Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗೊಂಬೆ

ನೀನಾದೆಯೇನು ಜೀವವಿರದ ಗೊಂಬೆಯಂತೆ
ಜೀವವಿದ್ದರೂ ಇಲ್ಲದಂತೆ, ಕಂಡೂ ಕಾಣದಂತೆ
ಅಲಂಕರಿಸಿ ಕೂತವು ಗೊಂಬೆ ಯಾರದೋ ಕೈಚಳಕ ದಂತೆ
ತಾಳಕ್ಕೆ ಕುಣಿದವು ಗೊಂಬೆ ಅದರದೋ ಸೂತ್ರದಂತೆ


ಈ ಜೀವನ ಗೊಂಬೆ ಪ್ರದರ್ಶನವಲ್ಲ
ಗೊಂಬೆಯಾಟವೂ ಅಲ್ಲ
ಮತ್ತೆ ನೀನಾಗುವಯೇಕೆ ಮೌನ ತಾಳಿದ ಗೊಂಬೆಯಂತೆ?













ನೀನಾದೆಯೇನು ಜೀವವಿರದ ಗೊಂಬೆಯಂತೆ
ಜೀವವಿದ್ದರೂ ಇಲ್ಲದಂತೆ, ಕಂಡೂ ಕಾಣದಂತೆ
ಅಲಂಕರಿಸಿ ಕೂತವು ಗೊಂಬೆ ಯಾರದೋ ಕೈಚಳಕ ದಂತೆ
ತಾಳಕ್ಕೆ ಕುಣಿದವು ಗೊಂಬೆ ಅದರದೋ ಸೂತ್ರದಂತೆ


ಈ ಜೀವನ ಗೊಂಬೆ ಪ್ರದರ್ಶನವಲ್ಲ
ಗೊಂಬೆಯಾಟವೂ ಅಲ್ಲ
ಮತ್ತೆ ನೀನಾಗುವಯೇಕೆ ಮೌನ ತಾಳಿದ ಗೊಂಬೆಯಂತೆ?













- Asha H. S

15 Oct 2021, 04:13 pm

prem

ಕವಿಗಾರ ನಾನಲ್ಲ......
ಕವಿ ಚಿಂತೆ ಎನಗಿಲ್ಲ......
ಕಣ್ಣಿಗೆ ಎಟಕುವ ಕವಿತೆಯ
ಹೇಳಲೇ.......

ಕನಸೆಂಬ ಕನ್ನಡಿಗೆ.....
ಮನಸೆಂಬ ಮುನ್ನುಡಿ.....
ಮೊದಲ ಪಾಠ ಶಾಲೆ.....
ಮೊದಲ ಪಾಠ ಶಾಲೆ......
ಆರಂಭವಾದರೆ ಇದು ಅನುದಿನದ ಕಲೆ..
ಅಂತ್ಯವಾದರೆ ಇದು ಅನುಮಾನದ ಬಲೆ..





- PremkumarHarti

14 Oct 2021, 09:20 pm

ಅದೃಷ್ಟ

ಹುಟ್ಟಿಗೊಂದು ಅದೃಷ್ಟ
ನಲಿವಿಗೊಂದು ಬಾಲ್ಯ
ಕಲಿಕೆಗಾಗಿ ವಿದ್ಯೆ
ಗೆಲಿವಿಗೊಂದು ಪ್ರಯತ್ನ
ಬಾಳಿಗೊಂದು ಸ್ಫೂರ್ತಿ
ನೆನಪಿಗೊಂದು ಕಾರಣ
ಚಿಂತೆಗೊಂದು ಯೌವನ
ಪಡೆಯೊಂದು ಹುದ್ದೆ
ಜೀವನಕ್ಕೊಂದು ಸಂಗಾತಿ
ನೋವಿಗೊಂದು ಸಮಸ್ಯೆ
ಮುಪ್ಪಿಗೊಂದು ಚಿಂತೆ
ಕೊನೆಗೆ ದೇಹಕ್ಕೊಂದು ಚಿತೆ!!
#ಆಶಾ#

- Asha

30 Sep 2021, 08:41 pm

ನಿನ್ನ ಮರಿಯಲಾಗೆದೆ ನಿನ್ನ ಬಿಟ್ಟು ಇರೋಕೆ ಆಗದೆ ನನ್ ಮನಸ್ಸ

ನಿನ್ನ ಮರಿಯಲಾಗೆದೆ ನಿನ್ನ ಬಿಟ್ಟು ಇರೋಕೆ ಆಗದೆ ನನ್ ಮನಸ್ಸು
ನಿನ್ನನ್ನೇ ಕೋರಿದೆ,,
ಈ ಹೃದಯಕ್ಕೆ
ಬಂದು ಬಿಡು ಇಷ್ಟ ಇದ್ದರೆ ಇಲ್ಲವಾದರೆ ನಾನು ಒಟ್ಟಿಯಾಗಿ ಇರೋವೆ ನಿನ್ನ ಪ್ರೀತಿ ನ ಕಾಯುತ್ತ ನೀ
ಸಿಗೋವರೆಗೂ
ನನ್ನ ಪ್ರೀತೀ ನಿಷ್ಕಲ್ಮಶ ಪ್ರೀತಿಯಾದರೆ ಮತ್ತೊಂದು ಬಾರಿ ದೇವರು ನನ್ಗೆ ಜನ್ಮ ಕೊಟ್ಟರೆ ಆ ಲ್ಲಿಯೂ ನಿನ್ನ ಪ್ರೀತಿಗಾಗಿ ಕಾಯುತ್ತ ಇರುತ್ತೇನೆ
ಇಷ್ಟ ಇದ್ದಾರೆ ಹೇಳು ನಾನು ನಿನಗಾಗಿ ಈ ಪುಟ್ಟ ಬಡಪಾಯಿ ಮನಸ್ಸಿನಲ್ಲಿ ಪ್ರೀತಿಯ ಗುಡಿಸಲನ್ನೆ ಕಟ್ಟಿರುವೆ...

- karibasva

27 Sep 2021, 08:13 pm

ಬಯಕೆ

ಬೆಳಗುವ ಬಯಕೆ
ತುಂಬಿದೆ ಮನವನು
ಅಳಿಸದೆ ಉಳಿಸು ಓ ದೇವ

ಸ್ವಾರ್ಥ ಸಮಾಜದಲ್ಲಿ
ನಿತ್ಯದ ಸತ್ವ ಪರೀಕ್ಷೆಯಲ್ಲಿ
ಜಯವನು ನೀ ನೀಡು ಓ ದೇವ

ಆಡಂಬರದ ಅಂಧಕಾರದ
ಸೆರೆಯನು ನೀ ಬಿಡಿಸಿ
ಸನ್ಮಾರ್ಗವ ನೀ ತೋರು ಓ ದೇವ

ಬಾಳ ದೋಣಿಯಲಿ
ಏಳು ಬೀಳಿನಲಿ
ಸತ್ ಸಂಗಾತಿಯ ನೀ ನೀಡು ಓ ದೇವ







-ಶಾರದ

- ಶಕುಂತಲಾ

26 Sep 2021, 10:28 am

ಪ್ರೀತಿ

ಆಕಾಶಕ್ಕೆ ಏರಿದರೂ
ಭೂಮಿ ಸೇರಿದರೂ
ನಿನ್ನ ನನ್ನ ಪ್ರೀತಿ
ಮರೆಯಲಾಗದೇ ಗೆಳತಿ

ಸುಮ್ಮನಿದ್ದರು
ಒಮ್ಮೆಯಾದರೂ
ಕಾಡುವುದು ನಿನ್ನ
ಪ್ರೀತಿಯ ನೆನಪುಗಳು
ಕ್ಷಣ ಕ್ಷಣ ಪ್ರತಿಕ್ಷಣ

ತಂಗಾಳಿ ಬೀಸಿದರು
ಮುಸ್ಸಂಜೆ ಕಾವಿದರು
ಸುಡುವುದು ಮನ
ನಿನ್ನ ಪ್ರೀತಿಯ ಜ್ವಾಲೆಯಲ್ಲಿ

ನೀನೇ ನೀನೇ ನನ್ನ
ಪ್ರೀತಿಯ ಮಳೆ ಹನಿಯು ನೀ
ಏನೇ ಆದರೂ ಹೋದರೂ
ನನ್ನ ಜೀವನದ ಪುಟಗಳಲ್ಲಿ
ನೀ ಬರೆದ ಪ್ರೀತಿ ಪ್ರೇಮದ ಬರಹವ
ಅಳಿಸಲಾಗದು ಮರೆಯಲಾಗದು

- ರಾಜು ಹಾಸನ

23 Sep 2021, 05:07 pm

ಭಾವನೆ

ನೋವು ನಲಿವಿನ
ಕಣ್ಣ ಮುಚ್ಚಾಲೆ ಆಟವ
ಕ್ಷಣಾರ್ಧದಲ್ಲಿ ಮರೆತು
ಕಳೆಯಬವುದಯ್ಯ ಕಾಲ

ಆದರೆ ಹೆತ್ತು ಹೊತ್ತು ಸಾಕಿದ
ತಂದೆ ತಾಯಿಯ ಮರೆತು
ಬದುಕುವುದು ಉಂಟೇ

ನನ್ನೆದೆಯ ಗುಂಡಿಗೆಯಲ್ಲಿ
ಪ್ರೀತಿ ತುಂಬಿದ ಗೆಳತಿಯ
ನೆನಪುಗಳು ಎಂದೂ ಎಂದೆಂದಿಗೂ
ಬಾರದಿರುವುದುಂಟೆ

ವಿಧ್ಯೆ ಕೊಟ್ಟ ಗುರು
ಜೀವನದಲ್ಲಿ ಕಲಿತ ಪಾಠ
ಎಂದಾದರೂ ಮರೆತು
ಕಾಲ ಕಳೆಯುವುದು ಉಂಟೇ




- ರಾಜು ಹಾಸನ

22 Sep 2021, 10:58 pm

ಅನುಭವ



"ಅರ್ಥ ಮಾಡಿಕೊಳ್ಳುವ ಸಮಯದಲ್ಲಿ ಅಪರ್ಥ ಮಾಡಿಕೊಂಡು, ಅರ್ಥವಾದ ಮೇಲೆ ಮರುಗಿದರೆ ಏನು ಪ್ರಯೋಜನವಿಲ್ಲ

"ಮನುಷ್ಯನ 'ಅಹಂಕಾರ' ಕರಗುವುದು ಎರಡೇ ಸಲ, ಒಂದು ಎಲ್ಲವನ್ನು ಕಳೆದುಕೊಂಡಾಗ, ಇನ್ನೊಂದು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವಾಗ."


"ಸಿಟ್ಟು ಮಾಡಿಕೊಳ್ಳುವುದೆಂದರೆ ವಿಷ ನಾವು ಕುಡಿದು ಇನ್ನೊಬ್ಬರು ಸಾಯಲಿ ಎಂದು ಆಶಿಸಿದಂತೆ"

- manoj

22 Sep 2021, 09:56 pm

ಮುಗ್ಧ ಜನಗಳು

ಕಿತ್ತು ತಿನ್ನುವ
ಬಡತನವಿದ್ದರೂ
ಕಣ್ಣ್ ಮುಚ್ಚಿ
ಮಣ್ಣಾಗುವ ತನಕ
ಹೊಟ್ಟೆ ಬಟ್ಟೆ ಕಟ್ಟಿ
ಗಂಜಿ ನೀರು ಕುಡಿದು
ಬದುಕು ದುಡಬವುದಾದರು

ಬಡವರ ಹೆಣ್ಣು ಮಣ್ಣು
ಹೊನ್ನು ಕಂಡರೆ
ಕುಕ್ಕಿ ಕುಕ್ಕಿ ತಿನ್ನುವ
ರಣ ಹದ್ದು ನರ ರಾಕ್ಷಸರೇ
ತುಂಬಿ ತುಳುಕುತ್ತಿರುವ
ಈ ಸಮಾಜದಲ್ಲಿ
ಬದುಕು ಕಟ್ಟುವುದು
ಹೇಂಗಯ್ಯ ಹೇಗಯ್ಯ

ದೇವರಂತೆ ದೇವರು
ಏನು ದೇವರೋ
ಯಾಂತ ದೇವರೋ
ಮುಗ್ಧ ಕಂದಮ್ಮಗಳ
ಮಾರುಣ ಹೋಮವೇ
ನೆಡೆಯುತ್ತಿದ್ದರು
ನೋಡಿ ಕಣ್ಣ್ ಮುಚ್ಚಿ ಕುಳಿತಿರುವ
ದೇವರು ಒಂದು ದೇವರ ?

ಓ ಮುಗ್ಧ ಜನಗಳೇ
ಏಳಿರಿ ಏಳಿರಿ ಏದ್ದೆಳಿರಿ
ಮೌಢ್ಯತೆಯಿಂದ ಹೊರಬಂದು
ನರ ರಾಕ್ಷಸರ ರುಂಡ ಮುಂಡವಾ
ಚಂಡಾಡಿರಿ ಚಂಡಾಡಿರಿ






- ರಾಜು ಹಾಸನ

15 Sep 2021, 01:07 am

ಓ ಮನಸೇ

ಮನಸೇ ನೀ ಹೇಳು
ಏಕೆ ಜಾರಿದೆ ಪ್ರೀತಿಗೆ
ಓ ಮನಸೇ,ಓ ಮನಸೇ, ಓ ಮನಸೇ..

ಹೂವಿನಂತ ಪ್ರೀತಿಗೆ
ಜೇನಿನಂತ ಸವಿಯ ನೀಡಿ
ಸವಿಜೇನು ಹೊಳೆಗೆ
ಈ ಮನಸು ಸೋತಿದೆ.

ಮನಸಿನಾಳದ ಪ್ರೀತಿ
ಹೊಸ ಪರಿಮಳ ಸೂಸಿ
ಮಧುರ ಗಾನದಲ್ಲಿ ತೇಲಿ
ಈ ಮನಸು ಸೋತಿದೆ.

ಹುಚ್ಚು ಮನಸಿನ ಪ್ರೀತಿ
ಹುಚ್ಚು ಕನಸಿನ ಪ್ರೀತಿ
ಮನಸ್ಸು ಮನಸ್ಸಿನ ಪ್ರೀತಿಗೆ
ಈ ಮನಸ್ಸು ಸೋತಿದೆ.

ಕತ್ತಲೆಗೆ ಬೆಳಕನು ಚೆಲ್ಲಿ
ಬದುಕಿಗೆ ದಾರಿ ತೋರಿ
ದಾರಿ ನಡೆಸೋ ಪ್ರೀತಿಗೆ
ಈ ಮನಸು ಸೋತಿದೆ.

- shankar gargi

14 Sep 2021, 05:25 pm