Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀನೆಲ್ಲಿರುವೆ....!

ಬರಿ ಭಾವನೆಗಳಲ್ಲೇ ಬಂಧಿಯಾಗಿರುವೆ. ಬಂಧ ಬಿಡಿಸಲು ನೀನೆಲ್ಲಿರುವೆ!
ಮಿಡಿವ ಹೃದಯವನು, ಮನದ ಕಾರ್ಮೋಡವನು ತಣಿಸಲು ನೀನೆಲ್ಲಿರುವೆ!
ಅನುಭಾವವಿರುವ ಅನುಬಂಧವನು ಅನುಕ್ಷಣ ಕಳೆಯಲು ಹೇಳು ನೀನೆಲ್ಲಿರುವೆ!
ಅನುಭವವಿರದ ಅಂಧಕಾರವನು ತೊರೆದು ಬೆಳದಿಂಗಳಂತೆ ಬದುಕಲು ಹೇಳು ನೀ ಎಲ್ಲಿರುವೆ!
ನನ್ನೀ ಒಲವಿನ ನಿಲ್ದಾಣ ನಿಂತಿರಲು, ನಿಂತ ನಿಲ್ದಾಣದಿಂದ ಅನಂತ ದೂರದವರೆಗೆ ಜೊತೆ ಸಾಗಲು ನೀನೆಲ್ಲಿರುವೆ ....ನೀನೆಲ್ಲಿರುವೆ.....!
!!ನಾನೊಬ್ಬ ನನ್ನಲ್ಲೊಬ್ಬ !!
ಅನಿ - ಹನಿಗವನ

- anil

15 Jul 2022, 11:06 pm

ಅಂತಃಕರಣ

ಕಗ್ಗತ್ತಲೆಯ ಕೋಣೆಯಲಿ
ಒಬ್ಬಳೇ ಕುಳಿತು ಅಳುತ್ತಿರುವೆನ
ನನ್ನದೇ ಪ್ರಪಂಚವಾದ ಅಂತಃಕರಣದಲಿ
ಸಂತೈಸಿಕೊಳ್ಳುವೆನು ಎನ್ನದೇ ರಾಗದಲಿ

ಸ್ವಾಗತವಿರದು ಪರರಿಗೆ ಇದರಲ್ಲಿ
ಸುಖಕ್ಕೂ, ದುಃಖಕ್ಕೂ ವ್ಯಕ್ತಿಸುವ ಸ್ಥಾನವದು
ಕೋಪಕ್ಕೂ, ಕರುಣೆಗೂ ಉಗಮದ ಆಸ್ಥಾನ
ನನ್ನದೇ ಹಕ್ಕಿಹುದು ನನ್ನೆದೆಯ ಗೃಹಾಲಯದಲಿ

ಅಳುವಷ್ಟು ಅಳಬಹುದು ತಡೆಯುವವರಾರಿಲ್ಲಿ
ಅಳುಕದು ತೋಚದು ಪರರಿಗೆ ಬಾಹ್ಯದಲಿ
ವರವಿದು ಎಲ್ಲರಿಗು ಬ್ರಹ್ಮನ ಆಟದಲಿ
ಇದನರಿತು ಕುಳಿತಿರುವೆನಾ ಎನ್ನ ಅಂತಃಕರಣದಲಿ

ಒಪ್ಪಿಸುವೆನು ನನ್ನ ಸತ್ಯವ ದೇವನಲ್ಲಿ
ಕೇಳುತ್ತಿಹನವನು ತಂದೆಯಂತೆ ಮನದಲ್ಲಿ
ಕಣ್ಣೊರೆಸುವನು ಸೋದರನಂತೆ ಪ್ರೀತಿಯಲಿ
ದೇವನೊಬ್ಬನೇ ಸಾಕೆನಗೆ ಸಂತೈಸಲು ಜಗದಲಿ ..

- Shakuntala Shakuntala

13 Jul 2022, 04:17 pm

ಪ್ರೀತಿ ಸಂಬಂಧ...

ನಿನ್ನ ಪ್ರೀತಿಗೆ ಸೋತಿರುವೆ ನಾ ಎಂದೊ,,
ನಿನ್ನ ಜೊತೆಯಾಗಿರುವೆ ಸದಾ ಎಂದೆಂದೂ...!
ಆಕಸ್ಮಿಕವಾಗಿ ಬೆಳದ ನಮ್ಮ ಬಂಧವಿದು,
ಶಾಶ್ವತವಾಗಿ ಉಳಿಯುವ ಪ್ರೀತಿ ಸಂಬಂಧವಿದು...!
ಖುಷಿಯಲ್ಲಿ-ದುಃಖದಲ್ಲಿ ಜೊತೆಯಾಗಿರುವೆ,
ನಿನ್ನ ಜೀವನದ ತುಂಬೆಲ್ಲ ಖುಷಿಯಿರಲೆಂದು
ಅರಸುತ್ತಿರುವೆ....!
ಈಡೇರಲಿ ನೀ ಕಂಡ ಎಲ್ಲಾ ಕನಸಗಳು,
ಬಾರದಿರಲಿ ನಿನಗೆ ಯಾವುದೆ ನೋವುಗಳು....!
ಎಮ್.ಎಸ್.ಭೋವಿ......✍️

- mani_s_bhovi

10 Jul 2022, 08:08 pm

ಮೋಸದ ಜಗತ್ತು

ಜೀವನದಲ್ಲಿ ಯಾರನ್ನ
ನಂಬುವುದು ಬಿಡೋದು ಗೋತ್ತಿಲ್ಲ
ಏಕೆಂದರೆ ನಂಬಿಸಿ
ಮೋಸ ಮಾಡುವವರು
ಒಂದು ಕಡೆ ನಿಂತರೆ
ಬೆನ್ನ ಹಿಂದೆ ನಿಂತು ಚೂರಿ ಹಾಕುವವರು ಮತ್ತೊಂದೆಡೆ ಒಟ್ಟಿನಲ್ಲಿ
ಮೋಸ ಮಾಡುವ ಜನಗಳು
ನಾವು ಅಪಾರ ನಂಬಿಕೆ ಇಟ್ಟ
ಜನಗಳೇ ಹೋರೆತು ಬೇರೆಯವರು
ಅಲ್ಲವೇ ಅಲ್ಲ
ಹಾಗಾಗಿ ಯಾರನ್ನೂ ನೀ ನಂಬಿ
ನಡೆಯಲುಬೇಡ ನುಡಿಯಲುಬೇಡ
ನಿನ್ನಂತೆ ನೀ ಬದುಕು ಬಾಳು

- ರಾಜು ಹಾಸನ

09 Jul 2022, 12:32 am

ಕಳೆದು ಹೋದ ದಿನಗಳು

ಬೀಸುವ ಗಾಳಿ ಓಡಾಡುವ ವಾಹನಗಳ ನಡುವೆ ಕಳೆದು ಹೋದ ದಿನಗಳು ಕಳೆದು ಹೋದ ದಿನಗಳ ನೆನೆಯುತ್ತ ಕುಳಿತರೆ ಸಿಗದು ಮುಂದಿನ ದಿನಗಳು, ಕಳೆದ ನೆನ್ನೆ ಬರದು ನಾಳೆ ಯೋಚಿಸುತ ಕುಳಿತರೆ ಸಿಗದು ಮುಂದಿನ ನಾಳೆ ಏನೇ ಆಗಲಿ ಮರೆತು ಬಿಡು ಹಿಂದಿನ ದಿನ

- Vinayak Kalmani

07 Jul 2022, 10:19 am

ಸುಖಾಸುಮ್ಮನೆ ಪ್ರೀತಿಸು....

ಸನಿಹವೇ ಇದ್ದರು ಬೆಕಂತಲೇ
ತುಂಬಾ ಕಾಡಿಸು....
ಸಂಜೆಯಲಿ ತುಸು ಪೋಲಿ ಆಗುವೆ
ಹೆಂಗೋ ಚೂರು ಸಹಿಸು....
ಮಳೆಯಲಿ ಬರೆಯುವೆ. ಮಳೆಬಂದಾಗ
ಮರೆಯದೇ ಜ್ಞಾಪಿಸು....
ನಿದ್ರೆಯಲಿ ಕೈಲಾದರೆ ನನ್ನ
ಹೆಸರೇ ಜಪಿಸು....
ನೋವಲ್ಲೂ ನಗುವದ ಬೆರಳಿಡಿದು
ಕಲಿಸು.....
ಗೋರಿಗೋದರು ಸಹ ನಾನು.
ಸುಖಾಸುಮ್ಮನೆ ಪ್ರೀತಿಸು....
ಎಮ್.ಎಸ್.ಭೋವಿ.....✍️

- mani_s_bhovi

05 Jul 2022, 09:01 pm

ಅವಳು.....??!!

"ಒಂದಲ್ಲ ಒಂದಿನ..ಬರುವಳ್ ಅವಳು!
ನಾ ಗೀಚೋ ಕವಿತೆಗಳ..ಪಶ್ನಿಸುವಳು!
ಯಾಕಾಗಿ ಬರೆಯುವೆ..ಯಾರಿಗಾಗಿ ಬರೆಯುವೆ..
ಯಾಕಾಗಿ ಇದು ಎಲ್ಲ ಅನ್ನುವಳು!!"
"ಪದಗಳ ಮೋಹ ಎಂದರೆ..ಕೇಳುವಳ?
ಗೀಚೋ ಹುಚ್ಚಷ್ಟೆ ಎಂದರೆ..ನಂಬುವಳ?!
ಮೊದಲಾದ ಪರಿ ಹೇಗೆ..ಎನ್ನುತ ಗದರುವಳ?
ಬರವಣಿಗೆಗೆ ಜೊತೆಯಾಗಿ..ನನ್ನೊಡನೆ ಸಾಗುವಳ?!
ಹೇಗೋ? ಏನೋ? ನನ್ನ ದಿನಚರಿ...
ಬಂದಮೇಲೆ ಅವಳು!
ಹೀಗೆ ಎಷ್ಟೋ ನನ್ನ ಮನದಲಿ...
ದುಗುಡದ ಭಾವನೆಗಳು!
ಎಲ್ಲವುದಕ್ಕು ಉತ್ತರವು...ಅವಳಾಗುವಳ?!!
ಎಮ್.ಎಸ್.ಭೋವಿ......✍️

- mani_s_bhovi

30 Jun 2022, 10:43 pm

ಮನದಾಳದ ಮನ ಸಹೋದರಿ

ಮನಃಸಾಕ್ಷಿಗೆ ಮಾಯದ ಒಡವೆಯ ಹಾಕಿ
ಮೋಸದ ಜನರ ಬಲೆಗೆ ಬಿದ್ದು
ಅವರ ಹಿತವನ್ನು ರಕ್ಷಿಸುವುದೇ ನ್ಯಾಯವೆಂದರಿದು
ತನ್ನ ಮನಸ್ಸನ್ನೇ ಕೊಲೆಗೆಯುತ್ತಿರುವೆಯಲ್ಲ

ನಾಟಕೀಯ ಜನರಿಂದ ಪರದೆ ಎಳೆದು
ಅಹಂ,ಸ್ವಾರ್ಥದಲಿ ಮನವ ಮುಳುಗಿಸಿ
ಕೆಡಕುಗಾರರ, ದ್ರೋಹಿಗಳ ಅರಿದೆ ಹಿಂಬಾಲಿಸಿ
ಮರೆಹಿಂದಿನ ಒಳಿತು ಮನವ ಮರೆಮಾಚುತ್ತಿರುವೆಯಲ್ಲ

ಅನ್ಯಾಯ, ಮೋಸ,ಸ್ವಾರ್ಥ, ಅಹಂ
ಕೆಡಕು,ದ್ರೋಹ,ಹಗೆ ಹತ್ತುರಿಯುತ್ತಿದೆ
ಜಗತ್ತೇ ಬೆರಗಾಗುವಂತಹ ಮೋಸದ ಜಾಲದಲಿ
ಮನಸ್ಸಾಕ್ಷಿಯನ್ನೇ ಕಗ್ಗತ್ತಲೆಯಲಿ ದೂಡಿ ಮೆರೆಯುತ್ತಿರುವೆಯಲ್ಲ

ಅದೆಂದರಿಯುವುದೋ ಮನದಾಳದ ಒಳಿತಿನ ಸತ್ವವು
ವಿಜ್ರಂಭಿಸುವುದೆಂತೋ ದ್ರೋಹಿಗಳ ರುಂಡವನು ಸಂಹರಿಸಿ
ಮುಂದಾಗುವುದುಂಟು ಕಟುಕ,ಸ್ವಾರ್ಥಿಗಳ ಸಂಹಾರ
ಇದನಂಬಿ ತಾಳ್ಮೆಯಿಂದಿರುವೆನಯ್ಯ ನಿನ್ನ ಮನದಾಳದಲ್ಲಿ ಸಹೋದರಾ .......

- Shakuntala Shakuntala

27 Jun 2022, 11:50 am

ಅಣ್ಣ_ತಂಗಿ

ನನಗಿರುವ ಹೆಮ್ಮೆ
ನನ್ನ ಹುಟ್ಟಿನ ನಂತರ
ನಿನ್ನ ಹೆಸರಿಗೆ ಗರಿ ಏರಿದ್ದು,
ನಿನ್ನ ಈ ಪ್ರೀತಿಯ
ಆಸರೆಯಲ್ಲಿ ನಾ ಬದುಕುತ್ತಿದ್ದು,
ನಾನಿನ್ನು ಚಿಕ್ಕವಳು ಅರಿಯೇನು
ನಿನ್ನ ಜೀವನದ ಬೇಗೆಯಲ್ಲಿ ಬೇದದ್ದು;
ಕ್ಷಮೆ ಇರಲಿ ನನ್ನ ತುಂತಾಟದಲ್ಲಿ ನಿನ್ನ ಕಾಡಿದ್ದು'
ನೀನೇ ನನ್ನ ಜೀವನದ ಆದರ್ಶ ನಾಯಕನಾಗಿ
ಕಂಡದ್ದು,
ಬೇರೆ ಏನು ಬೇಡ ಈ ಪ್ರೀತಿಯ ಹೊರತು ನಾ
ನಿನ್ನಿಂದ ಬಯಸಿದ್ದು,
ಇರಲಿ ಚಿರಕಾಲ ಈ ನನ್ನ ನಿನ್ನ ಅನುಬಂಧ ,
ಇರುವುದೊಂದೇ ಆಸೆ ನಾವು ತೀರಿದರು
ನಮ್ಮ ಸಂಬಂಧ ತೀರದಿರಲಿ ಎಂದೆಂದೂ.....

bhai**Behan

- Laxmi Dabbanavar

20 Jun 2022, 11:46 am

ಜಾತ್ರೆ

ಜಾತ್ರೆಯೂ ಬಂದಿತು ಜಾತ್ರೆಯೂ ಬಂದಿತು ವರುಷಕೆ ಒಮ್ಮೆ ಬರುವ ಜಾತ್ರೆಯೂ ಬಂದಿತು

ದೇವರ ಗುಡಿಯ ಗೋಪುರ ಬಣ್ಣ ಬಣ್ಣದಿಂದ ಕೂಡಿತ್ತು ಮನೆ ಮನೆಯೂ ನೆಂಟರ ಮನೆಯಿಂದ ಕೂಡಿತ್ತು

ದೇವರ ಗುಡಿಯ ಗೋಪುರದ ಒಳಗೆ ಬಣ್ಣ ಬಣ್ಣದ ರಂಗೋಲಿ ಹೂವಿನಿಂದ ಅಲಂಕಾರ ಕೂಡಿತ್ತು

ದೇವರ ಮುಖದಲ್ಲಿ ಮಂದಹಾಸ ಮೂಡಿದೆ ದೇವರ ತೇರು ಎಳೆಯಲು ಭಕ್ತ ಗಣ ತಾನು ಮುಂದು ನೀ ಮುಂದು ಎಳೆಯುತ್ತಿದ್ದರು

- Tejesh M

18 Jun 2022, 08:40 am