ಕೈ ಬೆರಳು ಖಾಲಿ ಇದೆ ನೀ ಇಡುವ ಉಂಗುರಕ್ಕಾಗಿ,
ಈ ನನ್ನ ಹೃದಯ ಸಿಂಹಾಸನವು ಕಾಯುತ್ತಿದೆ,
ಮನ ಮೆಚ್ಚುವ ನಿನ್ನ ಆಗಮನಕ್ಕಾಗಿ,
ಮನದ ಭಾವನೆಗಳ ಒಡತಿ ನಿನು,
ನಿನ್ನ ಕಾಣದೆಯೇ ಕನಸ ಕಟ್ಟಿರುವೆ ನಾನು,
ನನಗಾಗಿಯೇ ಹುಟ್ಟಿರುವ ನೀನು,
ಆದಷ್ಟು ಬೇಗಾ ನನ್ನ ಕಣ್ಣ ಮುಂದೆ ಬಂದೆ ಬರುವೆ,
ನಿನ್ನ ಎಂದು ಕಾಯುತ್ತಿರುವೆ ನಾನು,
ಕನಸಿನ ಕೋಟೆಯನೇ ಕಟ್ಟಿದೆ ಈ ಮನ,
ನನ್ನ ಮನ ಮೆಚ್ಚುವಳ ಆಗಮನಕ್ಕಾಗಿ
ಕಾಯುತ್ತಿದೆ ಪ್ರತಿ ಕ್ಷಣ.......
ಎಮ್.ಎಸ್.ಭೋವಿ....✍️
ಮೊದಲು ಸಿಕ್ಕಾಗ ಸಮುದ್ರದ
ಚಿಪ್ಪಿನ ಮುತ್ತಾದೆ,
ಸ್ನೇಹದಲ್ಲಿ ಬೆರೆತಾಗ ನನ್ನನ್ನೇ ನಾನು
ಮರೆತುಹೋದ,
ನೀವು ಬಿಟ್ಟು ಹೋದಾಗ ಏನು
ತಿಳಿಯದೇ ಮೂಕನಾದೆ;
ಈ ರೀತಿ ಪ್ರೀತಿಸಿದ ಜೀವವನ್ನು
ಸಪ್ತಸಾಗರ ಮುತ್ತಿಗೆ ಹೋಲಿಸಿದೆ;
ನನ್ನ ಬಿಟ್ಟು ಬದುಕಲು ,
ಸಿದ್ದವಿದ್ದರೆ ದೇವರು ನಿನ್ನನ್ನು ;
ಚೆನ್ನಾಗಿ ಇಡು ಎಂದು ಹರಸಿದೆ.
ಕೆಲಸ ಇದೆ ಆದರೆ ಸಮಾಧಾನ ಕೊಡುತ್ತಿಲ್ಲ
ಕನಸು ದೊಡ್ಡದಾಗಿದೆ,
ಆದರೆ ದಾರಿ ತಿಳಿದಿಲ್ಲ
ಹಣ ಇದೆ,
ಆದರೆ ಯಾವುದಕ್ಕೂ ಸಾಲಲ್ಲ
ಸ್ನೇಹಿತರು ತುಂಬಾ ಇದ್ದರು,
ಆದರೆ ಈಗ ಯಾರು ಜೊತೆಗಿಲ್ಲ
ಪ್ರೀತಿಸುವವರು ಇದ್ದರು,
ಆದರೆ ಉಳಿಸಿಕೊಳ್ಳಲು ಆಗಿಲ್ಲ
ಬದಕು ನಡಿತಾ ಇದೆ,
ಆದರೆ ನೆಮ್ಮದಿ ಸಿಗುತ್ತಿಲ್ಲ
ಹೌದು ಸೊಲುತ್ತ ಇದ್ದೇನಿ,
ಆದರೆ ಪ್ರಯತ್ನ ಬಿಡುವುದಿಲ್ಲ....
ಎಮ್.ಎಸ್.ಭೋವಿ....✍️
ಮಾತೆಯ ಮಡಿಲಲ್ಲಿ;
ಮಮತೆಯ ಪಡೆದೆ,
ಯೋಜನೆ ಇಲ್ಲದ;
ಭೋಜನ ಪಡೆದೆ,
ಸ್ವಾರ್ಥವೇ ಇಲ್ಲದ ;
ಪ್ರೀತಿಯ ಪಡೆದೆ,
ಜೀವನವೆಲ್ಲ ಪಡೆದೆ;
ಅವಳಿಗೆ ನೀಡುವ ಅಂತದ್ದು ಏನಿದೆ
ಯಾರಿಲ್ಲ ನಿನ್ನ ವಾತ್ಸಲ್ಯಕ್ಕೆ
ಸರಿಸಮ ಅಮ್ಮಾ......*.
ಅಮ್ಮನ ಮಡಿಲು ಸ್ವರ್ಗ
ಈ ದೇವರ ಪುಟ್ಟ ಆಲಯ ದಲ್ಲಿ
ನನ್ನ ಜೀವನ ದಾರಿ
ಹಣ ಇದರೆ ಶ್ರೀಮಂತನ ಹತ್ತಿರ
ಇರತೈತಿ, ಜ್ಞಾನ ಇದರೆ ಅವನಲ್ಲಿ
ಇರತೈತಿ, ಇವೆಲ್ಲವೂ ಇದ್ದರು ಏನು
ಪ್ರಯೋಜನ, ಒಂದು ಒಳ್ಳೆಯ
ಗುಣ ಇಲ್ಲದ ಮೇಲೆ ಇಂತಹ
ಮನುಜರನ ತೆಗೆದುಕೊಂಡು,
ಏನು ಮಾಡಬೇಕು
ಶ್ರೀ ಸದ್ಗುರು ಸಿದ್ಧರೂಢ
ಇನ್ನೂ ಏಕೆ ನೀನಲ್ಲಿ ಮೌನ
ಕಣ್ಣು ತೆರೆದು ನೋಡು ನೀ
ಒಮ್ಮೆ ಯಾದರೂ
ಈ ಜಗ್ಗದ ಮಹಿಮೆಯನ್ನು...
"ಕವಿತೆಗಳೇ ನೀವ್ ಹೇಳಿ !
ನಾ ಏಕೆ ಗೀಚುವೆ ನಿಮ್ಮ...
ಮನಬಂದ ಹಾಗೆಲ್ಲ !
ಖುಷಿಯಲ್ಲಿ.. ಮೂಡೋರು ನೀವೇ !
ನೋವಲ್ಲಿ.. ಜೊತೆ ಅದು ನೀವೇ !
ಯಾಕಿಷ್ಟು ಹತ್ತಿರ ನೀವು ?
ನನ್ನ ಅಂತರಾಳಕೆ !!"
"ಹೇಳ_ಬಯಸುವ ಮಾತೆಲ್ಲಕ್ಕೂ...
ನೀವೇನೆ ವೇದಿಕೆಯು !
ನನ್ನ ಕಲ್ಪನೆ ಕಲೆಯಾಗಲು..
ನೀವೇನೆ ಸದಾ ಜೊತೆಯು !
ಆತ್ಮಸ್ಥೈರ್ಯವೋ..?
ಆಪ್ತ ಬಂಧುವೋ..?
ನೀವ್ ಅದರಿ ನನಗೆ..
ಹುಚ್ಚನಂತೆ ಹಚ್ಚಾಗಿ !
ನನ್ನೊಳಗಿನ ಕಿಚ್ಚಾಗಿ !
ಜೊತೆ ಅದಿರಿ ಹೀಗೆ...
ನನ್ನ ಅಂತರಾಳಕೆ !!"
ಎಮ್.ಎಸ್.ಭೋವಿ....✍️