ಆ ದಿನಗಳ ಪ್ರತಿಕ್ಷಣ
ಭವಿಷ್ಯ ದೆಡೆಗೆ
ಆ ದಿನಗಳು
ತೆರೆದ ಪುಸ್ತಕದಂತೆ
ಒಂದಿಲ್ಲ
ಒಂದು ಆಕ್ಷಣಗಳು
ಕಾಡದೆ ಇರದು
ಕೈಯಲ್ಲಿದೆ
ಕಾಣದ ಲೋಕ
ತಿಳಿರುಳಿನ ಮನುಜ
ಕೆಟ್ಟಗಳಿಗೆ
ಒಳ್ಳೇಯತನದ
ಕಳೆದು ಹೊಸೆದು
ಮುದುಡಿ
ಬಾಡಿದ ಕರಗದ
ಮರುಗಿದ
ಮರೆಯದ ಕನಸ್ಸಿನ
ಭಾವ ಬುತ್ತಿಯ
ಆ ದಿನಗಳೊಳಗೆ
ಉಸಿರುವ ತನಕ
ಅಳಿಸಲಾರದು
ಆ ಕ್ಷಣ ಪ್ರತಿಕ್ಷಣಕ್ಕೂ
ಅರಿವಿದ್ದರೆ
ಮರೆದಲಾರದ
ಅನುಭವಕ್ಕೆ ಜನ್ಮ ಸಾರ್ಥಕ
ಇಲ್ಕದ ಕದ್ದ ಕಳ್ಳಗತ್ತಿ
ಕೊಳಕಿನ ಮರೆಯದೆ
ಕೊಳತು ಹೋಗು
ಜೀವಕ್ಕಿಷ್ಡು ಆ ದಿನಗಳು
ಪ್ರತಿ ಕ್ಷಣ ಕೋರೆಯುವ
ಜೀವ ಹಿಂಡುವ
ಮುಪ್ಪುನಲ್ಲಿ ಕೊಂದು
ಹಾಕುವುದೇ
ಆ ಕ್ಷಣ ಪ್ರತಿ ಕ್ಷಣ
ಭಾವ ತುಂಬಿದ
ನೆನಪುಗಳು
ನನ್ನೆದೆಯ
ಭಾವದಿ ಒಲವು
ತುಂಬಿರಲು
ನಿನ್ನಿಂದಲೇ
ನೆನಪುಗಳು
ಪ್ರೀತಿ ಗಾಗಿ
ನಿನ್ನ ನನ್ನ
ಕನಸಿನ ಭಾವ
ಬಿಂಬಕ್ಕೆ
ಭಾವ
ತುಂಬಲು
ನೆನಪಗಳಿವೆ
ಪ್ರೀತಿಯ
ಭಾವಕ್ಕೆ
ಮನಸ್ಸು
ತುಂಬಲು
ಎಂದೂ
ಅಳಿಸಲಾಗದ
ನೆನಪುಗಳಿವೆ
ಪ್ರೀತಿಗೆ
ಕನಸುಗಳಿವೆ
ಹಂಬಲಿಸುವ
ಬದುಕು
ಎಷ್ಟು
ಅಮೋಘ
ಅಷ್ಟೇ ಸುಂದರ
ನೆನಪಿನ
ಭಾವ ಬಿಂದು
ನಿನ್ನೊಂದಿಗೆ
ಜನ್ಮದೊಳಗಿನ
ಪ್ರೀತಿ ನೆನಪಿನ
ಉಸಿರು ನಿಲ್ಲವ
ತನಕ
ನೆನಪುಗಳಿವೆ
ಮನಸು ಹೇಳ ಬಯಸಿದೆ ಕಾಲಿ ಪುಟಗಳ ಸಂತೆ
ಕನಸು ಕೇಳ ಹೊರಟಿದೆ ಹೊಸ ಜೀವನದ ಚಿಂತೆ
ಹೃದಯ ಕಣ್ಣಿಗೆ ತಂಪನೆರೆಯುವ ಹಸಿರಿನಂತೆ
ಚಿಂತೆಯೊಳು ಕಳೆದಿಹೆವು ನಿತ್ಯ ಸಂಸಾರದ ಚಿಂತೆ
ಎಲ್ಲರಿಗೂ ಅವರ ಬಾಳೊಂದೆ ಸುಂದರ ಗೂಡಿನಂತೆ
ಪಾತ್ರ ಮುಗಿದ ಮೇಲೆ ಕಾಣುವರೆಲ್ಲ ಅಗ್ನಿ ಸ್ಪರ್ಶದ ಚಿತೆ
ಕಷ್ಟದ ಹಿಂದೆ,ಶ್ರಮವಿದೆ.
ಮುಗಿಲ ಹಿಂದೆ,ಬೆಳಕಿನ ವರ್ಷವಿದೆ
ಗೆಲುವಿನ ಹಿಂದೆ,ಸೋತಿರವ ಕನಸುಗಳಿವೆ.
ದಾರಿಯ ಹಿಂದೆ,ನೆನಪಿನ ಅನುಭವ ತುಂಬಿದೆ.
ಬಾಳಪಯಣ ಹಿಂದೆ,ಕಾರಣಗಳಿವೆ.
ಬಾಳ ದೋಣಿ ಸಾಗೀಸಲು
ಸಾವಿರ ವಿರೋಧವಿದೆ.
ತಿರಸ್ಕಾರದ ಬಿಡಿಸಲಾಗದ ಒಗಟಿದೆ.
ಮನಸ್ಸು ಬಿಟ್ಟು ಬದುಕಲಾರದೆ,
ನರಳುತಿದೆ.ನನ್ನವರು ಕೂಗಿದೆ
ಕರೆಯುವ ಸಮಯ ಕಾಯುತಿದೆ.
ಪಯಣ ಕಷ್ಟದ ದಾರಿದೆ
ಒಡಹುಟ್ಟಿದವರು ಮನಸ್ಸು
ಒಪ್ಪದ ಕಾರಣ ನನ್ನ ಬಾಳಿಗೊಂದು
ಅಥ೯ ಹುಡುಕಲು ಹೊರಟಿರುವೇ.
ಹೊತ್ತಲ್ಲದ ಹೊತ್ತಲ್ಲು
ನನ್ನದೊಂದು ಕೂಗಿಗಾಗಿ
ಮುಂಬಾಗದ ಹೊಸ್ತಿಲಾಗಿ
ನನ್ನನೇ ಕಾದ ಭವಿಷ್ಯದ ಮನೆ ನೀನು. .
ನಿನ್ನ ಕಣ್ಣೀರ ಕೊಳದಲ್ಲಿ
ಮೈ ತೊಳೆದು ನೋವಿನ ಕೆಂಡದಲ್ಲಿ
ನನ್ನ ಹೊಟ್ಟೆ ತಣ್ಣಗಿರಿಸಿ,
ನಾ ಸಾಗೋ ದಾರಿಗೆಲ್ಲ
ಸಾಲು ಮರವಾಗಿ ನೆರಳಾದೆ ನೀನು.
ನಾನು ನಾನಾಗಿ ಬದುಕುತಿರುವೆ
ನಿನ್ನ ನೋವ ಹೀರಿ ನಾ ನಗುವಾಗಿ.
ಯಾಕೋ ಇಂದು ಕಾಡಿದೆ
ನೀನಿಲ್ಲದ ಹೊತ್ತು ಅತಿಯಾಗಿ. .
ಈ ನಗುವ ಕಾದು ಕರೆಯುವೆ
ಬಾ ಅಮ್ಮ
ನನ್ನ ಜೀವನದಲಿ ಮತ್ತೆ
ಮತ್ತೆ ನೀನೆ ದೇವರಾಗಿ...
ಪ್ರಕೃತಿಯ ಚೆಲ್ಲುವ
ಬೆಳ್ಳನ ಬೆಳದಿಂಗಳು
ಸೌಂದರ್ಯ ಚೆಲುವ
ನಾಚಿಸುವ ಬೆಳದಿಂಗಳ
ಚೆಲುವೇ ಭವಿಷ್ಯದಡೆಗೆ
ಬಾಳು ತುಂಬಲು ಅರಿವಿನ
ಸುಂದರಲತೆಗೆ ಜೊತೆಯಾಗಿ
ಹಂಬಲಿಸುವ ಚೆಂದಿರನ
ಬೆಳಕು ಚೆಲ್ಲುವ ಚೆಲುವೆ
ನಾಚಿಸುವೆ ಚಂದ್ರನ ಬೆಳದಿಂಗಳೆ
ಮನವ ತಣಿಸುವ ಭಾವ ಬೆಸೆದು
ಮಧುಚಂದ್ರನ ಮೊದಲ ಸಲ
ಕಾಣದಂತೆ ಚೆಲುವೆ ಮಂದಹಾಸ
ಚೆಲ್ಲುವ ನೀ ನನ್ನ ಹೃದಯ ಹತ್ತಿರ
ಬರುವ ಚಂದದ ಚೆಲುವೆಯ
ಭಾವ ಬಿಂದು ಚಂದ್ರನೊಳಗಿದೆ.