ಮನುವಾದಿಗಳು
ಪೂಜಿಸಲಿ ಆರಾಧಿಸಲಿ
ಊರ ಮುಂದಿನ ಕಲ್ಲ ಕಂಬವ
ನೆತ್ತಿಯ ಮೇಲೆ ಹೊತ್ತು ಸಾಗಲಿ
ಮೂಢರು ಹಾಡಿ ಕೊಂಡಾಡಲಿ
ಬಿದ್ದು ಬೇಡಲಿ ಕಲ್ಲ ಕಂಬವ
ಮನೆಯ ದೇವರೆಂದು
ಉಘೇ ಉಘೇ ಎಂದರು
ನನಗೆ ನನ್ನ ಹೆತ್ತವರೇ
ನನ್ನ ಮನದ ಮನೆಯ ದೇವರು
ಮೂಢರಿಗೆ ಕಲ್ಲು ದೇವರೇ
ಬಂಧು ಮಿತ್ರನಾದರೆ
ನನಗೆ ನನ್ನ ಹೆತ್ತವರಿಗಿಂತ
ಮಿಗಿಲಾದ ಯಾವ ಬಂಧು ಬಳಗ
ಯಾವ ದೇವರು ಇಲ್ಲ.......
ಕಣ್ಣುಗಳು ಕಾಯುತಿವೆ ನಿನ್ನ ಕಾಣಲು
ಮನ ಚಡಪಡಿಸುತಿದೆ ನಿನ್ನ ಸೇರಲು,
ಕಳೆದ ಆ ಕ್ಷಣಗಳೇ ನೆನಪಾಗಿದೆ ನನಗಿಲ್ಲಿ;
ಹಿಂದಿರುಗಿ ಬಂದುಬಿಡು ಈ ಹೃದಯಕೆ
ನನ್ನ ಮನ ಕಾಯುತಿದೆ ನಿನ್ನ ಆಗಮನಕ್ಕೆ
ಪ್ರೀತಿಯ ಆ ಹೆಸರಲಿ
ನೀನಿರುವೆ ನನ್ನ ಮನದಲಿ,
ಹಿಂತಿರುಗಿ ಬಂದರೆ ನೀನು
ಹಾರುವೆ ಆಕಾಶದಲಿ ನಾನು,
ಬಂದುಬಿಡು ಒಂದುಬಾರಿ... ಕಾಯುತಿರುವೆ ಪ್ರತಿ ಬಾರಿ.
ದೇಶ ಯಾವುದಾದರೇನು
ಉಸಿರಾಡುವ ಗಾಳಿ ಒಂದೇ
ಭಾಷೆ ಯಾವುದಾದರೇನು
ಮನಸ್ಸಿನ ಭಾವನೆ ಒಂದೇ
ನುಡಿ ಯಾವುದಾದರೇನು
ನಡೆ ಒಂದೇ
ಬಟ್ಟೆ ಯಾವುದಾದರೇನು
ಉಡುಗೆ ಒಂದೇ
ಬಣ್ಣ ಯಾವುದಾದರೇನು
ನೋಟ ಒಂದೇ
ಎಲ್ಲಾವು ಒಂದೇ ಆಗಿರುವಾಗ
ಮನುಷ್ಯ ಮನುಷ್ಯರ ನಡುವೇ
ನೂರೆಂಟು ಜಾತಿ ಜನಾಂಗದ
ಅಂಟು ನಂಟು ಕುಂಟು ಇರುವುದು
ವಿಪರ್ಯಾಸವಲ್ಲವೇ