ಹಕ್ಕಿಯಾಗಿ ಹಾರಾಡುತ್ತಾ
ನವಿಲಾಗಿ ಕುಣಿಯುತ್ತಾ
ಕೋಗಿಲೆಯಾಗಿ ಹಾಡುತ್ತಾ
ಮನತುಂಬಿ ನಗುತ್ತಾ
ದುಂಬಿಯಾಗಿ ನಲಿಯುತ್ತಾ
ನಾನು ಮತ್ತೆ ಬರೆಯುತ್ತೇನೆ
ಸಹೃದಯಿಗಳ ಭಾವ ಬೆರೆಯುತ್ತೇನೆ...
ಮನದೊಳಡಗಿದ ನೋವನೆಲ್ಲಾ ಮರೆಸಿ
ನೊಂದ ಹೃದಯಗಳ ಕಂಬನಿಯ ಒರೆಸಿ
ಬಂಧನದ ಭಾವುಕತೆಯ ಬವಣೆ ಸರಿಸಿ
ಸಾಂತ್ವನ ಸಿಂಚನವನೆಲ್ಲವನು ಸುರಿಸಿ
ಸಂತೋಷ ನೆಮ್ಮದಿಗಳ ಮೌಲ್ಯ ಮೆರೆಸಿ
ನಾನು ಮತ್ತೆ ಬರೆಯುತ್ತೇನೆ
ನಾನು ಮತ್ತೆ ಬರೆಯುತ್ತೇನೆ...
ನಾನು ಕವಿತೆಗಳ ಬರೆಯಲು
ಪದಗಳ ಭಾವಜ್ಯೋತಿಯೇ ನೀನು,
ನನ್ನೊಳಗಿನ ಕವಿತ್ವದ
ದಿವ್ಯ ಚೇತನವೇ ನೀನು,
ನೀನಿರದೇ ಪದಗಳಿಲ್ಲ,
ನೀನಿರದೇ ಕವಿತೆಗಳಿಲ್ಲ,
ನೀನಿರದೇ ಈ ಕವಿಯೂ ಇಲ್ಲ,
ನೆನಪಿರಲಿ,
ಈ ಬಡವ ಬರಹಗಾರನ
ಹೃದಯಕೆ ಬಾಗಿಲೂ ಸಹ ಇಲ್ಲ!!!
ನನ್ನೆದೆಯ ದಿವ್ಯ ಚೇತನವಾಗಿ ಬಂದು
ಭಾವಗಳ ಅಪರಿಮಿತ ಸ್ಪೂರ್ತಿಯ ತಂದು,
ಪದಗಳ ಭಾವಜ್ಯೋತಿಯಾಗುವೆಯಾ?
ಕವಿತೆಗಳ ಕಾರುಣ್ಯ ಮೂರ್ತಿಯಾಗುವೆಯಾ?
ಈ ಭಾವುಕ ಬಡ ಕವಿಯ ಹೃದಯದರಸಿಯಾಗುವೆಯಾ?
ಹೃದಯದರಸಿಯಾಗುವೆಯಾ?
ಮುಂಗುರುಳ ಸರಿಸುವ ನೆಪದಲ್ಲಿ ನನಗೆ
"ಆಕರ್ಷಣೆಯಾದವಳು"
ಚಂದದ ನಗೆಯಲ್ಲಿ ನನ್ನ "ಕೊಂದವಳು"
ಅಂದದ ನಗೆಯಲ್ಲಿ ಕಣ್ಸನ್ನೆಯಲ್ಲೇ "ತೋರುವವಳು "
ಮಾತು ಮಾತಲ್ಲಿ ಸಲಿಗೆ ನೀಡಿ ಮನಸ "ಬೆಸೆದವಳು"
ಬೆಸೆದ ಕಣ್ಣಲ್ಲಿ ಮರೆಯಾಗದೆ "ಕುಳಿತವಳು "
ಆದಷ್ಟು ಬೇಗ ಬರಲಿ ನಿನ್ನ ಸೇರುವ " ಶುಭಗಳಿಗೆ"
ಕಾಯುತಿರುವೆ ನಾ ತಳಮಳ ಪಟ್ಟು "ಒಳಗೊಳಗೇ...."