Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಾವು ನೋವು

ಸಾವಿಗಾಗಿ ಬರೀ ಯೋಚನೆಗಳಲ್ಲೇ ಕಳೆಯಬೇಡಿ
ನೋವು ನುಂಗಿ ಬದುಕಿರುವುದು ಕಳೆದುಕೊಳ್ಳಬೇಡಿ
ಸಾವು ಕಾಣುವ ತವಕ ಯಾರಿಗಿಲ್ಲ ನೋವು ತರುವ ಮನಸ್ಸಿನೊಳಗೆ ಹುಳುಕಿರುವವು ಮನದ ಹೀನತೆ ಕಾಣುವುದಿಲ್ಲ ಎನ್ನುವ ಭ್ರಮೆ ಕನಸಿನಲ್ಲಿಕೂಡಾ
ಸಾವಿನಲ್ಲಿ ಹೊರಗಣ್ಷಿಲ್ಲ ಎನ್ನುವ ಭ್ರಮೆ ಸಾವಿನಲ್ಲಿ
ಒಳಗಿನ ಹುಳುಕು ನೋವಿನಲ್ಲಿ ಕಾಣಬಹುದು ಸಾವು ಬೆಂಬಿಡದ ನೋವಿನಲ್ಲಿ ಪ್ರತಿಕ್ಷಣ ನುಂಗಬಹುದು ನೋವಿನಲ್ಲೊ ಪಾಪಪ್ರಜ್ಞೆ ಕಾಡುವ ಸಾವಿದೆ
ಸಾವಿನಲ್ಲೋ ಅಂತ್ಯ ನೋವಿನೊಳಗೆ ಸಾವಿದೆ. @ಮಲ್ಲಿಕಾರ್ಜುನ ಸೊನ್ನದ

- mallikarjun sonnad

16 Apr 2022, 10:13 pm

ಜೀವಕ್ಕೆ ಅರ್ಥ

ಜೀವಕಿಷ್ಟು ಪೂರ್ಣತೆ
ತಿಳಿಯದೆ ಅರಿಯದೆ
ಜೀವಿಸುವ ಅರ್ಥ
ಹುಟ್ಟಿಗೊಂದು ಅರ್ಥ
ಸಾವಿಗೊಂದು ಅರ್ಥ
ಹುಟ್ಟಿಗೆ ಸಂತಸ ಅರ್ಥ
ಖುಷಿಪಡುವ ಅರ್ಥ
ಸಾವಿಗೆ ದುಃಖ ಪಡುವ
ನಾವೆಲ್ಲಾ ಅಪೂರ್ವತೆ
ಸಾವು ಹುಟ್ಟುವ
ಮೊದಲೇ ಬದುಕಿಗೆ ಅರ್ಥ
ಜೀವನದ ಮೌಲ್ಯವೇ
ಅರ್ಥಗರ್ಭಿತ ವೈಚಾರಿಕತೆ
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

16 Apr 2022, 10:13 pm

ಅಕ್ಕಮಹಾದೇವಿ

ಚೆನ್ನಮಲ್ಲಿಕಾರ್ಜುನ ಇಲ್ಲದ ಜಗವಿಲ್ಲ
ಹೆಣ್ಣು ತನ್ನೊಳಗೆ ಗೂಡು ಕಟ್ಟಿದ
ಮನಸಿಗೆ ಕತ್ತಲೆ ಚೆಲ್ಲುವ ಬೆಳಕಿನ ಬಾಳು
ಅಕ್ಕನೇ ಜಗದ ಪ್ರಕೃತಿ ಅಕ್ಕ
ನೀ ಜಗದ ಕನಸು ಕಾಣು
ಚೆನ್ನ ಮಲ್ಲಿಕಾರ್ಜುನ ಸಂಗವೇ
ಪರಮಪೂಜ್ಯತೆ ಬದುಕುಳಿಯುವ
ಕಾಮ ಕ್ರೋಧ ಅನೀತಿ ಅಕ್ಕರೆಯ
ಭಕ್ತಿ ಅಕ್ಕರೆಯ ಶಕ್ತಿ ಭವಿಷ್ಯದ ಭಾವ
ಪ್ರದರ್ಶನ ವಲ್ಲ ಬದುಕಿ ದಾರಿ ಕಲಿಸಿದ್ದು
ಮರೆಯದೆ ಅಕ್ಕ ನಿರ್ಭಯಯಾಣದ
ಶಿಖರ ನೀ ಹೆಣ್ಣುಮಕ್ಕಳಿಗೆ ವಚನವಿತ್ತೇ
ಅಕ್ಕನ ಪ್ರವಚನ ಬದುಕು ಹಸಿವು ಬಾಯಾರಿಕೆ ಜೀವ ತನಿಸಿದೆ.@ಮಲ್ಲಿಕಾರ್ಜುನ ಸೊನ್ನದ


- mallikarjun sonnad

16 Apr 2022, 10:13 pm

ಪ್ರೀತಿ ನೀ ನಿಲ್ಲದೆ

ಪ್ರೀತಿ ನೀ ನನ್ನನ್ನು ದ್ವೇಷಿಸುವೆ
ಪ್ರೀತಿ ನಿನ್ನ ನೀ ಕಾಣುತ್ತಿಲ್ಲವೆ

ಪ್ರೀತಿ ನೀ ಮನದೊಳಗೆ ಕೊರಗುತ್ತಿಲ್ಲವೆ
ಪ್ರೀತಿ ನೀ ಕನಸ್ಸಿನೊಳಗೆ ಮರಗುತ್ತಿಲ್ಲವೆ

ಪ್ರೀತಿ ನೀ ನಾನಿಲ್ಲದೆ ಬಳಲುತ್ತಿಲ್ಲವೆ
ಪ್ರೀತಿ ನೀ ನನ್ನ ಕಣ್ಣೊಳಗೆ ಬಿಂಬಿಸುತ್ತಿಲ್ಲವೆ

ಪ್ರೀತಿ ನೀ ನನ್ನೊಂದಿಗೆ ತುಡಿಯುತ್ತಿಲ್ಲವೆ
ಪ್ರೀತಿ ನೀ ನಿನ್ನೊಂದಿಗೆ ಮಿಡಿಯುತ್ತಿಲ್ಲವೆ
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

16 Apr 2022, 09:52 pm

ಭಾಷೆ ಭಾವ ತಾಕುವಂತಿದೆ

ಭಾಷೆ ತಿರುಳು ಭಾವ ತಾಕುವಂತೆ
ಮನದ ಭಾಷೆ ಹೃದಯ ಭಾವದಂತೆ

ಭಾಷೆಯ ದಾರಿ ಭಾವದ ನೆಲೆ
ತಿಳಿದಿರುವ ಹಾಗೆ ಬೆಳೆಯಬೇಕು

ಬದುಕು ಭಾವ ಪ್ರೀತಿ ಭಾವಲತೆ
ಜೀವ ಜೊತೆಗೆ ಸಾರ್ಥಕ ಜೀವನ

ಲೋಕದೊಳಿತಿಗೆ ನಿನ್ನ ಭಾವ ಭಾಷೆ
ಭಾವ ಭಾಷೆಗೆ ನಿನ್ನ ಪಾಲುದಾರಿಕೆ

ಕೂಡಿದ ಭಾವ ಬೆಳೆಸುವ ಭಾಷೆ
ಬೆರೆತು ಬಾಳು ಐಕ್ಯವೊಂದೇ ಮಂತ್ರ
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

16 Apr 2022, 03:42 pm

ನಿನ್ನ ಅಧಿಕಾರ ನನ್ನ ಅನ್ನ

ಬದುಕು ಶ್ರಮದ ಗೂಡು
ನಿನ್ನ ಅಧಿಕಾರ ನಾ ಕೊಟ್ಟಿದ್ದು
ನನ್ನ ಬಳಿ ಹಸಿವಿದೆ ನಿನ್ನ ಬಳಿ ಹಣವಿದೆ
ನನ್ನ ಹಸಿವು ನಾ ಹಿಂಗಿಸಿ ಕೊಳ್ಳಬಲ್ಲೆ
ನಿನ್ನ ಹಸಿವಿಗೆ ನಾ ಬೆಳೆದು ಕೊಟ್ಟಮೇಲೆ
ಅಧಿಕಾರಕ್ಕೆಸುಳ್ಳು ಮೋಸ ವಂಚನೆ
ಮಾಡಿ ಹಣವಂತ ನಾ ಕಷ್ಟ ಪಟ್ಟು ದುಡಿದು ಬಿಸಿಲು ಮಳೆಗಾಳಿಗೆ ಮೈಒಡ್ಡಿ ಬೆನ್ನ ಬಾಗಿಸಿ ಸವಕಲು ದೇಹ ನನ್ನದು ಡೊಳ್ಳು ಹೊಟ್ಟೆ ನಿನ್ನದು.@ಮಲ್ಲಿಕಾರ್ಜುನ ಸೊನ್ನದ

- mallikarjun sonnad

16 Apr 2022, 02:18 pm

ಮನಸ್ಸು ಚಿಗುರು

ಚಿಗುರು ಮನಸ್ಸಿನ ಭಾವಕ್ಕೆ ಬದುಕಿದೆ
ಮಾಗಿದ ಕನಸ್ಸಿಗೆ ಹಂಬಲದ ಬಯಕಿದೆ

ಪ್ರೀತಿಗೆ ಉಸಿರಿದೆ ಹೃದಯಕ್ಕೆ ಒಲವಿದೆ
ಪ್ರೇಮದ ಪಯಣಕ್ಕೆ ನಡೆಯುವ ಸೊಗಸಿದೆ

ಮನದ ಕನ್ನಡಿಗೆ ಕನಸ್ಸು ಪ್ರತಿಬಿಂಬಿಸುತ್ತದೆ
ಸುಂದರ ಮನಕ್ಕೆ ಪ್ರೀತಿಯ ಸಿಂಚನದ ಸೊಬಗಿದೆ

ಭಾವ ಬದುಕು ಪ್ರೀತಿಯಿಂದ ಚಿಗುರುವ ಬಯಕೆ
ಪ್ರೀತಿಯ ತುಡಿತಕ್ಕೆ ಹೃದಯದ ಬಡಿತಕ್ಕೆ

ಪ್ರೀತಿ ಚಿಗುರು ಬದುಕು ತುಂಬಿ ಪ್ರೀತಿಸು
ಪ್ರೀತಿ ಬಯಕೆ ತಂದು ಬದುಕು ಪ್ರೀತಿಸು.
@ಮಲ್ಲಿಕಾರ್ಜುನ ಸೊನ್ನದ


- mallikarjun sonnad

16 Apr 2022, 12:48 pm

ಯಾರ ಹಂಗು ಯಾರಿಗೂ ಬೇಡ

ಯಾರಿಗೂ ಮನ ಒಪ್ಪುವ
ಮಾತುಗಳು ಹಿಡಿಯುವುದಿಲ್ಲ
ಯಾರ ಹಂಗಿನ ಗೊಡವೇ
ಯಾರಿಗೂ ಬೇಕಿಲ್ಲ
ನಿನಗಾಗಿ ನೀ ಬದುಕು
ನಿನ್ನ ದಾರಿ ನೀ ನೋಡಿಕೋ
ನೀ ದಾರಿ ತೋರಿದರೂ
ತಮ್ಮದೇ ಸ್ವಂತದ್ದೋ
ದಾರಿಯಲ್ಲಿ ಸಿಗುವ ಉಪದೇಶ
ಕಾಲುವೆಚಾಡಿ ಹೇಳಿದವರು ಸ್ವರೂಪ
ಬದಲಾಗಿರುವ ಕಾಲವಿದು
ಚಾಡಿ ಕೇಳಿದವರ ಮಾತುಗಳು
ತಡವರಿಸಿವ ಕಾಲವಿದು
ಯಾರಿಂದಲೂ ಸಾಧ್ಯವಿಲ್ಲ
ಆಕಾಶ ಕುಸಿದು ಬೀಳುವುದಿಲ್ಲ.
ನಿನ್ನ ಆತ್ಮವಿಶ್ವಾಸ ದಿಟ್ಟ ಹೆಜ್ಜೆ ಕುಸಿಯದಿರಲಿ
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

16 Apr 2022, 12:47 pm

ಕಣ್ತುಂಬಿ ನಿಲ್ಲು ನೀ

ಪ್ರೀತಿಗೆ ಸೊಗಸಿಲ್ಲ
ಹೃದಯಕ್ಕೆ ಉಸಿರಿಲ್ಲ

ಊಳಿಡುತ್ತಿದೆ ಮನದ ನೋವು
ದಿಕ್ಕೆಟ್ಟು ಬದುಕಿಲ್ಲದ ಮನವು

ದೀಪ ಹಚ್ಚು ಮನದ ಮನೆಗೆ
ಕಣ್ತುಂಬಿ ನಿಲ್ಲು ನೀ ಭಾವ ಪ್ರೀತಿಗೆ

ಬದುಕು ತುಂಬಾನೆ ಅರ್ಥಪೂರ್ಣ
ಪ್ರೀತಿಯ ಉಸಿರು ಹಂಬಲತೆಗೆ ಪೂರ್ಣ

ಬದುಕು ಪ್ರೀತಿಯ ಒಡಲಿದೆ
ಒಲವಿಗೆ ಪ್ರೀತಿಯ ಬದುಕಿದೆ
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

16 Apr 2022, 12:43 pm

ಕನಸಿನಿಂದ ಎಚ್ಚರ

ಮನದ ಕನಸಿಗೆ ಭಾವ ಪ್ರೀತಿ
ಕನಸಿನ ಮನಕ್ಕೆ ಭಾವದ ಬುತ್ತಿ

ಉಸಿರು ಹೃದಯಕೆ ಹಂಬಲದ ಮನ
ಒಡಲಿನ ಮನಸಿಗೆ ಕನಸಿನ ಕೂಸು

ಬದುಕು ಭಾವದ ಸಂತೆ
ಜೀವ ಒಡಲಿನ ಮನದ ಭಾವನೆ

ಉಸಿರಿದೆ ಕನಸಿಗೆ ಮನಸಿದೆ ಕನಸಿಗೆ
ಒಲವ ತುಂಬಿದ ಹೃದಯಕ್ಕೆ ಕಾತುರವಿದೆ

ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಕನಸು
ನಿದ್ರೆಬಾರದ ಮನಸ್ಸಿಗೆ ಕನಸಿನ ಪಯಣ.

@ಮಲ್ಲಿಕಾರ್ಜುನ ಸೊನ್ನದ

- mallikarjun sonnad

16 Apr 2022, 11:32 am