ಏನ್ ಹೇಳಲಿ ಹುಡಗಿ ನಿನ್ನ ಬಗ್ಗೆ...
ನನ್ನಲ್ಲೇ ನಾ ಕಳೆದು ಹೊಗಿರುವೆ,
ಕಂಡು ನಿನ್ನ ಮುಗುಳುನಗೆ...
ಆಗಾಗ ಕೋಪಿಸಿಕೊಳ್ಳಬೇಕು ನಿನು ಬೇಕಂತಲೇ...
ತುಂಬಾ ನಗಿಸಬೇಕು ನಿನ್ನ ನಾನು,ಬರೀ ಮುತ್ತಲೇ...
ಕನ್ನಡಿ ಎದುರು ನೀ ನಿಂತಾಗ,ಬೆನ್ಹಿಂದೆ ನಾ ನಿಂತು
ಮುದ್ದಿಸೋ ಹಾಗೆ ನಿನಗೆ ಭಾಸವಾಗಲಿ....
ನಿನ್ನ ಒಂಚೂರು ದಯೆಯಿಂದ ಇಂತಹ ಪೋಲಿ
ಹಗಲು ಕನಸೆಲ್ಲವೂ ನನಸಾಗಲಿ....
ಎಮ್.ಎಸ್.ಭೋವಿ...✍️
ಯುವತಿಯೊಬ್ಬಳು ಹಿಗೆ ಬರೆದಿದ್ದಳು
"ತಂದೆ ತಾಯಿಯನ್ನು ನೋಡಿಕೊಳ್ಳುವ ಅಧಿಕಾರ
ಪುತ್ರಿಯರಿಗೆ ದೊರೆತರೆ ಇಡಿ ದೇಶದಲ್ಲಿ
ಒಂದೇ ಒಂದು ವ್ರುದ್ಧಾಶ್ರಮ ಇರಲಾರದು."
ಅದಕ್ಕೆ ಯುವಕನೊಬ್ಬ ಈ ರೀತಿ ಪ್ರತಿಕ್ರಯಿಸಿದನು:
"ಒಂದು ವೇಳೆ ಇದೆ ಪುತ್ರಿಯರು ಮದುವೆಯ
ನಂತರ ತಮ್ಮ ಅತ್ತೆ-ಮಾವಂದಿರನ್ನು
ತಮ್ಮ ತಂದೆ-ತಾಯಿಯಂತೆ ಕಂಡರೆ
ದೇಶದಲ್ಲಿ ಮಾತ್ರವಲ್ಲ ಇಡಿ ಜಗತ್ತಿನಲ್ಲಿ
ಒಂದೇ ಒಂದು ವ್ರುಧ್ಧಾಶ್ರಮ ಕಾಣಲಾರದು.."
ಎಮ್.ಎಸ್.ಭೋವಿ....✍️
ನಿನಗೆ ಕೊಡದೆ ಊಳಿದ ಪ್ರೀತಿ
ಹಾಗೆ ಉಳಿದಿದೆ ನನ್ನಲ್ಲಿ
ಎಂದಾದರೂ ಸಿಗು ಒಂದಿನ...
ತಂದು ಇಡುವೆ ನಿನ್ನ ಕೈಯಲ್ಲಿ
ಮೌನವಾಗಿ ಕೂತಿರುವೆ ಏಕೆ ಓ ನನ್ನ ನಲ್ಲೆ..
ಮುತ್ತೊಂದ ನೀಡುವೆ ಬಳಿ ಬಾ ನೀ ಇಲ್ಲೆ...
ತುಂತುರು ಮಳೆಯಲ್ಲಿ ನೆನೆದಿರುವೆ ನಾ ಇಲ್ಲಿ..
ನಡುಗು ಸೇರಿದೆ ನನಗೆ...
ಬೆಚ್ಚಗಿಡು ನನ್ನ ನಿನ್ನ ಅಂಗೈಯಲ್ಲಿ...
ಇನ್ನೆಷ್ಟು ಹೇಳುವುದು ನೀ ನನ್ನ ಹ್ರದಯವೆಂದು...
ಪ್ರತಿ ಬಡಿತಕ್ಕೂ ನೆನಪಾಗುತ್ತಿರುವೆ
ಬಂದು ನೋಡು ಇಂದು...
ಮಂಜು ತುಂಬಿದ ಈ ಮಂಜಾನೆಯಲ್ಲಿ
ಬಂಧಿಯಾಗುರಿವೆ ನಾ ನಿನ್ನ ಪ್ರೀತಿಯ
ಖಜಾನೆಯಲ್ಲಿ......
ಎಮ್.ಎಸ್.ಭೋವಿ...✍️