Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅವಳು ನನಗೆ ಬರೆದ ಕವನ


ಈ ದಿನ ನನಗ ವಿಶೇಷವಾದ ದಿನ
ನಾಳೆ ಏನೆಂಬುದು ಗೊತ್ತಿಲ್ಲ.
ಈ ದಿನ ನೀ ನನ್ನೊಡನಿರುವೆ
ನಾಳೆ ನೀ  ನನ್ನೊಡನಿರದಿರಬಹುದು.

ಹಲವು ಬಾರಿ ನೀ ನನ್ನೊಡನಿದ್ದು
ನನ್ನ ಬದುಕಿನ ಸಂಪತ್ತು ಹೆಚ್ಚಿತು.
ನಾನು ಶ್ರೀಮಂತಳಾದೆ
ಬದುಕಿನ ಅರ್ಥ ನಿನ್ನಿಂದ ತಿಳಿದೆ.

ಮಾತನಾಡುತ್ತಾ ನಾವು ನಮ್ಮನ್ನ ಮರೆತೆವು
ನಮ್ಮ ಸುತ್ತಲು ಹೊಸ ಜಗತ್ತು ಕಟ್ಟಿದೆವು.
ನೀನಾಡಿದ ಮಾತುಗಳು ಈಗಲೂ ಕೇಳುತ್ತಿವೆ
ಮತ್ತು ಅವುಗಳನ್ನು ಕೊನೆಯವರೆಗೂ ಮರೆಯುವುದಿಲ್ಲ.

ಕನಸುಗಳನ್ನು ಹಂಚಿಕೊಂಡೆವು
ನಮ್ಮ ಮುಂದಿನ ಜೀವನವನು ಕಂಡೆವು.
ಹೊಸ ಹಾಡನ್ನು ಹಾಡುತ್ತ
ನಮ್ಮ ನಮ್ಮ ನೋವುಗಳನು ಮರೆತೆವು.

ಹಾಡು ಹಾಡುತ್ತಿರುವಾಗಲೇ
ಅಯ್ಯೋ  ಹಾಡಿನ ಶೃತಿ ಹಾಳಾಯಿತು.
ಕಣ್ಣೊಳಗಿದ್ದ ಕನಸುಗಳೆಲ್ಲವು
ಅಯ್ಯೋ ನೆನಪು ಬಾರದೆ ನಾಶವಾದವು.

ನಾಳೆ ಎನ್ನುವುದರಲ್ಲಿ ಎಲ್ಲವು ಅಡಗಿರುವುದು.
ಇಂದಿನಂತಿಲ್ಲದಿದ್ದರು ನಾಳೆ
ಜೀವನ ಸಾಗುವುದು ಕೊನೆಯವರೆಗೆ.
ಆದರೆ....
ಕಣ್ಗಳಿಂದ ಹರಿಯುವ ನೀರಿಗೆ ಕೊನೆಯಿಲ್ಲ.

ಚೇತನ್ ಬಿ ಸಿ

- ಚೇತನ್ ಬಿ ಸಿ

29 Jan 2022, 08:11 pm

ಏನೆಂದು ಕರೆಯಲೀ ನಿನ್ನ...

ಏನೆಂದು ಕರೆಯಲೀ ನಿನ್ನ
ಕಣ್ಣ ರೆಪ್ಪೆಯ ಮೇಲೆ ಕುಳಿತಿರುವೆ
ಪ್ರತೀ ಉಸಿರಿನಲೂ ಬೆರೆತಿರುವೆ
ನರ ನಾಡಿಗಳಲೀ ಅವಿತಿರುವೆ

ಏನೆಂದು ಕರೆಯಲೀ ನಿನ್ನ
ದೇಹದ ಚೈತನ್ಯವಾಗಿರುವೆ
ಮನಸಿನ ಸಂತಸವಾಗಿರುವೆ
ಹೃದಯದಲಿ ನೆಲೆನಿಂತಿರುವೆ

ಏನೆಂದು ಕರೆಯಲೀ ನಿನ್ನ
ಕನಸಿಗೆ ಕಲ್ಪನೆಯಾಗಿರುವೆ
ಕವನಕೆ ಸ್ಪೂರ್ತಿಯಾಗಿರುವೆ
ಯಾವಗಲೂ ಕನವರಿಸುತಿರುವೆ

ಏನೆಂದು ಕರೆಯಲೀ ನಿನ್ನ
ನೀ ನನ್ನ ಬಳಿಯಿಲ್ಲ
ಆದರೂ ಒಲವಿದೆಯಲ್ಲ
ಎಲ್ಲಾ ದೇವನೇ ಬಲ್ಲ

- ಚೇತನ್ ಬಿ ಸಿ

29 Jan 2022, 08:06 pm

⛅ಸೂರ್ಯ ಮುಳುಗಲು

⛅ಸೂರ್ಯ ಮುಳುಗಲು

ಮುಸ್ಸಂಜೆಯ ತಂಪಲ್ಲಿ
ಆಕಾಶ ಸೂರ್ಯ ಒಂದಾದಂತೆ ಇಲ್ಲಿ,
ಸಾಗರದ ದಡದಲ್ಲಿ ಕುತಿರುವೆ ನಾನು.
ನೆನೆಯುತ್ತ ನಿನ್ನನ್ನು ನನ್ನ ಮನದಲ್ಲಿ.

ಸಮುದ್ರದ ಅಲೆಗಳು ಬರಲು,
ಮೆಲ್ಲನೆ ತಂಗಾಳಿ ಬೀಸಲು,
ಪುಟ್ಟ ಪುಟ್ಟ ಮೀನುಗಳು ನೀರಲ್ಲಿ ಇರಲು,
ಬಂದಂತ್ತಿದೆ ನನ್ನ ಸ್ಪರ್ಶಿಸಲು.

ಮರಳಲ್ಲಿ ಸಿಗುತ್ತಿದೆ ಚಿಕ್ಕ ಚಿಕ್ಕ ಶಂಖಗಳು,
ದೂರದ ತುಧಿಯಲ್ಲಿ ಕಾಣುತ್ತಿದೆ ಒಂದೆರಡು ತೆಂಗಿನ ಮರಗಳು,
ಹೆಜ್ಜೆ ಹೆಜ್ಜೆಗೂ ಮತ್ತೆ ಹಿಂತಿರುಗಿ,
ನಾನೂ ನೋಡಲು
ಹಿಂಬಾಲಿಸಿದಂತೆಯೇ ಇದೆ ನನ್ನಾ ಈ ಘಳಿಗೆಗೆ, ಸೂರ್ಯ ಮುಳುಗಲು.

- Ruthu

16 Jan 2022, 08:18 am

ದಿವ್ಯ ಚೇತನ.

ಭಾರತಾಂಬೆಯ ಸುತನಾಗಿ ಜನಿಸಿದ ನೀವು,
ರಕ್ತ ಸಿಕ್ತದ ಮಣ್ಣ ಪೂಜಿಸಿ ಕ್ರಾಂತಿಯ ಕಿಡಿಯಾಗಿ
ಯುವಕರ ಹೃದಯದೊಳಗೆ ಬೆಳಗುತ್ತಿರುವ ಭಾಗ್ಯವಂತರೆ ನೀವು ನಮಗೆ.
ಅಂದರ ಭವಿಷ್ಯದ ಉದ್ದೀಪನಕ್ಕೆ ಹಗಲಿರುಳು
ಶ್ರಮಿಸಿದ ಲೂಯಿಸ್ ಬ್ರೈಲರಂತೆ ದಿವ್ಯ ಚೇತನರಾಗಬೇಕು ನೀವು ನಮ್ಮ ಪಾಲಿಗೆ.
ನೊಂದವರ ಕಷ್ಟಗಳ ಕಂಡು
ನಿಸ್ವಾರ್ಥ ಸೇವೆಗೆ ಸಿದ್ಧರಿರುವಿರಿ ಸದಾ ನೀವು
ತಥಾಗತರ ಶಿಷ್ಯರಂತೆ.
ಸಮಾಜದ ದುಸ್ಥಿತಿಗೆ ನಿವೇದಿಸೋ,
ಮನಸಿರುವ ನಿಮ್ಮ ವ್ಯಕ್ತಿತ್ವ,
ಸತ್ ಕಾರ್ಯವೆಸಗುವ ನರೇಂದ್ರರ ಕುಡಿಯಾದ ನಿಮಗೆ,
ಸಾಕ್ಷಿಯಾಗಲಿದೆ ಶರಧಿಯ ಪರದೆಗಳು ಮುತ್ತಿಟ್ಟು ನಿಮ್ಮ
ಪಾದ ತೊಳೆಯುವ ಅನುಕ್ಷಣದ ಮಹೋತ್ಸವಕ್ಕೆ.
ನನ್ನೊಳಗೆ ಮೂಡುವ ವೀರರ ಚಿತ್ರವ,
ನಿಮ್ಮೊಳಗೆ ಕಂಡಿರುವೆ ಅವರ ಸಿಂಹ ಸ್ವಪ್ನ ದಂತಹ ಪ್ರತಾಪವ.
ಸಾವಿನ ಖಚಿತತೆಯ ಅರಿತ ನೀವು,
ಇತಿಹಾಸದ ಪುಟದೊಳಗೆ ಸ್ಪಟಿಕದಂತೆ ಹೊಳೆಯಬೇಕೆಂಬ ಹೆಬ್ಬಯಕೆ ನನಗೆ.
ನಿಮ್ಮ ಅಮರತ್ವ ಕಾಯಕದ ಪತದೊಳಗೆ,
ಅವಕಾಶವ್ವಿತ್ತರೆ ನೀವು,
ನಶ್ವರದ ಆಶಯಗಳ ತೊರೆದು ನನ್ನ ಅಳಿಲು ಸೇವೆಯನರ್ಪಿಸುವೆ ನಿಮ್ಮ ಕೃತಿಗೆ.

- nagamani Kanaka

15 Jan 2022, 03:24 pm

ಕನ್ನಡ ನಾಡ ಸಂಸ್ಕೃತಿ.

ತಾರೆಗಳ ತೋಟದಲ್ಲಿ ಅರಳಿನಿಂತ ಹೂವುಗಳೇ,
ತಾಯ ಹಾಲ ಋಣವು , ಕರೆ ನೀಡಿದ ಕೂಡಲೇ ,
ನಮ್ಮ ನಾಡ ಪೋರೆಯುವಂತ ಯುವ ಸೈನ್ಯಕೇ ಹರ್ಷದಿಂದ ಬೆಳಗುವೆವು ಜಯ ಮಂಗಳದಾರತಿ.

ಮಾತೃ ಹೃದಯ ಸ್ಮರಿಸುವಂತ ಸೇ ವೆಯನ್ನು ನೀಡುತ್ತಾ
ಹಸಿವು ನೀಗಿ ಸಲಹೋ ರೈತ ದುಡಿವ ಬೆವರು ಸುರಿಸುತ.
ನೆತ್ತರರಿಸಿ ನೆಲವ ಕಾಯೋ ಯೋಧರಿಗೆ ನಮಿಸುತ್ತಾ,
ನಾವು ಸಾಗಬೇಕು ಐಕ್ಯತೆಯ ಮಂತ್ರವನ್ನು ಸಾರುತ.

ಸರ್ವ ಧರ್ಮ ಸಮನ್ವಯದ ಜಾಗೃತಿ ದೀಪ, ಗಡಿಯಾಚೆ
ಬೆಳಗುತಿರಲಿ ಕನ್ನಡ ಧೀರರ ಪ್ರತಾಪ.
ಯಾತ್ರಿಕರನ್ನು ಆಕರ್ಷಿಸುವ ಮಲೆನಾಡ ಪ್ರಕೃತಿ,
ನಡೆನುಡಿಯಲ್ಲಿ ಮೆರೆಯುತ್ತಿದೆ ನಮ್ಮ ನಾಡ ಸಂಸ್ಕೃತಿ.

ಸಾಧುಸಂತರ ಪಾಠ ಮೌಢ್ಯವಳಿಸಿ ಮೂಡಿಸಿದೆ ನಮ್ಮೊಳಗೆ ವಿಶ್ವಪ್ರೇಮದ ಭ್ರಾತೃತ್ವ,
ವಚನಾಮೃತ ಭಕ್ತಿ ಸಾರ ಮಕ್ಕಳ ಮೊಳಗಿಸಿದೆ ಮಾತೆಯ ರಕ್ಷಣೆಗೆ.
ಜನಮನಗಳು ನೆನಪಿಡುವ ಸಾಧಕರ ಸಾಧನೆಯ ಸಾಲುಗಳ ಹೆಸರು,
ಒಂದಾಗಿ ಶ್ರಮಿಸಲು ತಿಳಿಸಿವೆ ನಮ್ಮ ನಾಡ ಪ್ರಗತಿ ಕೀರ್ತಿಗೆ.

- nagamani Kanaka

15 Jan 2022, 03:05 pm

ಲೂಯಿಸ್ ಬ್ರೈಲರ ಸಾಧನೆ.

ಅಂಧರ ಬಾಳಿನ ಬೆಳಕಾಗಿ ಲೂಯಿ
ಫ್ರಾನ್ಸ್ ದೇಶದಿ ಜನಿಸಿದರು.
ಅವರ ಶಿಕ್ಷಣಕ್ಕೆ ಬ್ರೈಲ್ಲಿಪಿ ಸೃಷ್ಟಿಸಿ
ವಿಶ್ವ ಮಾನವರೇನಿಸಿದರು.

ಸಾಮಾನ್ಯ ಮಗುವಾಗಿ ಜನಿಸಿದ ಲೂಯಿ
ಸದಾ ಚಟುವಟಿಕೆಯಿಂದಿರಲು
ಮೂರೂ ವರ್ಷ ತುಂಬಿದ ಮುಗ್ಧ ಬಾಲಕ
ತಂದೆಯ ಕೆಲಸವ ನೋಡಿದನು.
ಚರ್ಮವ ತಾ ಹದ ಮಾಡಲು ಹೋಗಿ
ಕಬ್ಬಿಣ ಹಾರಿತು ಕಣ್ಣಿನಲ್ಲಿ,
ಉಳಿದೊಂದು ಕಣ್ಣಿಗೂ ಸೋಂಕು ತಗುಲಿ
ಸಂಪೂರ್ಣ ಅಂಧತ್ವ ಪಡೆದರು ಲೂಯಿ.

ತಂದೆಯು ಮಗನಿಗೆ ಮೊಳೆಗಳ ಜೋಡಿಸಿ
ಸ್ಪರ್ಶದಕ್ಷರ ಜ್ಞಾನವ ನೀಡಿದರು.
ಚಲ ಬಿಡದ ಲೂಯಿ ವಿಶೇಷ ಶಾಲೆ ಸೇರಿ
ಬಾರ್ಬಿಯರ್ ಲಿಪಿ ಕಂಡು ಮನದಲ್ಲಿ ಚಿಂತನೆ ನಡೆಸಿದರು.
ಇವರ ಹಗಲು ರಾತ್ರಿಗಳ ಪರಿಶ್ರಮದಿಂದ
ರೂಪಗೊಂಡ ನವ ಲಿಪಿ ಎಂತ ಚಂದ,
ಅಂಧರ ಕಲಿಕೆಗೆ ಕನ್ನಡಿಯಾಗಿದೆ 6 ಚುಕ್ಕಿಗಳ
ಲೂಯಿಸ್ ಬ್ರೈಲ್ಲಿಪಿ ಕೊಡುಗೆ.

- nagamani Kanaka

15 Jan 2022, 02:57 pm

ನನ್ನರಸ ಸುಮ್ಮನಿರಿ ಎಂದಳೇಕೆ?

ನನ್ನರಸ ಸುಮ್ಮನಿರಿ ಅಂದಳೇಕೆ?
 
ನಿತ್ಯ ಮುಸ್ಸಂಜೆಯಲಿ, ಮನೆ ಮುಂದಿನ ಬನದಲ್ಲಿ
ನನ್ನಾಕೆ, ನೆರೆಯಾಕೆ ಸೇರಬೇಕೇ?
 
ಸೂರ್ಯನತ್ತ ತೆರಳುವಲ್ಲಿ, ಕತ್ತಲೆಯ ಸೆರಗಲ್ಲಿ
ಅವರಿವರ ಮೇಲೆ ಬೆಳಕು ಚೆಲ್ಲಬೇಕೆ?
 
ವಿಷಯವೇ ಇಲ್ಲದಾಗ, ಮಾತಿನಂಗಳದಾಗ 
ಮತ್ತೊಂದು ಹುಟ್ಟಲೇ ಬೇಕೇ? ಇದಕೆ ಶಂಕೆ ಏಕೆ?
    
ನಮ್ಮವರೇ ಚಂದವೋ, ನಿಮ್ಮವರೇ ಚಂದವೋ
ಎಂದಿವಳು ಪಕ್ಕದವಳ ಚಕ್ಕನೇ ಕೇಳಬೇಕೇ?
 
ನಮ್ಮವರು ಬರಿ ಅಂದವು, ನಿಮ್ಮವರೇ ಬಲು ಚಂದವು
ಎಂದವಳು ತುಟಿಯ ತಾ ಕಚ್ಚುತ ಹೊಗಳಬೇಕೇ?
 
ನನ್ನವಳ ಕೆನ್ನೆಯದು, ಕಮಲದಂತೆ ಹಿಗ್ಗುತಿರಲು  
ಹುಸಿನಗುವ ಅವಳತ್ತ ತೂರಿ ತೋರಲೇಕೇ?
 
ಅವಸರದಿ ತಾ ಬೇಗನೆ, ನೆಪವ ಹೇಳಿ ಮೆಲ್ಲನೇ
ಸಂಶಯದಲಿ ಇವಳೋಡಿ ತಾ ಬಂದಳೇಕೇ?
 
ಅವಳ ಬಳಿ ನಿಮಗಿನಿತು ಇಂತದೊಂದು ಸಲಿಗೆಯೇಕೆ
ಎಂದೆನ್ನ ಕೇಳಿ ತನ್ನ ಬೆರಳ ತೋರಲೇಕೆ?
 
ಅವಳ ನೆರಳು ನಿಮ್ಮ ಮೇಲೆ, ನನ್ನರಸ ಬೇಡ ಜೋಕೆ
ಎಂದೆನ್ನ ಕೆನ್ನೆ ನನ್ನರಸಿ ಚಿವುಟಲೇಕೇ?
 
ಇವಳೇಕೋ ಮೌನಿಯಾಗಿ, ಅವಳಿಗೂ ತಿಳಿಯದಾಗಿ
ಕಣ್ಣೆಂಜಲು ಬಿದ್ದಿವರ ಮಾತು ನಿಲ್ಲ ಬೇಕೇ?
 
ನಮ್ಮವರೇ ಚಂದವೋ ನಿಮ್ಮವರೇ ಚಂದವೋ
ಎಂದು ಪಕ್ಕದವಳ ಕೇಳುತ ಮುನಿಯಲೇಕೆ?
 
ನೀನೇ ನನ್ನ ಮಲ್ಲಿಗೆ, ಅವಳೋ ಕೆಂಪು ಸಂಪಿಗೆ
ಅನ್ನಲು, ನನ್ನರಸ ಸುಮ್ಮನಿರಿ ಅನ್ನಬೇಕೆ.
 
ರಚನೆ: ಡಾ. ಪ್ರಭಾಕರ್ ಬೆಲವಾಡಿ
(ಕೆ.ಎಸ್.ಏನ್. ಅವರಿಗೆ ನಮಿಸುತ್ತಾ)
 
Sent from Mail for Windows
 






- ಡಾ. ಪ್ರಭಾಕರ್ ಬೆಲವಾಡಿ

14 Jan 2022, 06:59 pm

ಪ್ರೇಮಿಯ ಕಲ್ಪನೇ

ನಿನ್ನನ್ನು ನೋಡದೆ...
ನಿನ್ನ ಅಂದ ಚೆಂದ ವೈಯಾರವನ್ನು ಬಿಡಿಸಬಲ್ಲೆನು...
ನಿನ್ನನ್ನು ಕೇಳದೇ...
ನಿನ್ನ ನೋವು ಏನೆಂದು ಹೇಳಬಲ್ಲೆನು...
ಕೇಳಬೇಡ ಗೆಳತಿ ನನ್ನ ಪ್ರೀತಿಗೆ ಇಂತಹ ಶಕ್ತಿ ಇದೆಯಂದು...
ನಿನಗೆ ಅಳು ಬಂದರೇ...
ನಿನ್ನ ಕಣ್ಣೀರನ್ನು ನನ್ನ ಕಣ್ಣಲ್ಲಿ ಭರಿಸಬಲ್ಲೆನು...
ಎಲ್ಲಿರುವೆ ಪ್ರೇಯಸಿ ಬೇಗ ಬಂದು ಸೇರು ನನ್ನನ್ನೂ....

- prashant

12 Jan 2022, 05:55 am

" ಪ್ರೀತಿಯ ದೋಣಿ "

ಪ್ರೀತಿ ಹುಟ್ಪಿತ್ತು ನನಗೆ ಅವಳ ಮೇಲೆ
ಪ್ರೀತಿಯಿಲ್ಲವೆಂದು ಹೇಳಿದ್ದಳು ನನ್ನ ಮೇಲೆ..!
ಶುರುವಾಗಿತ್ತು ನಮ್ಮಿಬ್ಬರ ಒಡನಾಟ
ಹೆಚ್ಚಾಗುತ್ತಿತ್ತು ನನ್ನ ಪ್ರೀತಿಯ ಹುಚ್ಚಾಟ..!
ಹುಟ್ಟಿತ್ತು ಪ್ರೀತಿ ಅವಳಿಗೂ ನನ್ನ ಮೇಲೆ
ಜೊತೆಯಾಗಿರುವ ಆಣೆ ಮಾಡಿದಳು
ಪ್ರೀತಿಯ ಮೇಲೆ...!
ತುಂಬಾ ಸಂತೋಷದಿಂದ ಇದ್ದೆವು
ಎರಡು ದೇಹ ಒಂದು ಜೀವದಂತೆ,
ದಿನ ಕಳೆದಂತೆಲ್ಲಾ, ತೋರಿದ ಪ್ರೀತಿ,
ಕಾಳಜಿಯನ್ನು ಅನುಮಾನಿಸಿದಳು
ಅಮ್ರತದಲ್ಲಿ ವಿಷ ಹಾಕಿದಂತೆ.....!
ಎಮ್.ಎಸ್.ಭೋವಿ.....✍️

- mani_s_bhovi

11 Jan 2022, 10:09 pm

ಕಾಯಕ

ಓ ಮೂಢ
ದೇವಾಲಯದಲ್ಲಿ
ನಿನ್ನ ಕಿವಿ ಮುಡಿಗೆ ಇಟ್ಟ
ಹೂವಿನ ಎಸಳೇ
ನಿನಗೆ ಮುತ್ತಿನ ಹಾರ
ಬಂಗಾರದ ಕಿರೀಟವಾದರೆ

ನನಗೆ ನನ್ನ
ಹೆತ್ತವರ ಪ್ರೀತಿಯೇ
ನನಗೆ ಮುತ್ತಿನ ಹಾರ
ಬಂಗಾರದ ಕಿರೀಟ

ದೇವರ ಗುಡಿಯಲ್ಲಿ ಕೊಡುವ
ತೆಂಗಿನ ಕಾಯಿ ಚಿಪ್ಪೇ
ನಿನಗೆ ಪ್ರಸಾದವಾದರೆ

ನನ್ನ ಹಡೆದವಳು
ನನ್ನಗೆ ಕೊಟ್ಟ
ಕೈ ತುತ್ತಿನ ಅನ್ನವೇ
ನನಗೆ ಪಂಚಾಮೃತ

ಓ ಮೂಢ
ದೇವರು ದೇವರೆಂದು
ಓಡಾಡಿ ಸುತ್ತಾಡಿ
ಉರುಳಾಡಿ ಉರುಳು
ಸೇವೆ ಮಾಡಿದರೂ
ವ್ರಥ ಜಪ ಮಾಡಿ
ಉಪವಾಸ ಬಿದ್ದರು
ವರವ ಕೊಡುವುದು ಇಲ್ಲವೋ
ಯಾರು ಬಲ್ಲವರುಂಟು

ನಾ ಯಾವ ದೇವರ
ಗುಡಿಗು ಓಡುವುದಿಲ್ಲ
ಸುತ್ತುವುದಿಲ್ಲ ಉರುಳಾಡಿ
ಉಪವಾಸ ಮಾಡುವುದಿಲ್ಲ
ನನ್ನ ಎದೆಯ ದೇವರು
ನನ್ನ ಹಡೆದವರು ಅವರಿರುವ
ಜಾಗವೇ ನನ್ನ ದೇವಾಲಯ
ಅವರ ಪ್ರೀತಿ ಮಮತೆಯೆ
ನನಗೆ ಮುತ್ತಿನ ಹಾರ ವರ

ಕಲ್ಲು ಕಂಬದ ದೇವರಿಗೆ
ಕೈ ಮುಗಿದು ನಿಲ್ಲುವ
ಗುಲಾಮ ನಾ ಅಲ್ಲ
ನನ್ನ ಹಡೆದವರ
ಸೇವೆ ಮಾಡುವ ಸೇವಕ ನಾ
ನನ್ನ ಹಡೆದವರ ಸೇವೆಯೇ
ನನ್ನ ನಿರಂತರ ಕಾಯಕ





- ರಾಜು ಹಾಸನ

08 Jan 2022, 10:59 pm