Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನ್ನಡಿ ಹೇಳು ಸತ್ಯ


ಕನ್ನಡಿ ಹೇಳಿದ ಸತ್ಯ
ಮನದ ಕನಸ್ಸಿನ ಸತ್ಯ
ಮುನ್ನುಡಿ
ನುಡಿಯಿತು ಹೃದಯದ ಸತ್ಯ
ಕನ್ನಡಿ
ಮನದ ಮಾತುಗಳು
ಮೌನವೇ ಸತ್ಯ
ಮುತ್ತಿನಂತದೊಂದು
ಹಂಬಲ ನುಡಿ ಸತ್ಯ
ಕನ್ನಡಿ ತೋರುವ ದೇಹದ
ಸೌಂದರ್ಯಸತ್ಯ
ಕನ್ನಡಿಯ ತನುವಿನದು
ಮರಳಾಗಿಸ ಬಿಂಬವೇ ಸತ್ಯ
ಮನವೇ ಮರುಳಾಗದಿರು
ಮನವೇ ಪ್ರತಿಬಿಂಬದ ಸತ್ಯ
ಸೊಗಸಿಲ್ಲದ ಸೊಲಿಸಿದ
ಕನ್ನಡಿಯ ಸತ್ಯ ಹೊಳಪಿದೆ
ಉಸಿರಿನ ಸತ್ಯ.

- mallikarjun sonnad

11 May 2022, 10:18 pm

ನಿನ್ನ ನೀ ಮರೆತರೇನು

ನಿನ್ನ ನೀನು ಅರಿತುಕೋ
ನಿನ್ನ ಹೃದಯಕ್ಕೆ ನೀನೆ ಮನದಟ್ಟು ಮಾಡಿ ಕೋ
ನನ್ನ ಮನಕ್ಕೆ ನೀನೆ ಲಗ್ಗೆ ಹಾಕಲು ಅರಿತು ಕೋ

ನೀ ನನ್ನ ಒಲವಿಗೆ ಪ್ರೀತಿ ಕೊಡಲು ಅರಿತು ಕೋ
ನೀ ನನಗೆ ಜೀವ ಪ್ರೇಮ ಕೊಡಲು ಅರಿತು ಕೋ

ನಿನ್ನ ಪ್ರೇಮದ ಕನಸು ಮನಸು ಅರಿತು ಕೋ
ಒಳಗಿನ ಪ್ರೀತಿಯ ಮನಕ್ಕೆ ಮಿಡಿತ ಅರಿತು ಕೋ

ನಿನ್ನ ಹಸಿವಿಗೆ ಉಸಿರಿಗೆ ತಲೆಬಾಗಲು ಅರಿತು ಕೋ
ನೋವಿಗೆ ಜೀವ ಹಿಂಡಿರುವುದಕ್ಕೆ ಅರಿತು ಕೋ

ಜಗದ ಬೆಳಕು ತೋರಲು ನಿನ್ನ ನೀ ಅರಿತು ಕೋ
ನಿನಗಾಗಿ ಧರೆಯ ಒಡಲಿಗೆ ಮೌನವೇಕೆ ಅರಿತು ಕೋ

ಜೀವಕ್ಕೆ ಉಸಿರಿದೆ ಜೀವಕ್ಕೆಬದುಕಿದೆ ಭರವಸೆಯಿದೆ ಪ್ರೀತಿ ಪ್ರೇಮದ ಅರಿವಿದೆ ಮಾತನೊಳಗೆ ಅರಿತು ಕೋ

- mallikarjun sonnad

11 May 2022, 10:16 pm

ಕವಿತೆ ನನ್ನ ಮೌನ

ಮೌನ ಕವಿತೆ
ಮೌನ ನನ್ನ ಮನದ ಪ್ರೀತಿ
ಮಾತು ಪದಗಳ ಹೃದಯ
ತುಂಬುವ ಕವಿತೆ ಮೌನವೇ?
ಮೌನದ ಪದಗಳೇ ಇಲ್ಲದ
ಮನದೊಳಗಿನ ಪ್ರೀತಿ
ಮುಗಿಯುವುದಿಲ್ಲ
ಮನಸ್ಸು ಇರುವುದಿಲ್ಲ
ಕವಿತೆಯ ಸಾಲುಗಳೊಳಗೆ
ಅರ್ಥ ಒಂದಂತೂ ಪ್ರೀತಿ
ಸತ್ಯದೊಳಗೆ ಅರ್ಥಪೂರ್ಣ
ಮೌನ ಪ್ರೀತಿ ಕವಿತೆ ಮೌನದಲ್ಲೇ
ಹುಟ್ಟುವ ಉಸಿರಿನ ತನಕ
ಮೌನದ ಹಂಬಲವೇ ಪ್ರೀತಿ
ಕವಿತೆಗಳೇ ಕನಸಿನ
ಮಾತಿಲ್ಲದ ಮೌನ

- mallikarjun sonnad

11 May 2022, 10:15 pm

ಚುಟುಕು ಪುಟಗಳು

#ಚುಟುಕುಗಳು
#ದೀಪ
ಪ್ರೀತಿ ದೀಪದ ಬೆಳಕು
ದ್ವೇಷ ಬೆಂಕಿಯ ಜ್ವಾಲೆ
ಭುಗಿಲೆದ್ದು ಸುಟ್ಟು
ಬೂದಿಯಾಗಿರಲಿ
#ಬೆಳಕು
ಬೆಳಗಲು ಪ್ರೀತಿ ದೀಪ
ಅಸೂಯೆ ಸುಡುವ ಬೆಂಕಿ
ಬೆಳಗುವ ಹೊತ್ತಿನಲಿ
#ಪ್ರೀತಿ
ಪ್ರೀತಿಗೆ ನಿನ್ನ ಬೆಳಕು
ಅರಿವು ನಿ‌ನ್ನ ದಾರಿಗಿರಲಿ
ಮುಳ್ಳಾಗದಿರಲಿ
#ದಾರಿ
ಮುಸುಕಿನ ದಾರಿ ನಿನ್ನೆದೆಯಲಿ
ಹಾಳಾಗಿದೆ ದಾರಿ ನಿನ್ನೆದೆ ಜೀವನ
ಮರುಗಬಾರದೆಂದು
#ಬೆಂಕಿ
ನಾನು ಬೆಂಕಿ ನೀನು ದೀಪ
ನಿನ್ನ ಬಾಳ ದೀಪ ಬೆಳಗಲು
ಬೆಂಕಿಯಾದೆ
#ಗಾಳಿ
ಗಾಳಿ ಬಿರುಗಾಳಿಯಲಿ
ಬದುಕು ಸುಡುಗಾಡಿನಲಿ
ಹುಟ್ಟು ಸಾವಿನಲಿ
#ಬೆಲ್ಲ
ಬೆಲ್ಲದಂತೆ ಕಹಿಯಾಗಿ
ಜೀವನವೇ ಕಷ್ಟಕ್ಕೆ ನೋವಿದೆ
ಕಣ್ಣೀರಿನ ಒಡಲಿದೆ
@ಸೊನ್ನದ

- mallikarjun sonnad

11 May 2022, 10:14 pm

ನನ್ನ ಜೀವ ನನ್ನ ಅಮ್ಮ

ಜಗತ್ತಿನಲ್ಲಿ ತನ್ನ ಮಕ್ಕಳನ್ನು ಎಲ್ಲರಿಗಿಂತ ಹೆಚ್ಚು ಪ್ರೀತಿಸುವ ತ್ಯಾಗಮಯಿ ಅಮ್ಮಂದಿರಿಗೆ ಇಂದು ಶುಭಾಶಯ ಹೇಳುವ ಸುದಿನ
ತಾಯಿ ಎನ್ನುವ ಪದಕ್ಕೆ ಇರುವ ಗೌರವ ಬೆಲೆ ಮತ್ಯಾವ ಪದಕ್ಕೂ ಇರದು. ನಮ್ಮ ಜೀವನ ಆಕೆ ಕೊಟ್ಟ ಭಿಕ್ಷೆ. ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರಬಹುದು, ಆದರೆ ಅಮ್ಮಂದಿರು ಇರಲ್ಲ ಎಂಬ ಮಾತಿನಂತೆ ಮಮತೆ, ತ್ಯಾಗ, ಕರುಣೆಯ ಪ್ರತಿರೂಪ ತಾಯಿ
ಈ ದಿನದ ಅಂಗವಾಗಿ ತಾಯಂದಿರಿಗೆ ಗೌರವ ಸಲ್ಲಿಸಿರಿ ನೀವೂ ನಿಮ್ಮ ತಾಯಿಗೆ ಋಣದ ಭಾರವೇ ಆಕೆಗೊಂದು ಗೌರವ ಸಲ್ಲಿಸಿ.ಅಮ್ಮ ಎನ್ನುವ ಪದದಲ್ಲಿ ಏನೋ ಒಂದು ಅದ್ಬುತ
ಅಮ್ಮ ನೀನು ನನ್ನ ಅಮ್ಮ

- mallikarjun sonnad

11 May 2022, 10:09 pm

ನನ್ನ ಅವ್ವ


ನನ್ನವ್ವಎಂದರೆ ಬದುಕು
ನೀಡಿದ ದೇವತೆ
ಕೈ ಹಿಡಿದು ಮುನ್ನಡೆಸಿದ
ಮಹಾಮಾತೆ
ಪ್ರತಿಯೊಬ್ಬರ ಬಾಳಿನಲ್ಲೂ
ಅಮ್ಮನಿಗೆ ವಿಶೇಷ ಸ್ಥಾನ ಇದೆ
ಪ್ರತಿಯೊಬ್ಬರ ಅಭಿವೃದ್ಧಿಯ
ಹಿಂದೆ ಅಮ್ಮನ ಪಾತ್ರ ಬಹಳ
ಹಿರಿದು ಅಮ್ಮ ಎಂದರೆ ನಿಸ್ವಾರ್ಥ
ಪ್ರೀತಿಯ ಸಂಕೇತ
ಮಕ್ಕಳ ಖುಷಿಯಲ್ಲಿಯೇ
ತನ್ನ ಖುಷಿಯನ್ನು ಕಾಣುವವರು
ಅಮ್ಮ ತನ್ನ ಮಕ್ಕಳಿಗಾಗಿ
ಎಂತಹ ಅಪಾಯವನ್ನು
ಬೇಕಾದರೂ ಎದುರಿಸಲು
ಯಾವ ತ್ಯಾಗಕ್ಕೂ ಅಮ್ಮ
ಸಿದ್ಧರಿರುತ್ತಾರೆ ಎಂಬುದು ಸತ್ಯ
ಪೂಜನೀಯ ಸ್ಥಾನದಲ್ಲಿರುವ
ಅಮ್ಮನನ್ನು ಎಷ್ಟು ಹೊಗಳಿದರೂ
ಅವರ ತ್ಯಾಗಮಮತೆಗೆ ಎಷ್ಟು ಕೃತಜ್ಞತೆಯ ಋಣ ತೀರದು@ಸೊನ್ನದ

- mallikarjun sonnad

11 May 2022, 10:08 pm

ಅಮ್ಮ ನೀನೇ ಜಗವು

ಆಮ್ಮನೆಂಬ ಅದ್ಬುತ
"ವಿಶ್ವಕ್ಕೆ ನೀವು ಒಬ್ಬ ವ್ಯಕ್ತಿ ಮಾತ್ರ"
ಆದರೆ ಒಬ್ಬರು ವ್ಯಕ್ತಿಗೆ ಮಾತ್ರ ನೀವೇ
ಇಡೀ ವಿಶ್ವ ಅದೇ ತಾಯಿ"
ಅಮ್ಮನ ಮಹತ್ವವನ್ನು ಅರಿಯಲು ಈ ಒಂದು ಮಾತುಸಾಕು
ಮಗು ಹುಟ್ಟುವ ಸಂದರ್ಭ ಅಮೃತಘಳಿಗೆ ಎನ್ನುತ್ತೇವೆ ತಾಯಿಗೆ ಅದು ಅವಿಸ್ಮರಣೀಯ ಕ್ಷಣ ಜನ್ಮ ನೀಡಿ ಮರುಜನ್ಮ ಪಡೆಯುವ ನಿಸ್ವಾರ್ಥ ಹೃದಯಕ್ಕೆ ಋಣ ಮಾತ್ರನಮ್ಮದು ನಮ್ಮನ್ನೆಲ್ಲ ಕಣ್ಣ ರೆಪ್ಪೆಯಂತೆ ಸಲಹಿ ಹೃದಯದಲ್ಲಿ ಬೆಚ್ಚಗೆ ಉಸಿರು ಇರುವತನಕ ಕಾಳಜಿ ಮಾಡುವ ಬರೀ ನಿಷ್ಕಲ್ಮಶ ಪ್ರೀತಿಯನ್ನೇ ಧಾರೆ ಯೆರೆಯುವ ಕರುಣಾಮೂರ್ತಿ ಅಮ್ಮ ಮಾತೃ ಹೃದಯವೇ ಅಂಥದ್ದು ಎಲ್ಲ ಕಡೆಯೂ ಪ್ರಕೃತಿ ತಾಯಿ ಮಡಿಲಿನಂತೆ@ಸೊನ್ನದ
#ಅಹಸ್ತ್ಯ @ದೇವಿಸುಮಲಾ

- mallikarjun sonnad

11 May 2022, 10:05 pm

ಅಕ್ಷಯ ರೈತ

ಬೆಳೆಸಿದಂತೆ ಬೆಳೆಯುವ ಅಕ್ಷಯ ಪಾತ್ರೆ ನಮ್ಮರೈತ"
"ದೇಶದ ಬೆನ್ನೆಲುಬು ನಮ್ಮ ರೈತ "
"ಮನುಜ ಜೀವಕಿಷ್ಟು ಅನ್ನ ನೀಡುವ ಅನ್ನದಾತ ನಮ್ಮ ರೈತ" "ನಮ್ಮ ರೈತನೇ ಕಂಗಾಲಾದರೆ ದೇಶಕ್ಕೆ ಕಂಟಕ ಗಂಡಾಂತರ ಅಧೋಗತಿ " "ರೈತ ನಕ್ಕರೆ ದೇಶ ನಗುವುದು" ರೈತನ ಕಣ್ಣೀರು ದೇಶಕ್ಕೆ ಬಹುದೊಡ್ಡ ಶಾಪ" ರೈತ ಮುನಿದರೆ ಸರಕಾರವೇ ದಿಕ್ಕು ಪಾಲು "ಇನ್ನು ರೈತರಿಗೆ ಬೆಳೆ ವಿಮೆ ಸಿಕ್ಕದಿದ್ದರೆ ವಿಷಾದನೀಯ. ಸರಿಯಾದ ಸಮಯಕ್ಕೆ ವಿಮೆ ನೀಡುವುದಿಲ್ಲ ಎಂದ ಮೇಲೆ ವಿಮೆ ಮಾಡಿಸುವುದು ಏತಕ್ಕೆ? ಬೆಳೆ ನಷ್ಟ ಅನುಭವಿಸಿದ ರೈತರ ಕಥೆಯೇನು? ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ಬೆಂಬಲವಾಗಿ ನಿಲ್ಲಬೇಕಿದೆ ಅಷ್ಟೆ

- mallikarjun sonnad

11 May 2022, 10:04 pm

ಸತ್ಯದ ದಾರಿ

ಸತ್ತಮೇಲಿನ ಜೀವನ
ಹೇಗಿರುತ್ತೋ ಗೊತ್ತಿಲ್ಲ

ಅದರೆ ಎಲ್ಲರೂ
ನಂಬಿಕೊಂಡಿರುವ ಸತ್ಯ

ಸತ್ಯ ದಾರಿ ಕಾಣವುದಿಲ್ಲ
ಸುಳ್ಳಿನ ತೆರೆ ಮರೆಯಲ್ಲಿದೆ

ಸ್ವರ್ಗ ನರಕದ ಕಲ್ಪನೆ
ನಿನಗೆ ನನಗೆ ಕನಸ್ಸಿದೆ

ಸುಖದ ಸೂರೆ ಗೊಂಡಾದ
ನನ್ನೊಡಲಲ್ಲಿ ಗಂಡಾಂತರ

ಕರ್ತವ್ಯ ಮಗಿಯಲಿಲ್ಲ
ನಿನ್ಮ ಲಾಲಿಸಿ ನನ್ನ ಪಾಲಿಸಿ

ನಿನ್ನಾಸೆ ಪೂರೈಸಿಕೊಳ್ಳಲು
ಪ್ರೀತಿ ಮತ್ತೇ ನೀ ಬರ್ರೀಯಾ

ಇವಿಷ್ಟೇ ಅಲ್ಲ ಅದೆಷ್ಟೋ ಹೆಮ್ಮೆ
ನೀನಿಷ್ಟೋ ಉಳಿಸಿಕೊಳ್ಳುತ್ತಿಯಾ

ಕಾಳಜಿ ಕಡಿಮೆಯಾಗಿದೆ ನನಗಾಗಿ
ಬದಲಿ ಜೀವಕ್ಕೆ ಹೆಚ್ಚು ಕಾಳಜಿ ನಿನಗಾಗಿ

ಸ್ವರ್ಗ ಸೂರಗಿದೆ
ನರಕ ಮರುಗಿದೆ

ನಿನಗಾಗಿ
ನೀನೇ

- mallikarjun sonnad

11 May 2022, 10:02 pm

ಬಾಳ ದಾರಿಯಲಿ

ಬಾಳ ದಾರಿಯಲಿ
ಅಗಲಿಕೆ ಸಹಿಸದ ಈ ಜೀವ
ಬಿಟ್ಟಿರದ ನನ್ನ ಬಾಳ ದಾರಿಯಲಿ
ಪ್ರೀತಿಯ ಕೈತುತ್ತು ಕೊಟ್ವೋಳೆ
ಮರೆಯದು ನನ್ನ ಈ ಜೀವ
ಅವಳಿಲ್ಲದೆ ಹೋದರೆ ದುಃಖ
ಉಮ್ಮಳಿಸಿ ಬರುವುದು
ಕಾಡುವಳು ಕಾಡಿಸುವಳು
ಈ ನನ್ನ ಬಾಳ ಹಾದಿಯಲಿ
ಬಿಡಲಾರದೆ ಇರಲಾರದೆ
ಕಣ್ಣುಂಬ ನೀರು ತರುವಲ್ಲಿ
ಮನವ ತುಂಬಿಸಿ ಬಿಡುವಳು
ನನಗಾಗಿ ಬಾಳ ದಾರಿಯಲಿ
ಮನದಲ್ಲೇನೋ ಹೇಳತೀರದ
ಕಸಿವಿಸಿ ಹಾದಿ ಬೀದಿಯಲಿ
ಬಾಳುವದಾರಿಯಲಿ ಕನಸು
ಮನಸು ಕಾಣುತ್ತಾ ಮನದ
ಇಚ್ಛೆಯಂತೆ ಮನಸ್ಸಿಗೆ ಬಂದಂತೆ
ಸಾಗುತಲಿ ಕಣ್ಣುಬಿಟ್ಟು
ಮನ ಮನವ
ಬಾಳ ಪಗಡೆಯ ಆಟ
ಹುಡುಗಾಟದ ಬಾಳಿಗೆ
ತಪ್ಪಿದ ಬಾಳ ದಾರಿಯಲಿ

- mallikarjun sonnad

11 May 2022, 10:01 pm