Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚಂದ್ರ

ಬೆಳದಿಂಗಳ ರಾತ್ರಿಯಲ್ಲಿ
ಹುಣ್ಣಿಮೆಯ ನಗುವಲ್ಲಿ
ತಾಯಿಯ ಕೈಯಲ್ಲಿ ಪುಟ್ಟ ಮಗು
ಪುಟ್ಟ ಮಗು ಬಾಯಲ್ಲಿ ಒಂದೆರಡು ತುತ್ತಿಟ್ಟು
ಮುತ್ತಿಕೊಂಡ ಆಡುಗಳು ನೋಡಿಲ್ಲಿ
ಅತ್ತರೆ ಅಳುತ್ತಾ ನಕ್ಕರೆ ನಗುತಾ
ಚಂದ್ರನ ನೋಡಿ ಕರೆದಿಹಾಳು ಬಳಿಗೆ
ಹೊತ್ತು ಕಳೆಯಿತು ಮಂಜು ಸರಿದ ಹಾಗೆ
ಚಂದ್ರ ಓಡಿ ಸೂರ್ಯ ಬರುವ ಹೊತ್ತಿಗೆ
ಮಗು ಮಲಗಿಹುದು ತೊಟ್ಟಿಲ ಬಳಿಯಾಗೆ

- maduksha H

12 May 2021, 10:18 am

ಬಣ್ಣ

ಕೋಗಿಲೆಯ ಬಣ್ಣವೂ ಕಪ್ಪು
ಕಾಗೆ ಬಣ್ಣವು ಕಪ್ಪು
ರಾಗದಿ ವ್ಯತ್ಯಾಸ ವಿಪ್ಪು
ಕಪ್ಪು ಬಿಳಿ ಮನುಷ್ಯ
ಆದರೆ ಮನದೊಳು ಸಾವಿರ ಕಲ್ಮಶ
ನೀರಿಗೆ ಇಲ್ಲ ಬಣ್ಣ
ಆದರೂ ಅದು ಬೇಕು ಎಲ್ಲರಿಗೂ ಅಣ್ಣ
ಜಗದೊಳು ಬಣ್ಣಕ್ಕೆ ಕೊರತೆಯಿಲ್ಲ
ಆದರೂ ನಾವು ಅದನ್ನು ಬಿಡಬೇಕಲ್ಲ

- maduksha H

12 May 2021, 09:56 am

ಹೃದಯ

ಮನಸು ಚಂಚಲ..!!
ಬುದ್ದಿ ಅಚಲ..!!
ಇವೆರಡರ ನಡುವೆ ಹೃದಯ ವಿಲವಿಲ..!!

- Harish Gowda

11 May 2021, 09:46 pm

ಹೃದಯ

ಮನಸು ಚಂಚಲ..!!
ಬುದ್ದಿ ಅಚಲ..!!
ಇವೆರಡರ ನಡುವೆ ಹೃದಯ ವಿಲವಿಲ..!!

- Harish Gowda

11 May 2021, 09:25 pm

ಏಕಾಗ್ರತೆ

ಕೆಲಸವಿಲ್ಲದೆ ಕುಳಿತರೆ ಮನೆಯಲ್ಲಿ..!!
ಹುಳು ಓಡಾಡಿದಂತೆ ತಲೆಯಲ್ಲಿ..!!
ಮನಸಿಗೆ ಬೇಕು ಏಕಾಗ್ರತೆ..!!
ಇದ್ದರೆ ಸಮಯದ ಜಾಗ್ರತೆ..!!
ಆಗ ಪ್ರತಿದಿನವೂ ಜಾತ್ರೆ..
ಇಲ್ಲವೆ ರಾತ್ರಿ ನಿದ್ರೆಗಾಗಿ ನುಂಗಬೇಕಾಗುತ್ತೆ ಮಾತ್ರೆ.
!!!

- Harish Gowda

11 May 2021, 09:21 pm

ಪ್ರಕೃತಿಯ ಕ್ರೂರ ನೋಟ

ಕೋಪಗೊಂಡ ಪ್ರಕೃತಿಯ ಕ್ರೂರ ನೋಟ
ಸುಡುತಿದೆ ಮಾನವರಿಗೆ ಅರಿವಿಲ್ಲದ ಆಟವ
ಹಿಂದೆ ಸಾವಿರ ಕಷ್ಟಗಳ ನಡುವೆ
ನೆಲೆಸಿತ್ತು ಮನೆಯೊಳಗೆ ಐಕ್ಯತೆಯ ಭಾವ
ಸ್ಮರಿಸದಾದೇವು ಇಂದು ಅಂತಹ ಚೈತನ್ಯ ತುಂಬುವ ಸಹೃದಯಿಗಳ ಒಲವ
ಅನುಬಂಧದ ಅನುರಾಗದಿ ಅರಳಿದಂತ ಹೂವ
ಗೋಚರಿಸದ ಕೊರ ನದ ಸಿಡಿಲಿನ ಬಯಕೆ
ಮಿಡಿದ ಹೃದಯಗಳ ಕಂಬನಿಯ ಸ್ಪರ್ಶವಿರದೆ
ಸೇರುತ್ತಿವೆ ಸಹಸ್ರಾರು ಶವಗಳ ಸಾಲು
ರುದ್ರಭೂಮಿಯ ತಳವ
ಅರಿವಿಲ್ಲದ ಯಮನ ಪಾಶದ ತುದಿಯ ಕಣವು
ನಮ್ಮ ಶ್ವಾಸವ ಸೇರುವ ಮುನ್ನ
ಸಿದ್ಧರಾಗಿರಿ ಇಂದು ಗೃಹ ದಿಗ್ಬಂಧನದಡಿ
ಅಂತರದ ಸುರಕ್ಷತೆಯ ಸ್ವಾರ್ಥದ ಬದುಕಿನೆಡೆಗೆ
ಈ ಸಮಯ ಕಳೆಯಲು ಸಾಕ್ಷಿಯಾಗಿದೆ ನಮಗೆ
ಮಾಹಿತಿ ಒದಗಿಸಒ ಆನ್ಲೈನ್ ಕಾರ್ಯಾಗಾರದ ಕೊಡುಗೆ
ಪುಟ್ಟ ಸಭೆಯಲ್ಲಿ ನೀವ್ ಮಿಂಚುವ ಸಂಚನು ಮರೆತು
ವೈರಸ್ ತೊಲಗಿಸುವ ಬನ್ನಿ ನೊಂದ ಜೀವಕ್ಕೆ ಸಹಾಯ ಹಸ್ತವ ನೀಡಿ ತ್ಯಾಗ ಸೇವೆಯ ಸಿರಿಯಾಗಿ

- nagamani Kanaka

10 May 2021, 08:00 pm

ನಕ್ಷತ್ರ

ಬೆಳದಿಂಗಳ ಬಾನಲಿ ಮಿನುಗುವ ತಾರೆ
ನಿನ ನೋಡುತ ಕಳೆದೋದೆನು ಬಾರೆ
ಬಾರೆ... ಒಮ್ಮೆ ಬಾರೆ.....
ನಿನ ನೋಡುತ ಕೈ ಚಾಚೆನು
ಅಂಗೈಲಿ ಸೇರೋ ತವಕ
ಕಿರು ಆಸೆ ಮೂಡಿದೆ
ಫಳಫಳ ಹೊಳೆಯುವ ಚುಕ್ಕಿ
ನೀ ಕಾಣಲು ಸೌಂದರ್ಯದ ಪಲ್ಲಕ್ಕಿ
ನಿನಗಾಗಿ ಕವಿಯಾದೆ ನಾನಿಗ
ನನಾ ಮನಸಿಗಾ ನಿನದಾಗಿದೆ
ಕೂಗಿ ಕರೆದರೆ ಕೇಳದಾಗಿದೆ
ಕೈ ಎಟುಕಲಾರದ ದೂರದಲ್ಲಿದ್ದು
ಕಣ್ಣನು ಮಿಟುಕಿಸುವೆ ನಿನಲ್ಲಿದ್ದು
ಅಹಾ...! ಎಂಥಾ ಅದ್ಭುತ ಮಾಯಗಾರ
ನಿನ ವರ್ಣಿಸಲು ನಾನಿಗ ಕವಿಗಾರ
ಆದೆನು.....
ಪದಗಳೆ ಸಾಲದು ನಿನ ಚೆಲುವಿಗೆ
ಕಳೆದೋದೆನು ನಿನ ಹೊಳಪಿಗೆ
ನಕ್ಷತ್ರ..., ನೀನೋಂದು ಮುಗಿಯದ
ವರ್ಣರಂಜಿತ ಮನಮೋಹಕವಾದ
ಅಚ್ಚರಿಯದ..... ತಾರೆ ನೀನಾಗಿಹ...!
ರಚನೆ:ಕಾವ್ಯ. ಕೆ

- Kavya. k

10 May 2021, 09:14 am

ಕೋರೋನ

ಅಬ್ಬಾಬಾ ಎಂದು ತುಟ್ಟಿ‌ಮೇಲೆ‌ ಕೈ ಇಟ್ಟೆ
.. ಹುಡುಗಿ ನೋಡಿ ಅಲ್ಲ ... ಮಾರಕ ರೋಗ ಕೋರೋನವ ನೋಡಿ

ಎಲ್ಲಿಂದ ಬಂದಪ್ಪ ಎಂದಾಗ??
ಕೋರೋನ : ನೀವು ಜೀವರಾಶಿಗಳು ವನ್ಯಜೀವವ ಕೊಂದಗ ನಾನು ಬರಲ್ಲಿಲ್ಲ ನೀವು ಅರಣ್ಯ ಮರ ಗಿಡಗಳ ಕಡಿದಾಗ ನಾನು ಬರಲ್ಲಿಲ್ಲ ಈಗ ಬಂದೆ ಏಕೆಂದು ಕೇಳಾದಿರಿ ಮನುಜರೇ ನಿಮ್ಮಗೆ ಜೀವ ನೀಡಿದ್ದು ನಿಜಾ ನಿಮ್ಮಗ ಕುಡಿಯಲು ನೀರು ಗಾಳಿ.ಆಹಾರ ಎಲ್ಲವನ್ನ ಕೊಡುವ ಅರಣ್ಯವನೇ ಅನೇಕ ದಿನಗಳಿಂದ ನಾಶಮಾಡುತ್ತ ಬಂದಿರಿ ಇಂದು ನಿಮ್ಮಗೆ ಆಮ್ಲಜನಕವಿಲ್ಲದೆ ಇದಾಗ ನೀವು ಸಾಯುವ ಪರಿಸ್ಥಿತಿ ನೋಡೊಕೆ ಬಂದೆ

ತಿಳಿಯಿರಿ ಮನುಜರೆ ಅನ್ನ ಕೊಡುವ ಭೂಮಿಯನ್ನೆ ಬಿಡದ ನೀವು ಯಾರನಾದರೂ ಬಿಟ್ಟಿರಾ ಅನುಭವಿಸಿ ಇಂತಿ‌ ನಿಮ್ಮ ಕೋರೋನ

- santhosh Gandhi

06 May 2021, 11:31 pm

ಒಗ್ಗಟ್ಟು

ದೂರ ಇನ್ನು ದೂರ
ಬೇಕು ನನಗೆ ಅಸ್ಪೃಶ್ಯತೆಯ ಸಾರಾ
ಜೀವನದಲ್ಲಿ ಜಾತಿ-ಮತ-ಧರ್ಮಗಳ ಅಹಂಕಾರ
ಏರುತಿದೆ ಭೇದಭಾವಗಳ ಶಿಖರ
ಮೂಡಿಸಬೇಕು ಏಕತೆಯ ಭಾವ
ದೂರಮಾಡುವ ಭೇದಭಾವಗಳ ಆಕಾರ ಎಲ್ಲರೂ ಒಗ್ಗಟ್ಟಿನಲ್ಲಿ ಮಾಡುವ ಇನ್ನೊಬ್ಬರಿಗೆ ಸಹಕಾರ
ಕೈ ಕೈ ಜೋಡಿಸಿ ಮುಂದೆ ಮಾಡುವ ಓಂಕಾರ
ಆಗ ಆಗುವುದು ನಮ್ಮ ಭಾರತ ಸುಂದರ

- maduksha H

06 May 2021, 08:59 pm

ಅಣ್ಣ

ಜೀವನದ ದಾರಿಯಲಿ ಕೈ ಹಿಡಿದು ನಡೆಸುವವನು
ಅಣ್ಣ
ಪ್ರೀತಿಯ ಹಾದಿಯಲ್ಲಿ
ನೆನಪಿನ ದೋಣಿಯಲ್ಲಿ
ಸದಾ ಜೊತೆಗೆ ಇರುವವನು
ಅಣ್ಣ
ಅಜ್ಞಾನದ ಕತ್ತಲೆಯಲಿ ಬೆಳಕಿನ ದೀಪವನ್ನು
ಹಚ್ಚಿ ಮುಂದೆ ನಡೆಸುವವನು
ಅಣ್ಣ
ನನ್ನ ಸುಖದಲ್ಲೂ ದುಃಖದಲ್ಲೂ ನೋವಿನಲ್ಲೂ ನಲಿವಿನಲ್ಲೂ
ಜೊತೆಗೆ ಹೆಜ್ಜೆ ಹಾಕುವವನು
ನನ್ನ ಅಣ್ಣ

- maduksha H

06 May 2021, 07:16 pm