ಶೀತವಾದರೂ ಸರಿ ಜೋರ್ ಮಳೆಯಲಿ
ಹೃದಯ ಒದ್ದೆಯಾಗೋವರೆಗೂ
ನಿನ್ನ ಜೊತೆ ನಾ ನೆನೆಯಬೇಕು....
ಹೀಗೇ ಇಳಿಸಂಜೆ ಸಮಯದಲಿ ನಿನ್ನ
ಕಿರುಬೆರಳಿಡಿದು ರಸ್ತೆ ಮುಗಿಯೋ
ವರೆಗೂ ನಾ ನಡೆಯಬೇಕು....
ನಿನ್ನೆಲ್ಲಾ ಸುಂದರ ಕನಸಲ್ಲಿ
ನೆಚ್ಚಿನ ಪರಿಚಿತ ಆಗುವೆ....
ಎದೆಮೇಲೆ ಅಂಗಾಲಿಟ್ಟರೂ ಸಹ
ಹೃದಯ ತುಂಬಾ ಪ್ರೀತಿಸುವೆ....
ಎಮ್.ಎಸ್.ಭೋವಿ.....✍️
ಭಾರತಾಂಬೆಗೆ ನಡೆಯುತ್ತಿದೆ 75ರ ಸ್ವಾತಂತ್ರ್ಯದ ಅಮೃತ ಮಹೋತ್ಸವ,
ಕ್ರಾಂತಿ ವೀರರು ಕಣ್ತುಂಬಿಕೊಳ್ಳಲಾಗಲಿಲ್ಲ
ಈ ಹಬ್ಬದ ವೈಭವ.
ವ್ಯಾಪಾರಕ್ಕಾಗಿ ನಾಡಿಗೆ ಬಂದ ಬ್ರಿಟಿಷರು
ಭಾರತೀಯರನು ಪರತಂತ್ರರನ್ನಾಗಿಸಿ ದೇಶವ ಆಳತೊಡಗಿದರು.
ಭಾರತಾಂಬೆಯ ಬಿಡುಗಡೆಗೆ ನೆತ್ತರರಿಸಿದ ಅಂದಿನ ತರುಣರೀಗ,
ಪ್ರಜ್ವಲಿಸುತ್ತಿಹರು ಜನಮನಗಳೊಳಗೆ ಅವರ ಸಾಹಸ ಕಥೆಗಳ ನಾವು ಓದುವಾಗ.
ನೆಲದ ರಕ್ಷಣೆಗೆ ವೀರ ವನಿತೆಯರಿಗಿದ್ದ ಶೌರ್ಯ
ಕರೆದೊಯ್ಯುತ್ತಿತ್ತು ಅವರನ್ನು ಆಂಗ್ಲರು ಕೊಡುತ್ತಿದ್ದ ಕರಿನೀರಿನ ಕಠಿಣ ಶಿಕ್ಷೆಗೆ,
ಅಳುಕದೇ ಮುಂದಾಗಿ ಮಡಿದರು ತಾಯಿಯ ಉಳಿವಿಗೆ.
ನಾಡ ಸೇವೆಗೆ ಸಿದ್ಧರಾದ ಶೂರರು,
ಹೆಸರಾಗಿರುವ ರಿಂದು ನಮ್ಮ ರಾಷ್ಟ್ರ ಧ್ವಜದ ಪಥಾಕೆಗೆ.
ಇಂದು ಗೌರವಿಸುತ ಸ್ಮರಿಸುವ ಕೆಚ್ಚೆದೆಯ ಕಲಿಗಳ ದೇಶಭೀಮಾನವ,
ಸ್ವತಂತ್ರರಾಗಿರುವ ನಾವು ಹುತಾತ್ಮರಿಗೆ ಶ್ರದ್ಧೆಯಿಂದರ್ಪಿಸುವ ಸಾವಿರ ಪ್ರಣಾಮವ.
ವಿಶ್ವಗುರುವಾಗೋ ಕನಸು ಹುತ್ತ ತಾಯಿಗೆ
ನಡೆಯುತ್ತಿದೆ ಇಂದು ಸ್ವಾತಂತ್ರ್ಯೋತ್ಸವ,
ಕನಸ ನನಸು ಮಾಡುವ ಪ್ರಜೆಗಳೇ,
ಶಪಥದೊಂದಿಗೆ ಆಚರಿಸುವ ಬನ್ನಿ ಜಗದ ಬೆಳಕು ಭಾರತವೆಂಬ ಅಮೃತ ಮಹೋತ್ಸವ.
ಕೆನ್ನೆ ಇಳಿದು ಹರಿದ
ಕಣ್ಣೀರಲಿ ಸೇರದೆ
ಅಳುವಿನ ಬಿಕ್ಕಳಿಕೆಯ ದಾಟಿ
ನುಗ್ಗಿ ನಿಲ್ಲಲಾಗದೆ
ಜಗದ ಹಂಗಿಗೆ ಹೆದರಿ
ದಾರಿ ಹುಡುಕದೆ
ಪ್ರೀತಿ ಬಂಧನದಲಿ
ಕುರುಡಾಗಿ ದಾರಿ ಕಾಣದೆ
ಉಳಿದ ಮಾತುಗಳೆಲ್ಲ
ಮನದ ಮೂಲೆಗಳಲಿ
ತತ್ತರಿಸಿ ಬಿಕ್ಕಳಿಸಿ ಘಾಸಿಗೊಳಿಸಿ
ಕಾಯುತಲೇ ಇವೆ ಚಂದಿರ.....
ನನ್ನೆಲ್ಲ ಹುಚ್ಚು ಬಿಚ್ಚು ಮಾತುಗಳಿಗೆ
ಸಮಯದ ಪರಿವೆಯಿಡದೆ
ಸದಾ ಮುಗುಳ್ನಗುತ್ತಲೇ
ಕೂತು, ನಿಂತು ಜೊತೆಗೆ ನಡೆದು
ಮರುಮಾತಡದೆ ಕಿವಿಯಾಗಿ
ಮನದ ಮಾತಿಗೆಲ್ಲ ದನಿಯ ನೀಡಿ
ಎದೆಗೆ ನಗುವ ಪಸರಿಸಿದ
ಬಹು ಕಾಲದ ಗೆಳೆಯ ನೀನು
ಒಂದಿಷ್ಟು ಅಗಲಿಕೆಯಾನಂತರ
ಮತ್ತದೇ ನಿನಗಾಗಿ
ನಿನ್ನ ಬರುವಿಕೆಗಾಗಿ
ಮಾನವ ಹಾಗುರಾಗಿಸಿ
ಸಿಂಗರಿಸುವ ನಗುವಿಗಾಗಿ
ದೂರ ತಳ್ಳದ ಆಲಿಂಗನಕ್ಕಾಗಿ
ದಾರಿಯ ಕಾಯುತಲಿರುವೆ
ಬರುವೆಯ ಚಂದಿರ....
ನಿನ್ನ ತಣಿವ ನಲ್ಮೆಯ
ತಂಪು ನಗುವಲಿ
ಎದೆಯ ಬರಿದಾಗಿಸಿ
ಮೌನಕೆಲ್ಲ ಶಬ್ಧ ಉಣಿಸಿ
ಮೊಗೆದಷ್ಟು ಮಾತು ಹರಿಸಿ
ಕೊಟ್ಟಷ್ಟು ನಗುವ ಕೂಡಿಸಿ
ಮನದ ಭಾರವ ಹಗುರಾಗಿಸಿ
ಕೊಂಚ ನಲಿವ ಬಯಕೆ
ಆದರೆ ಸಿಗುವೆಯ ನಮ್ಮ ಹಳೆಯ ಸ್ನೇಹಕೆ
ಅಜ್ಞಾನವೆಂಬ ಬುತ್ತಿಯ ಗಟ್ಟು ನಿನ್ನ ಹೆಗಲ ಮೇಲ ಇದ್ದರೆ ನೀನು ಉಣ್ಣುವದು ಹಳಸಿದ ಅನ್ನವೇ...
ಜ್ಞಾನವೆಂಬ ಬುತ್ತಿಯ ಗಂಟು ನಿನ್ನ ಹೆಗಲ ಮೇಲ ಇದ್ದರೆ ನೀ ಉಣ್ಣುವುದು ಎಲ್ಲವು ಮೃಷ್ಟಾನ್ನವೇ....
ಅಜ್ಞಾನವೆಂಬ ಅಂಧಕಾರವ ತೊರೆದು....
ಜ್ಞಾನವೆಂಬ ದೀವಿಗೆಯ ಬೆಳಕಿನ ಕಿರಣಗಳಿಂದ
ಅಂಧಕಾರವ ತೊರೆದು ಪ್ರಕಾಶಮಾನವಾದ
ಬೆಳಕಿನ ಎಡೆ ಸಾಗುವುದು ಲೆಸಲವೇ.....
ನೀನು ನನ್ನ ಜೀವಕೆ ಉಸಿರು ಕೊಟ್ಟ ದೇವತೆ.ನನಗೆ ಪ್ರೀತಿ, ಸಹನೆಯಿಂದ ಬದುಕುವ ಪಾಠ ಕಲಿಸಿದ ಮಾತೆ.ಜಗತ್ತಿನಲ್ಲಿ ಬೇರೆ ಯಾರು ಕೋಡಲಾರು ತಾಯಿಯ ಮಮತೆ.ನೀ ಸದಾ ನಗುತ್ತಿದರೆ ಬರಲಾರದು ನನಗೆ ಯಾವುದೇ ಕೋರತೆ.ಅಮ್ಮಾ ನಿನ್ನ ಪಾದಕೆ ಸರ್ಮಪಿಸುವೆ ಈ ನನ್ನ ಪುಟ್ಟ ಕವಿತೆ....