Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಯಾವುದು ಅಸಲಿ ಬಣ್ಣ ??

ಸೃಷ್ಟಿಕರ್ತ ಬ್ರಹ್ಮನೇ ಹಚ್ಚಿರುವ ಬಣ್ಣ,
ಇಲ್ಲ ಪೋಷಕರ ತದೃಪಿಯೇ ಈ ಬಣ್ಣ.., ಕಣ್ ಬಿಟ್ಟ ಕ್ಷಣಕ್ಕೆ ಕಾಣುವ ಸ್ವಾರ್ಥ ಬಣ್ಣ,
ಕಣ್ ಮುಚ್ಚಿದಾಗ ಕಾಣುವ ನಿಸ್ವಾರ್ಥ ಬಣ್ಣ..,
ತಿಳಿಯದೇ ಹೋಗಿದೆ ಯಾವುದು ಅಸಲಿ ಬಣ್ಣ??

ಬೆಳೆಯುತ್ತಾ ತಂದೆ-ತಾಯಿ ತುಂಬುವ ಪ್ರೀತಿಗೊಂದು ಬಣ್ಣ..,
ಗೆಳೆಯರೊಂದಿಗೆ ಬೆರೆತಾಗ ಮೂಡುವ ಬಾವನಗೆ ಇನ್ನೊಂದು ಬಣ್ಣ..,
ತಿಳಿಯದೇ ಹೋಗಿದೆ ಯಾವುದು ಅಸಲಿ ಬಣ್ಣ??

ಸಮಾಜಕ್ಕೆ ನಿನ್ನ ಪ್ರತಿಯೊಂದು ಪ್ರಗತಿಯಲ್ಲಿ ಎಲ್ಲರಿಗೂ ಕಾಣುವ ಬಣ್ಣ,
ಸಮಾಜದ ಕಟ್ಟಪಾಡುಗಳಿಗೆ
ನಿನ್ನೊಳಗೆ ಅವಿತಿದೆ ಮತ್ತೊಂದು ಬಣ್ಣ..,
ತಿಳಿಯದೇ ಹೋಗಿದೆ ಯಾವುದು ಅಸಲಿ ಬಣ್ಣ??

ಮುಗ್ದ ಮಗುವಿನ ಮನಸಿನಲ್ಲಿ ಪ್ರೀತಿ ಪ್ರೇಮ,ಸಹನೆ,ತಾಳ್ಮೆ ಎಂಬ ಕನಸಿನ ಕಲ್ಪನೆಯಲ್ಲಿ ಕಳೆವ ಜೀವನದಲ್ಲಿದೆ ಒಂದು ಬಣ್ಣ..,
ಸುತ್ತ ಮುತ್ತಲಿನ ಪರಿಸರದಲ್ಲಿ ಕಾಮ ಕ್ರೋಧ, ಮದ,ಮತ್ಸರ ಎಂಬ ಉಸಿರು ಕಟ್ಟಿಸುವ ಗಾಳಿಯಲ್ಲಿ ಜೀವನದಲ್ಲಿದೆ ಇನ್ನೊಂದು ಬಣ್ಣ..,
ತಿಳಿಯದೇ ಹೋಗಿದೆ ಯಾವುದು ಅಸಲಿ ಬಣ್ಣ??

ಮೂರೇ ಮೂರು ದಿನಗಳ ಜೀವನ,
ಅರಿತು-ಬೆರೆತು ಕೂಡಿ ಬಾಳೋಣ..,
ಹುಟ್ಟುವಾಗ ಒಂದು ಬಣ್ಣ,
ಸಾಯುವಾಗ ಇನ್ನೊಂದು ಬಣ್ಣ..,
ಹುಟ್ಟು- ಸಾವುಗಳ ನಡುವೆ ಎಲ್ಲರಿಗೂ ಕಾಡುವ ಪ್ರಶ್ನೆ ಯಾವುದು ನಿಜವಾದ ಬಣ್ಣ???
- ದರ್ಶನ್ ಶಶಿಧರ

- Darshan S

24 May 2021, 07:13 pm

ಕಣ್ಮರೆಯಾದೇ ನನ್ನ ಎದುರಲಿ

ನೂರು ಸಾವಿರಾರು ಜನರು ನನ್ನ ಮುಂದೆ ನಿಂತರು..,
ನಿನ್ನ ಜೊತೆ ಕಳೆದ ನಾಲ್ಕು ದಿನಗಳದೆ ಸದಾ ಮಂಪರು..,

ಹಸಿ ಮುನಿಸು ಮೂಗಿನ ತುದಿಯಲಿ,
ಮಗು ಮನಸು ತೊಳ ಬಂದಿಯಲಿ..,
ನೀ ಬರುವ ನಿತ್ಯದ ಹಾದಿಯಲಿ
ನವಿಲುಗಳು ಜೊತೆ ನಡೆಯಲಿ..,

ತಂಪಾದ ಗಾಳಿ ನನ್ನ ಜೊತೆಯಲಿ,
ನಿನ್ನದೇ ಕನವರಿಕೆಗಳು ತಲೆಯಲಿ..,
ಹಾಗೆಯೇ ನಾ ನಿನ್ನ ನೆನೆದು ನೀ..,
ಕಣ್ಮರೆಯಾದೇ ನನ್ನ ಎದುರಲಿ...,

- Darshan S

24 May 2021, 10:28 am

ನಾನೂ ಅಮೇರಿಕನ್

ನಾನೂ ಅಮೆರಿಕಾ ಕುರಿತೇ ಹಾಡುತ್ತೇನೆ
ಈ ನೆಲದ ಕಪ್ಪು ಸೋದರ ನಾನು
ಜತೆಗಾರರೆಲ್ಲ ನನ್ನನ್ನು
ಅಡಿಗೆ ಮನೆಯೊಳಗೇ ಊಟಮಾಡಲು ತಳ್ಳುತ್ತಾರೆ
ನಾನು ನಗುತ್ತಲೇ
ಚೆನ್ನಾಗಿ ಉಂಡು
ಬಲಿಷ್ಠವಾಗಿ ಬೆಳೆವೆ

ನಾಳೆ
ಜತೆಗಾರರು ಬಂದಾಗ
ಊಟಕ್ಕೆ ಟೇಬಲ್ಲನ್ನೇ ಬಳಸುವೆ
ಆಗ
ಯಾರೂ ನನಗೆ
ಅಡಿಗೆ ಮನೆಯಲ್ಲಿ ಊಟಮಾಡೆಂದು
ಹೇಳುವ ಧೈರ್ಯ ತೋರಲಾರರು

ಅಲ್ಲದೆ
ನಾನೆಷ್ಟು ಸುಂದರ ಎಂಬುದು ಅವರಿಗೆ ತಿಳಿಯುತ್ತದೆ
ಅವಮಾನದಿಂದ ಅವರು ತಲೆ ತಗ್ಗಿಸಿಬಹುದು
ನಾನೂ ಸಹ ಅಮೆರಿಕನ್


ಇಂಗ್ಲೀಷ್ ಮೂಲ - ಲಾಂಗ್ಸ್ಟನ್ ಹ್ಯೂಸ್.
ಅನುವಾದ - ನಚಿಕೇತ ವಕ್ಕುಂದ.























- Nachiketh Okkunda

24 May 2021, 03:53 am

ಪ್ರಿಯ ಸಖ

ತಂಪಾಗಿ ತೀಡೋ ತಂಗಾಳಿ ನೀನು
ಶರಧಿಯಲಿ ಭೋರ್ಗರೆಯುವವ ಅಲೆಗಳ ದನಿ ನೀನು
ಇಬ್ಬನಿಯಲಿ ಮಿಂದ ಸುಮ ನೀನು
ರಂಗುರಂಗಿನ ಕಾಮನಬಿಲ್ಲಿನ ಬಣ್ಣವು ನೀನು
ತೊರೆಯಲಿ ಹರಿವ ನೀರ ಜುಳುಜುಳು ನಿನಾದ ನೀನು
ಪಕ್ಷಿಗಳ ಇಂಪಾದ ಕಲರವಕೆ ಕಂಠವು ನೀನು
ಎಲ್ಲದರಲ್ಲೂ ತುಂಬಿರುವ ನೀ ನನ್ನೊಳಗೆ ಇರುವೆ ಎಂದೆಂದೂ

- ಸಖೀ

22 May 2021, 05:37 pm

ಯುಗಾದಿ

ಬಂದಿತೀಗ ಯುಗಾದಿ ಹಬ್ಬ
ಉಕ್ಕಿ ಹರಿಯಿತು ಸಂತೋಷ ತುಂಬಾ
ಬೇವು-ಬೆಲ್ಲಗಳ ಮಿಲನ
ಸುಖ-ದುಃಖಗಳ ಸಮ್ಮಿಲನ

ಇದುವೇ ಹಿಂದೂಗಳ ವರ್ಷದ ಮೊದಲ ದಿನ
ಸೆಳೆಯಿತು ಪ್ರತಿಯೊಬ್ಬರ ಕಣ್ಮನ
ಮನೆಗೀಗ ಬಂದುಗಳ ಆಗಮನ
ಅಂದು ಎಲ್ಲರ ಪ್ರೀತಿಗೆ ಪಾತ್ರಳಾದೆ ನಾ.......

ಸಿಹಿ ತಿಂಡಿಗಳ ತಯಾರು ಇದೀಗ ಆರಂಭ
ಹೊಸ ಚಿಗುರುಗಳು ಉದಯಿಸುವ ಹಬ್ಬ
ಮನೆಯಲಿ ತಳಿರು-ತೋರಣಗಳ ಸಿಂಗಾರ
ಮನೆ ಇದೀಗ ನೋಡಲು ತುಂಬಾ ಸುಂದರ......

ಸಂಜೆಯಾದ ತಕ್ಷಣ ಚಂದ್ರನ ನೋಡುವ ಹಂಬಲ
ನಾ ಮೊದಲು ತಾ ಮೊದಲು ಎನ್ನುವ ಚಪಲ
ಇದೀಗ ಬೇವು ಬೆಲ್ಲವನು ಹಂಚುವ ಸಮಯ
ಸುಖವನು ಹೊತ್ತು ತರಲಿ ಈ ವರ್ಷದ ಸಮಯ.....

ಕಳೆದದ್ದು ಗೊತ್ತಾಗಲಿಲ್ಲ ವರ್ಷದ ಮೊದಲ ದಿನ
ಇದೀಗ ಶುರು ಮುಂದಿನ ಜೀವನ
ಜೀವನ ಎಂಬ ಈ ತೇರಲಿ
ಸುಖ ದುಃಖಗಳು ಸಮ ಆಗಿರಲಿ......

-ಮಧು❤️ಮಧು

- madhu

22 May 2021, 03:35 pm

ಓ ನನ್ನ ಚಿನ್ನು

ಚಿನ್ನದಂತ ಮನಸಿನ ಹುಡುಗಿ
ಅವಳ ಕಂಡರೆ ನನಗೆ ಅತಿಯಾದ ಪ್ರೀತಿ
ಮಗುವಿನಂತ ಮನಸಿನ ಬೆಡಗಿ
ಅವಳದು ನಿಷ್ಕಲ್ಮಶ ಪ್ರೀತಿ

ಮಧುರವಾದ ಧ್ವನಿ ಹೊಂದಿದವಳು
ದಿನ ಫೋನಿನಲ್ಲೇ ಜೊತೆ ಮಾತಾಡುವಳು
ಸುಮಧುರ ಸೌಂದರ್ಯದಿಂದ ಕಾಣುವವಳು
ಅವಳ ಪ್ರೀತಿಯಿಂದ ನನ್ನ ಸೆಳೆದಿರುಳು .....

ಅವಳು ನನ್ನ ಮೇಲೆ ಕೋಪಿಸಿಕೊಳ್ಳುವಳು
ಆದರೂ ನನಗೋಸ್ಕರ ಕಾಯುತಿರುವಳು
ಬೆಲೆ ಕಟ್ಟಲಾಗದ ನೆಡವಳಿಕೆ ಹೊಂದಿದವಳು
ಅದಕ್ಕೂ ಹೆಚ್ಚಾಗಿ ನನ್ನ ಪ್ರೀತಿಸುವಳು......

ರನ್ನದಂತ ಮನಸಿನ ಹುಡುಗಿ ಇವಳು
ಅವಳ ಪಡೆಯಲು ದಿನ ದೇವರಲ್ಲಿ ಪ್ರಾರ್ಥಿಸುತ್ತಿರುವೆ
ಅವಳು ನನ್ನ ಬಾಳ ಬೆಳಕಾಗ ಬಯಸಿದವಳು
ಅವಳಿಗೋಸ್ಕರ ನಾ ಕಾಯುತಿರುವೆ......

ನೀನೇ ನನ್ನ ಪ್ರೀತಿಯ ಸಿಹಿ ಹೃದಯ
ಈ ಬಾಳಿನ ಸಂಗಾತಿಯಾಗಿ ಬಯಸುವೆಯಾ?
ಬರಬಹುದೇನೋ ನಾವಿಬ್ಬರೂ ಒಂದಾಗೋ ಸಮಯ
ಅಲ್ಲಿಯವರೆಗೂ ನನಗೋಸ್ಕರ ಕಾಯುವೆಯ?....

- ಮಧು❤️ಮಧು



- madhu

21 May 2021, 12:44 pm

ದೂರಾದ ಗೆಳೆಯ

ನಾ ಮೆಚ್ಚಿದೆ ಒಬ್ಬ ಗೆಳೆಯನ
ತಿಳಿಯಲಿಲ್ಲ ಇದೆ ಪ್ರೀತೀನ?
ಅವ ನನ್ನಿಂದ ದೂರಾದ ಆ ಕ್ಷಣ
ಅದೇ ಪ್ರೀತಿಯೆಂದು ಅರಿತೆ ನಾ......

ಹೃದಯ ಹೃದಯಗಳು ದೂರಾದ್ವು
ಕಂಡ ಕನಸುಗಳು ಚೂರಾದ್ವು
ಅವನ ನೆನಪುಗಳೇ ನೆನಪಾದ್ವು
ಬೇರೆ ಅಂಶಗಳು ಮರೆಯಾದ್ವು......

ಪ್ರೀತಿ ಮಾಡಬಾರದು
ದೂರಾದರೆ ನೋವ ಹೇಳತೀರದು
ಕಂಬನಿಯು ಸೋರುತಿಹುದು
ಜೀವಂತ ಸಾವುವೇ ಇದು.......

ಪ್ರೀತಿ ಎನ್ನುವುದೊಂದು ಮಾಹೆ
ಪ್ರೀತಿ ಪ್ರೇಮಿಗಳದೊಂದು ಊಹೆ
ಪ್ರೀತಿಯಲ್ಲಿ ನೋವು ಖಚಿತ
ಕಣ್ಣೀರು ಚಿರಪರಿಚಿತ........

-ಮಧು❤️ಮಧು

- madhu

20 May 2021, 08:18 pm

ಹುಚ್ಚು ಪ್ರೀತಿಯ ಹುಡುಗ

ಹುಚ್ಚು ಪ್ರೀತಿಯ ಹುಡುಗ ನನ್ನವ
ನೀ ನನ್ನ ಬಾಳಿನ ಸೋಜಿಗ ಎನ್ನುವ
ನಾನಿದ್ದರೆ ಜಗತ್ತನ್ನೇ ಮರೆಯುವ
ನನಗಾಗಿ ಎಲ್ಲರನ್ನೂ ಗೆಲ್ಲುವ......

ಹುಚ್ಚನಂತೆ ಪ್ರೀತಿಸುವ ನನ್ನನು
ನಾ ಕಾಣದೆ ಹುಚ್ಚನಾಗುವನು
ಹುಚ್ಚು ಪ್ರೀತಿಯ ಮುದ್ದು ಹುಡುಗನಿವನು
ನನ್ನ ಬಾಳಿನ ಜ್ಯೋತಿಯಾದನು.....

ಪ್ರೀತಿಯಿಂದ ನನ್ನ ಮನಸ ಗೆದ್ದವ
ಕಣ್ಣ ರೆಪ್ಪೆಯಂತೆ ನನ್ನ ಕಾದವ
ಪುಟ್ಟ ಮಗುವಂತೆ ನನ್ನವ
ಇವನಾದ ಜೀವದ ಜೀವ......

ನನ್ನ ಪ್ರೀತಿಯ ಪ್ರಿಯತಮನಿವನು
ನನ್ನ ಮನಸ ಕದ್ದ ಚೋರನು
ನನ್ನ ಪ್ರೀತಿಯ ಹುಡುಗನಿವನು
ಹುಚ್ಚು ಪ್ರೀತಿಯ ಮುದ್ದು ಹುಡುಗನು......


-ಮಧು❤️ಮಧು

- madhu

19 May 2021, 11:03 am

ಬೆಳೆಯುವ ಸಿರಿ ಮೊಳಕೆಯಲ್ಲೆ ನಾಶ

ಚಿಕ್ಕಂದಿನಲ್ಲೇ ಆದ ಮದುವೆ
ಆಗಲೇ ಬಂದಿದ್ದ ಪಟ್ಟ ವಿಧವೆ
ತೃಣ ಕಾಲ ಮಾತ್ರ ಸಂತಸ
ಇನ್ನು ಬಾಳಲ್ಲಿ ಬರೀ ವಿರಸ ........

ನೋವಿನಿಂದ ಬಳಲಿದ ಮನಸು
ಕಣ್ಣಲ್ಲಿಲ್ಲ ಬೇರೆ ಯಾವುದೇ ಕನಸು
ಈಗಾಗಲೇ ಬಳಲಿತ್ತು ಹೃದಯ
ಜೀವಕ್ಕಾಗಲೆ ಹೇಳುವ ಸ್ಥಿತಿಯಲ್ಲಿತ್ತು ವಿದಾಯ .......


ಜಗತ್ತಿನಲ್ಲಿಗ ಬದುಕುವುದು ಕಷ್ಟ
ಈಗಾಗಲೇ ಬಂದಿತ್ತು ವಿಧವೆ ಪಟ್ಟ
ನೋವು-ಅವಮಾನಗಳು ಕಾರ್ಮೋಡ
ಈ ಬಾಳಲ್ಲಿ ಬರೀ ದುಗುಡ .......


ಕುಸಿಯಿತೀಗ ಜೀವನದ ಬುನಾದಿ
ಇನ್ನೆಲ್ಲಿ ಜೀವನಕ್ಕೆ ಹಾದಿ
ಮನ ಪ್ರೀತಿ ಕಾಣಲಿಲ್ಲ
ಮತ್ತೆ ಮನಸ್ಸು ಅರಳಲೆ ಇಲ್ಲ........

-ಮಧು❤️ಮಧು

- madhu

19 May 2021, 10:51 am

ಮಳೆ

ಇಳೆಯು ತುಂಬಿ ಹಸಿರಾಗಿತ್ತು,
ಕೋಗಿಲೆಯ ಕುಹು ಕುಹು ಗಾನ!
ನಮ್ಮ ಒಲವು ಹಿರಿದಾಗಿತ್ತು,
ದನಕರುಗಳ ಸಮ್ಮೇಳನ!

ಅಂದು ಬಂತು ಧಾರಕಾರ ಮಳೆ,
ಪಕ್ಷಿಗಳು ಸೇರಿಕೊಂಡವು ಗೂಡು!
ನೀರಿನಿಂದ ತುಂಬಿದ ಹೊಳೆ,
ಆಣೆಕಲ್ಲುಗಳ ಹೊಸ ಹಾಡು!!

ಒಂದೊಮ್ಮೆ ಸುರಿದ ಹಾಹಾಕಾರ,
ಎಲ್ಲವು ತಂಪಾಯಿತು!
ಮೋಡ ಮುಸುಕಿದ ಪ್ರಭಾಕರ,
ಧರೆಗೆ ಇಂಪಾಯಿತು!!

ಶಾಂತವಾಯಿತು ಒಮ್ಮಿದೊಮ್ಮೆಲೆ,
ಟಿಪ್ ಟಿಪ್ ಟಿಪ್ ಎಂಬ ಶಬ್ದ!
ಮರಗಳು ಝಾಡಿಸಿದವು ಎಲೆ,
ರೆಂಬೆ ಕೊಂಬೆಗಳು ಮತ್ತೆ ಸ್ತಬ್ದ!!

ಮತ್ತೆ ಬೀಸಿತು ಘಾಳಿ,
ಗುಡುಗು ಮಿಂಚಿನ ಸಂಚು!
ಅತಿವೃಷ್ಟಿಯ ಹಾವಳಿ,
ನೆಲದಲ್ಲಿ ಉಕ್ಕಿತು ಕಿಚ್ಚು!!

ಶಾಂತವಾಗಲಿ ಈ ರಭಸ,
ಸ್ಥಗಿತವಾಗಲಿ ಪ್ರವಾಹ!
ಬೇಸಿಗೆಯಲ್ಲಿ ವಿರಸ,
ತೀರಿತು ನಮ್ಮ್ ದಾಹ!!

- ಶ್ರೀಹರಿ












- Srihari Managoli

16 May 2021, 04:21 pm