Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಬರಡು ಬಾಳು ಕೊರಡು ಭಾವ
ಕಾಡ ದಾರಿ ನೀರ ಸುಳಿವು
ಬದುಕ ಹಾದಿ ಸವಿದಿದೆ
ಉಲಿಯುತ್ತಿದ್ದ ಮಧುರ ಗೀತೆ ತಾನೇ ಮುಕವಾಗಿದೆ
ಮಣ್ಣ ವೀಣೆ - ಮಣ್ಣ ತಂತಿ
ಚಿಗುರು ಬೆರಳು ನಾದ ಮೀಟೇ
ರಾಗದೊರೆತ ಹುಟ್ಟದು
ಹಳೆಯ ಮೆಲಕು ಮುಂದೆ ಮುಸಕು
ಒಳವದೇಕೋ ದಕ್ಕದ್ದು
ಇದರ ನಡುವೆ
ಮೇಲನ್ನೆಲ್ಲೋ ಕೇಳಿ ಬಂದ ನಿನ್ನ ಕರೆಗೆ
ಮರೆತ ಮಾತು ಇರದ ಭಾವ ಮತ್ತೆ ತೆಲಿಬಂದಿದೆ
ಗಾಳಿ ತೀಡಿದಂತಿದೆ!❣️
- Swati S
22 Oct 2022, 11:47 am
ಬದುಕಿನ ಸಾಹಿತ್ಯದೋಳಗ
ನಾ ಬಾಳ ಹಿಂದೆ ಅದೀನಿ
ನನ್ನೊಳಗ ಅಕ್ಷರಗಳ ಕಣಜ
ತುಂಬಿಸಬೇಕ ಅಂದಕೊಂಡೀನಿ
ಜೀವನದೋಳಗ ಏನೆಲ್ಲ ಕಂಡೀನಿ
ಲೇಖನಿನೊಳಗ ನೆಮ್ಮದಿ ಕಂಡೀನಿ
ಪುಸ್ತಕದೋಳಗ ಜಗವ ಕಂಡೀನಿ
ಭಾವನೆಗಳ ಹೃದಯ ಬೆಳಸಿಕೊಂಡೀನಿ
ಹೊನಿಲ್ಲ ಬಣ್ಣಿಲ್ಲ ಬರೆಯುವದೂ
ನಾ ನಿಲ್ಲಿಸಲ್ಲ ನೋವು ನಲಿವುಗಳ
ಸಮೇಳನದಲ್ಲಿ ಹೊತ್ತಿಗೆಗಳ
ಸಂಬಂಧಿಳು
ಜಗಳಿಲ್ಲ ಮುನಿಸಿಲ್ಲ
ಮೌನ ನಗುವಿನ ಸರಸದಲ್ಲಿ
ಪುಸ್ತಕವೇ ಜೊತೆಗಾರ
ಜ್ಞಾನ ತುಂಬಿಸಿಕೊಳ್ಳುವುದೇ ಸಡಗರ
- Swati S
21 Oct 2022, 12:17 am
ಅಂದವನ್ನು ಆರೋಗ್ಯಕರವಾಗಿ
ಪ್ರದರ್ಶಿಸೋ ಸೀರೆ
ನಾಚಿಕೆಯ ನೆರಿಗೆಯಲಿ
ಸಂಕೋಚವನ್ನು ಸೆರಗಲ್ಲಿ
ಸೂಚಿಸೋ ಸೀರೆ
ಉಟ್ಟವರ ಮನಸಿಗೆ
ಆನಂದ ಸೀರೆ
ನೋಡೋರ ಕಣ್ಣಿಗೆ
ಪರಮಾನಂದ ಸೀರೆ
ಸರಳ ಸುಂದರಿಯರಿಗೆ
ಅಲಂಕಾರ ಸೀರೆ
ಮಂಗಳಗೌರಿಯರಿಗೆ
ಗೌರವ ಸೀರೆ...
ಎಮ್.ಎಸ್.ಭೋವಿ...✍️
...........
...........
...........
...........
...........
- mani_s_bhovi
18 Oct 2022, 10:55 pm
ಅಂದದ ಅದರಗಳಲಿ
ಚಂದದೊಂದು ನಗುವಿರಲಿ
ಮಂದಾರ ಮನಸಿನಲ್ಲಿ
ಸುಂದರ ಕನಸಿರಲಿ
ಪ್ರೀತಿ ಎಂಬ ಹೂವಿನ ಗಂಧ ನನಗಾಗಿ ತೇಲಿ ಬರಲಿ....!
ಪ್ರೀತಿಯ ಅರ್ಥ ನಾ ಅರಿತೇ
ನಿನ್ನಂದಕೆ ನಾ ಮನಸೋತೆ
ಬರುತ್ತಿಲ್ಲ ಬಾಯಿಂದ ಮಾತೆ
ಆ ಖುಷಿಯಲ್ಲಿ ನನನ್ನೇ ನಾ ಮರೆತೇ
ಪ್ರೇಮದ ಹೂವಲ್ಲಿ ಗಂಧವಾಗಿ ನಾನು ಬೆರೆತೆ......!
ಎಂದೆದೂ ನಾ ನಿನಗಾಗಿ
ಕಣ್ಣಲ್ಲಿ ಬಿಂಬವಾಗಿ
ತುಟಿಗಳಲಿ ನಗುವಾಗಿ
ಹೆಜ್ಜೆ ಹೆಜ್ಜೆಯಲ್ಲಿ ಗೆಲುವಾಗಿ
ಇರಲು ಬಂದೆ ನಾನಿಂದು ಸಾವಲ್ಲೂ ನಿನ್ನ ಜೊತೆಯಾಗಿ......! ಪ್ರೀತಿಯ ಹೃದಯ
- Swati S
17 Oct 2022, 11:30 pm
"ಅವಳ ಚಾಟ್_ಲಿಸ್ಟ್ ಲ್ಲಿ ಇರಬೇಕು ಅನ್ಕೊಂಡೆ!
ಆದ್ರೆ ಅವಳು ಅನ್ಕೊಂಡಿದ್ದೆ ಬೇರೇ..ಬ್ಲಾಕ್_ಲಿಸ್ಟ್!
ಅವಳ ಹಾರ್ಟಲಿಸ್ಟ್ ಲ್ಲಿ ,ಕ್ರಸ್_ಲಿಸ್ಟ್ ಲ್ಲಿ ಇರಬೇಕು
ಅನ್ಕೊಂಡೆ!
ಆದ್ರೆ ಅವಳು ಅನ್ಕೊಂಡಿದ್ದೆ ಬೇರೇ..ಹೆಟ್_ಲಿಸ್ಟ್!
ಏನೇ ಆಗಿರಲಿ....
ನಾ_ಯಾರು ಅವಳ ತಡೆಯಲು..ದೂರ ಸರಿದಾಗ!
ಅವಳ್ಯಾರು ನನ್ನ ತಡೆಯಲು..ಇನ್ನಷ್ಟು ಪ್ರೇಮಿಸಿದಾಗ!
ಅವಳು...
ದೂರಿದರು! ರೇಗಿದರು!
ನನ್ನೇ ನಾ_ಕಳೆದು ಕೊಂಡರು!
ಅವಳನ್ನೇ ಪ್ರೀತಿಸುವೇ! ಅವಳನಷ್ಟೇ ಪ್ರೀತಿಸುವೇ!
ಎಮ್.ಎಸ್.ಭೋವಿ....✍️
- mani_s_bhovi
17 Oct 2022, 09:55 pm
ಯಾವುದೇ ಜಾತಿ ಮತ
ಪಂಥ ಧರ್ಮ ದೇವ್ರು ಜನರು
ನಮ್ಮನ್ನ ಉದ್ಧಾರ ಮಾಡೋದು ಇಲ್ಲ
ನಮ್ಮ ನಮ್ಮ ಉದ್ಧಾರ
ನಮ್ಮ ನಮ್ಮ ದುಡಿಮೆಯಿಂದ
ಮಾತ್ರ ಸಾಧ್ಯ
ಜಾತಿ ಧರ್ಮ
ದೇವ್ರು ಹಿಂದೆ ಬಿದ್ದರೆ
ಜೀವನವೇ ಪಂಗನಾಮ
ದುಡಿಮೆ ಹಿಂದೆ ಬಿದ್ದರೆ
ಜೀವನವೇ ಉದ್ಧಾರ
- ರಾಜು ಹಾಸನ
17 Oct 2022, 08:25 pm
ಅತ್ತಿಂದ ಇತ್ತ ಕತ್ತು ತೂಗಿದರೆ
ಕೆನ್ನೆಗೆ ಮುತ್ತಿಟ್ಟು ಬರುವ
ಉಯ್ಯಾಲೆ ಜುಮುಕಿ
ಕಿವಿಯಲಿ ಪಿಸುಗಟ್ಟುವ
ಪ್ರತಿ ಗುಟ್ಟನ್ನು ಮೊದಲು ಕೇಳಿದರು
ಯಾರಿಗೂ ಹೇಳದ ಜುಮುಕಿ
ಬಂಡಿ ಗಾಲಿಯಂತಹ
ಓಲೆಗಳ ಸಂಗದಲ್ಲಿ
ಬಿಂಕದ ಓಲೆ ಜುಮುಕಿ
ಆಲಿಸುವ ಕಿವಿಯಲ್ಲಿ
ಆಕಳಿಸೋ ಕೂಸು ಜುಮುಕಿ
ತೊಟ್ಟವರ ಕಿವಿಯಲ್ಲಿ
ತೊಟ್ಟಿಲಾಗಿ ತೂಗು
ಎಮ್.ಎಸ್.ಭೋವಿ..✍️
- mani_s_bhovi
17 Oct 2022, 07:37 pm
ಪ್ರಕೃತಿ ಇಲ್ಲದ ಮಾತೇ ಇಲ್ಲ....
ಪ್ರಕೃತಿ ಭಾವ ಇಲ್ಲದ
ಮನಸ್ಸು ಕಂಡಿಲ್ಲ....
ಪ್ರಕೃತಿಯ ಜೀವವಿಲ್ಲದೆ
ನಮ್ಮಯ ಸೋಬಗಿಲ್ಲ....
ಪ್ರಕೃತಿಯ ನೋಟವಿಲ್ಲದೆ
ನಮ್ಮಯ ಉಳಿವಿಲ್ಲ.....
ಪ್ರಕೃತಿ ಮಾತೆಯೇ ಮಡಿಲು..
ಬಾರದೇ ಪ್ರಪಂಚವೇ
ಉಳಿಯೋಲ್ಲ.......
- Swati S
16 Oct 2022, 09:47 pm
"ನಾ ಗೀಚೋ ಸಾಲಲೆಲ್ಲ....
ನಿನದೇ ಗುರುತಿದೆ! ನಿನದೇ ಗುನುಗಿದೆ!
ನಾ ಕಾಣೋ ಕನಸಲೆಲ್ಲ....
ನಿನದೇ ಸೊಗಸಿದೆ! ನಿನದೇ ಬೆಳಕಿದೆ!
ಒಂದೇ ಸಮನೆ ಕಾಡುತಿಹೆ.. ಹಗಲು ಇರುಳೆನದೇ!
ಕಾಣಿಸದೆ ಹೋಗಿಹೆ ಎಲ್ಲಿ.. ಎದಿರು ಬಾರದೇ!
ಒಮ್ಮೆ ಕಾಣಿಸೆ.. ನನ್ನೇ ಆಲಿಸೆ..
ಒಲವಾಗೋಗಿದೆ !
ಮನವು ನಿನದಾಗೋಗಿದೆ !!"
ಎಮ್.ಎಸ್.ಭೋವಿ....✍️
- mani_s_bhovi
15 Oct 2022, 11:15 pm
ಚುಮು ಚುಮು ಮಳೆ ಬರುತಿರಲು.....
ತಣ್ಣನೆಯ ಗಾಳಿ ಬಿಸುತಿರಲು.......
ಪ್ರಕೃತಿಯ ಅಂದ ಸವಿಯುತ್ತ.......
ಬಿಸಿ ಬಿಸಿ ಚಹಾ ಕುಡಿಯುತ್ತ.......
ಹೊಸ ಹೊಸ ಹನಿಗಳು ಕವನಗಳು....
ಮೂಡುವಾಗ ಸುಂದರ ಕವಿತೆ......
ರೂಪೂಗೊಳ್ಳುವಾಗ........
ಮೂಡಿತೊಂದು ನಿಸರ್ಗದ.....
ಅದ್ಭುತ ಕವನ.......
- Swati S
15 Oct 2022, 10:36 pm