Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನಸು

ಮನಸಿನ ಉಯ್ಯಾಲೆಯ ಮೇಲೆ
ಕೂತು ತೂಗೋ ನೆನಪುಗಳಿಗೇನು ಗೊತ್ತು . . . . .

ತಿಳಿದೋ ತಿಳಿದೆನೋ
ಒಡೆದು ಹೋದ ಅದೆಷ್ಟೋ ಕನಸುಗಳು . . . .

//ಶ್ರೀ ವತ್ಸ//

- ಶ್ರೀವತ್ಸ

08 Dec 2014, 04:45 pm

ನೋಟ

ನಿನ ಕಣ್ಣ ಕೊಳದೊಳಗಾಡುವ
ನೋಟದ ಮೀನನೀಡಿಯಲು ..
ಬೀಸಿದ ಬಲೆಗೆ ಬಾರದೆ.
ಜಾರುವ ಜಾಣೆಯೆ ಕಡಲೆ. . ..
ನೀರಿಗಿಳಿದರೆ ಈಜಲರಿಯೆ . . ?
ದಾರಿ ನಿಂತರೆ ದಿಟ್ಟಿ ಪಡೆಯೆ

//ಶ್ರೀ ವತ್ಸ//

- ಶ್ರೀವತ್ಸ

08 Dec 2014, 02:33 pm

ಅವ್ವ ನಾ ಹೇಗೆ ಬರಲಿ ಹೊರಗೆ..

ಅವ್ವ ನಾ ಹೇಗೆ ಬರಲಿ ಹೊರಗೆ..?
ನಿನ್ನ ನೋವಿನ ರಾಗದ ಗಳಿಗೆ
ಕರಳ ಬಳ್ಳಿ ತುಂಡರಿಸಿ ಧರೆಗೆ.
ಗರ್ಭದ ಗೂಡಲ್ಲಿ ಇರುವೆ ಬೆಚ್ಚಗೆ
ಹೊರ ದೂಡಬೇಡ ಇಳೆಗೆ.

ಅವ್ವ ನಾ ಹೇಗೆ ಬರಲಿ ಹೊರಗೆ..?
ನಿ ನೋಡದೆ ಇರುವ ವಿಷಯ ಯಾವುದು?
ಹೊಟ್ಟೆಯ ಮೇಲೆ ಬರಿ, ಯೋಚಿಸುವೆ ಇಂದು
ಸೃಷ್ಟಿಯ ಮೂಲ ಅಲ್ಲವೇ ಪ್ರಶ್ನೆ ?
ಅದಕ್ಕೇ ಇಷ್ಟೊಂದು ಪರೀಕ್ಷೆ.

ಅವ್ವ ನಾ ಹೇಗೆ ಬರಲಿ ಹೊರಗೆ..?
ಎಷ್ಟೆಲ್ಲ ಭಿನ್ನ ಭಿನ್ನ ಕೊಳಕು
ಇದ್ದವರ ಅಣೆಯ ಮೇಲೆ ಸೂರ್ಯನ ಬೆಳಕು
ಕೆಲವರಿಗೆ ಚಂದ್ರನ ತೆಳುಬೆಳಕು
ಇನ್ನುಳಿದವರಿಗೆ ಅಮವಾಸೆ ಕರಿಬೆಳಕು

ಅವ್ವ ನಾ ಹೇಗೆ ಬರಲಿ ಹೊರಗೆ..?
ಪ್ರಶ್ನೆಯಿಂದ ಅಲ್ಲವೆ ಎಲ್ಲವು ಜಗದಲ್ಲಿ
ಧರ್ಮ,ದೈವ,ಮೇಲು-ಕೀಳು ಇಲ್ಲಿ
ಜಗವೆಲ್ಲ ಗಡಿ, ಮನೆ -ಮನಗಳಿಗೆ ಬೀಗ
ಆಳುವವರು, ಕೇಳುವವರು ಕಳೆದವರ ಜಾಗ

ಅವ್ವ ನಾ ಹೇಗೆ ಬರಲಿ ಹೊರಗೆ..?
ಅವ್ವಾ ಪ್ರಶ್ನೆ ಕೇಳಿದರೆ ಪ್ರಶ್ನೆಯಾಗಿಸುವರಲ್ಲ
ಅಲ್ಲಿ ನಾ ಬಂದು ಬಾಗಬೇಕ ಇಲ್ಲ ಬಾಳಬೇಕ
ಇಷ್ಟೇಲ್ಲ ಆದರೂ ಪ್ರಶ್ನೆ ?ಬೇಕ ಅನ್ನುವ ಪ್ರಶ್ನೆ
ನನ್ನನ್ನು ಪ್ರಶ್ನಿಸಲು ಹೊರತರುವೆಯ.....ಅವ್ವ

-ಈಶ, ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

08 Dec 2014, 04:16 am

ಕೊಲೆಗಾರ

ಎಲ್ಲೊ ಕಳೆದುಹೋದಾಗ..
ಮತ್ತೆಲ್ಲಿಂದಲೋ ತೇಲಿ ಬಂದ
ತಂಗಾಳಿಯಲಿ ನೆನಪಾಗಿ ಬಂದು...
ಮನದಲ್ಲಿ ಕಿಚ್ಚೆಬ್ಬಿಸಿ..
ಕಣ್ಣಲ್ಲಿ ಆಸೆಯ ಕಿಡಿ ಹೊತ್ತಿಸಿ...
ತಂಪೆರಚದೆ ಹೊಗುವ ಕೊಲೆಗಾರ ನೀ.....

- ನಿಮ್ಮಿ

07 Dec 2014, 04:23 pm

ನನ್ನವಳಿಗೆ.

* ನನ್ನವಳಿಗೆ *


ನನ್ನವಳೆ ನೀ ಯಾರದರೂ ಸರಿಯೇ...

ನೀನು-ನಾನು ಎಂಬ ಸುಳಿ ಬರಲು
ನನ್ನ ಉಸಿರು ಸುಂಟರಗಾಳಿಯಾಗದು..
ಹೆಣ್ಣಲ್ಲ ಗಂಡು ಎಂಬುದು ಬಾಗಿಲ ನೆತ್ತಿಯ ಕಟ್ಟಳೆ ಕಾಯಿ ಕಟ್ಟಲ್ಲ..

ನನ್ನವಳೆ, ನೀ ಯಾರಾದರೂ ಸರಿಯೆ..

ತಾಯಿಯಾಗುವ ತಾಯಲ್ಲವೆ ನೀನು
ನನ್ನನ್ನು ಕರುಳಲ್ಲಿ ಸುತ್ತಿಕೊ
ಕಣ್ಣ ರೆಪ್ಪೆಯಾಗುವೆ..
ಪ್ರಶ್ನಿಸುವ ಗಂಡಲ್ಲ ,ನಿನ್ನ ಸ್ಪೂರ್ತಿ
ಪ್ರವೇಶದಲ್ಲಿ ಪ್ರಯಣಿಸುವ ಪ್ರಯಾಣಿಕ..

ನನ್ನವಳೆ, ನೀ ಯಾರಾದರೂ ಸರಿಯೆ..

ಪಾತ್ತರಗಿತ್ತಿ ಹಾಗೆ ಬಣ್ಣ, ಹಾರಾಡುವ
ಸ್ವಂತತೆ ಅದುಮುವುದಿಲ್ಲ..
ನಿನ್ನ ಭಾಷೆಯನ್ನು ಅನ್ಯಥ ಭಾವಿಸದೆ
ಬಾನಿನಲ್ಲಿ ಬರೆಯುವೆ..
ನಿನ್ನ ದೋಣಿಯ ದೂರಕ್ಕೆ
ನೀರಾಗಿ ಜಾಗ್ರತೆಯಿಂದ ದಡ ಸೇರಿಸುವೆ..

ನನ್ನವಳೆ, ನೀ ಯಾರಾದರೂ ಸರಿಯೆ..

ಗುಡಿಸಲು ಇಲ್ಲದಿದ್ದರೂ ಗುಡಿಯ ಕಟ್ಟುವೆ
ನನ್ನ ಪಕ್ಕೆಲುಬುಗಳ ಜೋಡಿಸಿ..
ಕೂಳಿನ ಕೊರತೆಯಾದರೆ ಕೇಳದೆ ಪ್ರೀತಿಯ ಪಾತ್ರೆಯಲಿ ಊಣಬಡಿಸುವೆ.
ನಿನ್ನ ಕಟ್ಟಡ, ಕಾಮದ ಕೋನಕ್ಕೆ ವಾಸ್ತುವಾಗಿಸದೆ
ಶತಮಾನದ ಶಿಲೆಯಾಗಿಸುವೆ..

ನನ್ನವಳೆ, ನೀ ಯಾರಾದರೂ ಸರಿಯೆ..

ನಿನ್ನ ಸೌಂದರ್ಯ ಸೊಗಸು ನೋಡಲು
ಕಣ್ಣಿನ ಕನ್ನಡಿ ತೆರೆಯುವೆ..
ಮುಂಗುರುಳು ಮುದುಡಿದರೆ
ಕಣ್ಣೀರಿನ ಎಣ್ಣೆಯಲ್ಲಿ ಕೈ ಬೆರಳಿಂದ ಬಾಚುವೆ,
ನಿನ್ನ ಉಸಿರು ಹಸಿರಾಗಿರುವಾಗಲೆ
ಮನ್ನಿಸು ನನ್ನುಸಿರು ಗಾಳಿಪಟಕ್ಕೆ ಕೊಡುವೆ...

ನನ್ನವಳೆ,
ನಾ ನಿನ್ನವನು, ಬರುವೆಯ..!!

-ಈಶ, ಎಂ.ಸಿ.ಹಳ್ಳಿ.

- ಈಶ, ಎಂ.ಸಿ.ಹಳ್ಳಿ

07 Dec 2014, 12:24 pm

ಸಾಕೆನಿಸಿಲ್ಲ

* ಸಾಕೆನಿಸಿಲ್ಲ *


ಸಾಕೇನಿಸಿದರು ದೇಹ ಬಾಡಿಲ್ಲ
ಸಾಕಾಗುತ್ತಿಲ್ಲ ವ್ಯಾಪಾರ .
ಜೀವನ ಜಿನುಗದ ಬಾಚಣಿಕೆ
ಸಂಬಂಧದ ಸಂದರ್ಭ
ಸಾಕೇನುವಷ್ಟು ಬಾಯಾರಿಕೆ
ಆದರೂ ಬಾಯಾರಿಲ್ಲ ಬಯಕೆ.
ಸರಪಳಿಯ ಸುತ್ತಲೂ
ಆಸೆಯ ಸಂಜೀವಿನಿ
ಮರುಜೀವ ತುಂಬುತ್ತದೆ
ಮರು ಘಳಿಗೆಯಲ್ಲಿ .
ಜಾಗ್ರತೆಯ ಜಾಗಕೆ
ಯಾರು ಬಂದರೂ
ಬಾರದೇ ಬದಿಗಿದ್ದರು.
ಬಾವಿಯಲ್ಲಿ ಬಾನಿಲ್ಲವೇ
ಅಲ್ಲಿ ನನ್ನ ಆಕೃತಿಯ ಆಕಾರದಲ್ಲಿ
ಕನ್ನಡಿ ಆಗದೆ ಕನಸಿನ ಅಲೆಯಾಗಿ
ಮತ್ತೊಮ್ಮೆ ತಿಳಿಯಾಗಿ.
ಚಳಿಗೆ ಚರ್ಮ
ಮಳೆಗೂ ಚರ್ಮ
ಬೇಸಿಗೆಗೂ ಚರ್ಮವೇ
ಅಂದ ಆಕಾರ ಅರಳಿ ಕೆರಳಿ
ಮಾಂಸದ ಮನಸಿಗೆ ರಕ್ಷಿಸುತ್ತದೆ.
ಹಾಗೇ ಸಾಕೆನಿಸಿಲ್ಲ.......

-ಈಶ, ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

05 Dec 2014, 01:19 pm

ಮದುವೆ

ಮದುವೆ ಎಂಬುದು ನಾಕ
ಎಂದು ಹಿರಿಯರು ಹೇಳ್ಯಾರ
ನಾಕವಲ್ಲ ನೂಕು ನೂಕು
ಎಂದು ಗೆಳೆಯರ ಕ್ಗೂತ್ತಾರ

ಮದುವೆಯಲ್ಲಿ ಜಾಕ ತಂದು
ಎಲ್ರೂ ನಮ್ಮನ್ತೆರಾ
ಜಾರಿಬಿದ್ದ ಮೇಲೆ ನಮ್ಮನ್
ನೋಡಿ ನೋಡಿ ನಗತಾರ




- ಈರಪ್ಪ ಸೊರಟೂರ

05 Dec 2014, 11:14 am

ಹೆಂಡತಿ -ಹೆಮ್ಮರ

ನಾ ಮದುವೆಯಾದೆ ಯಾಕರ?
ನನ ಹೆಂಡತಿ ಒಂದು ಹೆಮ್ಮರ

ಬಾಗಲಿಲ್ಲ ಬಳುಕಲಿಲ್ಲ
ಹಾಗೆ ಸುಮ್ಮನೇ ಒಮ್ಮೆರ
ನನ ಹೆಂಡತಿ ಒಂದು ಹೆಮ್ಮರ



- ಈರಪ್ಪ ಸೊರಟೂರ

05 Dec 2014, 10:56 am

//ಕವಿತೆ//

ದಿನವೆಲ್ಲ ನಿನ್ನೆ ನೋಡುತ
ಪದಗಳೊಡನೆ ಆಟವಾತ. . .
ಅದೆಷ್ಟು ಬರೆದರು ಮುಗಿಯದೀ,
ಪ್ರೇಮ ಕವಿತೆಯು ಶ್ರೀ ವತ್ಸ. .

- ಶ್ರೀವತ್ಸ

05 Dec 2014, 10:15 am

ಪದ-ಪದ್ಯ

ಪದಗಳೊಂದಿಗೆ ಆಟವಾಡತಾ ಪದ್ಯ ಬರೆಯಬೇಕು,
ಪದ್ಯದಲ್ಲೆ ಗುದ್ದು ಗುದ್ದಿ ಕೊಂಕತಿದ್ದ ಬೇಕು
ನುಡಿಗಳನ್ನು ಹೇಳ್ತಾ ಕೇಳ್ತಾ ನಾಡ ಕಟ್ಟ ಬೇಕು,

- ಈರಪ್ಪ ಸೊರಟೂರ

04 Dec 2014, 03:52 pm