Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸ್ವೀಟಿಯ ಸ್ನೇಹ ಚೆಂದ
ಬ್ಯೂಟಿಯ ನೋಟ ಚೆಂದ
ಘಾಟಿಯ ಆಟ ಚೆಂದ
ಚೂಟಿಯ ತಂಟೆ ಚೆಂದ
ಸ್ವೀಟಿಯ ಜೊತೆ
ಬ್ಯೂಟಿಯ ಬಯಸಿದೆ
ಬ್ಯೂಟಿಯ ಜೊತೆ
ಘಾಟಿಯ ಪಡೆದೆ
ಬ್ಯೂಟಿ ಇಲ್ಲದ
ಸ್ವೀಟಿಯಾದರೂ ಓಕೆ
ಸ್ವೀಟಿ ಇಲ್ಲದ ಘಾಟಿ ಏಕೆ ?
ಬ್ಯೂಟಿಯ ಬಿಡು
ಘಾಟಿಯ ಒಯ್ಯಿ ಎಂದೆ
ಬ್ಯೂಟಿಯನು ಒಯ್ದ
ಘಾಟಿಯನು ಬಿಟ್ಟ
......ಮಧುಗಿರಿ ಬದರಿ
- K.Badarinatha
13 May 2015, 08:52 am
ದಿನವೊಂದರ ಸ್ವಾಗತಿಸುತಾ
ದಿನಚರಿಯ ನೆನಪಿಸುತಾ
ದೀನನೆಡೆಗಿನ ಬೆಳಕಿನಂತೆ
ದಿನಕರನ ಆಗಮನ
ದಾರಿ ಮರೆತ ಬದುಕು ಇದು
ಸರಿ ದಾರಿಯ ಹುಡುಕುತಿದೆ
ಗುರಿಯೆಡೆಗೆ ದೃಷ್ಠಿಯಿದೆ
ಬೆಳಗಬಲ್ಲುದೇ ಈ ಮನ...
ಕಾಯಕದ ಕರೆಯಿದೆ
ಕನಸುಗಳ ಬೇಲಿಯಿದೆ
ಜೊತೆ ಬೇಡುವ ಕೆಲ ಜೀವವಿದೆ
ಹರಸುವಿರಾ ಈತನ..
ನೂತನವಾಗಲಿ ಈ ದಿನ
- ಸಿರಾಜ್
13 May 2015, 03:17 am
ವಂದಿಸಿಹುರು ಸುಂದರ ಗಜಮುಖದ ಗಣಈಶನ
ಶುಭ ಶ್ರೇಯಸ್ಕಾರ್ಯಕೆ ಪ್ರಥಮದಿ ನಮಿತದೇವನ
ಜಗದಿ ನೀನಾಗಿಹೆ ಸಕಲದೇವಗಣದ ಪ್ರಿಯವದನ
ಪಾರ್ವತೀಶರ ಅಚ್ಚು-ಮೆಚ್ಚಿನ ತನುಜನೆಂದು ಪ್ರಸಿಧ್ಧನು
ಕಾರ್ತಿಕೇಯನಿಗಾದೆ ಒಡನಾಟದ ಅಪೂರ್ವ ಸೋದರನು
ನೀನಾಗಿಹೆ ಮೂಶಿಕವಾಹನದ ಸಿದ್ಧಿ-ಬುಧ್ಧಿಗಳ ಒಡೆಯನು
ನೋಡಿನಿನ್ನನು ನಗೆಯಾಡಿದ ಚಂದ್ರನಿಗಿತ್ತೆ ಶಾಪವ
ಶ್ರೀಕೃಷ್ಣನಿಗೂ ಅಂಟಿಸಿದೆ ಚೌತಿಚಂದ್ರನ ಅಪವಾದವ
ಹುಲುಮಾನವರು ನಮಗಾದೀತೆ ನೀ-ತಳೆದರೆ ಕೋಪವ?
ನಿನಗಗ್ರಪೂಜೆಯು ಸಹಸ್ರಾದಿಯಲಿ ಚವಿತಿಯ ದಿನದಂದು
ಪ್ರಾರ್ಥಿಸಿ ನಿನ್ನನು ನಿರ್ವಿಘ್ನಂ ಕುರುಮೇದೇವನೆಂದು
ಪಾಡಿಪೊಗಳುವರು ವಿಘ್ನೇಶ್ವರ ವಿನಾಯಕ ಗಣೇಶನೆಂದು
© ರಾಘವ ಹರಿವಾಣಂ
- raghavendra ps
13 May 2015, 02:32 am
ನಾನೆಂಬ ಭಾವವದು ನನಗೀಯಲಿ ನನ್ನತನವ
ನನ್ನಿರುವಿಕೆಯ ಪ್ರಬಲತೆಗೆ ನೀಡಲಿ ನೂರಾನೆಬಲವ
ನನ್ತನದಿ ಸದಾಬೆಳಗಿ ತೋರಲಿ ನನ್ನೀ-ವ್ಯಕ್ತಿತ್ವವ
'ನಾನೇ'ಯೆಂಬ ಅಹಂ ಆರಿಸದಿರಲೀ ಮನದೀಪಕವ
ನಾನು-ನನ್ನದೆಂಬ ಛಾಪಿರುತಿರಲಿ ವೃತ್ತಿ ಪ್ರವೃತ್ತಿಯಲಿ
ಎಲ್ಲರೊಡಗೂಡಿ ನಾನಿದ್ದೂ ನನ್ತನವು ಪ್ರಜ್ವಲಿಸಲಿ
ನನ್ನತನವದು ಸಕಲ ಸೃಷ್ಟಿಯೊಳು ಪ್ರತ್ಯೇಕವೆನಿಸಲಿ
ಅನುಕರುಣೆಯ ಬಾಳ್ವೆಯ ನಾನೆಂದೂ ಬಯಸದಿರಲಿ
© ರಾಘವ ಹರಿವಾಣಂ
- raghavendra ps
13 May 2015, 02:23 am
ಅಮ್ಮ ಅಮ್ಮ ನನಗೆ ಶಾಲೆ
ಬೇಡ ಮಗಳೇ ಊದು ಒಲೆ
ಊದು ಒಲೆಯ ನಾನು ಬಲ್ಲೆ
ಶಾಲೆ ಬೇಕು ಒಲೆಯ ಒಲ್ಲೆ
ಅಜ್ಜ ಅಪ್ಪ ಯಾರೂ ಇಲ್ಲ
ತಿನ್ನಲಿಕ್ಕೆ ಕಾಳು ಇಲ್ಲ
ಹೊಲದಿ ದುಡಿದು ಕಾಳು ಕಡಿ
ಸಂಜೆಯಾಗೆ ಮನೆಗೆ ನಡಿ
ಹಗಲು ಓದಿ ಇರುಳು ದುಡಿವ
ಕೆಲಸ ಯಾಕೆ ಸಿಗುವುದಿಲ್ಲ
ಊಟ ಬೇಕು ನಿದ್ರೆ ಬೇಕು
ಶಾಲೆ ಮಾತ್ರ ಏಕೆ ಬೇಡ
ಇಲ್ಲದವರಿಗೆ ದುಡಿಮೆ ಏಕೆ
ಉಳ್ಳವರಿಗೆ ಗರಿಮೆ ಏಕೆ
ಬಡವನಾದ ಮಾತ್ರಕೆ
ಓದಬಾರದೇತಕೆ?
..........ಮಧುಗಿರಿ ಬದರಿ
- K.Badarinatha
13 May 2015, 01:30 am
ನೂರೊಂದು ಸಂತಸಗಳ ಸಂಭ್ರಮವಿದ್ದರೂ
ಸುಖಿ ಯಾರೂ ಇಲ್ಲ....
ಗತಿಸಿದ ನೋವೊಂದ ಹಿಡಿದು
ಗಳಿಸಿದ ಈ ದಿನವ ಮರೆಯೋ
ದುಃಖಿಗಳೇ ಎಲ್ಲ.....
ಅದಾವ ಮಾಯಗಾರನೋ
ಈ ವಿಧಿ ಬರೆಯುವವನು
ನಿರ್ಜೀವ ದೇಹವದು
ನೀರ ಮೇಲೆ ತೇಲುತಿದೆ....
ಜೀವಂತ ತನುವದು
ಮತ್ತೇಕೆ ಮುಳುಗುತಿದೆ....?
- ಸಿರಾಜ್
12 May 2015, 04:28 pm
ಕೈಗೆಟುಕದ ಗಗನದ ಕಡೆ
ಕೈ ಚಾಚುವಿಯೇಕೆ ದೋಸ್ತ್
ಎಲ್ಲವು ಇದೆ ಇಲ್ಲಿ
ಪರಿಶ್ರಮವಿರಲಿ ನಿರಂತರ
ಬಯಕೆಗಳೆಲ್ಲವು ಸಲ್ಲುತಿರೆ
ಬದುಕಿಗೊಂದು ಅರ್ಥವೇನಿದೆ ದೋಸ್ತ್
ನಿಂತ ನೀರಾಗದಿರಲಿ ಬದುಕು
ಇಲ್ಲಗಳದೊಂದು ಪಟ್ಟಿ ಇರಲಿ
ಗಳಿಸುವ ಛಲ ಜೀವನೋತ್ಸಾಹ ತುಂಬಲಿ...
- ಸಿರಾಜ್
12 May 2015, 02:51 pm
ಮಮತೆಯ ಮಡಿಲಲ್ಲಿ
ಜೋಗುಳದ ನುಡಿಯಲ್ಲಿ
ಸಕ್ಕರೆ ನಿದ್ರೆ ಅಮ್ಮನ ಮಡಿಲಲ್ಲಿ
ಮುಂಜಾನೆ ಎಬ್ಬಿಸಿ
ನಿತ್ಯಕರ್ಮವ ಮಾಡಿಸಿ
ರುಚಿಯಾದ ಹಾಲುಣಿಸೆ
ಮಖದಲ್ಲಿ ಮೂಡುವುದು ಮಂದಾಹಸ
ಅಮ್ಮನ ಹೀರುತ
ಕಾಲಲ್ಲಿ ಒದೆಯುತಿರೆ
ತಲೆಯ ಸವರುವಳು
ನಸುನಗೆಯ ಬೀರುತ
ಸ್ವರ್ಗವನೆ ಸೆರಗಿನಲಿ
ಸೆರೆಹಿಡಿದ ಸುಂದರಿ
ಪುಟ್ಟ ಕಂದನ ಪಾಲಿಗೆ
ಯಕ್ಷಲೋಕದ ಕಿನ್ನರಿ
..........ಮಧುಗಿರಿ ಬದರಿ
- K.Badarinatha
11 May 2015, 02:44 am
ಅಮ್ಮ ಅನೋ ಮಾತು
ಅಂಬೆಗಾಲು ಹಿಡುವನಿಂದಲು ಗೊತ್ತು
ಅಮ್ಮನ ಮುತ್ತು
ನನಗೆ ಆಸರೆಯಾಗಿತ್ತು
ಮೂರು ಕೋಟಿ ದೇವರು ಇದ್ದರು
ಅಮ್ಮನ ಯಾರು ಬಲ್ಲದಿಲ್ಲದವರು
ಇವತ್ತು ನೆನಪಿಸಿಕೋಳ್ಳಿರಿ ಎಲ್ಲಾರು
ಮುಂದಿನ ದಿನಗಳಲ್ಲಿ ಚನ್ನಾಗಿರುವರು
- srinivassagar
10 May 2015, 05:45 pm
ಸಖಿ ನೀನೇ ಅಂದಿದ್ದೆ ಅಂದು
ಎದಿರಾಗಿ ನಿಂತಿರಲು ನೀನು
ಕಣ್ಣು ತುಂಬು ನೋಡಿಕೊಳ್ಳೆಂದು...
ಈ ದಿನ ನಿನ್ನಾ ಇರವಿಲ್ಲದೆ
ಈ ಕಣ್ಣು ತುಂಬಿ ನಿಂತಿರಲು
ಸಖಿ ಒಮ್ಮೆ ಬರಬಾರದೇ ನೀನು....
- ಸಿರಾಜ್
10 May 2015, 05:21 pm