ಸದಾ ಮೌನಿಯಾಗಿರುವೆ ನೀನು
ಅಳು ಆಕ್ರಂದನಗಳ ಕೊನೆಯ ತಾಣ ನೀನು
ಸಂಬಂಧಿಕರು ಸ್ನೇಹಿತರು ಬರುವರು ಸ್ಮಶಾನದ ಮುಂಭಾಗದವರೆಗೂ
ಉಸಿರು ನಿಂತವನಿಗೆ ಮಾತ್ರ ಅಂತಿಮ ದಿನವದು
ಸಾಕಷ್ಟು ಹಣಕೊಟ್ಟು ಖರೀದಿಸುವರು ಭೂಮಿಯನು
ಆದರೆ ಪ್ರಾಣವನು ಕೊಟ್ಟರೆ ಮಾತ್ರ ನೀ ಕೊಡುವುದು ಜಾಗವನು
ಗರ್ವ, 'ನಾನು' ಎಂಬ ಅಹಂಕಾರ ಸುಡುವುದಲ್ಲಿ
ನಿಶ್ಚಿಂತೆಯರಾದ ಕೊನೆಯ ನಿದ್ರೆ ಪ್ರಾರಂಭವಾಗುವುದಲ್ಲಿ
ಯಾವ ಶ್ರೀಮಂತನಿಗು, ಬಡವನಿಗೂ ಬೇಧವಿಲ್ಲ ನಿನ್ನಲ್ಲಿ
ಸರ್ವರಿಗು ಸಮಪಾಲು ಸಿಗುವುದಲ್ಲಿ
ಏನೇ ಪ್ರೀತಿ ಮಾಡಿದರು ಬರುವುದಿಲ್ಲ ಜೊತೆಗೆ
ನೀನೊಬ್ಬನೆ ಸಾಗಬೇಕು ಚಿತೆಗೆ..
"ಮೌನದಲೇ ಕೂಗಿದೆ.. ನಾನು !
ಹೃದಯದ ಸದ್ದಿಗೆ ತಿರುಗಿದಳು.. ಅವಳು !
ಕಣ್ಣೆಲ್ಲೆ ಮಾತನಾಡಿಸಿದೆ.. ನಾನು !
ಸನ್ನೆಯಲ್ಲೆ ಉತ್ತರಿಸಿದಳು.. ಅವಳು !
ಮೆಚ್ಚಿಸಲು ಕವಿಯಾದೆ.. ನಾನು !
ಒಲವಾರ್ಪಣೆಗೆ ನಾಚಿ_ನೀರಾದಳು.. ಅವಳು !
ಹೀಗಿತ್ತು ಪೂರ್ವದಲ್ಲಿ..
ನನ್ನ_ಅವಳ ಒಲವ ದಿನಗಳು !
ಈಗ ನಾನು..
ಬದುಕಿನ ಒದ್ದಾಟಕ್ಕೆ ಒಳಗಾಗಿ,
ದೂರಾದ ಪ್ರೇಮಿ ನಾನು !!"
ಎಮ್.ಎಸ್.ಭೋವಿ...✍️
ನೆನಪು ಎಂಬುದು ದೊಡ್ಡ ಉಡುಗೊರೆಯಂತೆ,
ಅದು ಸಿಹಿ ನೆನಪಾದರೆ ಸಂತೋಷದಂತೆ,
ಅತೀ ಕಹಿ ನೆನಪಾದರೆ ದುಃಖವಾದಂತೆ..
ನನ್ನ ಕರ್ಮಕ್ಕೆ ನನಗೆ ಆಗುವ ನೆನಪುಗಳು
ಅತೀ ದುಃಖವನ್ನೇ ತರುತ್ತಿವೆ ಎನಿಸುತ್ತಿದೆ.