Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಇಂದು ನಿನ್ನೆಯದಲ್ಲ

ಇರುವುದನ್ನು ಬಿಟ್ಟು
ಇಲ್ಲದನ್ನು ಹಿಡಿದು
ನಾಳೆ ನಮ್ಮದು ಇಂದು
ನನ್ನದಲ್ಲವೇ ಕಾರಣವಿಲ್ಲದ
ಬದುಕಿನೊಳಗೆ ಹುಟ್ಟಿನಿಂದ
ಸಾವಿನ ತನಕ ಅಪಾರ ಬಡಿತ
ನಿಲ್ಲುವ ತವಕ ಗಾಳಿಗೊಂದಾಸೆ
ದಡದಾಟಿಸುವ ತಲ್ಲಣ ಹೃದಯ
ಕದಡಿದರೂ ಮನಸ್ಸುಗಳು
ಗಿರಿಕಿ ಹೊಡೆದು ಬಿಡುವ ಕನಸುಗಳೆ
ಕಮರಿಹೋಗುವ ಜೀವಕ್ಕಿಷ್ಟು ರೋಚಕತೆಗೆ
ಸಾಗುವ ನೆಲಕ್ಕೆ ಒಗ್ಗಿರುವ ಮನುಜನೇ
ನೀ ನೀನೆ ...ತಾನೇ.
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

16 Apr 2022, 11:19 am

ಹುಟ್ಟು ಬದುಕಿನೊಳಗೆ

ಗಕಾಮನಿಸಿ ಜನ್ಮ ನೀಡಿದ
ತಾಯಿಯ ಒಡಲಿನಿಂದ
ಬಂದು ಪ್ರಕೃತಿಯ
ಮಡಿಲಿನಲಿ ಅರಳುವ
ನಾವುಗಳು ಹುಟ್ಟಿನಿಂದ
ಇದ್ದಂತೆ ನಾಳೆ ಇರುವುದಿಲ್ಲ
ನಾಳೆ ಇದ್ದಂತೆ ಇಂದು
ಇರುವುದಿಲ್ಲ ಕೊಂಚ
ಬೆಳೆದು ಅಳಿದು ಉಳಿದು
ಬಿಡುವ ಬದುಕು
ನಿಚ್ಛಳ ನಿಷ್ಠುರ ತಾರ್ಕಿಕ
ಕ್ರಿಯೆಯ ಮೂಲಕ ಹೆಮ್ಮದಂತೆ
ವಂಶವಾಹಿಗಳ ಅಭಿವ್ಯಕ್ತಿಯ
ನಿಯಂತ್ರಣ ವ್ಯವಸ್ಥೆ ನಾನೇ ನೀನೇ ಕಾರಣ
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

16 Apr 2022, 10:07 am

ರೈತನ ಬೆವರಿನ ತಲ್ಲಣ

ಹಸಿವು ಗೊತ್ತು ರೈತನಿಗೆ
ಕಸುವು ಗೊತ್ತು ಹೂಳುವ
ಸರದಾರ ಅನ್ನನೀಡುವ
ಮಮಕಾರ ನಿನ್ನದೆ
ಬದುಕುವ ಅವಕಾಶ
ನಡುವಣ ಪಡುವಣ
ಗಾಳಿ ಮಳೆ ಬಿಸಿಲು
ಅಬ್ಬರದೊಳಗೆ ನೊಂದು
ಬೆಂದರೂ ನಿನ್ನ ಕೊರಗುವ
ಕಷ್ಟದ ತಲ್ಲಣಗಳು ಯಾರಿಗೂ
ಕಾಣದು ಸಂಕಟದ
ಒಡಲು ಬಿರಿದರೂ
ಬೆವರಿನ ವಾಸನೆಯೊಳಗೆ
ಬವಣೆ ಪಡುವಾತನೇ
ನೀ ನಮ್ಯತೆ ನೀಡುವ ಅನ್ನದ
ಪ್ರತಿ ಅಗಳಿಗೂ ಅಕ್ಕರೆಯ ಬೆವರಿನ ಉಸಿರಿದೆ.
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

16 Apr 2022, 10:00 am

ನಿನ್ನ ಮೌನ ನನ್ನ ಪ್ರೀತಿ

ನಿನ್ನ ನೆನಪಿನ ಮೌನ
ನನ್ನ ಕನಸಿನ ಪ್ರೀತಿ
ಹೃದಯದೊಳಗೆ ಸ್ವಾಗತಿಸು
ನನ್ನನ್ನು ನೋವಿನಿಂದ ಬಿಡಿಸು
ಒಲವಿತ್ತು ಹಂಬಲಿಸು
ಕನಸಿನಕುಣಿಕೆಗೆ ಬದುಕನೊಪ್ಪಿಸು
ಕರಗಿದ ರಾತ್ರಿಗಳು ನಿದ್ದೆಗಳು ಹೆದರಿವೆ
ಹೂತಿಟ್ಟ ಪ್ರೀತಿಯ ಬಯಕೆಗಳು ಬೆಂಡಾಗಿವೆ
ಅಳಿದು ಉಳಿಸಿದ ಬದುಕು ಮಸುಕಾಗಿದೆ
ಮೌನದ ಪ್ರತಿ ಪ್ರೀತಿಗೂ ಒಂದು ಕಲ್ಪನೆ
ಪ್ರೀತಿಯ ಮೌನಕ್ಕೆ ಪಿಸು ಮಾತಿದೆ
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

16 Apr 2022, 09:43 am

ನೆಮ್ಮದಿಯ ನಾಳೆ ನಮ್ಮದು

ಹೊಸತು ಬದುಕು ಹೊಸದು ಜೀವನ
ನೆಮ್ಮದಿಯ ನಾಳೆ ನಮ್ಮದು
ನಿನ್ನೆಯ ಅನುಭವ ನಾಳೆಯ ಅವಕಾಶ
ಬದುಕು ಭವಿಷ್ಯ ರೂಪಿಸುವ ಋಣದೊಳಗೆ
ನಿನ್ನೆಯ ಘಳಿಗೆ ಬದಕು ಬದಲಿಸಬಹುದು
ಇಂದಿನ ಘಟನೆ ಕಲಿಯಬೇಕು ಬದುಕಿನೊಳಗೆ
ಆಕರ್ಷಣೆ ಜೀವನ ಆಕ್ರೋಶ ಬದುಕು
ಹುಟ್ಟಿಸುವ ಬಲತ್ಕಾರದ ಭಯವಿಲ್ಲ
ಸಾವಿನ ನಂಬಿಕೆ ಸಹಜವಲ್ಲ.
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

16 Apr 2022, 09:22 am

ಕವಿಯ ಕನಸ್ಸಿಗೆ ಕಣ್ಣುಗಳಿವೆ

ಎರಡುಮನಸಿನ ಬಯಕೆಗಳಿವೆ
ಎರಡು ಕಣ್ಣಿನ ಮನಸ್ಸು ಕನಸ್ಸು

ಪ್ರೀತಿಯ ಭಾವದೊಳಗೆ ಕಣ್ಣಿದೆ
ಬಯಕೆಗೆ ಕವಿ ಮನಸ್ಸಿದೆಕವಿಗೆ

ಕವಿಯ ಭಾವ ತುಂಬಲು
ಕವಿಯ ಮನದ ಒಲವಿರಲು

ಕವಿಯ ಹಾಡಬಲ್ಲ ಬರೆಯಬಲ್ಲ
ಕಣ್ಣುಮುಚ್ಚಲು ಕನಸು ಮುಚ್ಚಲಾರ

ಕನಸ್ಸು ಕಾಣದಿದ್ದರೂ ಕವಿ ಬರೆಯಬಲ್ಲ
ಬದುಕು ಪ್ರೀತಿಗೆ ಒಲವು ಹಂಬಲಕ್ಕೆ

ಕವಿಯು ಕಣ್ಣಿನೊಳಗೆ ಕನಸ್ಸು ಕಾಣಬಲ್ಲ
ಕವಿಯು ಮನಸ್ಸಿನಲ್ಲಿ ಕನಸ್ಸು ಕಾಣಬಲ್ಲ
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

15 Apr 2022, 11:54 pm

ನಾ ಕಂತ್ರಿ ನಾ ನೀ ಕಂತ್ರಿನಾ

ಊರೆಲ್ಲ ಸುತ್ತಿ ಬರುವೆ ನೀನು...... ನೀ ಬರುವ ದಾರಿಯ ಕಾಯುವೆ ನಾ ... ನೆಮ್ಮದಿಯ ಊಟ ಮಾಡುವೆ ನೀನು................................ ನೀ ಬಿಟ್ಟ ಹಳಸಲು ತಿನ್ನುವೆ ನಾ................... ಬೆಚ್ಚನೆಯ ಕಂಬಳಿ ಹೊದ್ದು ಮಲುಗುವೆ ನೀ......................... ಚಳಿ ಗಾಳಿ ಮಳೆಯಲಿ ರಾತ್ರಿ ಕಳೆಯುವೆ......ನಾ .... ಕಳ್ಳರನ್ನು ಓಡಿಸಿ.... ಕಾಗೆ ಸುಳಿವೇ ಇಲ್ಲದಂತೆ ಮಾಡುವೆ.................... ನೀ ಕಂತ್ರಿ ಕುನ್ನಿ... ನಾಯಿ...ಎಂದು ಬೈಯುವೆ.............. ಸಾವಿರ ತಪ್ಪು ಮಾಡುವೆ ನೀ..... ಒಂದು ತಪ್ಪು ಮಾಡಿದರೆ ಊರ ಆಚೆ ಹಾಕಿ ಉಪವಾಸ ಕೆಡುಗುವೆ...... ಸಾವಿರ ಬೈದರು........ ನೀ ಬಂದಾಗ ಎದೆಗೆ ಅಪ್ಪಿ ಬರಮಾಡಿಕೊಳ್ಳುವೆ....ನಾ.... ನಾ ಒಬ್ಬ ಅಮಾಯಕ.... ಪ್ರಾಣಿ....

- HARISH M S

11 Apr 2022, 08:51 pm

ನೀ ಬಾ

ಸುರಿಯುವ ಮಳೆಯಲಿ
ನೀ ನಡೆದು ಬಾ ಹಾದಿಯಲಿ
ಕಾಯುತ ಕುಳಿತಿಹೆ
ನಾ ಹ್ರದಯದ ಬೀದೀಲಿ
ಬೀಸೀದೆ ತಂಗಾಳಿ
ಆಗಿದೆ ಜೋರು ದಾಳಿ
ಬರ ಸಿಡಿಲು ಬಡಿವ ಮುನ್ನ
ನೀ ಬಾ.........
ಹನಿಗಳ ಹಬ್ಬವಿದು
ಇನಿದನಿಗಳ ಸುಗ್ಗಿಯಿದು
ಕನಸಲ್ಲಿಯು ಕಾಣದಂತ
ಸುಂದರ ಭಾವವಿದು
ನೀ.. ಬರದೆ ಇಲ್ಲಿ
ಎಲ್ಲಾ ಖಾಲಿ ಖಾಲಿ
ಕಾದಿರುವೆ ನಿನ್ನನೆ
ಒಮ್ಮೆ ಬಾ.....
ಹಾಡುತಿದೆ ಮನಸೀಗ
ಕೇಳಲು ಬಾ ಬೇಗ
ಕೇಳುವ ಧನಿಯಲ್ಲೆ
ಹಿಡಿದು ನೀ ದಾರಿಯ
ಒಲವೇ ಹುಡುಕು ನೀ ಪ್ರೀತಿಯ
ಕಣ್ಣೇ ಅರಸು ನೀ ಕಾಂತಿಯ
ಉಸಿರೇ ಮರೆಸು ನೀ ಭೀತೀಯ

- Sinchana C C

26 Mar 2022, 05:27 pm

ಜೈ ಭೀಮ್

ಭೀಮನ ಮಕ್ಕಳುಗಳು ನಾವುಗಳು
ಜೈ ಭೀಮನ ಮಕ್ಕಳುಗಳು ನಾವುಗಳು
ಸಾವಿರಾರು ಕಷ್ಟಗಳಿಂದ್ದರು
ನೂರೆಂಟು ಕನಸು ಕಟ್ಟಿ
ನ್ಯಾಯ ನೀತಿ ಸಮಾನತೆಗೆ
ಪ್ರಾಣ ಬಿಟ್ಟವರು ನಾವು
ಭೀಮನ ಮಕ್ಕಳುಗಳು ನಾವುಗಳು
ಜೈ ಭೀಮನ ಮಕ್ಕಳುಗಳು ನಾವುಗಳು

ಬಡತನದಲ್ಲಿ ಸುಟ್ಟು ಬೆಂದು
ನಿಟ್ಟುಸಿರು ಬಿಟ್ಟು ಜೀವ ಬಿಟ್ಟು
ಬೂದಿಯಾದರು
ಛಲಬಿಡದ ಛಲವಾದಿಗಳು ನಾವು
ಭೀಮನ ಮಕ್ಕಳುಗಳು ನಾವುಗಳು
ಜೈ ಭೀಮನ ಮಕ್ಕಳುಗಳು ನಾವುಗಳು

ಚಿಂದಿ ಹಾಯ್ದು ಚಿಂದಿ ಬಟ್ಟೆ ತೊಟ್ಟು
ಗಂಜಿ ಕುಡಿದರು ಸ್ವಾಭಿಮಾನ ಬಿಡದ
ಸ್ವಾಭಿಮಾನದ ಕಲಿಗಳು ನಾವು
ಭೀಮನ ಮಕ್ಕಳುಗಳು ನಾವುಗಳು
ಜೈ ಭೀಮನ ಮಕ್ಕಳುಗಳು ನಾವುಗಳು

ಹಸಿವಿನಿಂದ ಸೋತು ಸತ್ತು
ಪ್ರಾಣ ಬಿಟ್ಟರು
ಮನುವಾದಿಗಳ ಕರಿ ನೆರಳಿಗೆ
ತಲೆಬಾಗದವರು ನಾವು
ಭೀಮನ ಮಕ್ಕಳುಗಳು ನಾವುಗಳು
ಜೈ ಭೀಮನ ಮಕ್ಕಳುಗಳು ನಾವುಗಳು

ಮನುವಾದಿಗಳ ಕಲ್ಲಿನ ಏಟಿಗೆ
ಜಾತಿ ಧರ್ಮದ ಚಾಟಿ ಏಟಿಗೆ
ಹೆದರಿ ಓಡಿದೆ ಅಸಮಾನತೆಯನ್ನು
ಮಟ್ಟಿನಿಂತವರು ನಾವು
ಭೀಮನ ಮಕ್ಕಳುಗಳು ನಾವುಗಳು
ಜೈ ಭೀಮನ ಮಕ್ಕಳುಗಳು ನಾವುಗಳು


- ರಾಜು ಹಾಸನ

21 Mar 2022, 02:32 pm

ದ್ರೋಹ ಮುರಿದ ಮನಸುಗಳು

ಮತ್ತೊಬ್ಬರೊಂದಿಗೆ ಕಣ್ಣೇದುರಿಗೆ ನೋಡ ನೋಡುತ್ತಾ ಹೇಗಿರಲಿ ನಾ ಹೇಳು,
ಕಲಿತು ಒಂದಾಗಲಿಲ್ಲ ಪ್ರೀತಿ ಮನಸುಗಳು

ಹೃದಯದ ಕೂಗು ತಿಳಿಯದೆ ಹೋಯ್ತಾ ಪ್ರೀತಿಸಿದ ಮನಸ್ಸಿಗೆ
ನಿನ್ನ ಪ್ರೀತಿಯೇ ಸುಳ್ಳ.

ಕಂಡು ಕಾಣದಂತ ಪ್ರೀತಿ ಮಾಯೆಯಾ ಅರ್ಥೈಸಿಕೊಳ್ಳಲಾಗದೆ ನರಳಾದುತ್ತಿರುವ ಮನಸಿನ ಸಂಕಟ ನಿನ್ಗೆ ಗೊತ್ತಾ? No


ಪ್ರೀತಿ ಅರ್ಥ ನಿನ್ಗೆ ಗೊತ್ತಿದ್ರೆ ನೀನು ನನ್ ಪ್ರೀತಿಗೆ ಮಾಡ್ತಿರ್ಲಿಲ್ಲ

by. harshini/asu

- harshini

20 Mar 2022, 09:13 am