ಹೆಣ್ಣೇ ಎಂದು ಏಕೆ ಕೀಳಾಗಿ ನೋಡುವೆ...
ಹೆಣ್ಣು ಇಲ್ಲದ ಮನೆ ಸುಡುಗಾಡಿನಂತೆ...
ನಿನ್ನ ತಾಯಿಯಾಗಿ, ನಿನ್ನ ಅಕ್ಕತಂಗಿಯೂಗಿ, ನಿನ್ನಮಡದಿಯಾಗಿ ಮಾತ್ರ ಬೇಕೆಂದು, ನಿನ್ನ ಮಗಳಾಗಿ ಯಾಕೆ ಬೇಡ ಎನ್ನುವೆ...?
ಹೆಣ್ಣು ಹುಟ್ಟಿದರೆ ಆಯ್ಯೆ ಎಂದೆ...?
ಹೆಣ್ಣು ಕಲಿತರೆ ಸೊಕ್ಕೆಂದೆ...
ಹೆಣ್ಣು ಕಲಿಯದಿದ್ದರೆ ಏನೂ ತಿಳಿಯದವಳು ಎಂದೆ...
ಹೆಣ್ಣಿಗೆ ಸ್ಥಾನವಿಲ್ಲವೆಂದೆ...
ಹೆಣ್ಣು ಬಡವಳಿದ್ದರೆ ಜೀವನದುದ್ದಕೂ ಅವಮಾನ ಅಪಮಾನ ಮಡುವೆ...
ಹೆಣ್ಣು ಶ್ರೀಮಂತಳಾದರೆ ಗೌರವಿಸುವೆ ಏಕೆ?
ನಾನು ಗಂಡು, ನೀನು ಕೇವಲ ಹೆಣ್ಣು ಎಂದು ಗರ್ವದಿಂದ ಹೇಳಬೇಡ...
ಹೆಣ್ಣಿನ ಸರಿಸಮ ನಿನಾಗಲಾರೆ...
ಹೆಣ್ಣು ಇಲ್ಲದ ನೀನ್ನ ಜೀವನ ಅಪೂರ್ಣ ಎಂದು ಮರೆಯಬೇಡ...
ಒಮ್ಮೆ ಹೆಣ್ಣುನ್ನು ಗೌರವಿಸಿ ನೋಡು...
ಒಮ್ಮೆ ಹೆಣ್ಣಿಗೆ ವಿದ್ಯೆಯನ್ನು ಕಲಿಸಿ ನೋಡು...
ಒಮ್ಮೆ ಹೆಣ್ಣಿಗೆ ಸ್ವಾತಂತ್ರ್ಯ ಕೊಟ್ಟು ನೋಡು...
ಒಮ್ಮೆ ಹೆಣ್ಣಿಗೆ ಜವಾಬ್ದಾರಿಯನ್ನು ವಹಿಸಿ ನೋಡು ...
ಒಮ್ಮೆ ಹೆಣ್ಣು ಮನಸು ಮಾಡಿದರೆ ಆಗದ ಕೆಲಸ ಕೂಡ ಸಾಧಿಸಿ ತೋರಿಸುವಳು...
"ಕಲ್ಲಿನಂತ್ತಿದ್ದ ನಾನು ಕರಗಿದ್ದು ನಿನ್ನಿಂದಲೇ..
ಕರಗಿರುವೆ ನಾ ಯಾರ ಕೈಗೆ ಸಿಗದಷ್ಟು ಈಗಾಗಲೇ..
ತುಸು ಕಡೆಗಣಿಸಿದರು ನಾ ಹೋಗಬಹುದು ಸಿಗದಲೇ..
ಸಂರಕ್ಷಿಸು ನೀ ನಿನ್ನ ಹೃದಯದ ಅಂಗಳದಲೇ."
ಕಲ್ಪನೆಯ ಕಲಾವಿದ....
"ಸದಾ ಮುಗುಳ್ನಗೆ ಬೀರುವ ನಿನ್ನ ಮುದ್ದು ಮುಖವ.. ನಾ ಹೇಗೆ ವರ್ಣಿಸಲಿ..
ನನ್ನೊಂದಿಗೆ ನೀ ಹಾಡಿದ ಪ್ರೀತಿಯ ಮಾತುಗಳ.. ನಾ ಹೇಗೆ ಮರೆಯಲಿ..
ನೊಂದಿರುವಾಗ ನೀನೊಂದು ಅಪ್ಪುಗೆಯು ತಂದ ಸಮಾಧಾನವ.. ನಾ ಹೇಗೆ ತಿಳಿಸಲಿ..
ನಿನ್ನಿಲ್ಲಿದ ನನ್ನ ಜೀವನ ಮುತ್ತಿಲ್ಲದ ಚಿಪ್ಪಿನಂತೆ ಇರುವುದು.. ನಾ ಹೇಗೆ ಜೀವಿಸಲಿ."
ಕಲ್ಪನೆಯ ಕಲಾವಿದ...
ತೇರಿನ ಬದಲು
ನಿಮ್ಮನ್ನೇ ನೋಡಬೇಕಂದರೆ
ನಿಮ್ಮ ತಯಾರಿ ಸೀರೆ ಆಗಿರಬೇಕು
ಕಾಡುವ " ಮಣಿ " ಬೇಕೆಂದರೆ
ಅವನ ಜಿಯೋ ನಂಬರಿಗೆ
ನೀವು ಜೀವ ತುಂಬಬೇಕು
ಹಿಂದೆ ಮುಂದೆ
ಸುಳಿವವನು ಬೇಕಂದರೆ
ನೀವು ಅರಿಶಿಣ ಮತ್ತು ಚಂದನದ
ಸಂತೂರ್ ಬಳಕೆದಾರರು ಆಗಿರಬೇಕು
ಅಂತವನು ಬೇಕು ಇಂತವನು ಅಂದು
ಅಂಕಲ್ಗಳ ಕೈ ಹಿಡಿದು ಸಿಂಗಲ್ಸ್ ಗಳ
ಬಾಯಿಂದ ಶಾಪ ಹಾಕಿಸಿಕೊಳ್ಳಬೇಕು
ಅಲ್ವಾ.............
ಎಮ್.ಎಸ್.ಭೋವಿ....✍️
ಹೃದರ ಪರದಾಡಿದೆ ಎಲ್ಲಾ ನಿನ್ನ ಸಹವಾಸ...
ಸನಿಹ ಇರದಿದ್ದರೆ ನೀನು.ಬದೆಕೇ ಉಪವಾಸ...
ನೀನೇ ಉಳಿಸು ನನ್ನ. ಬರೀ ನೋಟದಲ್ಲೇ ನೀ ನನ್ನ ಕೊಂದಾಗ...
ಕನ್ನಡಿ ಎದುರು ನೀ ನಿಂತು ನನ್ನ ನೆನದಾಗ.
ನಾಚಿಕೆಯಾಗಿ ಬರುವೆ ನಾ ಆಗ...
ಬದುಕಿನುದ್ದ ನಿನ್ನ ನೆಚ್ಚಿನ ಖುಷಿಯಾಗಿರುವೆ...
ಬೆನ್ನಿಂದೆ ನಿಂತು ಕೊಂದರೂ.ನಿನ್ನೇ ಪ್ರೀತಿಸುವೆ...
ಎಮ್.ಎಸ್.ಭೋವಿ.....✍️
ನವರಾತ್ರಿ ನಾಡಹಬ್ಬ,
ನವ ನವ ರಾತ್ರಿಯ ಸಂಭ್ರಮ ಹಬ್ಬ
ಕನ್ನಡಿಗರಿಗದು ಪವಿತ್ರ ಹಬ್ಬ,
ದುಷ್ಟರ ಮೇಲೆ ಶಿಷ್ಟರು,
ವಿಜಯ ಸಾಧಿಸಿದ ದಿನವದು,
ವಿಜಯದಶಮಿ,
ಹತ್ತನೆಯ ದಿನ ಆಚರಿಸುವ ಹಬ್ಬವಲ್ಲ,
ದೇಹದ ಹತ್ತು ಇಂದ್ರಿಯಗಳ ಮೇಲೆ,
ವಿಜಯ ಸಾಧಿಸುವ ಪ್ರಕ್ರಿಯೆ ,
ವಿಜಯದಶಮಿ,
ಕಾರ್ಯಪ್ರವವೃತ್ತರಾಗೋಣ ಬನ್ನಿ,
ಬನ್ನಿ ದೇವಮಾನವರಾಗೋಣ.
ಹೇ ಎಂತಾ ಹುಚ್ಚು ಮನಸ್ಸು ನೀನು ನಿನ್ನ ಹರಸಿ ಬಂದ ಹೃದಯಕ್ಕೆ ಸಮ್ಮತಿಸಿದೆ,
ನೀನೆ ತನ್ನ ಜೀವನವೆಂದು ಹೇಳಿದ ಹೃದಯವನ್ನು ತಿರಸ್ಕರಿಸಿದೆ,
ನೀನೆ ಬೇಕು ಎಂದು ಹಟ ಮಾಡಿದ ಹೃದಯವ ಲೆಕ್ಕಿಸಿದೆ,
ನಿನ್ನ ಒಂದು ಮಾತಿಗೆ ವರ್ಷ ಕಾಲ ಕಾಲದ ಹೃದಯಕ್ಕೆ ಉತ್ತರಿಸದೆ,
ನಿನ್ನ ಸಮ್ಮತಿ ಸಿಗುತ್ತೆ ಎಂದು ಭರವಸೆ ಇಂದ ಕಾಡ ಹೃದಯಕ್ಕೆ ಅವಮಾನಿಸಿದೆ,
ನಿನಗಾಗಿ ಕಾದು ಸಾಕಾಗಿ ತನ್ನ ಜೀವನ ರೂಪಿಸಿಕೊಂಡು ಹೋರಾಟ ಹೃದಯಕ್ಕೆ ಚಡಪಡಿಸುತ್ತಿರುವೆಯೇ?,
ಎಂಥಾ ಹುಚ್ಚು ಮನಸ್ಸು ನೀನು.......
--ಪೂಜಾ