Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬೆಳೆಯುವ ಸಿರಿ ಮೊಳಕೆಯಲ್ಲೆ ನಾಶ

ಚಿಕ್ಕಂದಿನಲ್ಲೇ ಆದ ಮದುವೆ
ಆಗಲೇ ಬಂದಿದ್ದ ಪಟ್ಟ ವಿಧವೆ
ತೃಣ ಕಾಲ ಮಾತ್ರ ಸಂತಸ
ಇನ್ನು ಬಾಳಲ್ಲಿ ಬರೀ ವಿರಸ ........

ನೋವಿನಿಂದ ಬಳಲಿದ ಮನಸು
ಕಣ್ಣಲ್ಲಿಲ್ಲ ಬೇರೆ ಯಾವುದೇ ಕನಸು
ಈಗಾಗಲೇ ಬಳಲಿತ್ತು ಹೃದಯ
ಜೀವಕ್ಕಾಗಲೆ ಹೇಳುವ ಸ್ಥಿತಿಯಲ್ಲಿತ್ತು ವಿದಾಯ .......


ಜಗತ್ತಿನಲ್ಲಿಗ ಬದುಕುವುದು ಕಷ್ಟ
ಈಗಾಗಲೇ ಬಂದಿತ್ತು ವಿಧವೆ ಪಟ್ಟ
ನೋವು-ಅವಮಾನಗಳು ಕಾರ್ಮೋಡ
ಈ ಬಾಳಲ್ಲಿ ಬರೀ ದುಗುಡ .......


ಕುಸಿಯಿತೀಗ ಜೀವನದ ಬುನಾದಿ
ಇನ್ನೆಲ್ಲಿ ಜೀವನಕ್ಕೆ ಹಾದಿ
ಮನ ಪ್ರೀತಿ ಕಾಣಲಿಲ್ಲ
ಮತ್ತೆ ಮನಸ್ಸು ಅರಳಲೆ ಇಲ್ಲ........

-ಮಧು❤️ಮಧು

- madhu

19 May 2021, 10:51 am

ಮಳೆ

ಇಳೆಯು ತುಂಬಿ ಹಸಿರಾಗಿತ್ತು,
ಕೋಗಿಲೆಯ ಕುಹು ಕುಹು ಗಾನ!
ನಮ್ಮ ಒಲವು ಹಿರಿದಾಗಿತ್ತು,
ದನಕರುಗಳ ಸಮ್ಮೇಳನ!

ಅಂದು ಬಂತು ಧಾರಕಾರ ಮಳೆ,
ಪಕ್ಷಿಗಳು ಸೇರಿಕೊಂಡವು ಗೂಡು!
ನೀರಿನಿಂದ ತುಂಬಿದ ಹೊಳೆ,
ಆಣೆಕಲ್ಲುಗಳ ಹೊಸ ಹಾಡು!!

ಒಂದೊಮ್ಮೆ ಸುರಿದ ಹಾಹಾಕಾರ,
ಎಲ್ಲವು ತಂಪಾಯಿತು!
ಮೋಡ ಮುಸುಕಿದ ಪ್ರಭಾಕರ,
ಧರೆಗೆ ಇಂಪಾಯಿತು!!

ಶಾಂತವಾಯಿತು ಒಮ್ಮಿದೊಮ್ಮೆಲೆ,
ಟಿಪ್ ಟಿಪ್ ಟಿಪ್ ಎಂಬ ಶಬ್ದ!
ಮರಗಳು ಝಾಡಿಸಿದವು ಎಲೆ,
ರೆಂಬೆ ಕೊಂಬೆಗಳು ಮತ್ತೆ ಸ್ತಬ್ದ!!

ಮತ್ತೆ ಬೀಸಿತು ಘಾಳಿ,
ಗುಡುಗು ಮಿಂಚಿನ ಸಂಚು!
ಅತಿವೃಷ್ಟಿಯ ಹಾವಳಿ,
ನೆಲದಲ್ಲಿ ಉಕ್ಕಿತು ಕಿಚ್ಚು!!

ಶಾಂತವಾಗಲಿ ಈ ರಭಸ,
ಸ್ಥಗಿತವಾಗಲಿ ಪ್ರವಾಹ!
ಬೇಸಿಗೆಯಲ್ಲಿ ವಿರಸ,
ತೀರಿತು ನಮ್ಮ್ ದಾಹ!!

- ಶ್ರೀಹರಿ












- Srihari Managoli

16 May 2021, 04:21 pm

ಮದುಮಗಳ ಮನದ ಭಾವನೆ

ಯೌವನ ದಿನ ಆರಂಭವೀಗ ಕೂಡಿ ಬಂದಿತು ಮದುವೆ ಯೋಗ ರಾತ್ರಿಯೆಲ್ಲಾ ಕಣ್ ಮುಚ್ಚಲಿಲ್ಲಅವನನ್ನು ಬಿಟ್ಟರೆ ಬೇರೆ ಕನಸಿಲ್ಲ...........ನಾ ಮೆಚ್ಚಿದೆ ಆ ಗೆಳೆಯನ ಅವನಲ್ಲಿಗೆ ಸೆಳೆದವು ಕಣ್ಮನ ನಾನೀಗ ಗೃಹಲಕ್ಷ್ಮಿ ಆ ಮನೆಯ ಮಹಾಲಕ್ಷ್ಮಿ...........ನಾನೀಗ ತವರಿಂದ ನಿರ್ಗಮನ ಗಂಡನ ಮನೆಗೆ ಆಗಮನ ತಂದೆ- ತಾಯಿ ಕಣ್ಣಲ್ಲಿ ನೀರು ನನ್ನ ಹೊಸ ಜೀವನ ಶುರು..........ನನ್ನ ಬಾಳಿನ ಹೊಸ ಜೀವನ ಈಗ ಶುರು ಅದರ ಪಯಣ ಇದುವೇ ನನ್ನ ಪುಟ್ಟ ಸಂಸಾರ ನಾ ಹೊತ್ತೆ ಸಂಸಾರದ ಭಾರ...............

- madhu

16 May 2021, 12:06 pm

ನನ್ನ ಮನದ ಮಾತು....

ನನ್ನ ನಿನ್ನ ಪರಿಚಯದ ಮೊದಲ ದಿನದ
ಇಲ್ಲಿಯ ತನಕ ಒಂದು ದಿನವೂ ನಿನಗೆ ಕೆಡಕನ್ನು
ಬಯಸಿದವನಲ್ಲ....
ನಿನ್ನ ಸಂತೋಷದಲ್ಲೇ ನನ್ನ ಸಂತೋಷವನ್ನು
ಕಂಡವನು, ನಿನಗೇಂದೂ ಮೋಸ ಮಾಡಿದವನಲ್ಲ...
ನಿನ್ನ ಜೀವನ ಸುಖವಾಗಿರಲ್ಲೆಂದು ಬಯಸಿದವನೆ
ಹೊರತು, ಕಷ್ಟಗಳು ಬರಲಿ ಎಂದು ಕನಸಲ್ಲಿಯೂ
ಯೋಚಿಸಿದವನಲ್ಲ.....
msbhovi......✍️

- mani_s_bhovi

16 May 2021, 10:55 am

ಪ್ರೀತಿಸಿದ ಹೃದಯ

ಜೀವನದಲ್ಲಿ ಬಂದ ಹೊಸ ಹುಡುಗ ನನ್ನಲ್ಲಿ ತಂದ ಪ್ರೀತಿಯ ಅನುರಾಗ ನನ್ನ ಹೃದಯ ಈಗ ಒಪ್ಪುವ ಸ್ಥಿತಿ ‌ ಆದರೆ ಒಪ್ಪಲಿಲ್ಲ ಸಂಸ್ಕೃತಿ ..... ಜಗತ್ತಿನಲ್ಲಿ ವಿವಿಧ ಸಂಸ್ಕೃತಿ ಸಂಸ್ಕೃತಿಯಲ್ಲಿ ವಿವಿಧ ಜಾತಿ ಇದುವೇ ಬಿಡಿಸಿತು ಅವನ ಸಂಗ ನನಗಾಯಿತು ಪ್ರೀತಿಯ ಬಂಗ....... ಕಣ್ಣಿನಲ್ಲೇ ಶುರುವಾದ ಪ್ರೀತಿ ನನಗಾಗಲೆ ತಂದಿತ್ತು ಬೀತಿ ಆದರೂ ಒಪ್ಪಲಿಲ್ಲ ನನ್ನ ಮನ ಇದುವೇ ಕಾಪಾಡಿತು ನನ್ನ ಮಾನ...... ಪ್ರೀತಿ ಎನ್ನುವುದು ಯಾರನ್ನೂ ಬಿಟ್ಟಿಲ್ಲ ಆದರೂ ಪ್ರೀತಿಯಲ್ಲಿ ಜಾರಲು ಮನ ಒಪ್ಪಲಿಲ್ಲ ಪ್ರೀತಿಸುವ ಹುಡುಗ ಕೊನೆಗೆ ಸ್ನೇಹಿತನಾದ ಮುಳುಗಿತು ಪ್ರೀತಿಯ ಸಂಗೀತ ನಿನಾದ........ ಪ್ರೀತಿಯಿಂದ ಶುರುವಾದ ಈ ಸಂಬಂದ ಕೊನೆಯಾಗಿದ್ದು ಈ ಸ್ನೇಹದಿಂದ.......

- madhu

15 May 2021, 12:47 pm

ನಿಸರ್ಗ

ನಿಸರ್ಗವಿದು ಚಲುವಿನ ಚಿತ್ತಾರ,
ಯುವ ಕವಿಗಳಿಗೆ ಸ್ಫೂರ್ತಿಯ ಆಗರ!
ಇಲ್ಲಿ ಇವೆ ನೂರಾರು ಸಮುದ್ರ ಸಾಗರ,
ರಸಿಕರ ಮನ ಮಿಡಿಯುವ ಶೃಂಗಾರ!!

ನಿಸರ್ಗ ನನ್ನ ತವರು ಮನೆ,
ಇದರಲ್ಲಿದೆ ಜೋಳದ ತೆನೆ!
ಇದರ ಪ್ರೀತಿಗೆ ಇಲ್ಲ ಕೊನೆ,
ಇದು ಜೇವಿಗಳ ಅರಮನೆ!!

ನಿಸರ್ಗದಲಿ ದೇವರು ಬರೆದ ಕವನ,
ರವಿಗೆ ನಾವು ಮಾಡುವ ನಮನ!
ಸಂಜೆಯಾದರೆ ಶಶಾಂಕನ ತಂಪು,
ಕೋಗಿಲೆಗಳ ಮಧುರ ಗಾನವು ಇಂಪು!!

ನಿಸರ್ಗ ನಮಗೆ ಕೊಡುವ ಊಟ,
ನಿತ್ಯ ನಮಗೆ ಅನುಭವದ ಪಾಠ!
ಉರಿಯುವ ಬಿಸಿಲಿನ ಕಾಂತಿ,
ವೃಕ್ಷದಡಿಯಲಿ ಕೊಡುವ ವಿಶ್ರಾಂತಿ!!

ನಿಸರ್ಗದಲಿ ನಾನು ಭಾವುಕ ,
ಯಾರು ಇದರ ಮಾಂತ್ರಿಕ!
ನೂರುದೇವರ ನೋಡುವ ತವಕ,
ಪ್ರಕೃತಿ ಮಾತೆಯೇ ಕೊನೆತನಕ!!

- ಶ್ರೀಹರಿ

- Srihari Managoli

15 May 2021, 01:54 am

ಮುದ್ದು ಹುಡುಗ

ಈ ಮನಸ ಕದ್ದವನು ನನ್ನ ಪ್ರೀತಿಯ ಮುದ್ದಿವನು ಈ ಬಾಳಿನ ಕನಸಿವನು ಕನ್ನೋಟದಲ್ಲೆ ಸೆಳೆದವನು.....ಪ್ರೀತಿಯಿಂದ ಚಿನ್ನು ಎಂದು ಕರೆಯುವನು ದಿನ ಫೋನಿನಲ್ಲೇ ಗಂಟೆಗಟ್ಟಲೆ ಮಾತಾಡುವನು ನನ್ನ ಆಲಿಂಗನಕ್ಕಾಗಿ ತುದಿಗಾಲಲ್ಲಿ ಕಾಯುತಿರುವನು ನನ್ನ ಕಾಣದೆ ವರ್ಷಗಳೇ ಕಲೆಯುತಿರುವನು.....ನನ್ನ ಉಸಿರಲಿ ಬೆರೆತು ಹೋಗಿರುವ ಈ ಹೃದಯದ ಬಡಿತವಿವನು ನಿದ್ದೆಯಲ್ಲೂ ನನ್ನ ಕಾಡುವವನು ಈ ಮನದ ತುಡಿತವಿವನು.....ಅವನ ಹೃದಯದಲಿ ತೆರೆದಿರುವ ಪ್ರೀತಿಯ ಖಾತೆ ಆದರೂ ಪ್ರತಿನಿತ್ಯ ಜಗಳವಾಡುವನು ನನ್ನಯ ಜೊತೆ ಕೆಲವೊಮ್ಮೆ ಅತಿರೇಖವಾದ ನಮ್ಮೀ ಜಗಳ ಕೆಲವೊಮ್ಮೆ ಹರಿಸುವುದು ಕಣ್ಣ ಹನಿಗಳ.... ಮೂಗಿನ ತುದಿಯಲ್ಲೇ ಸಿಟ್ಟು ಕ್ಷಣ ಕೂಡ ಇರಲಾರ ನನ್ನ ಬಿಟ್ಟು ತನ್ನದೇ ಸರಿ ಎನ್ನುವ ನಮ್ಮ ವಾದ ಕೆಲವೊಮ್ಮೆ ಸೃಷ್ಟಿಸುವುದು ವಿವಾದ..... ಇಬ್ಬರ ಮನೆಯಲ್ಲೂ ನಮ್ಮ ಪ್ರೀತಿಗೆ ಒಪ್ಪುತ್ತಿಲ್ಲ ಆದರೂ ಅವನನ್ನು ಬಿಡಲು ನನಗೆ ಮನಸಿಲ್ಲ ಹೇಗಾದರೂ ಮಾಡಿ ಒಪ್ಪಿಸಬಹುದು ಅವರನ್ನು ಆ ನಂಬಿಕೆಯಿಂದಲೇ ಅವನ ನೆನೆಯುತಿರುವೆನು.....ಭೂಮಿ-ಆಕಾಶ ಒಂದಾಗುವುದಿಲ್ಲ ಮುದ್ದು-ಚಿನ್ನು ಒಂದಾಗಬಹುದಲ್ಲ ಆ ಆಸೆಯಿಂದ ದಿನ ಕಲೆಯುತಿರುವೆನು ಅವ ಸಿಗಬಹುದೇನೋ ಎಂದು ಕಾಯುತಿರುವೆನು......ಬಲ್ಲವರಾರು ದೇವರ ಆಟವನು ಕೊನೆಗೊಂದು ದಿನ ಸಿಕ್ಕರೂ ಸಿಗಬಹುದವನು ಈ ಪ್ರೀತಿ ಕೊನೆವರೆಗೂ ಉಳಿವುದೋ? ಕಡಲ ಅಂಚಲ್ಲೆ ತೇಲಿ ಹೋಗುವುದೋ ?

- madhu

14 May 2021, 02:52 pm

ಪ್ರೀತಿಯ ಕನಸು

ಕಣ್ಣಾರೆ ನಾ ಕಂಡ ಕನಸು ನನಸಾಗೊ ಮೊದಲೇ ಕನಸಾಗೆ ಕಣ್ ಸೇರಿತು ಹೃದಯದ ಪ್ರೀತಿ ಹೂವಾಗಿ ಅರಳುವ ಮೊದಲೇ ಮೊಗ್ಗಾಗೆ ಹೃದಯ ಸೇರಿತು...... ನನಸಾಗದೆ ಉಳಿದ ಕನಸು ಮುದ್ದಾದ ಹೃದಯ ಸೇರಿದೆ ಮೊಗ್ಗಾಗಿಯೆ ಉಳಿದ ಪ್ರೀತಿ ಕಣ್ಣ ಕಂಬನಿಯಾಗಿ ಹರಿದಿದೆ....... ಅಂದು ನಾ ಕಂಡ ಕನಸು ಇಂದು ಹೃದಯವನು ಕೊಲ್ಲುತಿದೆ ಅಂದು ಫಲಿಸದ ಚೆಂದದ ಪ್ರೀತಿ ಕಣ್ಣ ಕಂಬನಿಯ ಚೆಲ್ಲುತಿದೆ...... ನಾ ಕಂಡ ಪ್ರೀತಿ ಕನಸುಗಳ ಪಯಣ ಕೊನೆಯಾಗುವುದಿಲ್ಲ ಈ ಕ್ಷಣ ನನ್ನ ಹೃದಯ ಬಡಿತ ನಿಂತ ಆ ಕ್ಷಣ ಮಣ್ಣ ಸೇರುವುದು ಪ್ರೀತಿ ಕನಸುಗಳ ಪಯಣ........

- madhu

13 May 2021, 08:02 pm

ತಾಯಿ

ನಮ್ಮನ್ನು ಹಡೆದವಳು ಈ ತಾಯಿ ಜಗತ್ತಿಗೆ ಪರಿಚಯಿಸಿದ ಕರುಣಾಮಯಿ ಮಕ್ಕಳೆಂದರ ಅವಳಿಗೆ ಜೀವ ಮಗುವಿನ ಮುಖ ನೋಡಿ ಮರೆವಳು ನೋವ ... ಒಂಬತ್ತು ತಿಂಗಳು ಗರ್ಭದಲ್ಲಿಟ್ಟು ಸಾಕಿದಳು ಯಾವ ದೇವರಿಗೆನೂ ಕಮ್ಮಿ ಇಲ್ಲ ಇವಳು ಗಂಡ -ಮನೆ -ಮಕ್ಕಳಿಗಾಗಿ ದುಡಿವಳು ಕಷ್ಟಪಟ್ಟು ನಿವಾರಿಸುವಳು ಎಲ್ಲ ಆಪತ್ತು ... ತಾಯಿಯೇ ಮೊದಲ ದೇವರು ಇವಳಿಗೆ ಯಾರಿಲ್ಲ ಸಮಾನರು ಮಗುವಿಗಾಗಿ ಸಾವಿರ ಕನಸ ಕಟ್ಟಿಕೊಳ್ಳುವಳು ಕಷ್ಟ ಬಂದರೂ ಸೋಲಳು ಇವಳು ... ಮಗುವು ಅತ್ತರೆ ತಾನೂ ಅಳುವಳು ಮಗುವಿಗೆ ಪ್ರೀತಿಯಿಂದ ಹಾಲನೆರೆವಳು ತಾಯಿಯೇ ಜಗತ್ತಿನ ಏಕೈಕ ದೇವರು ಮಿಕ್ಕವರೆಲ್ಲ ಇವಳ ಮುಂದೆ ಸೋತರು ... ಮಗುವನ್ನು ಪ್ರೀತಿಯಿಂದ ಬಿಗಿದಪ್ಪುವಳು ಅಕ್ಕರೆಯಿಂದ ಸಿಹಿ ಮುತ್ತ ನೀಡುವಳು ದೇವರ ಬದಲು ತಾಯಿಯ ಸೃಷ್ಟಿ ತಾಯಿಯಿಂದಲೆ ಮಕ್ಕಳಿಗೆ ಪುಷ್ಟಿ ...

- madhu

13 May 2021, 06:07 am

ಸೈನಿಕ ನಮ್ಮ ದೇಶದ ರಕ್ಷಕ

ಅಮ್ಮನ ಮಡಿಲಲಿ ಕಂತ್ತೆರೇವ ಮೊದಲೇ
ಭಗವದ್ಗೀತೆಯ ಸಾರವ ಅರಿತು ಬಂದ ಮುದ್ದು ಕುವರ
ಅವ ಸ್ಪಟಿಕದಂತೆ ನುಡಿಯುತ್ತಿದ್ದ
ಭಾರತಾಂಬೆಯ ಭಕ್ತಿಸಾರ
ವಿದ್ಯೆಯ ಜೊತೆಗೆ ಕಲಿತ ಶತ್ರುಗಳ ಸಂಹರಿಸುವ ಪಾಠ
ಪ್ರಚೋದನೆ ನೀಡಿತು ಮನಕೆ ವೀರ ಯೋಧರ
ದೇಶ ರಕ್ಷಣೆಯ ಕಥೆಗಳ ಸಾಕ್ಷಿಯ ಸಂಪುಟ
ಅವಕಾಶ ದೊರೆಯಿತು ಗಡಿ ತೀರವ ಕಾಯುವ ಹುದ್ದೆಗೆ
ಆಗ ತನ್ನ ಕುಟುಂಬವ ತ್ಯಜಿಸಿ ನಡೆದ ಯುವಕ
ಹಿಮಾಲಯ ಪರ್ವತದೆಡೆಗೆ
ತನ್ನ ರಕ್ಷಣೆ ಭಾರವ ಬೆನ್ನಲಿ ಹೊತ್ತು
ವೈರಿಗಳ ಗುಡುಗ ಅಡಗಿಸುವ ಮುತ್ತು
ನಿದ್ರಿಸಲು ಬಯಸುವುದೆ ಶಯನ ಗೃಹವ
ಪಾಪ ಕರ್ಮವ ಎಸಗಿ ದೇಶ ದ್ರೋಹದಿ ಮುಳುಗಿ ನಾವ್ ಮರೆಯಬಹುದೇ
ಮೇಣದಂತೆ ಸವೆಯುತ್ತಿರೊ ಸೈನಿಕರ ಜೀವನವ
ತಾಯ್ನಾಡ ಉಳಿವಿಗೆ ಹೆಬ್ಬಂಡೆಯಂತೆ ಕಾವಲಿರುವ ಶೂರರಿಗೆ ಪ್ರತಿದಿನವೂ ಸೇರಬೇಕು ನಮ್ಮ ಕೋಟಿ ಕೋಟಿ ನಮನ
ಎದುರಾಳಿ ಗುಂಡಿಗೆ ಬಲಿಯಾದ ವೀರ ಯೋಧರ ಕಥನ
ಮಕ್ಕಳ್ ಎದೆಯಲ್ಲಿ ಮೂಡಿಸಬೇಕು ಸದಾ
ಸೃಜನಶೀಲ ಚಿಂತನೆಯ ದೇಶಾಭಿಮಾನ.

- nagamani Kanaka

12 May 2021, 10:05 pm