Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬದುಕು

ಜೀವನವೆಂಬುದು ಕಷ್ಟಗಳ ಸರಮಾಲೆ
ಕಷ್ಟಗಳು ಯಾವುದೂ ಶಾಶ್ವತವಲ್ಲ!
ಆದರೆ ಈ ಜೀವನವು 'ಶಾಶ್ವತ' ಎಂಬ ಸತ್ಯ ಅರಿತು ಬಾಳಿದರೆ ಬಹುಶಃ ಯಾವ ವ್ಯಕ್ತಿಯೂ ಸಹ ತನ್ನ ಕಷ್ಟದ ‌ಕಾಲದಲ್ಲಿ ಸಾವನ್ನು ಯೋಚಿಸಲಾರ!!

- ನಮಿತ ಗಟ್ಟಿ

- ನಮಿತ ಗಟ್ಟಿ

09 Mar 2026, 07:44 pm

ಮನದಾಳದ ಮಾತುಗಳು
ಮರೆಯಾಗಿವೆ ಕಣ್ಗಳಲ್ಲಿ
ಎದೆಯಾಳದ ಹಾಡುಗಳು
ಮರೆಯಾಗಿವೆ ಮಿಡಿತದಲ್ಲಿ
ನಿನ್ನೋದನಾಡಿದ ನೆನಪುಗಳು
ಹುಸಿರಾಗಿವೆ ಬದುಕಿನಲ್ಲಿ
ಬದುಕಿರುವೆ ನಾ ಬದುಕಿಗಾಗಿ
ಕಾಯುತಿರುವೆ ನಾ ನಿನಗಾಗಿ.........
NV RAVANA.....✍️

- NV Ravana

21 Feb 2026, 08:11 pm

ಯೆನೆಂಡು ಹೇಳಲಿ ಆ ನಿನ್ನ ಮಾತಿಗೆ ಯೇನೆಂದು ಹೇಳಲಿ ಆ ನಿನ್ನ ಮಾತಿಗೆ ಕಾಯುವೆನು ನಾ ಈ ನಿನ್ನ ಪಿಸುಮಾತಿಗೆ ಯೇನೆಂದು ಹೇಳಲಿ ಈ ನಿನ್ನ ಸೊಗಸದ ಪ್ರೀತಿಗೆ ಬಲು ದೂರ ಪಯಣಿಸುವೆ ನಿನ್ನೊಂದಿಗೆ ಬರಿ ಆ ಒಂದು ಪಿಸುಮಾತಿಗೆ

- PRAPTHI SALIAN

18 Feb 2026, 06:22 pm

ಗೆಳೆತನ

೧. ನಿಜವಾದ ಸ್ನೇಹ
​ಕಷ್ಟ ಬಂದಾಗ ಕೈ ಹಿಡಿಯುವವನು ಗೆಳೆಯ,
ನಗು ಬಂದಾಗ ಜೊತೆಗಿರುವವನು ಗೆಳೆಯ.
ರಕ್ತ ಸಂಬಂಧ ಇಲ್ಲದಿದ್ದರೂ
ಪ್ರಾcompatibilityಣಕ್ಕಿಂತ ಹೆಚ್ಚಾದವನು ಗೆಳೆಯ.
​೨. ಸ್ನೇಹದ ಬಂಧ
​ಮಾತು ಮುಗಿದರೂ ಮೌನ ಅರಿಯುವವನು,
ದೂರವಿದ್ದರೂ ಮನದ ಹತ್ತಿರ ಇರುವವನು.
ಸೋಲಲಿ ಗೆಲ್ಲಲಿ ಬೆನ್ನಿಗೆ ನಿಲ್ಲುವ
ಪವಿತ್ರ ಸಂಬಂಧವೇ ಈ ಸ್ನೇಹದ ಹೂವು.
​೩. ಕಿರು ಕವನ
​ಕಣ್ಣೀರು ಬರುವ ಮೊದಲೇ ಒರೆಸುವ ಕೈ,
ನಗು ಮುಖ ಕಂಡಾಗ ಉಕ್ಕುವ ಸಂಭ್ರಮದ ಅಲೆ.
ಜೀವನವೆಂಬ ಹಾದಿಯಲ್ಲಿ ನನಗಾಗಿ ಬಂದ
ಅಮೂಲ್ಯವಾದ ವರವೇ ನಿನ್ನ ಗೆಳೆತನ.

- ಶಿರೀಶ

08 Feb 2026, 10:43 pm

ಗೆಳೆತನ

​1. ಪ್ರಕೃತಿಯ ಸೊಬಗು
​ಗಿಡದ ಮೇಲೆ ಚಿಗುರಿದ ಹಸಿರು,
ಮನದಲಿ ತಂದಿತು ಹೊಸದೊಂದು ಉಸಿರು.
ಹಕ್ಕಿಗಳ ಕಲರವ ಬೆಳಗಿನ ಹಾಡು,
ಸೋಲದ ಉತ್ಸಾಹಕೆ ನೀನಾಗು ಮುನ್ನುಡಿ ನೋಡು.
​2. ಬದುಕಿನ ಪಯಣ
​ಬದುಕು ಅಲೆಗಳ ನಡುವಿನ ದೋಣಿ,
ಕಷ್ಟ-ಸುಖಗಳೆ ಎರಡೂ ಬದಿಗಳ ಸಾಣಿ.
ಧೈರ್ಯವೊಂದಿದ್ದರೆ ಸಾಗುವುದು ಹಾದಿ,n
ಗಮ್ಯವ ತಲುಪಲು ಬೇಕು ಛಲದ ಹಾದಿ.
​3. ಗೆಳೆತನ
​ಮಾತಿಲ್ಲದಿದ್ದರೂ ಅರ್ಥವಾಗುವ ಮೌನ,
ಕಷ್ಟದಲಿ ಜೊತೆಯಾಗುವ ಸುಂದರ ಗಾನ.
ಗೆಳೆತನವೆಂಬುದು ದೈವಿಕ ವರವು,
ಪ್ರೀತಿಯೊಂದಿದ್ದರೆ ದೂರವಾಗುವುದು ನೋವು.

- ಶಿರೀಶ

08 Feb 2026, 10:39 pm

ಸೂರ್ಯನನ್ನೇ ಸುಡುವ ಕೋಪ ಅವಳದು.

ಚಂದ್ರನನ್ನೇ ನಾಚುವಂತೆ ಮಾಡುವ ನೋಟ ಅವಳದು.

ನವಿಲೇ ನಾಚುವಂತಹ ನೃತ್ಯ ಅದಳದು.

ಕೋಗಿಲೆಗಿಂತ ಸುಮಧುರ ಕಂಠ ಅವಳದು.

ಸಮುದ್ರದಲ್ಲಿ ಅರಳುವ ಕಮಲಕ್ಕಿಂತ ನಿಷ್ಕಲ್ಮಶ ಮನಸುಳ್ಳವಳು.

ಮುತ್ತು ರತ್ನಗಳಿಗಿಂತ ಹೊಳೆಯುವ ಸೌಂದರ್ಯ ಅವಳದು.

ಅವಳದು.
ಅವಳದು.
ಅವಳದು.
.
.
.
.
.











- Kiran R

03 Feb 2026, 07:33 pm

ಪ್ರೀತಿಯ ಪಾಠ

ತ್ಯಾಗವೇ ಪ್ರೀತಿಯಾದರೆ..

ಆ ಪ್ರೀತಿ ಚಿಗುರುವ ಮುನ್ನವೇ ನಶಿಸಬೆಕಿತ್ತು.

ನಾಟಕೀಯ ಪ್ರೀತಿಯ ತೋರಿದ ನೀನು ನಿಜವೇ ಆದರೆ...

ನೈಜವಾಗಿ ಇಷ್ಟ ಪಟ್ಟು ನಿನ್ನನ್ನೇ ಆರಾಧಿಸಿದ ನಾನು ಮುರ್ಖಳಾದೆ.

ನೀ ನನಗೆ ಸಿಗಬೇಕು ಎಂಬ ಸ್ವಾರ್ಥ ಕ್ಕಿಂತ

ನೀ ಎಲ್ಲೇ ಇದ್ದರೂ ಚೆನ್ನಾಗಿರಬೇಕು ಎಂದು ಬಯಸುವ ನಿಸ್ವಾರ್ಥಿಯಾದೆ.

ವರ್ಷಗಳೇ ಕಳೆದರೂ ನಿನ್ನ ಮೇಲಿನ ಪ್ರೀತಿ ಬದಲಾಗುತ್ತಿಲ್ಲ..

ನನ್ನ ಜೀವನದಲ್ಲೂ ಕೂಡ ಆ ಒಂದು ವ್ಯಕ್ತಿ ಬಂದಾಗ ನಾ ಈ

ಬೆರೂರಿ ನಿಂತ ನಿನ್ನ ಪ್ರತಿ ನೆನಪನ್ನು ಬುಡ ಸಮೇತ ಕಿತ್ತು ಹೊಸೆದು..

ನನಗಾಗಿ ಬಂದ ಆ ವ್ಯಕ್ತಿಯ ಪ್ರೀತಿಯ ಜೊತೆ ಪುಟ್ಟ ಸಸಿಯನ್ನು

ಹೆಮ್ಮರವಾಗಿಸುವೇ...

ಬಹುಶಃ ಇದೇ ಪ್ರೀತಿಯ ಪಾಠ ಇರಬಹುದು....

ಜ್ಯೋತಿ ❤️‍??
೦೨/೦೨/೨೦೨೬

- Jyothi

02 Feb 2026, 11:13 pm

ಮಗುವಾಗಬಯಸಿದೆ ಮನ....

ನಿಮ್ಮಂದಕೆ ನೀವೇ ಸಾಟಿ,
ಕೇಶರಾಶಿ ಸೆಳೆದಿದೆ ಮನವ ಚಿವುಟಿ,
ವದನವದು ನಗುವ ಹೂ ಬನ..
ಮಗುವಾಗಬಯಸಿದೆ ಮನ,
ಪಡೆಯಲೆಂದು ನಿಮ್ಮ ಚುಂಬನ...
---- tippu ----

- tippu

01 Feb 2026, 03:06 pm

ರಾತ್ರಿಯ ಚಂದ್ರ

ನೋಡಲು ಸುಂದರ ರಾತ್ರಿಯ ಚಂದ್ರ
ಎಲ್ಲರನ್ನು ತನ್ನಡೆಗೆ ಆಕರ್ಷಣೆಯ ಮಾಡುವ
ಚಿನ್ನದಂತೆ ಹೊಳಪುಳ್ಳ ಇವನ ಸುಂದರ ಬೆಳಕು
ಸೃಷ್ಟಿಸಿದೆ ಭೂಮಿಯ ಮೇಲೆ ಬೆಳದಿಂಗಳ ಮೈದಾನವ
ಚಂದ್ರನ ಸೌಂದರ್ಯ ಹೆಚ್ಚಿಸುವವು ಸುತ್ತಲಿನ ನಕ್ಷತ್ರಗಳು
ತಾಯಂದಿರು ಎಳೆ ಮಕ್ಕಳಿಗೆ ಊಟ ತಿನಿಸುವಾಗ
ಮಕ್ಕಳಿಗೆ ತೋರಿಸುವರು ಇವನನ್ನ
ಇವನ ಆ ಬೆಳಕು ಎಷ್ಟು ಸುಂದರ
ನೋಡಿದ ನಮ್ಮ ಕಣ್ಣುಗಳೇ ಅಮರ

- Chandana Chandu

31 Jan 2026, 07:30 pm

ಹೊಸ ಬದುಕು

ಸಾಕಾಗಿದೆ ಈ ಹಳೆ ಬದುಕು
ಹಳೆ ನೆನಪುಗಳು ಹೃದಯ ಚುಚ್ಚಿ ಚುಚ್ಚಿ
ಗಾಯಗೊಳಿಸಿದೆ
ಕೊಚ್ಚಬೇಕೆಂದಿರುವೆ ಹಳೆ ನೆನಪ
ಶುರು ಮಾಡಬೇಕೆಂದಿರುವ ಹೊಸ ಬದುಕ
ಕಷ್ಟದಲ್ಲೂ ಕೈ ಬಿಡದೆ
ಎಂದೆಂದಿಗೂ ಜೊತೆಯಾಗಿ ಇರಲು
ಈ ಬರಡಾದ ಜೀವನಕ್ಕೆ
ಮುಂಗಾರಿನ ಮಳೆಯಾಗಿ ಬರುವೆಯಾ
ಹೇ ಗೆಳತಿ.........................?

- Chandana Chandu

31 Jan 2026, 07:23 pm