈ ಕಾರ್ಮೋಡಗಳಿಗೇನು ಕೆಲಸ
ಓ ಕನಸುಗಾರನೆ, ನೀನು ನನ್ನವಳ
ನಿದ್ರೆಯಲ್ಲಿ ಸುಂದರವಾದ ಸ್ವಪ್ನಗಳನ್ನು
ಹೊತ್ತಯ್ಯಬೇಕು, ಏಕೆಂದರೆ ಕೆಟ್ಟ
ಸ್ವಪ್ನ ಗಳೆಂದರೆ ಅವಳಿಗೆ ಬೆದರಿಕೆ
ಇನ್ನೊಂದು ಮಾತು. ಅವಳ ಕನಸುಗಳಿಗೆ ನನ್ನ ನನ್ನ ರೂಪಗಳನ್ನು
ಕೊಡಲು ಮರೆಯಬೇಡ.
ನಂದನ ವನದ ಕುಸುಮಗಳೇ
ನೀವು ಹೀಗೆ ಅರಳಿ ನಗುತ್ತಿರಿ.
ನನ್ನವಳಿಗೆ ನೀವೆಂದರೆ ಬಲು ಇಷ್ಟ
ನಿಮ್ಮ ಅರಳುವ ಮುಖಗಳಲ್ಲಿ
ಅವಳು ನನ್ನ ಮೊಗವನ್ನೇ ಕಾಣುವಳು.
ಅವಳು ನಿಮ್ಮನ್ನು ತನ್ನ ಮುಡಿಗೇರಿಸಿಕೊಳ್ಳಬೇಕೆಂದರೆ
ನಾನೇ ಬೇಕು.
ಕಾರಣ ನೀವು ಬಿರುದು ನಗುವ
ಮುನ್ನ,ನನ್ನನ್ನು ಕರೆಯಲು ಮರೆಯದಿರಿ.
ಎಂತಹ ಹೊಲಸು ನಿನ್ನ ಬಾಳು !
ನಿನ್ನಿಂದ ಮುಗ್ಧ ಮನಸುಗಳು ಹಾಳು !
ನೀ ಕಾಲಿಟ್ಟ ಕಡೆ ಹುಟ್ಟಲ್ಲ ಒಂದು ಕಾಳು !
ನಿನ್ನ ಮೋಸದ ಬದುಕಿಗೆ ಆ ದೇವರು ವಿರಾಮ ನಿಡುತ್ತಾನೆ ಸ್ವಲ್ಪ ತಾಳು.......!
ಕಾಪಾಡು ದೇವರೇ ಎಂದು ಬೇಡುವ ಸಮಯ ಬರುವುದು ನಿನಗೆ ಅದುವೆ ನೀ ಪಡುವ ಗೋಳು.....!
- ಚೆನ್ನ ನಾಯ್ಕ ಆರ್
11 Oct 2024, 01:11 pm
ತಾಯ್ತನವೇ ಒಂದು ಅದ್ಭುತ ಆನಂದ, ಏನೇ ನೋವಿದ್ದರು ಯಾವುದು ಲೆಕ್ಕಕ್ಕೆ ಬರುವುದಿಲ್ಲ, ನವಮಾಸದ ಕಾಯುವಿಕೆಯ ಪ್ರತಿ ಕ್ಷಣ, ಸಂತೋಷ, ರೋಮಾಂಚನ, ಆತಂಕ ಎಲ್ಲವನ್ನೂ ಬಚ್ಚಿಟ್ಟು, ಮಗು ಜನಿಸುವ ವೇಳೆ ಸಾವನ್ನ ಗೆದ್ದು ಆ ಮಗುವ ಮೊದಲ ಅಳುವ ಕೇಳಿ ತನ್ನೆಲ್ಲಾ ನೋವನ್ನು ಮರೆಯುವಳು, ಆ ಖುಷಿ ವರ್ಣಿಸಲು ಪದಗಳೇ ಸಾಲದು ಎನಿಸುತ್ತದೆ????
✍️ ರಂಜು
- ರಂಜಿತ ಭಾವನೆಗಳ ಸುಳಿಯಲ್ಲಿ
10 Oct 2024, 11:30 pm
ಇರುವನ್ನೊಬ್ಬ ಮೇಲೆ ಸರಿ ತಪ್ಪುಗಳ ಲೆಕ್ಕಾಚಾರ ಮಾಡುತ್ತಾ, ಅವನ ಜೀವನ ಚಕ್ರ ಆಟದಲ್ಲಿ ಮೇಲೆರಿದವರು ಕೆಳಗೆ ಬರಲೇಬೇಕು ಕೆಳಗಿದ್ದವರು ಮೇಲೆರಬೇಕು, ಅಸತ್ಯ, ನೀಚತನ ಅಳಿಯಬೇಕು, ಸತ್ಯ, ನಿಷ್ಠೆ, ಪ್ರಾಮಾಣಿಕತೆ ಗೆಲ್ಲಬೇಕು, ಸಮಯ ಬರುವವರೆಗೆ ಕಾಯಬೇಕು✅?
✍️ರಂಜು
- ರಂಜಿತ ಭಾವನೆಗಳ ಸುಳಿಯಲ್ಲಿ
10 Oct 2024, 11:29 pm
ಓ ಮೌನವೇ ನೀ ಸುಂದರ?ಅರಿಯದವರ ಮುಂದೆ ಅತ್ತರೆನೂ ಲಾಭ, ಭಾವನೆಗಳ ಮುಚ್ಚಿಟ್ಟು ಮುಂದೆ ಸಾಗು ನಿನಗಾಗಿ ನೀ, ಬದಲಾಗದವರ ಬದಲಾಯಿಸುತ್ತೇನೆ ಎಂಬುದು ನಿನ್ನ ಭ್ರಮೆ ಓ ಮನವೇ ಕಳಚಿ ಬಿಡು ಈ ಮಾಯದ ಪೊರೆ, ನಿನ್ನ ಕನಸುಗಳಿಗೆ ನೀನೇ ರುವಾರಿ ತಿಳಿದು ಬಾಳು ತಿಳಿಯಾಗಿ
✍? ರಂಜಿತ (ಭಾವನೆಗಳ ಸುಳಿಯಲ್ಲಿ)
- ರಂಜಿತ ಭಾವನೆಗಳ ಸುಳಿಯಲ್ಲಿ
10 Oct 2024, 11:28 pm
ಹಳೆಯ ಪುಟಗಳ ತಿರುವಿದಷ್ಟು ಭುಗಿಲೆದ್ದು ಬರುವುದು ಸಂತಸದ ಕ್ಷಣ? ಬೊಗೆದಷ್ಟು ಚಿಮ್ಮುವುದು ನಗುವಿನ ಕಾರಂಜಿ?ಇಂದಿನ ಪುಟಗಳಲ್ಲಿ ಹುಡುಕುತ್ತಿರುವೆ ಅಲ್ಲೊಂದು ಇಲ್ಲೊಂದು ಖುಷಿಯ?
✍️ರಂಜು
- ರಂಜಿತ ಭಾವನೆಗಳ ಸುಳಿಯಲ್ಲಿ
10 Oct 2024, 11:27 pm
ಸಂಬಂಧ ಉಳಿಸಿಕೊಳ್ಳುವ ಮನಸ್ಸು, ತಮ್ಮ ಜೀವನ ಸರಿ ಪಡಿಸಿಕೊಳ್ಳುವ ಮನಸ್ಸು ಇಬ್ಬರಿಗೂ ಇರಬೇಕು, ಒಂದೇ ಕೈಯಿಂದ ಚಪ್ಪಾಳೆ ತಟ್ಟಲು ಹೇಗೆ ಸಾಧ್ಯವಿಲ್ಲವೊ ಹಾಗೇ ಒಬ್ಬರ ಪ್ರಯತ್ನದಿಂದ ಸಂಬಂಧ ಸರಿ ಹೋಗಲ್ಲ, ಇಬ್ಬರೂ ಪ್ರಯತ್ನಿಸಬೇಕು ಇಲ್ಲದಿದ್ದರೆ ಆ ಸಂಬಂಧ ಹೆಚ್ಚು ದಿನ ಉಳಿಯಲ್ಲ ಪ್ರತಿಯೊಬ್ಬರಿಗೂ ತಮ್ಮದೇ ಬದುಕಿರುತ್ತದೆ, ಸ್ವಾಭಿಮಾನ, ಆಸೆ, ಕನಸು ಎನ್ನುವುದು ಇರುತ್ತದೆ, ಪ್ರತಿ ಸಾರಿ ಅದಕ್ಕೆ ಪೆಟ್ಟು ಬಿದ್ದರೇ ಆ ವ್ಯಕ್ತಿ ಮನಸ್ಸು ಕಲ್ಲಾಗಿ ಆ ಸಂಬಂಧ ಕೊನೆಯಾಗುತ್ತದೆ?
✍️ ರಂಜು