ಕುದಿಯುವ ನೀರಿನೊಳಗಿನ
ಕುಳ್ ಮುಟ್ಟಿ ತಿಳಿದವರುಂಟಯ್ಯಾ
ಮನುಜನ ಮನದ ಮರ್ಮವ
ತಿಳಿದವರು ಯಾರ್ ಉಂಟಯ್ಯಾ
ದೇವರ ಗುಡಿಯಲ್ಲಿ
ದೇವರು ಇರುವುದೋ ಇಲ್ಲ
ದೆವ್ವವು ಇರುವುದೋ
ಕಂಡು ಬಲ್ಲವರು
ಯಾರ್ ಇರುವರಯ್ಯ ಈ ಜಗದಲ್ಲಿ
ಸತ್ತವನು ಸಾವವಾಗುವನೆ ಹೋರೆತು
ಮಾಯವಿಯಾಗಲಾರ ಹಾಗೆಯೇ
ಸತ್ತ ಕಲ್ಲು ಕೆತ್ತಿದ್ದಾರೆ
ಮೂರ್ತಿಯಾಗುವುದೇ ಹೋರೆತು
ದೇವರಾಗಲಾರದಯ್ಯ
ಸಮಾನತೆ ಇಲ್ಲದ ಸಮಾಜಕ್ಕಿಂತ
ನೆಮ್ಮದಿ ಇಲ್ಲದ ಊರಿಗಿಂತ
ಜಾತಿ ಮತದ ಮಂತ್ರ ತಂತ್ರದ
ಕುತಂತ್ರದ ದೇವರ ಗುಡಿಗಿಂತ
ನಿಶ್ಯಬ್ಧದ ಗೂಡು ಸಮಾನತೆಯ ಸುರು
ಆತ್ಮಗಳ ತವರೂರು ಸ್ಮಶಾನವು
ದೇವಾ ಲೋಕಕ್ಕಿಂತ ಮಿಗಿಲ್ಲಲ್ಲವೇ
ಕಟ್ಟುವರಯ್ಯ ಕಟ್ಟುವರು
ಗಲ್ಲಿ ಗಲ್ಲಿಗೊಂದು
ಕಲ್ಲು ಕಲ್ಲಿಗೊಂದು
ಗುಡಿ ಗೋಪುರಗಳ
ಆಲಯ ದೇವಲಾಯ
ಕಟ್ಟಿ ಕೆಡಗುವರಯ್ಯಾ
ಉರುಳಿಸುವರಯ್ಯಾ
ಮನೆ ಮನೆಗೊಂದು
ಹಾದಿ ಬೀದಿಯ ಕಲ್ಲಿಗೊಂದು
ಪ್ರಾಣಿ ಪಕ್ಷಿ ಬಲಿ ಜೀವ ಬಲಿ
ನೆಲೆ ಉಂಟು ಬೆಲೆ ಉಂಟು
ಮುಕ್ಕೋಟಿ ದೇವರಿಗೆ
ಆಲಯವು ಉಂಟಯ್ಯಾ
ಛಲ ಉಂಟು ಬಲ ಉಂಟು
ಕಲೆ ಉಂಟು ಬದುಕಲು
ಬದುಕಿ ಬಾಳಲು
ಮೂಲ ನೆಲೆ ಎಲ್ಲೊಂಟಯ್ಯ
ಮುಗ್ಧ ಜನಗಳ ಜೀವನವೇ
ಅಲೆ ಅಲೆ ಅಲೆದಾಟವಯ್ಯ
ಅಲೆಮಾರಿ ದೇವರಿಗೆ
ಇರುವುದಯ್ಯ
ಹೆಜ್ಜೆ ಹೆಜ್ಜೆಗೊಂದು
ಸಾಗರದಷ್ಟು ಆಲಯ
ಅಲೆದಾಡಿ ದುಡಿದು ತಿನ್ನುವ
ಮುಗ್ಧ ಜನಗಳಿಗೆ
ಇಲ್ಲವೇ ಇಲ್ಲವಯ್ಯ
ಒಂದೇ ಒಂದು ನಿಲಯ
ಈ ಮೂಢ ಮನುವಾದಿಗಳ
ಸಂತೆಯಲ್ಲಿ
ಜೀವವಿಲ್ಲದ ಕಲ್ಲಗೆ
ಮಂತ್ರ ತಂತ್ರ ಪಠಿಸಿದರೆ
ಜೀವವಿಲ್ಲದ ಕಲ್ಲಿಗೆ
ಜೀವ ಬರುವುದಾದರೆ
ಕಲ್ಲು ದೇವರಾಗುವುದದಾರೆ
ಸತ್ತವರಿಗೆ ಚಟ್ಟ ಕಟ್ಟವುದು ಏತಕೆ
ಅತ್ತು ಕರೆದರು
ಮರಳಿ ಬಾರದಿರುವುದು
ಹೋದ ಜೀವ
ಮರಳಿ ಗೂಡಿಗೆ ಏತಕೆ
ಜೀವವಿಲ್ಲದ ಕಲ್ಲು
ಉಸಿರು ನಿಂತ ಹೆಣ
ಎರಡು ಒಂದೇ
ಜೀವವಿಲ್ಲದ ಕಲ್ಲಿಗೆ
ಜೀವ ತುಂಬುವುದು ಒಂದೇ
ಉಸಿರು ನಿಂತ ಹೆಣಕ್ಕೆ
ಉಸಿರು ತುಂಬುವುದು ಒಂದೇ
ಇದು ಕಷ್ಟ ಅಸಾಧ್ಯವಾದದ್ದು
ನಿನ್ನ ಪ್ರೀತಿ ಸಿಕ್ಕ ಖುಷಿಯಲಿ ಏನೇನೋ
ಕನಸುಗಳನ್ನು ಕಟ್ಟಿಕೊಂಡು ಖುಷಿಪಡುತ್ತಿದ್ದೆ....
ನೀ ತೋರಿಸಿದ ಪ್ರೀತಿ , ಕಾಳಜಿಗೆ ನಾ ನನ್ನನ್ನೆ
ಒಂದು ಕ್ಷಣ ಮರೆಯುತ್ತಿದ್ದೆ.....
ಆದರೆ ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ ನನ್ನ
ಪ್ರೀತಿಯಲ್ಲಿ ಏನೋ ಕೊರತೆ ಇರಬೇಕು ಅದಕ್ಕೆ
ನಿನು ಪ್ರೀತಿಸುದನ್ನೆ ಮರೆತು ಬಿಟ್ಟೆ.....
ಖುಷಿಯಲ್ಲಿ ತೆಲುತ್ತಿದ್ದ ಮನಸ್ಸಿಗೆ ಒಮ್ಮೆಲೆ
ಆಘಾತ ಮಾಡಿಬಿಟ್ಟೆ.....
ಎಮ್.ಎಸ್.ಭೋವಿ...✍️