Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೆನಪುಗಳು ಮಾತ್ರ

ನೆನಪುಗಳ ಸಾಲಿನಲ್ಲಿ
ನೀ ಬರೀ ನೆನಪು ಮಾತ್ರ

ನಿನ್ನ ಆ ಬೆಳದಿಂಗಳ ನಗು
ನಿನ್ನ ಆ ಕುಡಿಯಂಚಿನ ನೋಟ
ಬರಿ ನೆನಪು ಮಾತ್ರ

ನಡೆವಾಗ ಆ ನಿನ್ನ ಗೆಜ್ಜೆಯ ನಾದ
ನೀ ಮುಡಿದ ಮಲ್ಲಿಗೆಯ ಪರಿಮಳ
ಬರಿ ನೆನಪು ಮಾತ್ರ

ನೀ ನಾಡಿದ ನುಡಿಮುತ್ತುಗಳು ಸಾಲು
ನೀ ಬಳಸಿದ ಆ ತೋಳು ಬಂಧನ
ಬರಿ ನೆನಪು ಮಾತ್ರ

ಈ ಬದುಕಿನ ಪುಟದಲ್ಲಿ ಬಾಳು ಕಲಿಸಿದ
ದೇವತೆ ನೀನು
ಈ ಹೃದಯ ಬಡಿತದ
ಮೊದಲ ಮಿಡಿತ ನೀನು
ನನ್ನ ಕೊನೆಯುಸಿರಿನ
ಸವಿನೆನಪು ನೀನು

- shankar gargi

23 Jul 2021, 12:27 pm

ಹೃದಯ

ನನ್ನ ಕಣ್ಣಲಿ
ನಿನ್ನ ರೂಪ
ಬೆಳಕಿನಂತೆ ಹರಡಿದೆ

ನನ್ನ ಹೃದಯ
ಬಡಿತದಲಿ
ನಿನ್ನ ಹೆಸರು
ಮಿಡಿದಿದೆ

ನಿನ್ನ ಮುಗುಳು
ನಗೆಯು
ಎನ್ನ ಮನವ
ಸೋಂಕಿ ನಲಿದಿದೆ

ಸೌಂದರ್ಯದ
ನಿನ್ನ ಹೂಳಪು
ಎನ್ನ ಕನಸಲಿ
ಕಾಡಿದೆ

ಅರಳಿ ನಿಂತು
ನಿನ್ನ ಪ್ರೀತಿಗೆ
ದುಂಬಿಯಾಗಿ
ಹಾಡಿದೆ

ಕಣ್ಣು ಮುಚ್ಚಲು
ನಿನ್ನ ನೆನಪು
ಬೆಳದಿಂಗಳಂತೆ
ಹರಡಿದೆ

ನಿನ್ನ ನಡೆಯ
ಹಾದಿಯಲಿ
ಹೂವು ಪರಿಮಳ
ಸೂಸಿವೆ

ನಿನ್ನ ಕಂಗಳ
ತೂಟ್ಟಿಲಲ್ಲಿ
ಈ ಹೃದಯ
ತೂಗಿದೆ

- shankar gargi

23 Jul 2021, 09:28 am

ಕನ್ನಡ

ಬಳಸಿರಿ ಕನ್ನಡ
ಹರಿಸಿರಿ ಕನ್ನಡ
ಕನ್ನಡಕ್ಕಾಗಿ ದುಡಿಯಿರಿ

ನಡೆಯಲಿ ಕನ್ನಡ
ನುಡಿಯಲಿ ಕನ್ನಡ
ಮನೆ ಮನಗಳಲಿ ಕನ್ನಡ
ಮೊಳಗಲಿ ಎಲ್ಲಡೆ ಕನ್ನಡ

ಕರುನಾಡ ಕೀರ್ತಿಯ
ಧ್ವಜದಲಿ ಕನ್ನಡ
ಕರುನಾಡ ಸಿರಿಯಾ
ಸೊಬಗಲಿ ಕನ್ನಡ

ಕನ್ನಡ ಮಣ್ಣಲ್ಲಿ
ಕನ್ನಡದ ಕಂಪು
ಸೊಸಲಿ ಎಲ್ಲಡೆ
ಕನ್ನಡದ ಇಂಪು

ಹನಿ ಹನಿ ರಕ್ತದ
ಕಣ ಕಣದಲ್ಲಿ
ಕನ್ನಡವು ಕುಣಿಯಲಿ
ಮೈ ಮನದಲ್ಲಿ

ಕನ್ನಡವ ಬಳಸಿ
ಕನ್ನಡವು ಉಳಿಸಿ
ಕರುನಾಡ ದೀಪವ
ಎಲ್ಲಡೆ ಬೆಳಗಿಸಿ














- shankar gargi

23 Jul 2021, 09:11 am

ಅರ್ಥವಾಗುತ್ತಿಲ್ಲ ನಿನ್ನ ಮೌನ.....

ಮೊದ ಮೊದಲು ಮುಗಿಯುತ್ತಿರಲಿಲ್ಲ ನನ್ನ ನಿನ್ನ ಮಾತಿನ ಚಕಮಕಿ....
ಅರೆಘಳಿಗೆಯೂ ಬಿಡದೆ ಪಟಾಕಿಯಂತೆ ಸಿಡಿಯುತ್ತಿದ್ದೆ....
ಮಾತಲ್ಲೆ ಎಲ್ಲವನ್ನು ಹೇಳಿ ಅರ್ಥಮಾಡಿಸುತ್ತಿದ್ದೆ....
ಏನಾಯಿತೋ ನಾ ಅರಿಯೇ ಒಮ್ಮಲೆ ತಂತಿ ಮುರಿದ ವೀಣೆಯಂತಾದೆ....
ಈಗೀಗ ಅರ್ಥವಾಗುತ್ತಿಲ್ಲ ನಿನ್ನ ಮೌನ....
ಒಮ್ಮೆಯಾದರೂ ಮೌನ ಮುರಿದು ಅರ್ಥೈಸು ನನ್ನಿಂದಾದ ತಪ್ಪನ್ನು...........
msbhovi......✍️

- mani_s_bhovi

22 Jul 2021, 08:46 am

ಮುದುಡಿದ ಮುನ್ನನ ಕನಸು

ಕಸಾಪ ಅದ್ಯಕ್ಷನಾಗುವ ಕನಸೊಂದಿತ್ತು
ವಿದಿಯಾಟಕ್ಕೆ ಜೀವ ಬಲಿಯಾಯ್ತು
ಚಿಕ್ಕ ಚಿಕ್ಕ ಕವನ ಸಂಕಲನ ಪ್ರಕಟವಾಗಿ
ಕರುನಾಡಿನ ಜನರ ಮನಗೆಲ್ಲುವ ಕನಸು
ಮಣ್ಣಾಗಿ ಹೋಯ್ತು ಕರೋನ ಮಾರಿಗೆ
ಜೀವನದ ಜೊತೆಗೆ ಸಪ್ತಪದಿ ತುಳಿದ
ಹೆಂಡತಿ ಮಗುವನ್ನು ಬಿಟ್ಟು ಹೋದಾಯ್ತು
ನನ್ನ ಕನಸಿನ ಜೊತೆ ಅವರ ಕನಸು ಮಣ್ಣು ಪಾಲಾಯ್ತು

- abhishek

21 Jul 2021, 10:42 pm

ನನಗೆನಲ್ಲ

ವರದಕ್ಷಣೆ ಎನ್ನದಿರಿ ವರನಿಗೆ ವರೋಪಚಾರ ಎಂದು ಕೊಡಿ ಅಷ್ಟೇ ‌

ಪೊಲೀಸರಿಗೆ ತಿಳಿಸಿದರೆ
ನಿಮ್ಮ ಮಗಳು ನಿಮ್ಮ ಮನೆಗೆ ಅಷ್ಟೇ

ನೋಡಿ ಹೆಣ್ಣು ಕೊಡಿ
ನಾನೇನು ಕಡಿಮೆ ಇಲ್ಲ
ನಿಮಗಿಂತ ಎರಡರಷ್ಟು
ನೀವು ಕೊಟ್ಟಿದ್ದು ನನಗಲ್ಲ ನಿಮ್ಮ ಮಗಳಿಗೆ ಅಷ್ಟೇ

ನಾನೇನು ಬಹಳ ಕೇಳುವುದಿಲ್ಲ ಬರೀ ಹತ್ತು ಸಾವಿರ ಹತ್ತು ತೊಲೆ ಅಷ್ಟೇ

ನಿಮ್ಮ ಮಗಳು. ಸುಖವಾಗಿರಬೇಕೆಂದರೆ.
ಕಾರು ಬಂಗಲೆ ಕೊಡಿ.
ಮತ್ತೇನು ಬೇಡ ಅಷ್ಟೇ

ಕೊನೆಯದಾಗಿ ನೀವು ಸತ್ತರೆ ನಿಮ್ಮ ಆಸ್ತಿ ಅದೂ ನನ್ನಗಲ್ಲ ನಿಮ್ಮ ಮಗಳಿಗೆ ಕೊಡಿ ಅಷ್ಟೇ

ಮತ್ತೆನೂ ಇಲ್ಲ ನಾನು ಹೇಳುವುದು ಇಷ್ಟೇ

- shankar gargi

21 Jul 2021, 08:39 pm

ಪ್ರಪಂಚ

ಚಿಂದಿಚಿಂದಿ ಬಟ್ಟೆಯನ್ನು ಉಟ್ಟು ನಿಂತಿರುವಳು ಬಡತನ ಹೊತ್ತು ನೂರಾರು ಕಾಮುಕರು ಕಣ್ಣುಗಳು ಬಯಸುತಿವೆ ಅವಳ ಸೌಂದರ್ಯವನ್ನು ಆಶ್ರಯ ಕೊಡಲು ಹೊರಟಿರುವ ವೀರಾಧಿವೀರರು ಶೂರರು, ಕಾಮದ ಮುದಿಗೂಬೆಗಳು ಹಣದಾಸೆ ತೋರಿಸಿ ಕಚ್ಚಾಡುತ್ತಿಹರು ಕ್ಷಣ ತೃಪ್ತಿಗಾಗಿ ಬಡೆದಾಡುತಿಹರು ಕಾಮದ ರಣರಂಗದಲ್ಲಿ ಹೋರಾಡಿ ಪ್ರಾಣ ಗೈಯುತಿಹರು. ಹಸಿದ ಹೊಟ್ಟೆಗೆ ಅನ್ನದಾಸೆ ಹಚ್ಚಿ ನಾರುತಿರುವ ಅವಳ ಮೈ ಸುಖವುಂಡು ನಾಯಿಗಳು ಅವಳನು ಬಿಸಾಕಿ ಹೊರಟು ಗೆದ್ದೆವು ಎಂಬ ವಿಜಯ ಪತಾಕಿ ಹಾರಿಸುತ್ತಿಹರು ಆ ಕಾಮುಕರು ನೆಟ್ಟ ಬೀಜ ಮೊಳೆತು ಮರಿಯಾದಾಗ ಮಗುವಿನ ಕೂಗು ಅಪ್ಪಾ ಎಂದು ಬಾಯಿ ತೆರೆದಾಗ ಆ ಬಡಜೀವ ಕೈಮಾಡಿ ತೋರಿಸುತ್ತಿತ್ತು ಈ ಪ್ರಪಂಚವ

- shankar gargi

21 Jul 2021, 02:07 pm

ಮನದ ಅಂಗಳದಲ್ಲಿ

ಮನದ ಅಂಗಳದಲ್ಲಿ
ಬೆಳದಿಂಗಳ ನಲ್ಲೆ...
ನಾ ಕಂಡೆನು ಅವಳ
ಅನುರಾಗದ ಲೀಲೆ...

ಹುಸಿಮುನಿಸಿನ ಒಡವೆ
ನೀ ತೊಟ್ಟರೆ ಚೆಲುವೆ...
ನಾ ರಮಿಸಲು ಬರುವೆ
ನೀ ಕೋಪವ ಬಿಡುವೆ...

ಅದರದ ನಡುವೆ
ನಗೆ ಮಲ್ಲಿಗೆ ಅರಳಿ...
ನಸು ನಾಚಲು ಕೆನ್ನೆ
ಕೆಂದಾವರೆ ಹೆಣ್ಣೆ...

ಹೃದಯದ ಬಡಿತ
ನಿನ್ನ ಕೂಗಿದೆ ಸತತ...
ಮನಸಿನ ತುಡಿತ
ಇದು ಬಯಕೆಯ ಮಿಡಿತ...

ಸಕ್ಕರೆ ಹಾಲು
ನಮ್ಮಯ ಒಲವು...
ನಗುತಿರೆ ನೀನು
ಈ ಬದುಕಲಿ ಗೆಲುವು...


- ಪಿ.ಜಿ.ಜ್ಯೋತಿ

20 Jul 2021, 04:33 pm

ಮನಸು ಮೌನವಾಗಿದೆ

ಕಣ್ಣುಗಳು ಕಂಬನಿಯ ಮೀಟುತಿದ್ದರು,
ಯಾರಿಗೂ ತಿಳಿಯದಂತೆ ನಟಿಸುತ್ತಿರುವೆ.

ಮನಸ್ಸಿನಲ್ಲಿ ಅದೆಷ್ಟೋ ಮಾತುಗಳ ಸಂಘರ್ಷ ನಡೆಯುತ್ತಿದ್ದರೂ,
ಎಲ್ಲರೆದುರು ಮೌನಿಯಂತೆ ನಟಿಸುತ್ತಿರುವೆ.

ನಾ ಕಂಡ ಕನಸುಗಳು,
ಕಣ್ಣಾ ಮುಂದೆಯೇ ಕಮರಿ ಹೋಗುತಿದ್ದರು,
ಕಾರಣ ತಿಳಿಯದೆ ಕೊರಗುತಿರುವೆ.

ಎಲ್ಲರೂ ಜೊತೆಯಿದ್ದರೂ,
ಮನಸಿನ ಭಾವನೆ ಹೇಳಲಾಗದೆ,
ಒಬ್ಬಂಟಿಗಳಂತೆ ಬದುಕುತ್ತಿರುವೇ.

ಕತ್ತಲೆಯ ಕಾರ್ಮೋಡ ಸರಿದು,
ಬೆಳಕು ಮೂಡುವುದೆಂಬ, ಭರವಸೆಯಲ್ಲಿ ನಾ ಬಾಳುತಿರುವೆ.

- Veena

18 Jul 2021, 08:35 pm

ಹೊಲದಲ್ಲಿ

ಅವ್ವ ಕಳಿಸಿದ ಬಿಸಿ ಬಿಸಿ ರೊಟ್ಟಿ,
ಇದೆಲ್ಲ ಅಮ್ರತಗಳಿಗೂ ತುಟ್ಟಿ,
ಹೊಲದಲ್ಲಿ ಕೈ ತುಂಬಾ ಕೆಲಸ,
ಕನ್ನಡ ಹಾಡೊಂದು ತಣಿಸಲು ಮನಸ,
ನೈಸರ್ಗಿಕ ತಂಪುಕಾರಕ ವಾಯು,
ಮಣ್ಣಿನ ಗುಣಕ್ಕೆ ಗಟ್ಟಿ ಈ ಸ್ನಾಯು,
ಕರುನಾಡ ಜಲ ಕುಡಿದಿರಲು ನಾನೆಂದೂ ಚಿರಾಯು ಚಿರಾಯು.........

- Naresh Poojari

15 Jul 2021, 11:52 am