ಕೆಲಸವಿಲ್ಲದೆ ಕುಳಿತರೆ ಮನೆಯಲ್ಲಿ..!!
ಹುಳು ಓಡಾಡಿದಂತೆ ತಲೆಯಲ್ಲಿ..!!
ಮನಸಿಗೆ ಬೇಕು ಏಕಾಗ್ರತೆ..!!
ಇದ್ದರೆ ಸಮಯದ ಜಾಗ್ರತೆ..!!
ಆಗ ಪ್ರತಿದಿನವೂ ಜಾತ್ರೆ..
ಇಲ್ಲವೆ ರಾತ್ರಿ ನಿದ್ರೆಗಾಗಿ ನುಂಗಬೇಕಾಗುತ್ತೆ ಮಾತ್ರೆ.
!!!
ಕೋಪಗೊಂಡ ಪ್ರಕೃತಿಯ ಕ್ರೂರ ನೋಟ
ಸುಡುತಿದೆ ಮಾನವರಿಗೆ ಅರಿವಿಲ್ಲದ ಆಟವ
ಹಿಂದೆ ಸಾವಿರ ಕಷ್ಟಗಳ ನಡುವೆ
ನೆಲೆಸಿತ್ತು ಮನೆಯೊಳಗೆ ಐಕ್ಯತೆಯ ಭಾವ
ಸ್ಮರಿಸದಾದೇವು ಇಂದು ಅಂತಹ ಚೈತನ್ಯ ತುಂಬುವ ಸಹೃದಯಿಗಳ ಒಲವ
ಅನುಬಂಧದ ಅನುರಾಗದಿ ಅರಳಿದಂತ ಹೂವ
ಗೋಚರಿಸದ ಕೊರ ನದ ಸಿಡಿಲಿನ ಬಯಕೆ
ಮಿಡಿದ ಹೃದಯಗಳ ಕಂಬನಿಯ ಸ್ಪರ್ಶವಿರದೆ
ಸೇರುತ್ತಿವೆ ಸಹಸ್ರಾರು ಶವಗಳ ಸಾಲು
ರುದ್ರಭೂಮಿಯ ತಳವ
ಅರಿವಿಲ್ಲದ ಯಮನ ಪಾಶದ ತುದಿಯ ಕಣವು
ನಮ್ಮ ಶ್ವಾಸವ ಸೇರುವ ಮುನ್ನ
ಸಿದ್ಧರಾಗಿರಿ ಇಂದು ಗೃಹ ದಿಗ್ಬಂಧನದಡಿ
ಅಂತರದ ಸುರಕ್ಷತೆಯ ಸ್ವಾರ್ಥದ ಬದುಕಿನೆಡೆಗೆ
ಈ ಸಮಯ ಕಳೆಯಲು ಸಾಕ್ಷಿಯಾಗಿದೆ ನಮಗೆ
ಮಾಹಿತಿ ಒದಗಿಸಒ ಆನ್ಲೈನ್ ಕಾರ್ಯಾಗಾರದ ಕೊಡುಗೆ
ಪುಟ್ಟ ಸಭೆಯಲ್ಲಿ ನೀವ್ ಮಿಂಚುವ ಸಂಚನು ಮರೆತು
ವೈರಸ್ ತೊಲಗಿಸುವ ಬನ್ನಿ ನೊಂದ ಜೀವಕ್ಕೆ ಸಹಾಯ ಹಸ್ತವ ನೀಡಿ ತ್ಯಾಗ ಸೇವೆಯ ಸಿರಿಯಾಗಿ
ಅಬ್ಬಾಬಾ ಎಂದು ತುಟ್ಟಿಮೇಲೆ ಕೈ ಇಟ್ಟೆ
.. ಹುಡುಗಿ ನೋಡಿ ಅಲ್ಲ ... ಮಾರಕ ರೋಗ ಕೋರೋನವ ನೋಡಿ
ಎಲ್ಲಿಂದ ಬಂದಪ್ಪ ಎಂದಾಗ??
ಕೋರೋನ : ನೀವು ಜೀವರಾಶಿಗಳು ವನ್ಯಜೀವವ ಕೊಂದಗ ನಾನು ಬರಲ್ಲಿಲ್ಲ ನೀವು ಅರಣ್ಯ ಮರ ಗಿಡಗಳ ಕಡಿದಾಗ ನಾನು ಬರಲ್ಲಿಲ್ಲ ಈಗ ಬಂದೆ ಏಕೆಂದು ಕೇಳಾದಿರಿ ಮನುಜರೇ ನಿಮ್ಮಗೆ ಜೀವ ನೀಡಿದ್ದು ನಿಜಾ ನಿಮ್ಮಗ ಕುಡಿಯಲು ನೀರು ಗಾಳಿ.ಆಹಾರ ಎಲ್ಲವನ್ನ ಕೊಡುವ ಅರಣ್ಯವನೇ ಅನೇಕ ದಿನಗಳಿಂದ ನಾಶಮಾಡುತ್ತ ಬಂದಿರಿ ಇಂದು ನಿಮ್ಮಗೆ ಆಮ್ಲಜನಕವಿಲ್ಲದೆ ಇದಾಗ ನೀವು ಸಾಯುವ ಪರಿಸ್ಥಿತಿ ನೋಡೊಕೆ ಬಂದೆ
ತಿಳಿಯಿರಿ ಮನುಜರೆ ಅನ್ನ ಕೊಡುವ ಭೂಮಿಯನ್ನೆ ಬಿಡದ ನೀವು ಯಾರನಾದರೂ ಬಿಟ್ಟಿರಾ ಅನುಭವಿಸಿ ಇಂತಿ ನಿಮ್ಮ ಕೋರೋನ
ದೂರ ಇನ್ನು ದೂರ
ಬೇಕು ನನಗೆ ಅಸ್ಪೃಶ್ಯತೆಯ ಸಾರಾ
ಜೀವನದಲ್ಲಿ ಜಾತಿ-ಮತ-ಧರ್ಮಗಳ ಅಹಂಕಾರ
ಏರುತಿದೆ ಭೇದಭಾವಗಳ ಶಿಖರ
ಮೂಡಿಸಬೇಕು ಏಕತೆಯ ಭಾವ
ದೂರಮಾಡುವ ಭೇದಭಾವಗಳ ಆಕಾರ ಎಲ್ಲರೂ ಒಗ್ಗಟ್ಟಿನಲ್ಲಿ ಮಾಡುವ ಇನ್ನೊಬ್ಬರಿಗೆ ಸಹಕಾರ
ಕೈ ಕೈ ಜೋಡಿಸಿ ಮುಂದೆ ಮಾಡುವ ಓಂಕಾರ
ಆಗ ಆಗುವುದು ನಮ್ಮ ಭಾರತ ಸುಂದರ
ಜೀವನದ ದಾರಿಯಲಿ ಕೈ ಹಿಡಿದು ನಡೆಸುವವನು
ಅಣ್ಣ
ಪ್ರೀತಿಯ ಹಾದಿಯಲ್ಲಿ
ನೆನಪಿನ ದೋಣಿಯಲ್ಲಿ
ಸದಾ ಜೊತೆಗೆ ಇರುವವನು
ಅಣ್ಣ
ಅಜ್ಞಾನದ ಕತ್ತಲೆಯಲಿ ಬೆಳಕಿನ ದೀಪವನ್ನು
ಹಚ್ಚಿ ಮುಂದೆ ನಡೆಸುವವನು
ಅಣ್ಣ
ನನ್ನ ಸುಖದಲ್ಲೂ ದುಃಖದಲ್ಲೂ ನೋವಿನಲ್ಲೂ ನಲಿವಿನಲ್ಲೂ
ಜೊತೆಗೆ ಹೆಜ್ಜೆ ಹಾಕುವವನು
ನನ್ನ ಅಣ್ಣ
ಎಷ್ಟೋ ನಿಲ್ದಾಣಗಳು ಒಂದೇ ರೈಲು ಸಾಗುತ ಸಾಗುತ ಒಂದು ಒಂದು ನಿಲ್ದಾಣ ದಲ್ಲು ಒಂದೊಂದು ರೀತಿಯ ತಿನ್ನಿಸುಗಳು
ಬೇಕಾದಷ್ಟು ತಿಂದೆ ಬೇಡವೆಂದು ಹೇಳಲ್ಲೇ ಇಲ್ಲ ...
ಮುಂದೆ ನನ್ನ ನಿಲ್ದಾಣ ಬಂತು ಇಳಿಯುವ ಸಮಯದಲ್ಲಿ ಹಿಂದೆ ತಿರುಗಿ ನೋಡಿದೆ ತಿನಿಸು ಕೊಟ್ಟವರೆಲ್ಲ ನಮ್ಮವರೇ ....
ಆದರೆ ಅದರಲ್ಲಿ ಮೋಸವೆಂಬ .ನಂಬಿಕೆ ದ್ರೋಹವೆಂಬ ವಿಷದ ರಸ ಸೇರಿಸಿ ತಿನ್ನಿಸಿದರು ಎಂದು
ಮುಂದಿನ ನನ್ನ ನಿಲ್ದಾಣ ಸಮಾಧಿಯತ್ತ......
ಅಮ್ಮ ನೀನೆ ನನ್ನ ಮೊದಲನೇ ದೇವರು
ಒಂಭತ್ತು ತಿಂಗಳು ಹೊತ್ತು ಹೆತ್ತು
ಜನನವ ಕೊಟ್ಟು ಪ್ರಪಂಚವನ್ನು
ನೋಡುವುದಕ್ಕೆ ಕಣ್ಣು ತೆರೆಸಿದಳು
ಅಮ್ಮನ ನೋವೆ ನಮ್ಮೆಲ್ಲರ ಜನನ
ಅಮ್ಮ ಎಂಬ ಎರಡಕ್ಷರ ನಮಗೆ ಶಕ್ತಿ
ಕೈ ತುತ್ತು ತಿನಿಸುವೆ ಜೋಗುಳವ ಹಾಡುವೆ
ಮದ್ದಾಡಿ ಕೊಂಡಾಡಿ ನಗಿಸುವೆ
ಆ ನಗುವಲ್ಲೆ ಮೊರೆಯಾಗಿ ಕಾಣುವಳು
ಹಿತಾಸಕ್ತಿಯುಲ್ಲವಳು
ಅಮ್ಮ... ನೀನೆನಮ್ಮಾ...