ಅವರು ಹಾಂಗೇ
ಇವರು ಹಿಂಗೇ ಅಂತಾ
ಯೋಚಿಸುವ ಬದಲು
ನಾವು ಹೇಂಗೆ ಅಂತಾ
ಆಲೋಚಿಸಿದರೆ
ಸಾಗುವುದು
ನಮ್ಮ ಜೀವನ
ಮುಂದೆ ಮುಂದೆ
ಇಲ್ಲದಿದ್ದರೆ
ನಿಂತ ನೀರಿನಂತೆ
ನಮ್ಮ ಜೀವನ
ಮುಗಿದು ಹೋಗುವುದು
- ರಾಜು ಹಾಸನ
21 Jun 2021, 09:58 pm
ನೀನು ನನ್ನ ಅಮ್ಮ
ನಿತ್ಯವು ಕೊಡುವೆ ಉಮ್ಮ
ಹೊಡೆದು ಓಡಿಸುವೆ ಗುಮ್ಮ
ನೀ ನನ್ನ ಪ್ರೀತಿಯ ಅಮ್ಮ
ನಿನ್ನ ಕೈ ತುತ್ತು ಬೇಕಮ್ಮ
ಲಾಲಿ ಹಾಡು ಹೇಳಮ್ಮ
ಪ್ರೀತಿಯ ಮುತ್ತು ನೀಡಮ್ಮ
ನಿನ್ನ ಮಡಿಲಲ್ಲಿ ನಾ ಮಲಗ ಬೇಕಮ್ಮ
ನಿ ನಾ ಪೂಜಿಸೊ ದೇವಿಯಮ್ಮ
ನನ್ನೆ೦ದು ಕೈ ಹಿಡಿದು ನಡೆಸಮ್ಮ
ನೀನೆ ನನ್ನ ಗುರುವಮ್ಮ
ನಿ ನನ್ನ ಹಡೆದ ಅಮ್ಮ
ಆಮ್ಮ ನನ್ನ ಪ್ರೀತಿಯ ಅಮ್ಮ ಈ ಕವನ ಜಗತ್ತಿನ ಎಲ್ಲ ಅಮ್ಮ೦ದಿರಿಗಾಗಿ ಐ ಲವ್ ಯು ಅಮ್ಮ
ಬಳಲಿದ ದೇಹಕ್ಕೆ ನೀರಾಗಿ ನಗುವೇ ಚಿಗುರಿದ ನರಗಳ ಕುಶಲದಲಿ
ಅಳಿವುದೆ ನನ್ನದು ಹರಸಿದ ಜೀವಕ್ಕೆ ಚೇತನ ತುಂಬುವ ಅವಕಾಶದಲ್ಲಈ?
ನೆತ್ತರರಿಸುವ ನೇಪದಲಿ ಸಿಗುವುದು ನನಗೆ
ಸಣ್ಣ ಸೇವೆಯ ಭಾಗ್ಯ
ನನ್ನ ರಕ್ತವ ಪಡೆದ ಜೀವಕ್ಕೆ ಲಭಿಸುವುದು
ಲೋಕದಿ ಬದುಕುವ ಆರೋಗ್ಯ
ಹೃದಯ ಬಡಿತದಿ ನದಿಯಂತೆ ಹರಿಯುವ ನನ್ನ ರಕ್ತ
ಉಸಿರನುಳಿಸುವ ದೇಹಕ್ಕೆ ಕಣದಲ್ಲಿ ತೃಣವಾಗಿ
ನೆರವಾಗುವ ತೀರ್ಥ.
ಹತಾಶೆಯದಿ ನರಳಿ ನೊಂದಿರುವ ಜೀವ
ಕಣ್ಣಲ್ಲೇ ತೋರಿತ್ತು ನನಗೆ ಕೃತಜ್ಞತೆಯ ಭಾವ.
ಪುನರ್ಜೀವ ಪಡೆಯುವ ರಕ್ತದ ಹನಿಯ
ದಾನ ವಿತರೆ ಮನುಕುಲಕ್ಕೆ
ನಾನೆಂಥ ಧನ್ಯ!
ಸಾರ್ಥಕ ಬದುಕಿನ ಪಯಣಕೆ ಇದುವೇ ಅನನ್ಯ.
೧.ಏಳು ಎದ್ದೇಳು
ನಿನ್ನ ಮಡದಿ ಮಲಗಿಹಳು
ರಾತ್ರೆಯ ಪಾತ್ರೆಗಳನು ತಿಕ್ಕಲು ಇಟ್ಟಿಹಳು
೨.ನನ್ನ ಹೆಂಡತಿ
ಬಾಳ ಸಂಗಾತಿ
ಇದೇ ದೊಡ್ಡ ಸಂಗತಿ
೩.ಮಾಡಬೇಡ ಕೋಪ
ಆಗುತಿದೆ ತಾಪ
ಕೊಟ್ಟು ಬಿಡುವೆ ಶಾಪ
೪.ಮನೆಯಲ್ಲೇ ಇರೋಣ
ಮಾಸ್ಕ ಧರಿಸೋಣ
ಕೊರೋನಾ ಓಡಿಸೋಣ
೫.ಆ ವರ್ಷ ಪರೀಕ್ಷೆ ಬರೆದೆ ನಪಾಸ
ಈ ವರ್ಷ ಓದಲೇ ಇಲ್ಲ ಪಾಸ್
ಮುಂದಿನ ವರ್ಷ ಬೇಡವೇ ಬೇಡ ಪಾಸ್
ನಪಾಸ್
- ಮಗು ಪಾಟೀಲ
ಕವಿಗಳು ರಾಯಬಾಗ
೧೩.೦೬.೨೦೨೧
ಮಳೆ
ಮಳೆ ಇದ್ದರೆ ನಿಸರ್ಗದ ಕಳೆ
ಮಳೆಯಾದರೆ ಧರೆ ತಂಪು
ಎಲ್ಲೆಲ್ಲಿಯೂ ಹಸುರಿನ ಸೋಂಪು
ಮಳೆಯಾದರೆ ಬೆಳೆ ರೈತನಲ್ಲಿ ತುಂಬುವುದು ಜೀವ ಕಳೆ
ಮಳೆಯಾದರೆ ಕಾಡು ಮೇಡು
ನೀಗುವುದು ಜೀವಿಗಳ ಬೇಕು ಬೇಡು
ಮಳೆಯೇ ಮೂಲ ಜಲ ರಾಶಿಗೆ
ಜಲವೇ ಜೀವ ಜೀವ ರಾಶಿಗೆ
ನಾನಾದೆ ಕವಿ
ನನಗೆ ಕವಿತೆ ರಚನೆಯ ಸವಿ
ನಿತ್ಯ ಜೀವನದ ಘಟನೆಗಳು
ನನ್ನಯ ಕವಿತೆಯ ಸಾಲುಗಳು
ವೇದ ಸಮಾನದ ಗಾದೆ
ಅರಿತರೆ ಜೀವನಕ್ಕಿಲ್ಲ ಬಾದೆ
ಹಿರಿಯರ ಅನುಭವ
ಬದುಕಿನ ಅನುಭಾವ
ಪ್ರಕೃತಿಯ ಪ್ರತಿ ವಸ್ತು
ಬರಹಕ್ಕೆ ಮಸ್ತು
ಖಗ ಮ್ರಗಗಳ ಒಡನಾಟ
ಕವಿಗೆ ಸಂತಸದ ಆಟ
ಬಾನಂಗಳದ ಸೂರ್ಯ ಚಂದ್ರರು
ಕವಿಯ ನಿಜವಾದ ಗೆಳೆಯರು
ಮಿನುಗುವ ನಕ್ಷತ್ರಗಳು
ಮಿರುಗುವ ಆಕಾಶ ಕಾಯಗಳು
ಕವಿ ಕಾರಣದ ಮೂಲಗಳು
ಬೆಳ್ಳಿ ಮೋಡಗಳ ಕುಣಿತ
ಕಾವ್ಯತೆಯ ಹೊಳೆತ
ಸುರಿವ ಮಳೆ
ಕಾವ್ಯದ ಬೆಳೆ
ಹರಿವ ನೀರ ಝರಿ
ಕವಿಯ ಕಾವ್ಯ ಲಹರಿ
ದೂರದ ಗುಡ್ಡ ಬೆಟ್ಟ
ಕವಿಗೆ ಸಮೀಪದ ಅಟ್ಟ
ನದಿ ಕಣಿವೆಗಳ ಸಂಗಮ
ಕವಿತೆಯ ಸರಿಗಮ
ಜಲರಾಶಿಯ ಸಾಗರವೋ
ಕವಿ ಹ್ರದಯದ ಸೆಳೆತವೋ
ನಿಸರ್ಗದ ಪ್ರತಿ ಗೋಚರವೂ
ಕವಿ ಪ್ರಿಯನಿಗೆ ರುಚಿಕರವೋ!
ಕರುಣೆ ಇಲ್ಲದ ಕೊರೋನಾ
ಮಮತೆ ಇಲ್ಲದ ಮರಣ ಮುಗಿದಾಯಿತು ಕೊರೋನಾದ ಮೊದಲ ಅಲೆ
ಶುರುವಾಯಿತು ಕೊರೋನಾದ ಎರಡನೇ ಅಲೆ
ಬಂದರೆ ಮೂರನೇ ಅಲೆ
ನಮಗಿಲ್ಲ ಇಲ್ಲಿ ನೆಲೆ
ಬೀಸುತಿದೆ ಸಾವಿನ ಬಲೆ
ವಿಸ್ತರಿಸುತಿದೆ ಭಯದ ಅಲೆ
ಎಲ್ಲೆಂದರಲ್ಲಿ ಸಾವು ನೋವು
ಮರೆಯಾಗುತಿದೆ ನಗು ನಲಿವು
ಯಾರೋ ಮಾಡಿದ ತಪ್ಪಿಗೆ
ಇನ್ಯಾರೋ ಏರುತಿರುವರು ಸಿದಿಗೆ
ಕೇಳಲಾಗುತ್ತಿಲ್ಲ ಸಾವಿನ ಸುದ್ದಿ
ಜನ ಕಲಿಯುತ್ತಿಲ್ಲ ಬುದ್ದಿ
ಮತ್ತೆ ಜನತೆಯ ಓಡಾಟ
ಸಾವಿನೊಂದಿಗಿನ ಹುಡುಗಾಟ
ಬೇಡ ವಿನಾಕಾರಣ ಜನ ಸಂಚಾರ
ಸಿಗುತ್ತಿಲ್ಲ ಸರಿಯಾದ ಉಪಚಾರ
ಸಾವಿಗೆ ಸಾವಿರಾರು ನೆಪಗಳು
ಕೊರೋನಾಗೆ ನೂರೆಂಟು ರೂಪಗಳು
ಕೊರೋನಾಗೆ ಸಣ್ಣವರೂ ಸಾಕಾಗುತ್ತಿಲ್ಲ
ದೊಡ್ಡವರೂ ಸಾಕಾಗುತ್ತಿಲ್ಲ
ಹಿರಿಯರಿರಲಿ ಕಿರಿಯರಿರಲಿ
ಎಲ್ಲರು ಮನೆಯಲ್ಲೇ ಇರಲಿ
ಮನೆಯೇ ಮಂತ್ರಾಲಯ
ಮನೆಯೇ ಅಲ್ಲವೇ ಔಷಧಾಲಯ
ಗುರು ಮುನಿದರೆ ಹರ ಕಾಯ್ವನು
ಹರ ಮುನಿದರೆ ಯಾವನು ಕಾಯ್ವನು
ಮಾನವ ಜನ್ಮ ದೊಡ್ಡದು
ಅದನು ಹಾಳು ಮಾಡಿಕೊಳ್ಳೋದು ದೊಡ್ಡ ತಪ್ಪದು
ಅರ್ಥ ಮಾಡಿಕೊಂಡರೆ ಚೆಂದಾದ ಬದುಕು
ಇಲ್ಲವಾದರೆ ಕ್ಷಮೆ ಇಲ್ಲ ಯಾವುದಕ್ಕು