Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಿಡಿಲು

"ಸಿಡಿಲಿನ ಹೊಡೆತಕ್ಕೆ ಸಿಕ್ಕು..
ಸಾವಿನ ಸಂಖ್ಯೆ ಏರಿತು ನೂರಕ್ಕೆ."
ಆದರೂ..ಎಲ್ಲಿಯೂ ಅಳುವಿಲ್ಲ....
ಆಕ್ರಂದನವಿಲ್ಲ..ನೋವಿಲ್ಲ...
ಕೊನೆಗೆ,ಪತ್ರಿಕೆಯಲ್ಲಿ ಸುದ್ದಿಯೂ ಇಲ್ಲ..
ಯಾಕೆಂದು ಚಿಂತಿಸದಿರಿ.......
ಸತ್ತವರು ಜನರಲ್ಲ.....ನನ್ನೊಳಗಿನ ಕನಸುಗಳು..

- ನಿಮ್ಮಿ

01 Dec 2014, 03:45 pm

ಮೋಹಕತೆ

ಮೆಲ್ಲನೆ ಬಂದು..ಬೆನ್ನ ಮೇಲೆ
ಮುತ್ತಿಡುವ ತಂಗಾಳಿಗೆ...
ತುಂಟತನ ಕಲಿಸಿದ್ದು...ನೀನಿರಬೇಕು.
ಏನೂ ಕಾಣದ ಕತ್ತಲೆಗೆ..
ಕನಸು ಕಟ್ಟಿಕೊಡುವ ಕಲೆ..
ನೀ ಹೇಳಿರಬೇಕು.
ಮಿನುಗುವ ನಕ್ಷತ್ರಗಳಲ್ಲಿ...ಅಡಗಿರುವ ಮೋಹಕತೆ..
ನಿನ್ನದೇ ಇರಬೇಕು

- ನಿಮ್ಮಿ

01 Dec 2014, 03:38 pm

ಸುಳಿಮಿಂಚು

ಏನೆಂದು ಹೇಳಲಿ,ನಿನ್ನ ಪ್ರೀತಿಯ ರೀತಿಗೆ..
ಅದೆಲ್ಲಿ ಕಳೆದು ಹೋಗಲಿ...
ನಿನ್ನ ತುಟಿಯಂಚಿನ ನಗೆಯಲಿ....
ಅದ್ಹೇಗೆ ಕಳೆದು ಹೋಗದೆ ಇರಲಿ...
ನಿನ್ನ ಕಣ್ಣಂಚಿನ ಸುಳಿಮಿಂಚಲಿ..

- ನಿಮ್ಮಿ

01 Dec 2014, 03:30 pm

ನೊಂದಮನಸ್ಸಿನ ಮುಗ್ದ ಮಾತು

ಓ ಗೇಳತಿ ಮತ್ತೆ ಬರಬೇಡ ಬಾಳಲ್ಲಿ
ನನಗೆ ಕೊಡುವದಕ್ಕೆ ಮತ್ತೊಂದು ಹೃದಯವಿಲ್ಲ
ಹೊಸಪಾಠದ ಜೋತೆಗೆ ಸಾಕಷ್ಟು ಅನುಭವ ನೀಡಿದೆ
ಸತ್ತು ಹುಟ್ಟಿ ಬಂದೆನು ಸಾಧನೆ ಮಾಡಲು
ಈ ಜೀವ ಸಾಧನೆ ಮಾಡಿ ಸಾಧಕನಾಗಲು ಗೇಳತಿ.....................

- ಬಾಲು ಶಿರಗುಂಪಿ

01 Dec 2014, 05:29 am

ಮೌನವೀಣೆ

ನನ್ನೆದೆಯ ತಂತಿ ಮೀಟಿ,ಭಾವವೀಣೆ ನುಡಿಸಿದೆ
ಹೃದಯದ ಅಂತರಾಳದಿ ಕೈ ಸೋಕಿಸಿ...
ಹೊಸ ಅಲೆ ಎಬ್ಬಿಸಿದೆ..
ನಿರಾಳ ಮನಕೆ ಹೊಸ ರಾಗ ಲಹರಿ ಕೆಳಿಸಿದೆ
ನಿನ್ನಂತರಂಗದ ಸಾಮಿಪ್ಯ ಬಯಸಿಬಂದಾಗ...
ನೀನೊಂದು ಮೌನವೀಣೆಯಾದೆ..

- ನಿಮ್ಮಿ

01 Dec 2014, 05:18 am

ದಿವ್ಯಮೌನ

ನನ್ನಲ್ಲಿ ಮಾತಿನ ಪ್ರವಾಹ..
ನಿನ್ನಲ್ಲಿ...ಶಬ್ದಗಳ ಬರಗಾಲ.
ನಾನು ಬಿಟ್ಟುಬಿಡದ ಸುರಿಮಳೆ..
ನೀನು..ಕಾತರಿಸುವಂತೆ ಮಾಡುವ ಹನಿಮಳೆ.
ನಾನೆಷ್ಟೇ ಕನವರಿಸಿದರೂ..
ನಿನ್ನಲ್ಲಿ ಅಡಗಿದೆಯೊಂದು...ದಿವ್ಯಮೌನ.....

- ನಿಮ್ಮಿ

01 Dec 2014, 05:05 am

ಮುಗುಳ್ನಗು

ಕನಸಿಲ್ಲದ ಕಣ್ಣುಗಳಿಗೆ,ನಿದ್ದೆ ಭಾರವಾಗಿದೆ
ನೀನಿಲ್ಲದ ನೆನಪುಗಳು
ಇದ್ದೂ ಇಲ್ಲದಂತಿವೆ....
ನಿನ್ನೊಡನೆ ಆಡದೆ ಉಳಿದ ಮಾತುಗಳು..
ಮೂಕಾಗಿ ಮುಗುಳ್ನಗುತಿವೆ.....

- ನಿಮ್ಮಿ

30 Nov 2014, 04:51 pm

ಅಂತರಗಂಗೆ

ತುಟಿಯಂಚಲಿ ವಿನಾಕಾರಣ ಮೂಡಿದ
ನಗೆಯ ಕಾರಣವಾಗಿರುವೆ ನೀ....
ಕಣ್ಣಂಚಲಿ ಜಾರದೆ ಉಳಿದ
ಹೊಳಪಿನ ಮಿಂಚಾಗಿರುವೆ ನೀ....
ಮನದಾಳದಲಿ ಸದ್ದಿಲದೇ ಹರಿವ..
ಅಂತಂರಗಂಗೆಯಗಿರುವೆ ನೀ....

- ನಿಮ್ಮಿ

30 Nov 2014, 04:46 pm

ವಾಸ್ತವ

ಕೂಡಿ ಬಾಳಿದರೆ ಸ್ವರ್ಗ ಸುಖ
ಎಂದು ನಿನ್ನನ್ನು ಕೂಡಿಕೊಂಡೆ
ನನ್ನದೆಂಬುದೇನೂ ಉಳಿದಿಲ್ಲ ಈಗ
ಎಲ್ಲವನ್ನೂ ಕಳೆದುಕೊಂಡೆ :-)

- ವಿಜಯ್ ಹೆರಗು

30 Nov 2014, 04:37 pm

ಏನು ಇಲ್ಲ

* ಏನು ಇಲ್ಲ *


ನನ್ನದು ಏನು ಇಲ್ಲ
ಬರೆದದು ಬರೀ
ಬರವಣಿಗೆ
ಏಕೆಂದರೆ?
ಅಕ್ಷರಗಳೆಲ್ಲ
ನಿಮ್ಮದೇ.....!

ನನ್ನದು ಏನು ಇಲ್ಲ
ಬರೀ
ಮಾತಾಡುತ್ತಿದ್ದೆನೆ
ಏಕೆಂದರೆ?
ಪದಗಳೆಲ್ಲ
ನಿಮ್ಮದೇ .....!

ನನ್ನದು ಏನು ಇಲ್ಲ
ಬರೀ
ದುಡಿಯುತ್ತಿದ್ದನೆ
ಏಕೆಂದರೆ?
ದುಡ್ಡೆಲ್ಲ
ನಿಮ್ಮದೇ ....!

ನನ್ನದು ಏನು ಇಲ್ಲ
ಬರೀ
ಜೀವಿಸಿದ್ದೆನೆ
ಏಕೆಂದರೆ?
ಜೀವ
ನಿಮ್ಮದು...!

-ಈಶ, ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

30 Nov 2014, 05:18 am