Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಎದೆಯ ಭಾರ

ಪ್ರೀತಿಯೆಂದರೆ..!

ನಿನ್ನ ಸಾಂಗತ್ಯದ ಪ್ರತಿ ಕ್ಷಣವೂ ಪುಟ್ಟ ಮಗುವಿನಂತಿದ್ದ ಹೃದಯಕ್ಕೆ ಈಗ, ವಿರಹದ ಪ್ರತಿ ಕ್ಷಣಗಳು ಕಾದ ಕೆಂಡದಂತೆಯೇ! ಮೃದು ಹೂವಿನಂತೆಯೇ ಇದ್ದ ಮನದಲ್ಲಿ ನೆನಪುಗಳಂಬೆ ರಾಕ್ಷಸರ ದಬ್ಬಾಳಿಕೆಯೇ ಹೆಚ್ಚು ಹೆಚ್ಚು! ಸೂರ್ಯ ಕರಗಿ ಚಂದ್ರ ಬರುವ ಹೊತ್ತಿಗೆ ಕಂಗಳಲ್ಲಿ ನದಿಯ ಹರಿವು, ರಾತ್ರಿ ಕಗ್ಗತ್ತಲಿನಲ್ಲಿ ನರಳಾಟ ಉಸಿರೊಂದು ಕೇಳುವುದು ಅದು ನೀ ಇಲ್ಲದ ಹೃದಯದ್ದು,
ಮುಂಜಾನೆಯ ಮಡುಗಟ್ಟುವ ಚಳಿ ಸಹ ಎದೆಯಲ್ಲಿನ ನೋವಿನ ಶಾಖಕ್ಕೆ ನನ್ನಿಂದ ದೂರ ದೂರ! ಮರಳಿ ಬರದಿರುವ ನೀನು ಈಗ ಬರೀ ಮುಸುಕು ಮುಸುಕು!

- Writer_Jay fit

22 May 2022, 02:40 pm

ಆತ್ಮೀಯ ಪ್ರೀತಿಗೆ

ಹೌದು ನಂಬಿಕೆ ಇಲ್ಲದ ಪ್ರೀತಿ ಹುಸಿಯಾಗಿದೆ
ನಂಬಿಕೆಯನ್ನು ಮುರಿದ ಪ್ರೀತಿ ಹುಸಿಯಾಗಿದೆ

ಮೋಸದ ಪ್ರೀತಿ ಹುಸಿಯಾಗಿದೆ
ಮೋಸ ಮಾಡುವವರ ಪ್ರೀತಿ ಹುಸಿಯಾಗಿದೆ
ಸುಳ್ಳಿನ ಪ್ರೀತಿ ಹುಸಿಯಾಗಿದೆ

ನಂಬಿಸಿ ಮೋಸ ಮಾಡುವವರ ಪ್ರೀತಿ ಹುಸಿಯಾಗಿದೆ
ಪ್ರೀತಿಗೇ ಪ್ರೀತಿ ಕೊಡದವರ ಪ್ರೀತಿ ಹುಸಿಯಾಗಿದೆ
ಇನ್ನೊಬ್ಬರ ಜೀವನದ ಮೇಲೆ ಕಟ್ಟಿದ ಸಮಾಧಿ ಪ್ರೀತಿ ಹುಸಿಯಾಗಿದೆ

- mallikarjun sonnad

19 May 2022, 11:13 pm

ನಿನ್ನೊಲವಿನ ಸರಪಳಿಯಲಿ

ನಿನ್ನೊಲವಿನ ಸರಪಳಿಯಲಿ
ಬಂಧಿಸಿದೆ ನೀ ನನ್ನನು!!
ನನ್ನೊಲವದು ಬಸಿದಿರುವುದು
ನಿನ್ನ ಅಂಗೈ ಬೊಗಸೆಯಲಿ!!

ಸುಳ್ಳನು ನುಡಿಯೆನು ನಾನು
ಅತಿಯಾಸೆ ನನ್ನ ಮನಸಿನಲಿ!!
ಇರಬೇಕು ತುಂಬಾ ಸಲಿಗೆ
ಗೆಳೆಯ ನಮ್ಮ ನಡವಿನಲಿ!!

ನಾನು ತುಂಬ ಸರಳ‌‌ ಹೀಗೇ
ನೀನು ಇರಲು ನನ್ನಯ ಒಳಗೆ!!
ನವಿರಾದ ನವ ಭಾವಗಳಿಗೆ
ನೀ ಜೀವಕಳೆಯ ತುಂಬಿದೆ!!

ಋಣಮಾತ್ರದಿಂದ ಬೆಸೆದ
ಕೊಂಡಿಯಲ್ಲ ಈ ಬಂದನ!!
ಜನುಮಗಳಿಗೂ ಸಾಧ್ಯವೇ ಇಲ್ಲ
ದೂರವಿಡಲು ನಮ್ಮನು!!

ನಿನ್ನುಸಿರು ನನ್ನೊಳಗಿರಲು
ಈ ಬದುಕು ಸುಂದರ ಕಡಲು!!
ಅಲೆಗಳ ಏರಿತವನು ನಾನು
ಕಾಣೆನು ನಿನ್ನ ಪ್ರೀತಿಯಲಿ!!

ಮೌನವಾದ ಬದುಕಿನಲಿ
ಮುಗಿಲು ಮಟ್ಟುವ ಕನಸು!!
ಅಳುವಿಗಿಲ್ಲಿ ಜಾಗವೇ ಇಲ್ಲ
ಜೋಡಿ ಚಿತೆಯು ನಗುವುದು ಅಲ್ಲಿ!!


- ಪಿ.ಜಿ.ಜ್ಯೋತಿ

13 May 2022, 03:24 pm

ಹಾಲು ಬೆಳದಿಂಗಳ



ಪಾಳು ಬಿದ್ದಿರುವ ಮಣ್ಣಿನ ಗೋಡೆಯಮೇಲಿರಿಸಿದ ಕಪ್ಪು ಹೊಗೆಯಿಂದ ಮಬ್ಬುಗಟ್ಟಿ ಮಸುಕಾದ ಬೆಳಕ ಚೆಲ್ಲಿತಲಿ ಕತ್ತಲಲಿ ನಿಂತಿಹ ಲಾಂದ್ರ ನಾನು..!

ಪಶುಭ್ರ ನೀಲಾಗಸದಲಿ, ಬೆಳ್ಳಿತಾರೆಗಳ ನಡುವಲಿ ತಂಪಾದ ರಾತ್ರಿಯಲಿ ಹಾಲು ಬೆಳದಿಂಗಳ ಸೂಸುತಿಹ ಹುಣ್ಣಿಮೆಯ ಪೂರ್ಣ ಚಂದ್ರ ನೀನು.‌‌.!

ನಮ್ಮಿಬ್ಬರಿಗೂ ಹೋಲಿಕೆ ಸರಿಯೇನು?
ನಾವಿಬ್ಬರೂ ಕನಸಿನಲ್ಲಾದರೂ ಒಂದಾಗುವುದು ಸಾಧ್ಯವಿಹುದೇನು...?

- mallikarjun sonnad

11 May 2022, 10:29 pm

ಈ ದಾರಿ...

ನಡೆದಷ್ಟೂ ಮುಗಿಯದ ಖಾಲಿದಾರಿಯಲಿ
ನಿನ್ನೊಡನೆ ನಡೆಯಬೇಕು, ಜೊತೆ
ಈ ಮಳೆ ಸುರಿಯುತಿರಬೇಕು...
ನೆನೆದ ದೇಹಕೆ ಹಿಡಿದ ಚಳಿ
ಬೆಸೆದ ಕೈಗೇರಿದ ಬಿಸಿಗೆ
ಬೆವೆತೋಗುವಷ್ಟು ಏಕಾಂತವಿರಬೇಕು...
ನಿನಾದ ಮೂಡುವ ನೀರ ಮೇಲೆ ಹೆಜ್ಜೆ ಇಟ್ಟಷ್ಟು
ಎದೆಯೊಳಗೊಂದು ಕಡಲು ಹುಟ್ಟಿ
ಕಣ್ಣಲಿ ಕಾರಂಜಿಯಾಗಿ ಚಿಮ್ಮಬೇಕು...
ಹರಿಹರಿದು ಸಾಗುವ ನದಿಗಳು
ದೂರದ ನೀಲಿಯಲಿ ಕೊನೆಗೊಳ್ಳುವಂತೆ
ಒಲವ ಮಳೆಯಲಿ ನೆನೆದ ನಾನು, ನನ್ನವನಾದ ನೀನು
ಒಂದಾಗಿಯೇ ಕೊನೆ ತಲುಪಬೇಕು...
ಅಲ್ಲಿವರೆಗೂ ಈ ಹುಚ್ಚುಮಳೆ
ಬಿಡದೇ ಸುರಿಯುತಿರಬೇಕು...

- mallikarjun sonnad

11 May 2022, 10:27 pm

ಕನ್ನಡಿ ಹೇಳು ಸತ್ಯ


ಕನ್ನಡಿ ಹೇಳಿದ ಸತ್ಯ
ಮನದ ಕನಸ್ಸಿನ ಸತ್ಯ
ಮುನ್ನುಡಿ
ನುಡಿಯಿತು ಹೃದಯದ ಸತ್ಯ
ಕನ್ನಡಿ
ಮನದ ಮಾತುಗಳು
ಮೌನವೇ ಸತ್ಯ
ಮುತ್ತಿನಂತದೊಂದು
ಹಂಬಲ ನುಡಿ ಸತ್ಯ
ಕನ್ನಡಿ ತೋರುವ ದೇಹದ
ಸೌಂದರ್ಯಸತ್ಯ
ಕನ್ನಡಿಯ ತನುವಿನದು
ಮರಳಾಗಿಸ ಬಿಂಬವೇ ಸತ್ಯ
ಮನವೇ ಮರುಳಾಗದಿರು
ಮನವೇ ಪ್ರತಿಬಿಂಬದ ಸತ್ಯ
ಸೊಗಸಿಲ್ಲದ ಸೊಲಿಸಿದ
ಕನ್ನಡಿಯ ಸತ್ಯ ಹೊಳಪಿದೆ
ಉಸಿರಿನ ಸತ್ಯ.

- mallikarjun sonnad

11 May 2022, 10:18 pm

ನಿನ್ನ ನೀ ಮರೆತರೇನು

ನಿನ್ನ ನೀನು ಅರಿತುಕೋ
ನಿನ್ನ ಹೃದಯಕ್ಕೆ ನೀನೆ ಮನದಟ್ಟು ಮಾಡಿ ಕೋ
ನನ್ನ ಮನಕ್ಕೆ ನೀನೆ ಲಗ್ಗೆ ಹಾಕಲು ಅರಿತು ಕೋ

ನೀ ನನ್ನ ಒಲವಿಗೆ ಪ್ರೀತಿ ಕೊಡಲು ಅರಿತು ಕೋ
ನೀ ನನಗೆ ಜೀವ ಪ್ರೇಮ ಕೊಡಲು ಅರಿತು ಕೋ

ನಿನ್ನ ಪ್ರೇಮದ ಕನಸು ಮನಸು ಅರಿತು ಕೋ
ಒಳಗಿನ ಪ್ರೀತಿಯ ಮನಕ್ಕೆ ಮಿಡಿತ ಅರಿತು ಕೋ

ನಿನ್ನ ಹಸಿವಿಗೆ ಉಸಿರಿಗೆ ತಲೆಬಾಗಲು ಅರಿತು ಕೋ
ನೋವಿಗೆ ಜೀವ ಹಿಂಡಿರುವುದಕ್ಕೆ ಅರಿತು ಕೋ

ಜಗದ ಬೆಳಕು ತೋರಲು ನಿನ್ನ ನೀ ಅರಿತು ಕೋ
ನಿನಗಾಗಿ ಧರೆಯ ಒಡಲಿಗೆ ಮೌನವೇಕೆ ಅರಿತು ಕೋ

ಜೀವಕ್ಕೆ ಉಸಿರಿದೆ ಜೀವಕ್ಕೆಬದುಕಿದೆ ಭರವಸೆಯಿದೆ ಪ್ರೀತಿ ಪ್ರೇಮದ ಅರಿವಿದೆ ಮಾತನೊಳಗೆ ಅರಿತು ಕೋ

- mallikarjun sonnad

11 May 2022, 10:16 pm

ಕವಿತೆ ನನ್ನ ಮೌನ

ಮೌನ ಕವಿತೆ
ಮೌನ ನನ್ನ ಮನದ ಪ್ರೀತಿ
ಮಾತು ಪದಗಳ ಹೃದಯ
ತುಂಬುವ ಕವಿತೆ ಮೌನವೇ?
ಮೌನದ ಪದಗಳೇ ಇಲ್ಲದ
ಮನದೊಳಗಿನ ಪ್ರೀತಿ
ಮುಗಿಯುವುದಿಲ್ಲ
ಮನಸ್ಸು ಇರುವುದಿಲ್ಲ
ಕವಿತೆಯ ಸಾಲುಗಳೊಳಗೆ
ಅರ್ಥ ಒಂದಂತೂ ಪ್ರೀತಿ
ಸತ್ಯದೊಳಗೆ ಅರ್ಥಪೂರ್ಣ
ಮೌನ ಪ್ರೀತಿ ಕವಿತೆ ಮೌನದಲ್ಲೇ
ಹುಟ್ಟುವ ಉಸಿರಿನ ತನಕ
ಮೌನದ ಹಂಬಲವೇ ಪ್ರೀತಿ
ಕವಿತೆಗಳೇ ಕನಸಿನ
ಮಾತಿಲ್ಲದ ಮೌನ

- mallikarjun sonnad

11 May 2022, 10:15 pm

ಚುಟುಕು ಪುಟಗಳು

#ಚುಟುಕುಗಳು
#ದೀಪ
ಪ್ರೀತಿ ದೀಪದ ಬೆಳಕು
ದ್ವೇಷ ಬೆಂಕಿಯ ಜ್ವಾಲೆ
ಭುಗಿಲೆದ್ದು ಸುಟ್ಟು
ಬೂದಿಯಾಗಿರಲಿ
#ಬೆಳಕು
ಬೆಳಗಲು ಪ್ರೀತಿ ದೀಪ
ಅಸೂಯೆ ಸುಡುವ ಬೆಂಕಿ
ಬೆಳಗುವ ಹೊತ್ತಿನಲಿ
#ಪ್ರೀತಿ
ಪ್ರೀತಿಗೆ ನಿನ್ನ ಬೆಳಕು
ಅರಿವು ನಿ‌ನ್ನ ದಾರಿಗಿರಲಿ
ಮುಳ್ಳಾಗದಿರಲಿ
#ದಾರಿ
ಮುಸುಕಿನ ದಾರಿ ನಿನ್ನೆದೆಯಲಿ
ಹಾಳಾಗಿದೆ ದಾರಿ ನಿನ್ನೆದೆ ಜೀವನ
ಮರುಗಬಾರದೆಂದು
#ಬೆಂಕಿ
ನಾನು ಬೆಂಕಿ ನೀನು ದೀಪ
ನಿನ್ನ ಬಾಳ ದೀಪ ಬೆಳಗಲು
ಬೆಂಕಿಯಾದೆ
#ಗಾಳಿ
ಗಾಳಿ ಬಿರುಗಾಳಿಯಲಿ
ಬದುಕು ಸುಡುಗಾಡಿನಲಿ
ಹುಟ್ಟು ಸಾವಿನಲಿ
#ಬೆಲ್ಲ
ಬೆಲ್ಲದಂತೆ ಕಹಿಯಾಗಿ
ಜೀವನವೇ ಕಷ್ಟಕ್ಕೆ ನೋವಿದೆ
ಕಣ್ಣೀರಿನ ಒಡಲಿದೆ
@ಸೊನ್ನದ

- mallikarjun sonnad

11 May 2022, 10:14 pm

ನನ್ನ ಜೀವ ನನ್ನ ಅಮ್ಮ

ಜಗತ್ತಿನಲ್ಲಿ ತನ್ನ ಮಕ್ಕಳನ್ನು ಎಲ್ಲರಿಗಿಂತ ಹೆಚ್ಚು ಪ್ರೀತಿಸುವ ತ್ಯಾಗಮಯಿ ಅಮ್ಮಂದಿರಿಗೆ ಇಂದು ಶುಭಾಶಯ ಹೇಳುವ ಸುದಿನ
ತಾಯಿ ಎನ್ನುವ ಪದಕ್ಕೆ ಇರುವ ಗೌರವ ಬೆಲೆ ಮತ್ಯಾವ ಪದಕ್ಕೂ ಇರದು. ನಮ್ಮ ಜೀವನ ಆಕೆ ಕೊಟ್ಟ ಭಿಕ್ಷೆ. ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರಬಹುದು, ಆದರೆ ಅಮ್ಮಂದಿರು ಇರಲ್ಲ ಎಂಬ ಮಾತಿನಂತೆ ಮಮತೆ, ತ್ಯಾಗ, ಕರುಣೆಯ ಪ್ರತಿರೂಪ ತಾಯಿ
ಈ ದಿನದ ಅಂಗವಾಗಿ ತಾಯಂದಿರಿಗೆ ಗೌರವ ಸಲ್ಲಿಸಿರಿ ನೀವೂ ನಿಮ್ಮ ತಾಯಿಗೆ ಋಣದ ಭಾರವೇ ಆಕೆಗೊಂದು ಗೌರವ ಸಲ್ಲಿಸಿ.ಅಮ್ಮ ಎನ್ನುವ ಪದದಲ್ಲಿ ಏನೋ ಒಂದು ಅದ್ಬುತ
ಅಮ್ಮ ನೀನು ನನ್ನ ಅಮ್ಮ

- mallikarjun sonnad

11 May 2022, 10:09 pm