Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬದುಕಿನಮಾತು

ಬದುಕಿನಮಾತು
ಬದಲಾಗುವ ಮನುಜನೇ
ಜಗದ ನಿಯಮ ಮೀರಲು ಅಸಾಧ್ಯ
ಕಷ್ಟದಲ್ಲಿ ಬಂದು ನಿಂತವರನ್ನು ಎಂದಿಗೂ ಮರೆಯಬೇಡ ಅವರಿಗಿದದ್ದು ನಿನಗಿಲ್ಲ ನಿನಗಿಲ್ಲದು ಅವರಿಗಿಲ್ಲ ಅನ್ನಹಾಕಿ ಹಸಿವು ಸಲುವಿದ ನೀಗಿಸಿದವರನ್ನು ಋಣ ತೀರಿಸಲಾಗದು ನಿನ್ನ ಜನ್ಮಕ್ಕೆ ಅವರೇ ನಿನ್ನ ಬಳಿ ಋಣ ತೀರಿಸಲು ಬಂದು ನಿಂತಿರುವಾಗ ಹದವ ಮೀರಿದ ಮೇಲೆ ಕಾಲಕಸವ ಮಾಡಿ ಪಾಪಿಯಾಗಿ ಸಾಯಬೇಡ ಕಂಡವರನ್ನು ಕಂಡು ಅವರಂತೆ ಕುಣಿಯಬೇಡ ಅಂತರಂಗ ಬಹಿರಂಗ ನಿತ್ಯ ನಮ್ಮ ಬೆನ್ನುಹಿಂದೆ ಇರುವತ್ತವೇ ಅರಿಯದೆ ತಿಳಿಯದೇ ಮೌಢ್ಯತೆಯಿಂದ ಹಾಳಾಗಬೇಡ ನಿನಗಾಗಿ ಬದುಕುವರಿಗಾಗಿ ಬದುಕು ನಿತ್ಯ ಸುಂದರ ಸುಖದ ನೆಲೆ ನಿನ್ನಲ್ಲಿದೆ ಕಳೆದುಕೊಳ್ಳಬೇಡ ಉಳಿಸಿಕೋ.@ಸೊನ್ನದ

- mallikarjun sonnad

29 Apr 2022, 08:58 pm

ಕಿವಿಯಲ್ಲಿ ಸಂಗೀತದ ಮುತ್ತು

ಮೊದಲ ಭಾರೀ ನೀ ನಕ್ಕ ಆ ಗಳಿಗೆ
ಪ್ರತಿನಿತ್ಯವೂ ನೀಡುತ್ತಿದೆ ನನಗೊಂದು ಪ್ರೀತಿಯ ಗುಳಿಗೆ !
ಮೊದಲ ಭಾರೀ ನೀ ನಾಡಿದ ಆ ಮಾತು
ಇಂದಿಗೂ ಪೋಣಿಸಿದಂತಿದಿ ನನ್ನ ಕಿವಿಯಲ್ಲಿ ಸಂಗೀತದ ಮುತ್ತು !
ಮೊದಲ ಬಾರಿ ನೀ ಅತ್ತ ಆ ಕ್ಷಣ
ಇಂದಿಗೂ ಕಲಕುವಂತೆ ಮಾಡಿತು ಈ ಮನ!
ಮೊದಲ ಬಾರಿ ನಿನ್ನ ಮೊಗದಲ್ಲಿ ಕಂಡ ಆ ಮುನಿಸು
ನೆನೆದು ನೆನೆದು ನಗಿಸುವಂತ ಆ ಸೊಗಸ್ಸು!
ಮೊದಲ ನಿನ್ನಲ್ಲಿ ಕಂಡಂತ ಆ ಮೌನ
ಮಾಡಿತು ನನ್ನನ್ನು ಮೌನಿಯ ಆ ಮೌನಕೆ!
ನೀನೆ ನನ್ನ ಮೊದಲ ಕನಸಿನ ಹುಡುಗಿ
ನೀನೆ ನನ್ನ ಕೊನೆಯ ನನಸಿನ ಕನಸು!

- Hanumantharaju G N

29 Apr 2022, 05:21 pm

ಕಣ್ಣೀರಿನ ನೋವಿನ ಕಂಬನಿ

ಜಾರಿದ ಕಂಬನಿ ಪ್ರೀತಿಯ
ಮನಸ್ಸಿನ ನೋವು
ಕನಸ್ಸಿನೊಳಗೆ
ಕಣ್ತುಂಬಿ ಕೊಂಡಿದೆ
ಹಂಬಲಿಸಿ ಕಂಬನಿಯಾಗಿ
ನೋವಿ ನೆನಪಿಂದ
ನೀ ನನಗಾಗಿ ಬಂದೇ
ಜೀವವು ಕರಗಿ ಕೊರಗುವ
ಮುನ್ನ ಬರುವೆ ಜೀವ ಹಿಡಿದು
ಉಸಿರಿಲ್ಲದೆ ಕಾದಿರುವೆ ಬಂದು
ಪ್ರತಿ ಕ್ಷಣ ಮನ ತುಂಬಿಸು
ಮನದ ಮಾತು ಪ್ರೀತಿಯ
ನುಡಿಯ ಸವಿ ಜೇನು ನೀಡು
ನಾಳೆ ನನ್ನದಾದರೆ
ಈ ಜೀವಕ್ಕೆ ನಾಳೆಯು ನನ್ನದೇ
ನಿನ್ನೊಂದಿಗೆ ಕಳೆದ
ಮಧುರ ಕ್ಷಣಗಳ ನೆನೆಯುತ್ತಾ
ನೆನಪುಗಳ ನೆಮ್ಮದಿಯಲ್ಲಿ
ಕಾದು ಕುಳಿತ ಮನಸ್ಸು
ನೀನಿಲ್ಲದೇ ಬದುಕಿನ ಉಸಿರು
ನಿಂತ ಹಾಗೇ ಬದುಕಿದೆ ಕತ್ತಲಲ್ಲಿ
ಬಾಳು ಬೆಳಕಾಗಿಸು
ಜೀವಕಿಷ್ಟು ಋಣದ ಭಾವ
ಕಂಬನಿಯೊಳಗೆ ಹಂಬಲಿಸಿದೆ

- mallikarjun sonnad

29 Apr 2022, 01:11 pm

ಕಂಬನಿಯ ಹಂಬಲ

ಕೆನ್ನೆಜಾರಿದ ಕಂಬನಿ
ಎದ್ದಾಗ ಮನಸ್ಸಿನ ಅಶಾಂತಿ ಕಮ್ಮಿಯಾಗಿತ್ತು
ಚೆನ್ನಾಗಿಯೇ ಹಸಿವಾಗಿತ್ತು ಮನಸ್ಸು ಸತ್ತರೂ ಕನಸ್ಸು ಅತ್ತರೂ ಎಲ್ಲವೂ ಸಾಂಗವಾಗಿ ಸಾಗಿತ್ತು ಅವಳಿಗೆ ಕೆನ್ನೆಯ ಮೇಲೆ ಅರಿವಿನ ಮನಸ್ಸು ಚುಚ್ಚಿ ಚುಚ್ಚಿ ಮುಳ್ಳಿನಂತೆ ತುಟಿಗೆ ಮುರಿದು ತೇಗಿತ್ತು ಕೆಳಗೆ ಬಿದ್ದು ಬಿದ್ದು ದುಬಾರೊಯ ದುನಿಯಾ ಕುಕ್ಕಿತು ಕಂಡವ ಕಂಡು ಕಂಡು ನೆಕ್ಕುತ್ತಾ ಅಡ್ಡ ದಿಡ್ಡ ಬಿಳುತ್ತಲೇ ಮೌನದೊಳಗೆ ಮರಗುತ್ತಿತ್ತು ಇನ್ನೊ ಬಾಕಿ ಉಳಿದಿದ್ದು ಜಾರಿದ ಕಣ್ಣೋರಿನೊಳಗೆ ಕಂಬನಿ ಕಟ್ಟುತ್ತಲೆ ಕಂಗಾಲತನ ಬೆನ್ನುಬಿದ್ದಿತ್ತು ಕೊರಗಿದಿದ್ದು ಮರಗಿದ್ದು ಕೊಳೆತಿಹೋಗಿತ್ತು ಉಳಿದ್ದು ಕಂಬನಿಯ ಧಾರೆ ಸುರಿಯುತ್ತಲಿತ್ತು. @ಸೊನ್ನದ

- mallikarjun sonnad

29 Apr 2022, 01:09 pm

ಕನಸು ಮನಸು

ಕನಸು
ಅಳಿಯೋಕಾಗೊಲ್ಲಾ
ನೆನಪು
ಮರಿಯೋಕಾಗೊಲ್ಲಾ
ಹೇಳಿ ಕೇಳಿ
ಪ್ರೀತಿ ಹುಟ್ಟಲ್ಲಾ
ನಂಬಿಕೆಯನ್ನೊ
ಆಯಸ್ಸು
ಮುಗಿಯಾವರೆಗೂ
ಪ್ರೀತಿ ಗೆ
ಸಾವಿಲ್ಲಾ…
ಯಾರೋ ಹೇಳಿದ್ರು
ಜೀವಕ್ಕೆ ಜೀವಾ ಕೊಡುವ
ಪ್ರೀತಿನಾ
ಸೇರಿ ಅಂತಾ
ಅದಕ್ಕೆ ನಾನು
ನಿಮ್ಮನ್ನು ಆಯ್ಕೆ
ಮಾಡಿಕೊಂಡೆ
ಅದಕ್ಕೆ ಜೀವಾ
ಇರುವವರೆಗೂ ಮರೆಯದೆ
ನಿಮ್ಮ ಪ್ರೀತಿನಾ ಕೊಡುವ ಮುನ್ನ

- mallikarjun sonnad

27 Apr 2022, 10:58 pm

ಮಧುರ ಮೌನವೇ

ಮೌನಕೆ ಸೆರೆಯಾದ
ಮಧುರ ಮಾತುಗಳ
ಅರ್ಥ ನಿನಗೆ ಹೇಳಲಿ
ನಾ ಹೇಗೆ..??
ಎದೆಯಾಳದ
ಬಡಿತದ ಆ ಸುಂದರ
ಭಾವನೆಗಳ ನಿನಗೆ ತಿಳಿಸಲಿ
ನಾ ಹೇಗೆ..??
ಕಣ್ಣುಗಳು ಕಟ್ಟಿದ
ಆ ಕನಸುಗಳ
ಕೋಟೆಯಲಿ
ನಿನ್ನನು ನಿನಗೆ ತೋರಿಸಲಿ
ನಾ ಹೇಗೆ..??
ಮನಸಿನ ನೋವನ್ನು
ನಿನ್ನ ನೆನಪಲ್ಲಿ
ಮರೆಯುತ
ನಗುತ ಮುಂದೆ ಸಾಗಲಿ
ನಾ ಹೇಗೆ..??

- mallikarjun sonnad

27 Apr 2022, 10:53 pm

ಬದುಕು ಸುಂದರ

ಬದುಕು ಸುಂದರ ಉದ್ಯಾನವನದ ಹಾಗೆ. ಇಲ್ಲಿ ವಾತ್ಸಲ್ಯ, ಕರುಣೆ, ಪ್ರೀತಿ, ದಯೆ, ಸಮಾಧಾನ, ಶಾಂತಿ ಮುಂತಾದ ಗಿಡಗಳಿವೆ. ಅದನ್ನು ನಾವು ನೀರು, ಗೊಬ್ಬರ ಹಾಕಿ ಪೋಷಿಸಬೇಕು. ಮನೆ ಸುಂದರವಾಗಿದ್ದರೆ ಸಾಲದು, ಕಾಣದ ಮನಸ್ಸು, ಮಾಡುವ ಯೋಚನೆಗಳು ವಿಶಾಲವಾಗಿರಬೇಕು. ಹಣವಿದ್ದರೆ ಫ‌ಲವಿಲ್ಲ, ಗುಣವಿದ್ದರೆ ಮಾತ್ರ ಪಡೆದ ಜನ್ಮ ಸಾರ್ಥಕ. ಒಪ್ಪೊತ್ತಿಗೆ ಕಷ್ಟ ಪಡುವ ಕೂಲಿಯವನು ಪ್ರೀತಿ ಎಂಬ ಪ್ರಕಾಶದಿಂದ ಬೆಳಗುವ ಜ್ಞಾನ ಹೊಂದಿದ್ದರೆ ಸಾಕು. ಹಣದೊಂದಿಗೆ ಅಂಟಿಕೊಂಡಿರುವ ದುರಂಹಕಾರ ನಮ್ಮನ್ನು ತಾಕದಂತೆ ಓಡಿಸಬೇಕು.


- mallikarjun sonnad

27 Apr 2022, 10:21 pm

ಚೆಲುವೇ ನಿನ್ನ ಮಡಿ

ಜಾಜಿ ಮಲ್ಲಿಗೆಗೆಚೆಲುವೆಯ ಮುಡಿ ಸೇರುವಾಸೆ
ಕೆಂಪು ಗುಲಾಬಿಗೆ ಪ್ರೇಯಸಿಯ ಕೈಸೇರುವ ಆಸೆ
ನವಿಲಿಗೆ ಮುಸಂಜೆಯ ತಂಗಾಳಿಯಲ್ಲಿ,
ಕೋಗಿಲೆ ರಾಗಕ್ಕೆ ಗರಿ ಬಿಚ್ಚಿ ನರ್ತಿಸುವ ಆಸೆ


ಚೋರನಿಗೆ ಇತರರ ಧನ ಧಾನ್ಯದ ಆಸೆ
ಅಧಿಕಾರಿ ಗೇ ದರಿದ್ರ ಲಂಚದ ಆಸೆ
ರಾಜಕಾರಣಿಗೆ ಅದಿಕಾರದ ಜೊತೆಗೆ ಗಂಟ್ಟಿನ ಆಸೆ
ಹಸಿದ ಹೊಟ್ಟೆಗೆ ತುತ್ತು ಅನ್ನದ ಆಸೆ
ಈ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಒಂದು ಒಂದು ಆಸೆ
ಅದರೆ ಆ ಆಸೆಗೆ ಆಸೆ ಈ ನಿರಾಸೆ..
ಹುಟ್ಟಿನ ಜೊತೆಗೆ ಸಿಗುವುದು ಒಂದೇ ಈ ಆಸೆ ಜೊತೆಗೆ ನಿರಾಸೆ...

- mallikarjun sonnad

27 Apr 2022, 10:20 pm

ಅರಿತು ನಡೆ ಸತ್ಯದ ಕಡೆಗೆ

ಸತ್ಯದ ಅರಿವು ನಗು ನಗುತ ನಡೆದುಬಿಡು ನೀನೊಮ್ಮೆ,
ಭೂಮಿಯೆಲ್ಲವ ಸುತ್ತಿಬಿಡು ಇಂದೊಮ್ಮೆ..!

ಇದ್ದಲ್ಲೇ ಇದ್ದು ಸಾಧಿಸುವುದಾದರೂ ಏನು?
ಬಾರನೆಂಬುವ ಹಠವ ಮೆಟ್ಟಿಬಿಡು,

ಅಲೆದುಬಿಡು ನೀನೊಮ್ಮೆ ಅಲೆಮಾರಿಯಂತೆ,
ಅರ್ಥವಾಗುವುದು ಜೀವನದ ಸತ್ಯಾ,
ಅಲೆದ ದಾರಿಯಲಿ ಹರಿದ ಚಪ್ಪಲಿಯಂತೆ...!

ಎಲ್ಲವೂ ಬೇಡದಾದಾಗ,
ಹೊರಟುಬಿಡು ನೀನೊಮ್ಮೆ,
ಪರಿಸರದ ಮಡಿಲಲ್ಲಿ ಮಲಗಿಬಿಡು ನೀನೊಮ್ಮೆ..!!

- mallikarjun sonnad

27 Apr 2022, 10:17 pm

ಭಾವನೆಗಳೇ...ಹೀಗೆ

#ಅಂತರಂಗ
ಹುಟ್ಟುತ್ತವೆ,
ಸಾಯುತ್ತವೆ
ಭಾವನೆಗಳಂತೆ
ಭಾವನೆಗಳು
ಅರಳುತ್ತವೆ
ಕಮರುತ್ತವೆ
ಆಸೆಗಳಂತೆ
ಆಗೊಮ್ಮೊಮ್ಮೆ
ಗಪ್ಪನೆಯ
ಏಕಾಂತ
ನೀರವತೆ
ಆವರಿಸಿದಾಗ
ಮುಸುಕಿನೊಳಗಿನ
ಸೆಖೆಗೆ ಬೇಸತ್ತು
ಮೆತ್ತನೆಯ
ಮಡಿಲನರಸಿ
ನಿನ್ನತ್ತ ನೋಡುತ್ತೇನೆ,
ಕಣ್ಣರಳಿಸುತ್ತೇನೆ,
ಯಾಚಿಸುತ್ತೇನೆ ಗೆಳೆಯಾ

ಏಕೆ ಇಲ್ಲದ ಚಿಂತೆ
ಕೊನೆ ಮುಟ್ಟದ ರಗಳೆ?
ಅನಿಸಿ,
ತೆರೆ ಸರಿಸಲೆಣೆಸುತ್ತೇನೆ
ನಿನಗರ್ಥವಾಗದ
ನನ್ನತನವ
ತೊರೆಯಲೆತ್ನಿಸುತ್ತೇನೆ
ಭೂತದ ಛಾಯೆಯಡಿ,
ಭವಿತದ ಮಾಯೆಯ
ಹೊದರನೆಲ್ಲಾ ಮುದುರಿ,
ನಿನ್ನ
ವರ್ತಮಾನದ ಜತೆಗೆ
ನಡೆಯಲೆತ್ನಿಸುತ್ತೇನೆ
ಆಗ ನೀ
ವಿಚಿತ್ರವಾಗಿ ನೋಡುವೆ
ನಾ ಬೇಸರದಲಿ ನುಡಿವೆ
ಇದೆಲ್ಲ ನಿನಗರ್ಥವಾಗುವುದೇ ಇಲ್ಲಾ

- mallikarjun sonnad

27 Apr 2022, 10:16 pm