Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಒಡೆದ ಹ್ರದಯ

ನಿನ್ನಿಂದ ದೂರ ಆಗುವ ಉದ್ದೇಶ ನನ್ನದಲ್ಲ....

ಆದರೆ ನನ್ನಿಂದ ನಿನಗೆ ತೊಂದರೆ ಆಗಬಾರದು ಅಂತ...

ನೀನು ಇಲ್ಲದೆ ನಾ ಖುಷಿಯಿಗಿರಲ್ಲ...

ಆದರೆ ನಿನ್ನ ಖುಷಿ ನನ್ನಿಂದ ಹಾಳಾಗಬಾರದು ಅಂತ...

ನಿನ್ನ ಜೊತೆ ಇಲ್ಲದಿದ್ದರೂ , ನಾ ನಿನ್ನ ಮರೆಯಲ್ಲ...

ಆದರೆ ನೀ ನನ್ನ ಮರಿಯಬೇಕು ಅಂತ....

msbhovi.....✍️



- mani_s_bhovi

17 Aug 2021, 09:44 pm

ಚಿತ್ತ ವಿಕಾಸದತ್ತ

ರಾಷ್ಟ್ರದ ವಿಕಾಸಕ್ಕೆ
ಜಾತಿ ಮತ ಪಂಥಗಳ ಅಡ್ಡಿಯಾಗಬಾರದು
ದೇಶದ ಏಳ್ಗೆಗೆ ಪರಕೀಯರ ಆಶ್ರಯ ಬಯಸದೆ
ಸ್ವದೇಶದ ಶಕ್ತಿಯಲ್ಲಿ ಬೆಳೆಯಬೇಕು
ಸಾಹಿತ್ಯ-ಸಂಸ್ಕೃತಿ ಜ್ಞಾನ ವಿಜ್ಞಾನಗಳ ಕ್ಷೇತ್ರಗಳಲ್ಲಿ
ಎತ್ತರವಾಗಿ ಬೆಳೆದು ಬದುಕಬೇಕು
ಈ ತೊಗಲಿನ ದೇಹಕ್ಕೆ
ಮೂರು ದಿನದ ಸಂತೆಯಲ್ಲಿ
ನೂರು ಚಿಂತೆ ಮಾಡಿ ಸಾಯುವುದೇಕೆ
ಹುಟ್ಟಿನಿಂದ ಸಾಯುವವರೆಗೂ
ಪ್ರತಿಯೊಬ್ಬ ಭಾರತೀಯನ
ಜೀವನ ಪುಟದಲ್ಲಿ
ಒಂದಿಲ್ಲ ಒಂದು ಇತಿಹಾಸ
ಬರೆದಿಡುವಂತಾಗಬೇಕು
ಎದ್ದೆಳೀ ನವ ಯುವಕರೆ
ಭಾರತಾಂಬೆಯ ಕರೆ ಇದು
ಯಾರಿಗೂ ಬಗ್ಗದೆ ಯಾರಿಗೂ ಕುಗ್ಗದೆ
ಸಾಧನೆಯ ಚಿತ್ತ ನಿಮಗಿರಲಿ
ರಕ್ತದ ಕಣ ಕಣದಲ್ಲಿ
ರಾಷ್ಟ್ರಪ್ರೇಮ ತುಂಬಿರಲಿ
ಭಾರತ ಮಾತೆಯ ಕೀರ್ತಿ ಧ್ವಜವು
ಮುಗಿಲೆತ್ತರಕ್ಕೆ ಹಾರುತ್ತಿರಲಿ



- shankar gargi

17 Aug 2021, 12:21 pm

1947 ಸ್ವಾತಂತ್ರ್ಯ

1947 ಸ್ವಾತಂತ್ರ್ಯ
ಯಾರಿಗೆ ಬಂತು ಯಾತಕೆ ಬಂತು
ಕೊಳಕು ಮನಸ್ಸಿನ
ಹೋಲಸು ಮನುವಾದಿಗಳು
ತಿರಂಗ ಇಡಿದು ದಬ್ಬಾಳಿಕೆ
ನೆಡೆಸುವ ಸ್ವಾತಂತ್ರ್ಯ

ಉಳ್ಳವರು ಇಲ್ಲದವರ
ಕಿತ್ತು ತಿನ್ನುವ ಸ್ವಾತಂತ್ರ್ಯ
ಮೇಲು ಕೀಳೆಂಬ
ಜಾತಿ ಮತಗಳ ಕಿತ್ತಾಟದ ಸ್ವಾತಂತ್ರ್ಯ

ಯಾರಿಗೆ ಬೇಕು ಯಾತಕೆ ಬೇಕು
ಸಮನತೆಯೇ ಇಲ್ಲದ
ಬರಿ ತಾರತಮ್ಯ ವೇ ತುಂಬಿದ
ಈ ಸ್ವಾತಂತ್ರ್ಯ

ದಶಕಗಳೆ ಕಳೆದರು
ಅಳಿಯಾದ ಹೆಣ್ಣಿನ ಶೋಷಣೆ
ಶಿಕ್ಷಿತರಾದರು ಅನಾಗರಿಕರಂತೆ
ಮೃಗಗಳಂತೆ ಬದುಕುವ
ಗುಲಾಮಗಿರಿಯ ಸ್ವಾತಂತ್ರ್ಯ
ಯಾರಿಗೆ ಬೇಕು ಯಾತಕೆ ಬೇಕು

ಶತಕಗಳೇ ಬಾರಿಸಿದರು
ಮನುವಾದ ಅಳಿಸದ
ಜಾತಿಗಳು ನಾಶಿಸದ
ಬಡವ ಬಲ್ಲಿದ ತಾರತಮ್ಯ
ನಿಲ್ಲದ ಈ ಸ್ವಾತಂತ್ರ್ಯ
ಯಾರಿಗೆ ಬೇಕು ಯಾತಕೆ ಬೇಕು
***ರಾಜು ಹಾಸನ***








- ರಾಜು ಹಾಸನ

16 Aug 2021, 12:48 am

ವಂದೆ ಭಾರತ

ವಂದೆ ಭಾರತ ಇದುವೆ ವಂದೆ ಭಾರತ
ಎಂದೆಂದಿಗೂ ಇದುವೆ ವಂದೆ ಭಾರತ
ತಾಯಿ ಭಾರತಿ ನಮ್ಮ ತಾಯೆ ಭಾರತಿ
ಜೈ ಜೈ ಎನ್ನುತ್ತಲೆ ಮುಂದೆ ಸಾಗುವಾ //ಪ//

ಭಾಷೆ _ವೇಷ ಬೇರೆ ಯಾದರೇನಂತೆ
ಭಾವ ಜೀವ ಗಳಲ್ಲಿದೆ ಭಾರತೀಯತೆ
ದೇಶಭಕ್ತಿ ದೈವಶಕ್ತಿ ಸ್ಮರಿಸಿ ಕೊಳ್ಳುತ
ಹೆಜ್ಜೆ ಗೆಜ್ಜೆ ಸದ್ಮಾಡ್ತ ನಾವ್ ಸಾಗುವ //ಚ//೧/

ರಾಷ್ಟ್ರ ದ್ವಜವನು ಕೈಯ್ಯಲ್ಲಿ ಹಿಡಿದು
ರಾಷ್ಟ್ರ ಗಾನ ಮೊಳಗಿಸುತ್ತ ಸಾಗುವ
ವಂದೇಮಾತರಂ ವಂದೇಮಾತರಂ
ಎಂದು ನಾವ್ ಸೇವೆಯ ಮಾಡುವ //೨//

ಶಾಂತಿ ಕ್ರಾಂತಿ ಬಲಿದಾನದಿಂದ ಪಡೆದ
ಸ್ವಾತಂತ್ರದ ಕಹಳೆಯನ್ನು ಉದುತ್ತ
ಬಲಿಷ್ಠ ಭಾರತ ನಮ್ಮ ಹೆಮ್ಮೆ ಭಾರತ
ಎಂದು ನಾವೆಲ್ಲರು ಕೂಗಿ ಹೇಳುವಾ //೩//

ಕಳೆದು ಹೋದ ಹೊನ್ನ ಚರಿತೆ ನೆನೆದು
ಕಲೆ ವಿಜ್ಞಾನ ಆವಿಷ್ಕಾರ ಕ್ರೀಡೆ ಇಂದ
ಹೊನ್ನ ಕಳಸ ವಿಟ್ಟು ಭಾರತಾಂಬೆ ಗೆ
ನಾವ್ ಜಯ ಕಾರ ಮೊಳಗಿಸಿಹೇವು //೪//

ಕಲ್ಮೇಶ ಬಡಿಗೇರ









- Kalmesh Badiger

14 Aug 2021, 07:19 pm

ತೊರೆದು ಹೊರಟ ದಾರಿಗೆ
ಎದುರು ಕನಸು ನೀಡಿದೆ
ಹರೆಯ ತುಂಟ ನೋಟಕೆ ,ಜರಿದು ನಿಂತ ಭಾವವು
ನನ್ನ ಹೊರತು ಹೇಳಿದೆ .......

ನಾ ಮತ್ತೆ ನೋಡೋ ಕಣ್ಣಿಗೆ
ಮೊದಲ ಪ್ರತಿಯ ಕಾಡಿಗೆ
ದೋಚಿ ಹೋದ ಖುಷಿಯನು ಬಿಟ್ಟು ಹೋಗೋ ಮನವಿದೆ
ಬಿಗಿದ ಕೊರಳ ಧ್ವನಿಯಲಿ ತಿರುಗಿ ನೋಡೋ ಹಾಗಿದೆ

ತೆರೆದ ಕಣ್ಣ ನೋಟಕೆ ವಿದಾಯವನ್ನು
ಬಯಸದೇ ನಾ ನೋಡಿದೆ........

- Udaya Kumar

14 Aug 2021, 01:56 pm

ತಾಯಿ

ಒಂಬತ್ತು ತಿಂಗಳು ಹೊತ್ತು
ನೂರೆಂಟು ದೇವರಿಗೆ ಹರಿಕೆಯೊಡ್ಡಿ
ಎದೆಯ ಹಾಲುಣಿಸಿ
ಅಪ್ಪಿ ಮುದ್ದಾಡಿದವಳ
ಹೆಂಗ ಮರೆಯಲಿ ನನ್ನ ಹೆತ್ತವಳ

ಚಂದಿರನ ತೋರಿಸಿ ತುತ್ತು
ಉಣಿಸಿ ಬೆಳೆಸಿದವಳ
ತೊಡೆಯ ಮೇಲೆ ಮಲಗಿಸಿ
ಜೋಗುಳ ಹಾಡಿದವಳ
ಹಾಲುಗೆನ್ನೆಯ ಮೇಲೆ
ಮುತ್ತು ಕೊಟ್ಟವಳ
ಹೆಂಗ ಮರೆಯಲಿ
ಈ ದೇಹವ ತಿದ್ದಿ ತೀಡಿದಳ

ನನಗಾಗಿ ಜೀವ ಇಟ್ಟವಳ
ಕೆಟ್ಟ ಗಣ್ಣಿನ ದೃಷ್ಟಿ ತೆಗೆದವಳ
ಎಂದು ತನ್ನ ನೋವನ್ನು ತೋರಿಸಿದವಳ
ಕೊನೆಯುಸಿರಿನವರೆಗೂ
ನನ್ನ ಪ್ರೀತಿಸಿದವಳ
ಹೆಂಗ ಮರೆಯಲಿ ನನ್ನ ಹಡೆದವಳ

- shankar gargi

13 Aug 2021, 09:46 pm

ಶಿಕ್ಷಕರ

ಬರೆವ ಅಕ್ಷರವು
ಅಕ್ಕರೆಯಾಗಲಿ,

ಕೂಗುವ ಧ್ವನಿಯು
ಧಮನಿಯ ತುಂಬಲಿ,

ಕಾಣುವ ದೃಷ್ಟಿಯು
ಒಲವ ಸೃಷ್ಟಿಸಲಿ,

ಕರಗುವ ಕಡಲು
ಕರಿ ಮೋಡವಾಗಲಿ,

ಸುರಿಯುವ ಹನಿಯು
ಹಸಿರಾಗಿ ಬೆಳೆಯಲಿ,

ಬೆಳೆದ ಹಸಿರು ಬಡವರ
ಉಸಿರಾಗಿ ಬದುಕಲಿ......

ಒಟ್ಟಿನಲಿ
ಕಲಿ - ನಲಿ ಯ ಬದುಕನಲಿ
ಕಲಿಯುವುದೆಲ್ಲವು
ನಿಸ್ವಾರ್ಥದಿಂದ ನಲಿಯುತಿರಲಿ......

- Gururaj Angadi

13 Aug 2021, 08:11 am

ಸ್ವಾತಂತ್ರ್ಯ

ಬಂತು ಬಂತು ಸ್ವಾತಂತ್ರ್ಯ
ಎಪ್ಪತೈದರ ಸ್ವಾತಂತ್ರ್ಯ
ಅದ್ದೂರಿ ವೈಭವದ ಸ್ವಾತಂತ್ರ್ಯ
ಸರ್ವ ಸಮಾನತೆಯ ಸ್ವಾತಂತ್ರ್ಯ
ಯಾರಿಗೂ ಬಗ್ಗದ ಸ್ವಾತಂತ್ರ್ಯ
ಯಾರಿಗೂ ಕುಗ್ಗದ ಸ್ವಾತಂತ್ರ್ಯ
ಸಾಕ್ಷರತೆಯ ಬೆಳಗಿಸುವ ಸ್ವಾತಂತ್ರ್ಯ
ದೇಶದ ಅಭಿವೃದ್ಧಿಯ ಸ್ವಾತಂತ್ರ್ಯ
ದೇಶದ ಪ್ರಬಲತೆಯ ಸ್ವಾತಂತ್ರ್ಯ
ಧೈರ್ಯ ತ್ಯಾಗದ ಸ್ವಾತಂತ್ರ್ಯ
ಸತ್ಯ ಶಾಂತಿಯ ಸ್ವಾತಂತ್ರ್ಯ
ಹಸಿರು ಸಮೃದ್ಧಿಯ ಸ್ವಾತಂತ್ರ್ಯ
ತ್ಯಾಗ ಬಲಿದಾನಗಳ ಸ್ವಾತಂತ್ರ್ಯ
ವೀರ ಶೂರರ ಸ್ವಾತಂತ್ರ್ಯ
ದೇಶಭಕ್ತರ ಸ್ವಾತಂತ್ರ್ಯ
ಭಾರತ ದೇಶದ ಸ್ವಾತಂತ್ರ್ಯ
ಎಪ್ಪತೈದರ ಸ್ವಾತಂತ್ರ್ಯ
ಅಮೃತ ಮಹೋತ್ಸವದ ಸ್ವಾತಂತ್ರ್ಯ
ಭಾರತಾಂಬೆಯ ಸ್ವಾತಂತ್ರ್ಯ

- shankar gargi

12 Aug 2021, 07:50 pm

ಮುಪ್ಪು

ಬಾಲ್ಯವ ಕಳೆದು
ಹರೆಯು ಕಮರಿ
ಮುಪ್ಪಿಗೆ ಬಂದು ನಿಂತೈತ್ಯೋ

ಅವ್ವನ ಮೊಲೆಯ ಚೀಪುತ
ಅಪ್ಪನ ಹೆಗಲ ಏರಿತ
ಮೋಜು ಮಸ್ತಿಯ ಮಾಡಿತ
ಎಲ್ಲರ ಚಿಂತೆ ಗೆಡಸೈತ್ಯೋ
ಜೀವಕ್ಕ ಬ್ಯಾಸರಾಗಿ
ಮುಪ್ಪಿಗೆ ಬಂದು ನಿಂತೈತ್ಯೋ

ಹರೆಯದ ಕಾಲಕ್ಕೆ
ಚಿಗುರು ಮೀಸೆಯ ತಿರುವುತ
ನೂರೆಂಟು ಕನಸವ ಕಟ್ಟಿ
ಈ ಜಗವ ಮೆಟ್ಟಿ ನಿಂತೈತ್ಯೋ
ಮುಪ್ಪಿಗೆ ಬಂದು ಕುಂತೈತ್ಯೋ

ನಡೆಯುತ ಬೆನ್ನು ಬಾಗಿ
ಕೈಯಲ್ಲಿ ಕೋಲನ್ನು ಹಿಡಿದು
ಮಂಕು ಮಂಕಾಗಿ ನಿಂತೈತ್ಯೋ
ನೂರೆಂಟು ಚಿಂತೆ ಮಾಡೈತ್ಯೋ
ಮುಪ್ಪಿಗೆ ಬಂದು ನಿಂತೈತ್ಯೋ

ಏನಪ್ಪ ಮಾಡಿದೀ
ನೀ ಅಂತ ಕೇಳಿದರೆ
ಮಾರಿ ಮಾರಿ ನೋಡೈತಿ
ಬಾಯಿ ಬಾಯಿ ಬಿಡತೈತಿ
ಕಣ್ಣಾಗ ನೀರು ತುಂಬೈತಿ
ಮಸಣದ ಹಾದಿಯ ಹಿಡದೈತಿ




- shankar gargi

11 Aug 2021, 02:24 pm

ಎಲ್ಲಿಗೆ ಪಯಣ

ಹುಟ್ಟು ಎಲ್ಲೊ
ಸಾವು ಎಲ್ಲೊ
ಬದುಕಿನ
ಪಯಣ ಎಲ್ಲಿಗೋ!

ಹುಟ್ಟಿದ
ಮೊದಲ ದಿನದಿಂದ
ಸಾಯುವ
ಕೊನೆಯ ದಿನದವರಿಗೆ
ದುಡಬೇಕು
ಬದುಕಿನ ಪಯಣ

ಹೊತ್ತು ಮುಳುಗಿ
ಕತ್ತಲಾಗುವ ತನಕ
ಕಳೆಯಬೇಕು
ನೋವು ನಲಿವಿನ ಪಯಣ

ಜೀವನದಲ್ಲಿ
ಗುರಿ ಇರಲಿ ಇಲ್ಲದಿರಲಿ
ಹುಟ್ಟಿದ ಮೇಲೆ
ಸಾವಿನ ದಡ ಸೇರುವುದು ನಿಶ್ಚಿತ

- ರಾಜು ಹಾಸನ

10 Aug 2021, 10:37 pm