Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸಾವಿರ ಭಾವದ ಮನಸ್ಸು
ನಾ ತಿಳಿಯಲೊಲೆ
ಛಿತ್ರ-ವಿಚಿತ್ರ ........
ಮನಸ್ಸಿನ ಮುಲೆಯ ಕೊಳಕು
ನಾ ತಿಳಿಯಬಲ್ಲೆ......
ಇದೆ ಸಚಿತ್ರ.......
- ರವಿ ನಾಯ್ಕ
11 Mar 2015, 05:02 pm
ರಂಗು ರಂಗಿನಲ್ಲಿ ನಲಿದು
ಎಲ್ಲರು ರಂಗಿನ ಹೊಳಿ ಹುಣ್ಣುವೆ
ಆಚರಿಸೊಣ
ಬಣ್ಣ ಬಣ್ಣದಲ್ಲಿ ಮಿಂದು
ಎಲ್ಲರು ಸಂತಸ ಹಂಚೊಣ
- ಅಜೀತ ಅರಬೊಳೆ ಜುಗುಳ
10 Mar 2015, 12:31 pm
ರಂಗು ರಂಗಿನಲ್ಲಿ ನಲಿದು
ಎಲ್ಲರು ರಂಗಿನ ಹೊಳಿ ಹುಣ್ಣುವೆ
ಆಚರಿಸೊಣ
ಬಣ್ಣ ಬಣ್ಣದಲ್ಲಿ ಮಿಂದು
ಎಲ್ಲರು ಸಂತಸ ಹಂಚೊಣ
- ಅಜೀತ ಅರಬೊಳೆ ಜುಗುಳ
10 Mar 2015, 12:30 pm
ನೀರ ಮುಟ್ಟಲು ಇಲ್ಲ
ಉಣ್ಣಲು ಇಲ್ಲ
ರೆಪ್ಪೆ ಮುಚ್ಚಲು ಇಲ್ಲ
ಕಣ್ಣೀರ ಧಾರೆ
ಹರಿಯುತಲಿತ್ತು
ಹೃದಯದಿ ಡವಡವ ಶಬ್ದ
ಕೇಳುತಲಿತ್ತು
ಅಮ್ಮನ
ಕಾರಣ ನಾ ಬರುವಾಗ
ತಡವಾಗಿತ್ತು
ಎಂ.ಐ.ಕೆ
- ishak
09 Mar 2015, 06:10 pm
ಈ ಪ್ರೀತಿ ಎಂಬುದೇ ಹೀಗೆ ಕಣ್ರೀ
ಮೊದ ಮೊದಲು ತುಂಬಾ ಖುಷಿ ಕೊಡುತ್ತೆ
ಹೊಟ್ಟೆಗೆ ಹೋದ ಎಣ್ಣೆ ತಲೆಗೆ ಕಿಕ್ಕು ಕೊಟ್ಟಂತೆ
ಬರಬರುತ್ತಾ ನಿದ್ರೆನೇ ಕೊಡಲ್ಲ
ನೆತ್ತಿಗೆ ಹಾಕಿದ ಎಣ್ಣೆ ಕಣ್ಣಿಗೆ ಬಿದ್ದಂತೆ
ಮನೆಯವರು ಒಪ್ಕೊಂಡಿಲ್ಲ ಅಂದ್ರೆ
ನಿಂತು ನಿಂತು ಸಾಗುತ್ತೆ
ಬೈಕಿನ ಟ್ಯಾಂಕಿಗೆ ಹಾಕಿದ ಎಣ್ಣೆ
ರಿಸರ್ವ್ ಗೆ ಬಿದ್ದಂತೆ
ಪ್ರೀತಿ ಕೈ ಕೊಡ್ತು ಅನ್ನಿ, ಮರೆಯಲಾಗೋದೇ ಇಲ್ಲ, ಇಂಜಿನ್ ಗೆ ಹಾಕಿದ ಎಣ್ಣೆ ಬಟ್ಟೆಗೆ
ಮೆತ್ತಿಕೊಂಡಂತೆ
ಅವಳನ್ನೇ ಮದುವೆ ಆದ್ರಿ ಅಂದ್ಕೊಳ್ಳಿ
ತಲೆಗೆ ಕೊಬ್ಬರಿ ಎಣ್ಣೆ ಹಾಕೋದು ಮರೆತು ಹೋಗುತ್ತೆ
- ಕೃಷ್ಣಮೂರ್ತಿ ಚಿತ್ರಶೆಟ್ಟಿಹಳ್ಳಿ
- ಕ್ರಷ್ಣಮೂರ್ತಿ ಚಿತ್ರಶೆಟ್ಟಿಹಳ್ಳಿ
09 Mar 2015, 05:32 pm
ಕೆನ್ನೆ ಮೇಲೆ ಒತ್ತಿದ ಮುತ್ತಿನ
ಬಿಸಿ ಆರುವ ಮುನ್ನ ನೀನೆನ್ನ
ಬಿಟ್ಟು ಹೋದೆಯಾ ಒಲವೆ.
ಬತ್ತಿದ ಕೊಳದ ತಳದಿ ನೀರಿಲ್ಲದೆ
ಮಿಡಿವ ಮೀನ ಮರೆವ
ಮುನಿಸೇತಕೆ ಚೆಲುವೆ ?
- ಶ್ರೀಗೋ.
09 Mar 2015, 01:57 pm
ಕೊರಳ ಸುತ್ತಿಗೆ ...
ಕೊರಳಲ್ಲಿ ಸುತ್ತಿಕೊಂಡ
ಅದೆಷ್ಟು ದಾರಗಳು ಕಳಚಿದ್ದೇನೆ
ಈಗ ಮಾಲೆಯೊಂದಿದೆ
ಮನುಷ್ಯನಾದ ಮೇಲೆ.
ಹಿಂದಿನ ದಾರಗಳು
ರೂಪಾಂಕುರವಿತ್ತು
ಆದರೆ ಅವುಗಳು
ಗಂಟ್ಟಲು ಬಿಗಿವ ದಾರಗಳಾಗಿದ್ದವು.
ಒಂದೊಂದು ಸಹ
ಪಡೆಯುವಾಗ ಚಿನ್ನದಂತೆ
ಅಂದುಕೊಂಡೆ, ಕಾಲ ಕಳೆದಂತೆ
ಚಿನ್ನ ಹೊದ್ದ ಕಬ್ಬಿಣವಾಗಿತ್ತು.
ಕಬ್ಬಿಣವಾದರು ಪರವಾಗಿಲ್ಲ ಅನ್ನಿಸಿದಾಗ
ಮಸೆದ ಖಡ್ಗವಾಗಬೇಕೆ ?
ಕುತ್ತಿಗೆಗೆ ಸಂಚಕಾರ ಬಂದಾಗ
ಕೊಂಚವು ಅಂಜದೆ ಮಂಡ ಮಾಡಿದೆ.
ಇನ್ನು ನನ್ನ ಕಪಾಟ್ಟಿನಲ್ಲಿ ಒಂದಾಷ್ಟು ದಾರಗಳಿವೆ
ಜಾಗ್ರತೆಯಿಂದ ಖರೀದಿಸಿದ್ದು
ಜಾರುವ ಕುರವುಗಳಿಲ್ಲ..!
ಆದರೂ ಮಾಲೆಯಲ್ಲಿದ್ದೆನೆ ಮನಷ್ಯನಾದ ಮೇಲೆ.....
-ಈಶ, ಎಂ.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
08 Mar 2015, 01:57 pm
ಬಾಯಾರಿದಾಗ
ಬಿಸಿಲೇರಿ
ಮನಸ್ಸೆನ್ನುವುದು
ಆಹಾ ಏನ್ ಬಿಸ್ಲೂ ರೀ..
ಕಾಸಿದ್ದರೆ
ಬಿಸ್ಲೆರಿ
ಇಲ್ಲದಿದ್ದರೆ
ನೆನಪಾಗುವುದು
ತುಂಗಾ ಕಾವೇರಿ.
ಕ್ರಷ್ಣಮೂರ್ತಿ ಚಿತ್ರಶೆಟ್ಟಿಹಳ್ಳಿ
- ಕ್ರಷ್ಣಮೂರ್ತಿ ಚಿತ್ರಶೆಟ್ಟಿಹಳ್ಳಿ
07 Mar 2015, 02:21 pm
ಮೀಸೆ ಚಿಗುರಿದಾಗ ಖುಷಿ ಖುಷಿ
ಬಲಿತಾಗ ಕಸಿವಿಸಿ
ಹಣ್ಣಾದಾಗ ಬಳಿಯುವಿರೇಕೆ
ಕಪ್ಪು ಮಸಿ?
ಕ್ರಷ್ಣಮೂರ್ತಿ ಚಿತ್ರಶೆಟ್ಟಿಹಳ್ಳಿ
- ಕ್ರಷ್ಣಮೂರ್ತಿ ಚಿತ್ರಶೆಟ್ಟಿಹಳ್ಳಿ
07 Mar 2015, 02:18 pm
ಧನ ಧನ ಧನ
ಕನಕ ಕನಕ
ಭಕ್ತಿ ಮುಕ್ತಿ
ಎಲ್ಲಾದಕ್ಕು ಸೂಚನೆ
ಕಾರಣವಿಲ್ಲದ ಯಾತನೆ
ಅದೇ ಕಲ್ಪನೆಯ
ಅಂತರಂಗದ ಅಧ್ಯಯನ
ಮತ್ತದೇ ಚಪ್ಪಲಿ
ಅದೇ ಪಂಚೆ
ತೂರಿ ಎಸೆದ ದಿಂಬು ಹಾಸಿಗೆ
ಇವೇ ಉಳಿಯೋದು
- ಗುರು
03 Mar 2015, 11:34 am