ಮನಸ್ಸಿಗಾದ ಗಾಯಕ್ಕೆ ಮುಲಾಮು ಸಿಗೋದಿಲ್ಲ,
ನುಚ್ಚು ನೂರಾದ ಕನಸಿಗೆ ಮರು ಜೋಡನೆ ಸಾಧ್ಯವಿಲ್ಲ,
ಮಾತು ನಡುವಳಿಕೆಗಳು ಕತ್ತಿಗಿಂತ ಹರಿತ,
ತಪ್ಪು ನುಡಿದರೆ ಆಗುವುದು ಮನಸ್ಸಿಗೆ ಇರಿತ,
ನಂಬಿಕೆಯನ್ನೊ ಪದಕ್ಕೆ ಇರುವುದು ಅಪಾರವಾದ ಶಕ್ತಿ,
ಯಾರನ್ನೂ ನಂಬಬೇಕು ಎಂದು ತಿಳಿಯಲು ಇರಬೇಕು ತುಂಬಾ ಯುಕ್ತಿ,
ಮೋಸ ಮಾಡುವ ಜನರೇ ತುಂಬಿಹರು ಈ ಜಗತ್ತಿನಲ್ಲಿ,
ನಮ್ಮವರೇ ನಮಗೆ ಮೋಸ ಮಾಡುವರಿಲ್ಲಿ,
ನಮ್ಮ ತನವ ನಾವು ಎಂದಿಗೂ ಬಿಡಬಾರದು,
ನಮ್ಮ ಸಾಂಗತ್ಯಕ್ಕಿಂತ ಒಳ್ಳೆಯ ಸಾಂಗತ್ಯ ಬೇರೆ ಸಿಗಲಾರದು...
ಸಾಧಿಸುವ ಚಲವೊಂದಿದ್ದರೆ ಎಲ್ಲವು ಸುಲಭ,
ಗುರಿಯಿಲ್ಲದೆ ಮುನ್ನಡೆದರೆ ದಾರಿಯು ದುರ್ಲಭ,
ಮುಂದಿಟ್ಟ ಹೆಜ್ಜೆಯನ್ನು ಎಂದು ಹಿಂದಿಡಬಾರದು,
ಮುನ್ನುಗ್ಗಿ ನಡೆದರೆ ಯಾರು ತಡೆಯಲಾರರು,
ಸಾಗುವ ದಾರಿಯಲ್ಲಿ ಅಡೆತಡೆಗಳು ನೂರಾರು,
ಹಿಮ್ಮೆಟ್ಟಿಸಿ ನಡೆಯಲು ದಾರಿಗಳು ಸಾವಿರಾರು,
ಎಷ್ಟು ಸಲ ಸೋತರು ಪ್ರಯತ್ನಿಸುವೆ ಮತ್ತೊಂದು ಬಾರಿ,
ಸಾಧನೆಯ ಶಿಖರವನ್ನೆರುವೆ ಎಂದಾದರೊಂದು ಸಾರಿ..
ಹೇಳಲು ಗಳಿಗೆ ಸರಿ ಇರಲಿಲ್ಲ
ಕೇಳಲು ನನ್ನ ಮನಸು ನಿನ್ನ ಬಳಿ ಇರಲಿಲ್ಲ...! ಈ ಕಲ್ಪನೆಯ ಪ್ರೀತಿಯನ್ನ ಹಚ್ಚಿ ಕೊಂಡ ಹುಚ್ಚ ನಾನು...! ಅದರ ವಾಸ್ತವ ತಿಳಿಸಿದ್ದು ನೀನು....! ♥️❤
ನಿನ್ನ ಬಾಳಿಗೆ ನಾನು ತಾತ್ಕಾಲಿಕ ಪರಿಚಯವಾದರೆ...! ನನ್ನ ಬದುಕಿನಲ್ಲಿ ನೀನು ಮರೆಯಲಾರದ ನೆನಪುಗಳಾದೆ...! ♥️❤
ಹುಡುಕುತ್ತಿರುವ ದಾರಿ ಯಾವುದೋ
ಸಾಗಿ ಬಂದ ಹಾದಿ ಯಾವುದೋ
ಆರಂಬಭದ ಅರಿವಿಲ್ಲ
ಅಂತ್ಯದ ಸುಳಿವಿಲ್ಲ
ಜೊತೆಯಲ್ಲಿ ಸಾಗುವರು ಯಾರೋ
ನಡುವೆ ನೂಕಿ ಹೋಗುವರು ಯಾರೋ
ಬರುವಾಗ ಯಾರಿರಲಿಲ್ಲ
ಹೋಗುವ ಬಗ್ಗೆ ತಿಳಿದಿಲ್ಲ
ಇಲ್ಲಿ ಬಂದಿರುವುದು ಯಾಕೋ
ಹಾಗೆಯೇ ನಿಂತಿರುವುದು ಯಾಕೋ
ಬೇಕೆಂದರೂ ಖುಷಿ ಇಲ್ಲ
ಸಾಕೆಂದರೆ ನೋವು ನಿಲ್ಲಲ್ಲ
ಮುಂದೆ ಬದುಕಿನ ಬಂಡಿ ಹೇಗೋ
ನಾಳೆ ಕೂಡ ಈ ದಿನದ ಹಾಗೋ
ನಂಬಿಕೆ ಬಿಟ್ಟರೆ ಇಲ್ಲೇನಿಲ್ಲ
ಅದ ನಂಬಿಯೇ ಸಾಗಿದೆ ಜಗವೆಲ್ಲಾ......
msbhovi....✍️
ತುಂಬಾ ಕಷ್ಟ ಪಟ್ಟು ಕಾಡಿ ಬೇಡಿ ಪಡೆದುಕೊಂಡ
ಪ್ರೀತಿ ಕಣೆ ನನ್ನದು.....
ಸಿಂಪಲ್ ಇಗಿ ನಿನ್ನ ಬಿಟ್ಟು ಹೋಗ್ತಿನಿ ಅಂತ
ಅಂದುಕೊಳ್ಳಬೇಡ.....
ಎಷ್ಟೆ ಕಷ್ಟ ಬಂದರೂ ನಿನ್ನ ಜೊತೆಯಾಗಿ ನಿಲ್ಲುವೆನು...
ಒಂದು ವೇಳೆ ನಾ ನಿನ್ನ ಬಿಟ್ಟು ಹೊದರೆ ಅದು ನಿನು
ಮೋಸ ಮಾಡಿದರೆ ಮಾತ್ರ ಅಥವಾ ನನಗೆ ಈ ಭೂಮಿಯ ಋಣ ತೀರಿದ ಮೇಲೆ...