Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನ ಪ್ರೀತಿಯ ಪಯಣ....

ತುಂಬಾ ಕಷ್ಟ ಪಟ್ಟು ಕಾಡಿ ಬೇಡಿ ಪಡೆದುಕೊಂಡ
ಪ್ರೀತಿ ಕಣೆ ನನ್ನದು.....
ಸಿಂಪಲ್ ಇಗಿ ನಿನ್ನ ಬಿಟ್ಟು ಹೋಗ್ತಿನಿ ಅಂತ
ಅಂದುಕೊಳ್ಳಬೇಡ.....
ಎಷ್ಟೆ ಕಷ್ಟ ಬಂದರೂ ನಿನ್ನ ಜೊತೆಯಾಗಿ ನಿಲ್ಲುವೆನು...
ಒಂದು ವೇಳೆ ನಾ ನಿನ್ನ ಬಿಟ್ಟು ಹೊದರೆ ಅದು ನಿನು
ಮೋಸ ಮಾಡಿದರೆ ಮಾತ್ರ ಅಥವಾ ನನಗೆ ಈ ಭೂಮಿಯ ಋಣ ತೀರಿದ ಮೇಲೆ...

- mani_s_bhovi

13 Jul 2021, 04:10 pm

ಭೀಮ ಗೀತೆ

ಜೈ ಜೈ ಜೈ ಭೀಮ್
ಈ ನಾಡಿನ ಸೂರ್ಯ
ನನ್ನ ಎದೆಯ
ಸ್ವಾಭಿಮಾನದ ಜ್ಯೋತಿ
ಜೈ ಜೈ ಜೈ ಭೀಮ್

ಹಸಿದವರ ಕೈ ಹಿಡಿದು
ಮನುವಾದಿಗಳ
ಮೆಟ್ಟಿ ನಿಂತ ಒಂಟಿ ಸಲಗ
ಜೈ ಜೈ ಜೈ ಭೀಮ್

ನೊಂದವರಿಗೆ ಸೂರಾಗಿ
ದುಷ್ಟರಿಗೆ ಸಿಂಹ ಸ್ವಪ್ನವಾಗಿ ಕಾಡಿದ
ನನ್ನ ಒಡೆಯ
ಜೈ ಜೈ ಜೈ ಭೀಮ್

ಬಡವರಿಗೆ ಬಂಧುವಾಗಿ
ಮನುವಾದಿಗಳಿಗೆ ಶತ್ರುವಾಗಿ
ಹೋರಾಡಿದ ಧೀರ
ಜೈ ಜೈ ಜೈ ಭೀಮ್

ಮನುವಾದಿಗಳ
ಸೊಕ್ಕು ಅಡಗಿಸಿ
ದಿನ ದಲಿತರ ಉಸಿರಾದ
ಭಾರತ ರತ್ನ ಬಾಬಾಸಾಹೇಬ
ಜೈ ಜೈ ಜೈ ಭೀಮ್

- ರಾಜು ಹಾಸನ

12 Jul 2021, 12:02 am

ಕಾಲನ ಎದುರು

ಯಾರು ನಾವಿಲ್ಲಿ ಕಾಲನ ಎದುರು
ದೇವನ ಆಟವಿದು, ಯಾರು ನಾವಿಲ್ಲಿ
ಬರೀಯ ಚದುರಂಗದ ಕಾಯಿಗಳಂತೆ...
ಅವನು ನಡೆಸಿದಂತೆ ನಡೆಯುವ
ಚದುರಂಗದ ಕಾಯಿಗಳು ನಾವು...
ಗೆಲ್ಲಲು ಸಾಧ್ಯವೇ ನಾವಿಲ್ಲಿ ಅವನ
ಆಟವನು...ನೀ ಎಷ್ಟೇ ದೊಡ್ಡವನಿದ್ದರೂ,
ನಿನ್ನ ಆಸ್ತಿ ಎಷ್ಟಿದ್ದರೇನು ಅವನ ಆಟದ
ಮುಂದೆ ನೀನು ತೃಣಕ್ಕೆ ಸಮಾನ...

- ಹೃದಯವಾಸಿ

- Deenu Adi

10 Jul 2021, 12:54 pm

ನೀನೆಂದಿಗು ನನ್ನವನು

ಹಂಬಲಿಸುತಿದೆ ಮನಸ್ಸಿಂದು ನಿನ್ನನ್ನೇ
ಪ್ರೀತಿಯ ಪಯಣದಲ್ಲಿ ಕೂಗುತಿರುವೇನು ನಿನ್ನನ್ನು
ಬಾನಲಿ ಚುಕ್ಕಿ ಎಣಿಸುತ್ತಾ ಕೇಳಿದೆ ಅವ್ಗಳೊಂದಿಗೆ ನಿನ್ನನ್ನು
ಚಂದಿರ ಬಂದು ಕೇಳಿದ ಎಲ್ಲಿ ಎಂದು ನನ್ನನ್ನು
ನಾ ಹೇಳಿದೆ ನಾನಿರುವೆ ಅವನ ಉಸಿರಿನಲ್ಲಿ ಎಂದು
ಚಂದಿರ ನಕ್ಕು ಹೇಳಿದ ಅವನು ನಸು ನಗುತ್ತಿರುವನು ನಿನ್ನ ಗುಂಗಿನಲ್ಲಿ ಎಂದು
ನಾ ಹೇಳಿದೆ ನಾನು ಸಹ ನಾಚುತಿರುವೇನೆಂದು ..............
ಎಲ್ಲಿರುವೆ ನಾ ಕಾದಿರುವೆ.......
ಇಂತಿ ಒಂಟಿ ಹೃದಯದ ಒಡತಿ

- chinni Prakash

08 Jul 2021, 09:58 pm

ಬದುಕಿನ ಪಯಣದಿ ನೀನೇ ನನಗೆಲ್ಲ....

ಬದುಕಿನ ಪಯಣದಿ ನಿನ್ನ ಕೈ ಹಿಡಿದು ಬಾಳಬೇಕು,
ಕಷ್ಟ ಸುಖಗಳನ್ನು ಸಮನಾಗಿ ಹಂಚಿಕೊಂಡು...
ಯಾವಾಗಲೂ ನಂಬಿಕೆ ಇರಬೇಕು,
ಅನುಮಾನವೆಂಬ ರಾಕ್ಷಸ ನಮ್ಮ ನಡುವೆ ಬಾರದಂತೆ...
ಕೊನೆಯವರೆಗೂ ಪ್ರೀತಿಸುತ್ತ ಇರಬೇಕು,
ನೊಡುವವರಿಗೆ ಹೊಟ್ಟೆಕಿಚ್ಚು ಬರುವಂತೆ....
ಇಬ್ಬರ ನಡುವೆ ಸಣ್ಣ ಪುಟ್ಟ ಜಗಳ ಇರಬೇಕು,
ಕೊನೆಯಲ್ಲಿ ಇಬ್ಬರು ಸೋತು ಕ್ಷಮೆಕೇಳುವಂತೆ....
ಅನ್ಯೊನ್ಯವಾಗಿ ಇರಬೇಕು, ಮೂರನೆಯ ವ್ಯಕ್ತಿಯ
ಎದರು ಒಬ್ಬರನ್ನು ಇನ್ನೊಬ್ಬರು ಬಿಟ್ಟು ಕೊಡದಂತೆ...
msbhovi....✍️


- mani_s_bhovi

08 Jul 2021, 12:34 pm

ಪ್ರೀತಿ ತೇರು

ಒಲವು ಒಮ್ಮಿದೆ
ಮನವು ತೇಲಿದೆ
ಪ್ರೀತಿ ಪ್ರೇಮದ
ಬಿಸು ಗಾಳಿಯಲ್ಲಿ
ಅಲೆಯು ಹುಟ್ಟಿದೆ
ಪ್ರೀತಿ ಪ್ರೇಮದ
ತೇರು ಸಾಗಿದೆ
ನೂರೆಂಟು ಆಸೆ
ಕನಸು ಹೊತ್ತು
ಪರಿ ಪರಿ ಹುಟ್ಟು ಹಾಕಿದೆ
ಒತ್ತು ಕತ್ತಲಾಗುವ ಮುನ್ನ
ದಡವಾ ಸೇರಿದೆ
ಪ್ರೀತಿ ಪ್ರೇಮದ ತೇರು
ಛಲವಾ ಬಿಡದೆ



- ರಾಜು ಹಾಸನ

07 Jul 2021, 07:03 pm

ತನಕ

ಜೀವನ ಜೀವ ಇರುವ ತನಕ
ಬದುಕು ಬದುಕಿರುವ ತನಕ
ಬಂಧುಗಳು ಸಂಬಂಧ ಇರುವ ತನಕ
ಪ್ರೀತಿ ಪ್ರೇಮ ಪ್ರೇಮಿಗಳು ಇರುವ ತನಕ
ಸ್ನೇಹ ವಿಶ್ವಾಸ ಇರುವ ತನಕ
ಪ್ರಪಂಚ ಸೂರ್ಯ ಚಂದ್ರರು ಇರುವ ತನಕ
ತಂದೆ ತಾಯಿಗಳು ನಮ್ಮ ಜನ್ಮ ಮುಗಿಯುವ ತನಕ


- ರಾಜು ಹಾಸನ

07 Jul 2021, 12:06 am

ನಾನು ಚಿಕೌನ್

ನಾನು ಚಿಕೌನ್ ನಾನು ಚಿಕೌನ್
ತೋಟಕೆ ನಾನು ಹೋಗಿದ್ದೆ
ತೋಟದ ಹೂವನು ಕಿತ್ತು ತಂದು
ದೇವರ ತಲೆ ಮೇಲೆ ಇಟ್ಟಿದ್ದೆ

ಕೈಯನು ಮುಗಿದು ಕಣ್ಣನು ಮುಚ್ಚಿ
ಮಂಡೆಯ ಉರಿ ಕೂತಿದ್ದೆ
ದೇವರ ಮುಂದೆ ಕುಂತು ನಾನು
ವಿದ್ಯೆಯ ಕೊಡು ಅಂತಾ ಕೇಳಿದ್ದೆ

ಉದ್ದಗೆ ಮಲಗಿ ಹಣೆಯನು ಹಚ್ಚಿ
ಬುದ್ದಿಯ ನೀಡು ಅಂದಿದ್ದೆ
ನೈವೇದ್ಯ ಹಿಡಿಯಲು ಜೇಬಿನಲ್ಲಿದ್ದ
ಬೆಲ್ಲವ ತೆಗೆದು ಇಟ್ಟಿದ್ದೆ

ಅವ್ವ ದೇವರಿಗೆ ಉಪವಾಸ ವಿದ್ದರೆ
ಅವಲಕ್ಕಿ ಉಪ್ಪಿಟ್ಟು ತಿಂತಿದ್ದೆ
ಹರಕೆಯ ತಿರ್ಸಲು ಹೊಂಟರೆ ಅಪ್ಪನ
ಹೆಗಲಿನ ಮೇಲೆ ಕೂಡ್ತಿದ್ದೆ

ಯಾವ ದೇವರಂತ ಗೊತ್ತಿರದಿದ್ದರು
ಪ್ರತಿ ದೇವರ ಮುಂದೆ ಇರ್ತಿದ್ದೆ
ಪ್ರಸಾದ ತಿಂದು ತಿರ್ಥವ ಕುಡಿಯುತ
ಜೆಗಿಯುತ ಮನೆಕಡೆ ಬರ್ತಿದ್ದೆ

ಕಲ್ಮೇಶ ಬಡಿಗೇರ
ಬದಾಮಿ

- Kalmesh Badiger

04 Jul 2021, 10:33 pm

ಹೇಮರೆಡ್ಡಿ ಯಲ್ಲಮ್ಮ

ಯಲ್ಲಮ್ಮನ ಕರುಣೆಯಿಂದ
ಎಲ್ಲಾರು ಧನ್ಯರಮ್ಮ
ಹಲವಾರು ನಾಮದಿಂದ
ಅವತರಿಸಿದ ರೇಣುಕಾ ಯಲ್ಲಮ್ಮ

ಹುಟ್ಟಿದಳಮ್ಮ ಯಲ್ಲಮ್ಮ
ಕರುಣಾಡು ಮಣ್ಣಲ್ಲಿ
ಅವಳ ಮದುವೆ ಮಾಡಿ ಕೊಟ್ಟಾರವ್ವ
ಜಮದಾಗ್ನಿಗೆ ಯಲ್ಲವ್ವನ

ಸತ್ಯುಳ್ಳ ಶರಣೆ ಯಲ್ಲಮ್ಮ.....
ನಿತ್ಯ ಅವಳ ನೆನೆಯಬೇಕು ನಾವಮ್ಮ
ಜಮದಗ್ನಿ ಪರಿಕ್ಷಯಲ್ಲಿ
ಯಲ್ಲವ್ವನೆ ಪತಿವ್ರತೆಯವ್ವ

ಮರಳಲ್ಲಿ ಮಡಕೆಯ ಮಾಡಿ
ಹಾವಿನೆಡೆಯ ಸಿಂಬೆ ಮಾಡಿ
ಶಿವಪೂಜೆಗೆ ಗಂಗೆ ತಂದಾಳೊ....
ಯಲ್ಲವ್ವ ನಾಗಿ ಹುಚ್ಚೆಂಗಿ ಮಲ್ಲಮ್ಮನಾಗಿ

ಸವದತ್ತಿಲ್ಲಿ ಐಕ್ಯವಾಗಿ ತಲೆಮೇಲೆ ಕಡ್ಲಿಗೆ ಹೊತ್ತು
ಚೌಡ್ಕಿ ಎಂಬ ನಾದ ಸ್ವರದಲ್ಲಿ ಯಲ್ಲವ್ವನ ಹೊತ್ತು
ಭಕ್ತ ಜನರು ಉಘೇ ಉಘೇ ಎನ್ನುತ್ತಾರವ್ವ
ಯಲ್ಲವ್ವನ ಪವಾಡ ಗಂಡು ಜೋಗ್ತಿ ಯಲ್ಲವ್ವ

ಬೇವು ಭಂಡಾರದಲ್ಲಿ ಯಲ್ಲವ್ವನ ಮಹಿಮೆ ಇದೆ
ಹುಚ್ಚೆಂಗಿ ಬೆಟ್ಟದಲ್ಲಿ ಯಲ್ಲವ್ವನ ಅವತಾರಾವಿದೆ
ಕುಣಿಯುತ್ತ ಭಕ್ತಾ ಜನರ ಮನಸನ್ನು ಗೆದ್ದಳು ತಾಯಿ
ಪರಶುರಾಮನ ಜನ್ಮದಾತೆ ಏಳು ಕೊಳ್ಳದ.......
ಯಲ್ಲಮ್ಮ ತಾಯಿ

ಜಿ ಟಿ ಆರ್ ದುರ್ಗ
ಬಂಗಾರಪೇಟೆ

- gtr

04 Jul 2021, 06:39 pm

ನನಗೆ ನಾನ್ಯಾರೋ

ನನಗೆ ನಾನ್ಯಾರೋ
ನಿನಗಾದೆ ನಾ ಸಹೋದರಿ!!
ಕಣ್ಣ ರಪ್ಪೆಗಳಂತೆ
ನಾವಿರುವ ಜೊತೆಯಲಿ!!

ಮನದ ಮುಗಿಲಲ್ಲಿ
ಮೂಡಿ ಮಿನುಗೋ ಚುಕ್ಕಿ!!
ಹಸಿರ ಬನದಲ್ಲಿ
ಆಡುವ ಜೋಡಿ ಹಕ್ಕಿ!!

ಅಕ್ಕರೆಯ ದಡದಲ್ಲಿ
ಹರಿಯುವ ನದಿಯು ನಾನು!!
ಸಕ್ಕರೆ ತುಂಬಿದ ಒಲವನು
ಬೆರೆಸಿ ಹರಿಸಿದೆ ನೀನು!!

ಕುದಿಯುವ ನೀರಲಿ ಅಕ್ಕಿ
ಆಡುತಲೇ ತಾ ಉಕ್ಕಿ!!
ಹಸಿವ ನೀಗುವುದು
ಬಿಸಿಯಲಿ ತಾ ಬೆಂದು!!

ಜೊತೆಯಲ್ಲಿ ನೀನಿರಲು
ಹಾಲು ಬೆಳಕಿನ ಕಡಲು!!
ಆಡಿ ಒಡನಾಡಲು ಯಾರಿಲ್ಲ
ಸಖಿ ನಿನಗಿಂತ ಮಿಗಿಲು!!





- ಪಿ.ಜಿ.ಜ್ಯೋತಿ

02 Jul 2021, 09:19 am