Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸುಖಾಸುಮ್ಮನೆ ಪ್ರೀತಿಸು....

ಸನಿಹವೇ ಇದ್ದರು ಬೆಕಂತಲೇ
ತುಂಬಾ ಕಾಡಿಸು....
ಸಂಜೆಯಲಿ ತುಸು ಪೋಲಿ ಆಗುವೆ
ಹೆಂಗೋ ಚೂರು ಸಹಿಸು....
ಮಳೆಯಲಿ ಬರೆಯುವೆ. ಮಳೆಬಂದಾಗ
ಮರೆಯದೇ ಜ್ಞಾಪಿಸು....
ನಿದ್ರೆಯಲಿ ಕೈಲಾದರೆ ನನ್ನ
ಹೆಸರೇ ಜಪಿಸು....
ನೋವಲ್ಲೂ ನಗುವದ ಬೆರಳಿಡಿದು
ಕಲಿಸು.....
ಗೋರಿಗೋದರು ಸಹ ನಾನು.
ಸುಖಾಸುಮ್ಮನೆ ಪ್ರೀತಿಸು....
ಎಮ್.ಎಸ್.ಭೋವಿ.....✍️

- mani_s_bhovi

05 Jul 2022, 09:01 pm

ಅವಳು.....??!!

"ಒಂದಲ್ಲ ಒಂದಿನ..ಬರುವಳ್ ಅವಳು!
ನಾ ಗೀಚೋ ಕವಿತೆಗಳ..ಪಶ್ನಿಸುವಳು!
ಯಾಕಾಗಿ ಬರೆಯುವೆ..ಯಾರಿಗಾಗಿ ಬರೆಯುವೆ..
ಯಾಕಾಗಿ ಇದು ಎಲ್ಲ ಅನ್ನುವಳು!!"
"ಪದಗಳ ಮೋಹ ಎಂದರೆ..ಕೇಳುವಳ?
ಗೀಚೋ ಹುಚ್ಚಷ್ಟೆ ಎಂದರೆ..ನಂಬುವಳ?!
ಮೊದಲಾದ ಪರಿ ಹೇಗೆ..ಎನ್ನುತ ಗದರುವಳ?
ಬರವಣಿಗೆಗೆ ಜೊತೆಯಾಗಿ..ನನ್ನೊಡನೆ ಸಾಗುವಳ?!
ಹೇಗೋ? ಏನೋ? ನನ್ನ ದಿನಚರಿ...
ಬಂದಮೇಲೆ ಅವಳು!
ಹೀಗೆ ಎಷ್ಟೋ ನನ್ನ ಮನದಲಿ...
ದುಗುಡದ ಭಾವನೆಗಳು!
ಎಲ್ಲವುದಕ್ಕು ಉತ್ತರವು...ಅವಳಾಗುವಳ?!!
ಎಮ್.ಎಸ್.ಭೋವಿ......✍️

- mani_s_bhovi

30 Jun 2022, 10:43 pm

ಮನದಾಳದ ಮನ ಸಹೋದರಿ

ಮನಃಸಾಕ್ಷಿಗೆ ಮಾಯದ ಒಡವೆಯ ಹಾಕಿ
ಮೋಸದ ಜನರ ಬಲೆಗೆ ಬಿದ್ದು
ಅವರ ಹಿತವನ್ನು ರಕ್ಷಿಸುವುದೇ ನ್ಯಾಯವೆಂದರಿದು
ತನ್ನ ಮನಸ್ಸನ್ನೇ ಕೊಲೆಗೆಯುತ್ತಿರುವೆಯಲ್ಲ

ನಾಟಕೀಯ ಜನರಿಂದ ಪರದೆ ಎಳೆದು
ಅಹಂ,ಸ್ವಾರ್ಥದಲಿ ಮನವ ಮುಳುಗಿಸಿ
ಕೆಡಕುಗಾರರ, ದ್ರೋಹಿಗಳ ಅರಿದೆ ಹಿಂಬಾಲಿಸಿ
ಮರೆಹಿಂದಿನ ಒಳಿತು ಮನವ ಮರೆಮಾಚುತ್ತಿರುವೆಯಲ್ಲ

ಅನ್ಯಾಯ, ಮೋಸ,ಸ್ವಾರ್ಥ, ಅಹಂ
ಕೆಡಕು,ದ್ರೋಹ,ಹಗೆ ಹತ್ತುರಿಯುತ್ತಿದೆ
ಜಗತ್ತೇ ಬೆರಗಾಗುವಂತಹ ಮೋಸದ ಜಾಲದಲಿ
ಮನಸ್ಸಾಕ್ಷಿಯನ್ನೇ ಕಗ್ಗತ್ತಲೆಯಲಿ ದೂಡಿ ಮೆರೆಯುತ್ತಿರುವೆಯಲ್ಲ

ಅದೆಂದರಿಯುವುದೋ ಮನದಾಳದ ಒಳಿತಿನ ಸತ್ವವು
ವಿಜ್ರಂಭಿಸುವುದೆಂತೋ ದ್ರೋಹಿಗಳ ರುಂಡವನು ಸಂಹರಿಸಿ
ಮುಂದಾಗುವುದುಂಟು ಕಟುಕ,ಸ್ವಾರ್ಥಿಗಳ ಸಂಹಾರ
ಇದನಂಬಿ ತಾಳ್ಮೆಯಿಂದಿರುವೆನಯ್ಯ ನಿನ್ನ ಮನದಾಳದಲ್ಲಿ ಸಹೋದರಾ .......

- Shakuntala Shakuntala

27 Jun 2022, 11:50 am

ಅಣ್ಣ_ತಂಗಿ

ನನಗಿರುವ ಹೆಮ್ಮೆ
ನನ್ನ ಹುಟ್ಟಿನ ನಂತರ
ನಿನ್ನ ಹೆಸರಿಗೆ ಗರಿ ಏರಿದ್ದು,
ನಿನ್ನ ಈ ಪ್ರೀತಿಯ
ಆಸರೆಯಲ್ಲಿ ನಾ ಬದುಕುತ್ತಿದ್ದು,
ನಾನಿನ್ನು ಚಿಕ್ಕವಳು ಅರಿಯೇನು
ನಿನ್ನ ಜೀವನದ ಬೇಗೆಯಲ್ಲಿ ಬೇದದ್ದು;
ಕ್ಷಮೆ ಇರಲಿ ನನ್ನ ತುಂತಾಟದಲ್ಲಿ ನಿನ್ನ ಕಾಡಿದ್ದು'
ನೀನೇ ನನ್ನ ಜೀವನದ ಆದರ್ಶ ನಾಯಕನಾಗಿ
ಕಂಡದ್ದು,
ಬೇರೆ ಏನು ಬೇಡ ಈ ಪ್ರೀತಿಯ ಹೊರತು ನಾ
ನಿನ್ನಿಂದ ಬಯಸಿದ್ದು,
ಇರಲಿ ಚಿರಕಾಲ ಈ ನನ್ನ ನಿನ್ನ ಅನುಬಂಧ ,
ಇರುವುದೊಂದೇ ಆಸೆ ನಾವು ತೀರಿದರು
ನಮ್ಮ ಸಂಬಂಧ ತೀರದಿರಲಿ ಎಂದೆಂದೂ.....

bhai**Behan

- Laxmi Dabbanavar

20 Jun 2022, 11:46 am

ಜಾತ್ರೆ

ಜಾತ್ರೆಯೂ ಬಂದಿತು ಜಾತ್ರೆಯೂ ಬಂದಿತು ವರುಷಕೆ ಒಮ್ಮೆ ಬರುವ ಜಾತ್ರೆಯೂ ಬಂದಿತು

ದೇವರ ಗುಡಿಯ ಗೋಪುರ ಬಣ್ಣ ಬಣ್ಣದಿಂದ ಕೂಡಿತ್ತು ಮನೆ ಮನೆಯೂ ನೆಂಟರ ಮನೆಯಿಂದ ಕೂಡಿತ್ತು

ದೇವರ ಗುಡಿಯ ಗೋಪುರದ ಒಳಗೆ ಬಣ್ಣ ಬಣ್ಣದ ರಂಗೋಲಿ ಹೂವಿನಿಂದ ಅಲಂಕಾರ ಕೂಡಿತ್ತು

ದೇವರ ಮುಖದಲ್ಲಿ ಮಂದಹಾಸ ಮೂಡಿದೆ ದೇವರ ತೇರು ಎಳೆಯಲು ಭಕ್ತ ಗಣ ತಾನು ಮುಂದು ನೀ ಮುಂದು ಎಳೆಯುತ್ತಿದ್ದರು

- Tejesh M

18 Jun 2022, 08:40 am

ಅವನ‌ ಪ್ರೀತಿ

ಅವನ ಪ್ರೀತಿ ಸೋಕಿ
ಕಲ್ಲು ಕರಗಿತು
ಹೂವು ಅರಳಿತು
ಎದೆಯೊಳಗೆ

ಪ್ರೇಮ ಧಾರೆ ಹರಿದು
ಕಂಬನಿಯೂ ನಕ್ಕಿತು
ಮಿಂಚು ಮಿಂಚಿತು
ಕಣ್ಣೊಳಗೆ

ಪ್ರೀತಿ ಬೀರುವ ನೋಟಕೆ
ನೋವು ನಂದಿತು
ನಗುವು ತುಂಬಿತು
ಅಧರದೊಳೊಗೆ

ನುಡಿವ ನುಡಿಗೆ
ಮೌನ ದಣಿಯಿತು
ಮಾತು ಹುಟ್ಟಿತು
ಮನದೊಳಗೆ

ಮುತ್ತಿನ ಮಳೆಹನಿದು
ಚಿಂತೆ ಕಂಪಿಸಿತು
ನಾಚಿಕೆ ಹರಿಯಿತು
ಅಧರದಂಚಿಗೆ

ಕಿರು ಬೆರಳ ಹಿಡಿಯಲು
ಭವ ಭಯ ಮರೆಯಿತು
ಜಗವೇ ಹಿಡಿಯಾಯಿತು
ಕೈಯೊಳಗೆ

- ಶ್ರೀಕಾವ್ಯ

17 Jun 2022, 08:21 pm

#Nvgh_09

ಇದೇ ನಾನು ನಿಮ್ಮೊಟ್ಟಿಗೆ ಕಳೆಯುತ್ತಿರುವ ಕೊನೆ ಕ್ಷಣ;
ಮುಂದೆ ಸಿಗುವಿರಾ ಎಂದೂ ಯೋಚಿಸಿದಾಗ ಅಸಮಾಧಾನ ಮನ,
ಏಕೆ ಈ ಅಳು ಎಂದು ಕೇಳಿದಾಗ ಕಣ್ಣಲ್ಲಿ ಧೂಳು ಬಿದ್ದಿರುವ ಸುಳ್ಳಿನ ಗಾನ
ಕೊನೆ ಉಸಿರಿರೋವರೆಗೂ ನಿಮ್ಮನ್ನೆಂದು ಮರೆಯದ ಈ ನನ್ನ ಮನ

last night speak....

- Laxmi Dabbanavar

17 Jun 2022, 07:51 pm

ಹೇಳಲಾಗದ ಮಾತು

ಹೇಳಲಾಗದ ನೂರು ಮಾತು
ಎದೆಯಾಳದಲ್ಲಿ ಹೂತು
ಕಣ್ಣಂಚಿನಲಿ ಇಣುಕಿದ ನೀರಿಗಂತು
ಸಾವಿನ ಮನೆಯ ದಾರಿಯಿತ್ತು

ತುಟಿಯ ತುಂಬ ನಗುವ ಹೊತ್ತು
ಬಾಯ್ನುಡಿದು ಜಾರಿತು ಮಾತು ಮುತ್ತು
ಅನುಭವಿಸಿದವರಿಗೆ ಗೊತ್ತು
ಮನದೊಳಗೆ ನೋವು ತೋರುವ ಗತ್ತು

- ಶ್ರೀಕಾವ್ಯ

17 Jun 2022, 07:31 pm

ಅಮ್ಮ

ಅಮ್ಮ ಎಂಬ ಎರಡಕ್ಷರದ ಪದವು ಲೋಕವೆಲ್ಲ ಹಬ್ಬಿದೆ ಅಮ್ಮ ಎಂದರೆ ಅ-ಎಂದರೆ ಅಮ್ಮ ಮ-ಎಂದರೆ ಮಕ್ಕಳು ಅ ಎಂಬ ಅಕ್ಷರ ಮಕ್ಕಳ ಬಾಯಲ್ಲಿ ಬಂದರೆ ಅಮ್ಮನ ಕರುಳು ಚುರುಕ್ ಎನ್ನುತ್ತದೆ ಅದು ಮ ಅನ್ನು ಬಯಸುತ್ತದೆ ಅಂದರೆ ಮಕ್ಕಳನ್ನು ಬಯಸುತ್ತದೆ.




- Tejesh M

16 Jun 2022, 08:18 pm

ನನ್ನವಳು

ಹೇ ಗೆಳತಿಯೇ
ನಾ ಕಂಡಾಗ ಮುಗಳ್ನಗೆಯ ಚಲ್ಲತಿಯೇ
ನಿನ್ನ ಮುಖ ಅಂಬುಜ ದೊಳಗೊಂದು ಬಿಂದು
ಆ ಬಿಂದು ಏಳು- ಏಳು ಜನ್ಮಕ್ಕೂ ಆಗಿರಲಿ ನಂದು.....!
ನಿನ್ನ ನೊಟವು ಅಮೃತವ ಉಣಬಡಿಸಿದೆ!
ಕಾಲ್ಗೆಜ್ಜಯ ಸದ್ದಿಗೆ ಮನ ಉಧೋ ಎಂದು ನಮಿಸಿದ

- ಸಿದ್ದು ನಡುವಲಮನಿ

14 Jun 2022, 04:08 pm