Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
"ದೃಷ್ಟಿಯಾಗುವ ನಿನ್ನ
ಸೌಂದರ್ಯಕ್ಕೆ ದೃಷ್ಟಿಬೊಟ್ಟಾಗುವೆ
ನಾನು...
ತುಸು ನಾಚಿಕೆ ಪಡುವ
ನಿನ್ನ ನೋಟಕೆ ಬಂಧಿಯಾಗಿರುವೆ
ನಾನು...
ಇಂಪಾದ ನಿನ್ನ
ದ್ವನಿಯ ಕೇಳಲು ಮಾತಾಗುವೆ
ನಾನು...
ನಿನ್ನ ಸಂತೋಷದ ಕ್ಷಣಗಳಲ್ಲಿ
ನಗುವಿನ ಸದ್ದಾಗುವೆ
ನಾನು...
ನಿನ್ನ ಅಳುವಿನ ಕ್ಷಣಗಳಲ್ಲಿ
ಕಣ್ಣೀರಿನ ಹನಿಯಾಗುವೆ
ನಾನು...
ಪ್ರತಿ ಜನುಮದಲ್ಲೂ
ನಿನ್ನ ಜೊತೆಯಾಗಿರುವೆ
ನಾನು...!!"
ಎಮ್.ಎಸ್.ಭೋವಿ...✍️
- mani_s_bhovi
10 Jan 2023, 11:02 pm
"ನಿನ್ನ ಸ್ನೇಹಕ್ಕೆ ಸೋತಿರುವೆ ನಾ ಎಂದೊ,
ನಿನ್ನ ಜೊತೆಯಾಗಿರುವೆ ಸದಾ ಎಂದೆಂದೂ..!
ಆಕಸ್ಮಿಕವಾಗಿ ಬೆಳದ ನಮ್ಮ ಬಂಧವಿದು,
ಶಾಶ್ವತವಾಗಿ ಉಳಿಯುವ ಸ್ನೇಹಸಂಬಂಧವಿದು..!
ಖುಷಿಯಲ್ಲಿ-ದುಃಖದಲ್ಲಿ ಜೊತೆಯಾಗಿರುವೆ,
ನಿನ್ನ ಜೀವನದ ತುಂಬೆಲ್ಲ ಖುಷಿಯಿರಲೆಂಬ
ಅರಸುತ್ತಿರುವೆ..!
ಈಡೇರಲಿ ನೀ ಕಂಡ ಎಲ್ಲ ಕನಸುಗಳು,
ಬಾರದಿರಲಿ ನಿನಗೆ ಯಾವುದೇ ನೋವುಗಳು..!
ಎಮ್.ಎಸ್.ಭೋವಿ...✍️
- mani_s_bhovi
09 Jan 2023, 07:47 pm
ನಂಬದೆ ಕೆಟ್ಟರು ಪರವಾಗಿಲ್ಲ ನಂಬಿ ಕೆಡಬೇಡ
ಕೊಡದೆ ಕೆಟ್ಟರು ಪರವಾಗಿಲ್ಲ ಕೊಟ್ಟು ಕೆಡಬೇಡ
ಮುಟ್ಟದೆ ಕೆಟ್ಟರು ಪರವಾಗಿಲ್ಲ ಮುಟ್ಟಿ ಕೆಡಬೇಡ
ಚನ್ನ ಬಸವ ಕೇಳಯ್ಯ
ಬಂದು ನೀ ನೆಲೆಸಿದರು ಪರವಾಗಿಲ್ಲ ಆದ್ರೆ
ಬರೆದೆ ಈ ಬಡವನ ಮರಿಬೇಡ
ಅನಾಮಿಕ ಸರ್ವಜ್ಞ
- Nisha anjum
08 Jan 2023, 08:35 pm
"ಭಾವದ ಆಟದಿ.. ಬಾಡಿದ ಮನವಿದು !
ನೋವಿನ ಒಡಲಲ್ಲೆ.. ನರಳಿದೆ ದಿನವಿದು !
ಬೇಕಿತ್ತಾ ?. ಒಲವಿನ ಸಹವಾಸವು..
ಹಾಯಾಗಿ ಇದ್ದಲ್ಲೊ ಓ_ಮನವೇ !
ವಿರಹದ ಅಪ್ಪುಗೆ ಬೇಕೆಂದಲೇ..
ಒಲವಿಗೆ ಒಳಗಾದಂತಿದೆ ಮನವೇ !
ಶುರುವಿನಲ್ಲಿ ಇದ್ದ ಭಾವಗಳು..
ಈಗ ಇಲ್ಲವಂತೆ ಅವಳಲ್ಲಿ !
ಕಾಲಸರಿದ ಹಾಗೆ ಮಾಯವಾಗೋ_ಕುರಿತು..
ಪಾಠ_ಹೇಳಿದಳು ನನಗಿಲ್ಲಿ !!"
ಎಮ್.ಎಸ್.ಭೋವಿ...✍️
- mani_s_bhovi
08 Jan 2023, 07:10 pm
ಈ ಪ್ರಶ್ನೆ ಉತ್ತರದ ಬದುಕಿನಲ್ಲಿ
ನೀ ನನಗೇನಾಗಬೇಕೊ ನಾ ನಿನಗೇನಾಗಬೇಕೊ
ತಿಳಿದಿಲ್ಲ
ನನ್ನ ಕಲ್ಪನೆಯ ಬದುಕಿನಲಿ ನೀನೆ ನನಗೆಲ್ಲ
ಇಲ್ಲಿ ಪ್ರಶ್ನೆಯು ನನ್ನದೆ, ಉತ್ತರವು ನನ್ನದೆ
ಪ್ರೀತಿ, ಪ್ರೇಮ, ಕಾಳಜಿ, ಅಕ್ಕರೆ, ಸಂತೋಷ
ಎಲ್ಲವೂ ನನ್ನದೆ
ಕಾದಿದೆ ಜೀವ ನಿನ್ನ ಬರುವಿಕೆಗಾಗಿ
ಈ ಕಣ್ಣು ಮಣ್ಣು ಸೇರೊ ಮುನ್ನ
ಬಂದುಬಿಡು ನನಗಾಗಿ...
- Tanuja.K
07 Jan 2023, 11:23 pm
ನನ್ನ ಕವನದ ಪ್ರತಿ ಪದವು ನಿನ್ನ ಪ್ರೀತಿಸುವುದು
ಪ್ರತಿ ಸಾಲುಗಳು ನಿನ್ನ ನೆನಪಿಸುವುದು
ನಿನ್ನ ಮರೆಯಲು ಆಗದು ನನಗೆ
ಋಣವಿಲ್ಲ ಬದುಕಲು ಜೊತೆಗೆ
ಎಂದಾದರೊಂದು ದಿನ ಈ ಕವನ ಸೇರುವುದು ನಿನ್ನ ಕೈಗೆ
ಆ ನಂಬಿಕೆಯಲೆ ಕವನಗಳ ಬರೆಯುವೆ ಮತ್ತೆ ನಿನಗಾಗೆ
ಎಷ್ಟು ಕವನಗಳ ಬರೆಯಲಿ ನಿನಗಾಗಿ
ಮತ್ತಷ್ಟು ಸಂತೋಷ ಕೊಡುವುದು ತಾನಾಗಿ
ನಿನ್ನ ನೆನಪಲ್ಲೆ ಪ್ರತಿಕ್ಷಣವ ಕಳೆಯುವೆನು
ನಿನ್ನ ಗುಣಕಾಗಿ ಸೋತಿರುವೆನು
ಕಾಲವು ದೂರ ಮಾಡಿದರೇನು ನಮ್ಮನ್ನು
ಕವನದಲಿ ಮತ್ತಷ್ಟು ಸನಿಹ ನಾವಿನ್ನು...
- Tanuja.K
07 Jan 2023, 11:05 pm
ಮನದ ಮೂಲೆಯಲಿ ಬೆಚ್ಚಗೆ ಮಲಗಿದ್ದ ನೆನಪೊಂದು ಹೇಳಿತು..
ಸ್ನಹದ ಕಾರಂಜಿಯಲಿ ಮೈ ಮರೆತು ಕುಣಿದಿದ್ದ ಕ್ಷಣಗಳಿಗೆ ಸಾಕ್ಷಿಯಾಗಿ..
ಮೌನದ ಪದಗಳಲಿ ಅರ್ಥವನು ಹುಡುಕಿದ್ದ ಭಾವನೆಗಳ
ಪ್ರತಿರೂಪವಾಗಿ....
ಸ್ನೆಹಿತರ ನೊಂದ ಮನದ ದುಃಖದಲ್ಲಿ ಬಾಗೀಯಾಗಿ...
ಜೀವನದ ಹಾದಿಯಲಿ ನಿನೋಂದಿಗೆ ನಡೆದಿದ ದಾರಿ ಇಂದಿಗೂ ಹಸಿರಾಗಿದೆ.
- Lakith gowda K
06 Jan 2023, 11:02 pm
"ಒಡೆದಿರೋ ಹೃದಯವ
ಹೊಂದಿಸೊ ಕಾರ್ಯವು...
ಹೇಗೆಂದು ತಿಳಿಸು ಬಾ...!
ಮನದಿಂದ_ಮನಕ್ಕೆ
ನುಸುಳುವ ಭಾವವೆ !
ಹೇಗೆಂದು ಹೇಳು ಬಾ...!!"
"ಹೇಗೋ_ಏನೋ ತಿಳಿಸು ನೀನೆ !
ಶುರುವು_ಕೊನೆಯ ಅರಿತ ನೀನೆ !
ಮನವ_ಬೆಳಗೋ ಹಣತೆ ನೀನೆ !
ಮನವ_ಸುಡುವ ಜ್ವಾಲೆಯು ನೀನೆ !
ಭಾವವೇ ಹೊಂದಿಸು...
ನೀ_ಒಡೆದ ಹೃದಯ !!"
ಎಮ್.ಎಸ್.ಭೋವಿ...✍️
- mani_s_bhovi
05 Jan 2023, 10:10 pm
ನನ್ನೀ ಮನಸ್ಸಲ್ಲಿ ಅಡಗಿರುವ
ಮೋಹ ತರಂಗಿಣಿಯೇ
ನಿನ್ನನ್ನು ಹುಡುಕುವ
ಹಠದಲ್ಲಿ ನಾ ಕಳೆದೆ
ನನ್ನ ಸುಂದರ ಕೇಶ ರಾಶಿಯನ್ನು
ಆದರೂ ಸಿಗಲಿಲ್ಲ ನೀ
ಧೃತಿಗೆಡದೆ ಮುಂದುವರೆದೆ
ಕೊನೆಗೆ ನೀ ಸಿಕ್ಕೆ
ಆದ್ರೆ ನಾ ಹೊರಟಿದ್ದೆ ಮಸಣಕ್ಕೆ
ಹೋಗುವ ದಾರಿಯಲ್ಲಿ
ನಾ ಕಂಡ ಅರಿವೇನೆಂದರೆ
ಇಲ್ಲಿ ಯಾರು ಯಾರನ್ನು
ಹುಡುಕುವ ಅಗತ್ಯವಿಲ್ಲ
ಹುಡುಕಿಕೊಂಡು ಬಂದವರನ್ನು
ಒಲ್ಲೆ ಎನ್ನಬೇಡ ಎಂದು
- abhi yadava
05 Jan 2023, 10:10 pm
ಹೊಂಗ್ಯೆಯ ನೆರಳಲ್ಲಿ ನಿಂತು ಬೀರಿದ
ಇ ನಿನ್ನ ಕಣ್ಣೋಟ ನೋಡಿ ಅರಳಿತು
ನನ್ನ ಹೃದಯದ ಅಂಗಳದಲ್ಲಿ ಕೆಂದಾವರೆ
ರೇಷ್ಮೆಯ ಸೀರೆಯನ್ನುಟ್ಟು
ನನ್ನ ಮನದ ಅಂಗಳದಲ್ಲಿ ಬಂದವಳು
ನೀನು ಕಾಲುಂಗುರ ಹಾಕೆಂದು ಕಾಲೀಟ್ಟು
ನಿನ್ನ ಕಮಲದ ಕಣ್ಣಲ್ಲಿ ಮೂಡಿತು ನನ್ನ ಬಿಂಬ
ನೀನು ಕಾಡಿಗೆ ಹಚ್ಚುವಾಗ ಕಂಡಿತು ನನ್ನ ಹುಬ್ಬ
ನೀನು ನನ್ನ ಬಾಳಿಗೆ ಬಂದರೆ ಅದುವೆ ನನಗೆ ಹಬ್ಬ
***""" ಸಾವರ್ಕರ್ ಶಂಕ್ರು"""***
- Shankru Badiger
05 Jan 2023, 12:17 am