Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿನ್ನಿಂದಲೇ ಒಂದು ಪ್ರೀತಿ....

ನಿನ್ನಂದಲೇ ನನ್ನ ಮನದಿಂಗಿತ
ನನ್ನಿಂದಲೇ ನಿನ್ನ ಬದುಕು ಮನದಂಗಳ
ಪ್ರೀತಿಯ ಮನಸ್ಸು ಬೇಕು
ಬದುಕಿಗೆ ಕನಸ್ಸು ಬೇಕು
ಪ್ರತಿ ಮಿಡಿತದ ಮನದೊಳಗೆ
ಹಂಬಲಿಸುವ ಮನವುದೆ
ಪ್ರೀತಿಯ ಪ್ರೇಮದ ಪಲ್ಲಕ್ಕಿ
ಹೃದಯ ತುಂಬಿದ ಅರಮನೆ
ಪ್ರೀತಿಸುವದೊಳಗೆ ಸೇವಕಿಯರು
ಪರಸ್ಪರ ಒಡಲೊಳಗೆ ಸೇವೆ ಮಾಡುವ
ಇಷ್ಟು ನನ್ನೊಳಗೆ ಆಸೆಯ ಪಡುವ ಮನದಿಂಗಿತ
ಗಳಿಸಬೇಕು ಮೆರೆಯಬೇಕು ಕುಣಿಯ ಬೇಕು
ಉರಿಯುವವರ ಕಣ್ಣಿಗೆ ನಾ ಕಾಣಬಾರದು
ಪ್ರೀತಿಗೆ ತುಂಬಾನೆ ಬೆಲೆ ಕಟ್ಟುತ್ತಾ ಕೂಡು
ಪ್ರೀತಿಯ ಬದುಕಿನ ನನ್ನ ಅರಮನೆಗ ನಿನ್ನಿಂದಲೇ @ಸೊನ್ನದ

- mallikarjun sonnad

20 Apr 2022, 06:20 pm

ಮನದಿಂಗಿತ ನಿನ್ನಿಂದಲೇ


ನಿನ್ನಿಂದಲೇ ಮನದಿಂಗಿತ
ನಿನ್ನಿಂದಲೇ ನಾನು ಪ್ರೀತಿಸುವುದನ್ನು ಕಲಿತೆ
ನನ್ನ ಮನದಿಂಗಿತದ ಭಾವದೊಳಗೆ ಪ್ರೀತಿಯ ಗೂಡು ಕಟ್ಟಿದೆ ನನ್ನ ಚೆಲುವೆಗಾಗಿ ಕವನ ಬರೆಯುವುದನ್ನು ಕಲಿತೆ ಪ್ರತಿ ಪದದ ಶಬ್ದದೊಳಗೆ ನಿನ್ನಿಂದಲೇ ಹುಡುಕುತ್ತಾ ಬದುಕಿನೊಳಗೆ ಅರ್ಥಕಂಡೆ ಪ್ರೀತಿಯ ಭಾವ ಚೆಲುವ ಕಂಡೆ ಬೆರಗು ಕಂಡೆ ಬೆಳಕು ಕಂಡೆ
"ನಿನ್ನಿಂದಲೇ ಪ್ರೀತಿಯು ಹರಿಯುವ ಕನಸು ಹಂಬಲದ ನದಿಯಂತೆ ಕನಸಿನ ಭಾವ ಮನದಿಂಗಿತ ಒಲವು ಸದಾ ಜೀವನ್ಮುಖಿ ಯಾಗಿ ನಿನ್ನೊಡನೆ"ಭಾವ ತುಂಬಲು ನಿನ್ನ ಕಲ್ಪನೆಯ ನನ್ನದೇಯ ಒಲವು ನಿನ್ನದೇಯ
ಪ್ರೀತಿಯ ಭಾವ ಮಿಡಿಯುವ ಬದುಕಿನಲ್ಲಿ ನಿನ್ನಿಂದಲೇ ಮನದಿಂಗಿತ @ಸೊನ್ನದ

- mallikarjun sonnad

20 Apr 2022, 11:31 am

ಮನವೇ ನೀ ಮರೆಯದಿರು

ಮರೆಯದಿರು_ಮನವೇ
ಹೃದಯ ತುಂಬಿದ ಒಡಲ ನೋವಿಗೆ
ಮರೆಯದಿರು ನನ್ನ ಬಿಟ್ಟು ದೂರಾಗದಿರು
ಮನವೇ ಪ್ರೀತಿಯ ಸ೦ತೈಕೆಯೇ ಬಾಳತುಂಬಿದ
ಹಂಬಲಕ್ಕಾಗಿ ಕನಸ್ಸು ಮನಸ್ಸಿಗೆ
ಬಾರದೆ ಹೋಗದೆ ಬಂದು ಬಿಡು
ಮರೆಯದೆ ಹೃದಯದಲಿ
ಬಚ್ಚಿಡಲುಭಾವ ಪ್ರೀತಿಗೆ
ಸೊಗಸು ಸೊಬಗಿಗೆ
ಪ್ರೀತಿತುಂಬಿದ ಬೆಳಕಿದೆ
ಮನಕ್ಕೆ ಸಂತಸವಿದೆ
ಇಷ್ಟಾದರೂ
ನೀ ಇರದೆ ಬಾಳು ಪ್ರಣಿತಿಗೆ ಪ್ರೀತಿಗೆ
ನಾ ಸೋತು ಹೋಗುವ ಮುನ್ನ..
ಕನಸು ಕಲ್ಪನೆಗಳ ನಡುವೆ
ನಾ ಬೆಂದು ಹೋಗುವ ಮುನ್ನ..
ಸಾವಿರಾರು ಭಗ್ನ ಪ್ರೇಮಿಗಳಲ್ಲಿ
ನಾನು ಭಗ್ನವಾಗುವ ಮುನ್ನ
ನೀನಿಲ್ಲದೆ ಬರುವ ನಾಳೆಗಳ ನೆನೆದು
ಅತ್ತು ನಿದ್ದೆ ಬರುವ ಮುನ್ನ
ನೀನೊಮ್ಮೆ ಪ್ರೀತಿಸು ಮನವೇ ಬರಬಾರದೇ.
@ಸೊನ್ನದ

- mallikarjun sonnad

20 Apr 2022, 10:56 am

ಉಳಿಕೋ ಕಳೆದುಕೊಳ್ಳಬೇಡ

ಮರೆಯಬೇಡವೋ ಮೂಢನೆ ಮನಸ್ಸು ಹೇಳುತ್ತಿದೆ ನಿಜವೆಂದರೆ ಈ ಅಡ್ಡಾದಿಡ್ಡಿ ಬದುಕಲ್ಲ ಬದುಕನ್ನು ನಿರ್ಮಲಗೊಳಿಸು ಈ ಕಾಲ ಬದುಕಿನ ಯಾವ ಹೊರೆ ನಿನ್ನದಲ್ಲ ನಿನ್ನ ಮನಸ್ಸು ಗಟ್ಟಿಯಾಗಿಸು ಭವಿಷ್ಯವಿದೆ ಬಯಕೆ ಇದೆ ಒಳಿತಿದೆ ಕಾಣದೆ ಕಾಡುತ್ತೀರುವೆ ಎನ್ನುವ ಬರಿದು ಮಾಡಿಕೊಂಡು ಭಂಢ ಬದುಕಿನೊಳಗೆ ಸಿಲುಕ ಕೊರಗ ಬೇಡ ಹೊರೆಯಾಗ ಬೇಡ ಬದುಕಿದಾರಿಗೆ ಒಮ್ಮೆ ಸಿಕ್ಕ ಪ್ರೀತಿಗೆ ಹಳಿಸಲುಮಾಡಲು ಬಿಡಬೇಡ ಕಾಣದೆ ಕಾಡುತ್ತೀರುವೆ ಬದುಕಿನ ಪ್ರೀತಿ ಶಾಶ್ವತ ಬಂಧನ ಉಳಿಸಿಕೊ ಕಳೆದುಕೊಳ್ಳದೆ ಉಸಿರಿನ ಅರ್ಥ ಕಳೆದು ಕೊಳ್ಳಬೇಡ ನಿಭಾಯಿಸಲು ನಿನ್ನ ಗುಣದೋಷವೇಮೇಲು
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

18 Apr 2022, 10:57 pm

ಕಾಣದೆ ಕಾಡುತ್ತಿರುವೆ

ಕಾಣದೆ ಕಾಡುತ್ತಿರುವೆ
ಕಾಣದೆ ತಪ್ಪು ಹೆಜ್ಜೆಗಳ
ನಿನ್ನ ಬಿಟ್ಟು ಬಿಡದೆ ಕಾಡುತ್ತಿರುತ್ತಲಿವೆ

ಎಲ್ಲೂ ಎತ್ತಕಡೆಗೂ ಕಾಣದೆ ಕಾಲಿಡುವ
ಹಾರಿಹೋಗುವ ಮನಸ್ಸಿದೆ ನಿನಗೆ

ಎಲ್ಲೂ ಹುಟ್ಟಿದೆ ತಪ್ಪು ಹೆಜ್ಜೆ ನೀ ಇಟ್ಟ
ಜಾರಿದ ನಿನ್ನ ಹೆಜ್ಜೆ ನೀ ಕಾಯ್ದು ಕೊಳ್ಳಲಲ್ಲವೆ

ಕಾಡುತ್ತಿರುವ ನಿನ್ನ ಹೆಜ್ಜೆ ನಾ ಬದಲಾಯಿಸಲು
ಬದುಕಿನ ನಿರ್ಣಹಿಸಲಾಗಲಿಲ್ಲ ಆಕಾಲ ಕಸದ ಹೆಜ್ಜೆ

ನಿನ್ನ ಜೀವ ನನ್ನ ಜೀವ ನನಗಾಗಿ ನೀ ಎಂದೆ
ಕಾಡುತ್ತಿರುವೆ ನೀ ದಾರಿ ತಪ್ಪಿಸಿ ನುಸುಳಿಕೊಂಡೆ

ತಪ್ಪುಹೆಜ್ಜೆ ಯಾರಿಗೂ ಕಾಣದೆ ಕಾಡುತ್ತಿರುವೆ
ನಿನ್ನ ಇಷ್ಟಕ್ಕೆ ನಿನ್ನ ಮನವು ಎಲ್ಲೆ ಮೀರಿತೋ.
@ಸೊನ್ನದ

- mallikarjun sonnad

18 Apr 2022, 09:32 pm

ಮನದ ಭಾವ

ಬಾಗಿಲು ಬಳಿ ನಿಂತಿದ್ದು
ಎಲ್ಲೊ ದೃಷ್ಟಿ ನೆಟ್ಟು ಕಾದೆ
ನೀ ಬರುವ ದಾರಿ ಕಾದು
ನಿನ್ನ ಬಾಹುಗಳಲ್ಲಿ ಕರಗಿ
ನೀರಾಗಿ ಹೋಗುತ್ತೀರಲು
ಹಂಬಲದ ಕನಸಿತ್ತು ತಟ್ಟನೆ
ಎಚ್ಚೆತ್ತೇ ಪ್ರೀತಿಯ ಕನವರಿಯ
ಲೋಕದ ನಿದ್ರೆಯ ಹೊರೆ ಇಲ್ಲದೆ
ನೋವಿನ ಕಣ್ಣೀರು ತುಂಬಾ
ನಿನ್ನದೆಯ ಭಾವ ಕಣ್ಣೀರಿನ ಧಾರೆ
ನಾನು ಹುಡುಕುವುದಿಲ್ಲ
ನಿನಗಾಗಿ ಕನಸು ಕಟ್ಟುವುದಿಲ್ಲ
ನಾನು ಸಸಿಯಾಗಿ ಮೊಳೆತದ್ದು
ಹೆಮ್ಮರವಾಗಿ ಬೆಳೆದದ್ದು
ಹುಟ್ಟು ಗುಣದೊಳಗೆ
ಇದೇ ಕತ್ತಲೆಯ ರೂಪದಲ್ಲಿ.
ಭಾವನೆಗಳಿಲ್ಲದ ನಿಂತ ನೀರಿನ
ಬಾಳೊಂದು ಬದುಕಲು
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

18 Apr 2022, 07:37 pm

ಸ್ಟೇಟಸ್ ಗಾಗಿ!

ಎಷ್ಟೊಂದು
ವಾಟ್ಸ್ ಆಪ್
ನೋಡಿ ಹೊಟ್ಟೆ
ಹುಣ್ಣಾಗುವಂತೆ
ನಕ್ಕಿದ್ದೇನೆ ಆದರೆ
ಯಾವುದೂ ನೆನಪಿಗೆ
ಬರ್ತಾ ಇಲ್ಲ ಎಂದು ತಲೆ
ಕರೆದು ಕೊಂಡೆ
ಯಾವುದನ್ನು
ಬರೆಯಲೆಂದು
ಚಿಂತೆ ಮಾಡ್ತಾ
ಇರಬೇಕಾದ್ರೆ
ಬಂತು ನೋಡಿ
ಸ್ಟೇಟಸ್ ನೋಡಿ
ನಾನು ನಕ್ಕಿದ್ದಲ್ಲ
ಎಲ್ಲಾರೂ ಮಾಡೋದು
ಅಪ್ ಲೋಡಕ್ಕೆ
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

18 Apr 2022, 06:40 pm

ಸಿಟ್ಟು ಯಾರಿಗೆ ಬರುವುದು ಹೇಳಿ

ಯಾರಿಗೂ ಬರುವುದಿಲ್ಲ
ಸಿಟ್ಟು ಸುಟ್ಟು ಬೂದಿಯಾಗಿ
ಮನದ ಚಿಂತೆ ವಿಷಾದಿಸುವಾಗ
ಕನಸು ಆವರಿಸಿದಾಗ
ಬದುಕು ತಲ್ಲಣಿಸಿದಂತೆ
ಯಾರಿಗೂ ಬೇಡವಾದಾಗ
ಮಾತು ಮಾತಿಲ್ಲೇ ಮಾರಿಯಾಗಿ
ಮೂಕ ಹಕ್ಕಿಗಳು ಗೂಡು ಕಟ್ಟುತ್ತವೆ
ಕೋಪವಿದ್ದರೂ ಉರಿದು ಕೊಳ್ಳುವಂತೆ
ಕಲ್ಲೊಳಗೆ ಕರಕವಾಗಿ ನಿಂತ ನೆಲ ಕುಸಿಯಿತು
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

18 Apr 2022, 12:15 pm

ನನ್ನ ಕವನದ ನುಡಿ

ಧರ್ಮದ ಕಂದಕದ ಬಾಗಿಲಿಗೆ ಕೀಲಿ ಜಡಿಲಾಗಿದೆ
ಒಳಗೆ ಸಿಕಿದ ಉಸಿರು ಗಟ್ಟಿ ಬಳಲುತ್ತಿರುವ ಹಸಿವು
ಕಡು ಬಡತನಗಳ ಮೂಸೆಯೊಳಗೆ ಒಳಪಡದ ಹಂಗಿನ ಅಂಚು ನನ್ನಂತಹ ಕೊರಗುವ ದುಃಖದ ಕವನದ ನುಡಿ
ಮಡುಗಟ್ಟಿದೆ ರಕ್ತವು ನೀರಿನಂತೆ ಹರಿಯಿತ್ತದೆ
ನನ್ನ ಕವನ ದುಃಖ ದುಮ್ಮಾನದ ತಳದೊಳಗೆ ನನ್ನ ಎದೆಯ ಮೆಲಕು ಹಾಕುವ ನನ್ನ ನೋವು ಅಭಿವ್ಯಕ್ತಿ ಕವನದ ನುಡಿ @ಮಲ್ಲಿಕಾರ್ಜುನ ಸೊನ್ನದ

- mallikarjun sonnad

17 Apr 2022, 10:58 pm

ಕಲ್ಲರಳಿ ಹೂವಾಗಿ

ಕೋಟಿ ಕನಸುಗಳ
ಪ್ರೀತಿ ಕಲ್ಲಾದರೂ ಮನಸ್ಸು
ಹೂವಾಗಿ ಅರಳಿ ಹೃದಯ
ತಟ್ಟುವ ಪ್ರೇಮವೇ ಕಾಡು ಕಲ್ಲು ಶಿಲ್ಪದ ಬದುಕುಸುಂದರತೆಯಲಿ ಅರಳಿ ಲೋಕವನ್ನೇನಿಬ್ಬೆರಗಾಗಿಸುವ
ಬೆರಗು ಗೊಳಿಸುವ ಕಲ್ಲರಳಿ
ಹೂವಾಗಿ ಪ್ರೀತಿ ಜೀವಿಗೂ
ಬದುಕು ಪ್ರೀತಿಯೊಳಗಿದೆ
ತಪ್ಪುಕಾಲಘಟ್ಟ ಕಲ್ಲು ಕೂಡಾ
ಜೀವನವನ್ನೇ ಬದಲಿಸುವ
ಮೃದು ಮನಸುಯೊಂದಿದೆ
@ ಮಲ್ಲಿಕಾರ್ಜುನ ಸೊನ್ನದ

- mallikarjun sonnad

17 Apr 2022, 03:53 pm