Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸೇಹ್ನ

ಎಷ್ಟೋ ನಿಲ್ದಾಣಗಳು ಒಂದೇ ರೈಲು ಸಾಗುತ ಸಾಗುತ ಒಂದು ಒಂದು ನಿಲ್ದಾಣ ದಲ್ಲು ಒಂದೊಂದು ರೀತಿಯ ತಿನ್ನಿಸುಗಳು
ಬೇಕಾದಷ್ಟು ತಿಂದೆ ಬೇಡವೆಂದು ಹೇಳಲ್ಲೇ ಇಲ್ಲ ...
ಮುಂದೆ ನನ್ನ ನಿಲ್ದಾಣ ಬಂತು ಇಳಿಯುವ ಸಮಯದಲ್ಲಿ ಹಿಂದೆ ತಿರುಗಿ ನೋಡಿದೆ ತಿನಿಸು ಕೊಟ್ಟವರೆಲ್ಲ ನಮ್ಮವರೇ ....
ಆದರೆ ಅದರಲ್ಲಿ ಮೋಸವೆಂಬ .ನಂಬಿಕೆ ದ್ರೋಹವೆಂಬ ವಿಷದ ರಸ ಸೇರಿಸಿ ತಿನ್ನಿಸಿದರು ಎಂದು
ಮುಂದಿನ ನನ್ನ ನಿಲ್ದಾಣ ಸಮಾಧಿಯತ್ತ......

ಸಂತೋಷ್ ಗಾಂಧಿ

- santhosh Gandhi

06 May 2021, 12:14 am

ಅಂಬಿಗ

ದೋಣಿಯ ಪಯಣವನು ನಡೆಸುವ ಅಂಬಿಗ
ತನಗೆದುರಾಗುವ ಕಷ್ಟ ನೋವುಗಳು
ಬಿರುಗಾಳಿ ಲೆಕ್ಕಿಸದೆ,ಬರುವ ಅಲೆಗಳಿಗೆ ಹೆದರದೆ
ಮುನ್ನುಗುವ ಕಾಯಕದ ಛಲದವನು
ಅಂಬಿಗ
ಮೂರು ಹೊತ್ತಿನ ಹೊಟ್ಟೆ ಪಾಡಿಗೆ
ಅಂಬಿಗನಿಗೆ ಈ ಕಾಯಕದ ದಡ
ಸೇರುವ ತವಕ,ಸೇರಿಸುವ ತವಕ
ತನ್ನ ಬಗೆ ಚಿಂತಿಸದೆ ತನವರನು ಕಾಯಲು
ಶ್ರಮಿಸುವ ಕಾಯಕ ಅಂಬಿಗನದು

- Kavya. k

04 May 2021, 01:24 pm

ಅಮ್ಮ

ಅಮ್ಮ ನೀನೆ ನನ್ನ ಮೊದಲನೇ ದೇವರು
ಒಂಭತ್ತು ತಿಂಗಳು ಹೊತ್ತು ಹೆತ್ತು
ಜನನವ ಕೊಟ್ಟು ಪ್ರಪಂಚವನ್ನು
ನೋಡುವುದಕ್ಕೆ ಕಣ್ಣು ತೆರೆಸಿದಳು
ಅಮ್ಮನ ನೋವೆ ನಮ್ಮೆಲ್ಲರ ಜನನ
ಅಮ್ಮ ಎಂಬ ಎರಡಕ್ಷರ ನಮಗೆ ಶಕ್ತಿ

ಕೈ ತುತ್ತು ತಿನಿಸುವೆ ಜೋಗುಳವ ಹಾಡುವೆ
ಮದ್ದಾಡಿ ಕೊಂಡಾಡಿ ನಗಿಸುವೆ
ಆ ನಗುವಲ್ಲೆ ಮೊರೆಯಾಗಿ ಕಾಣುವಳು
ಹಿತಾಸಕ್ತಿಯುಲ್ಲವಳು
ಅಮ್ಮ... ನೀನೆನಮ್ಮಾ...

- Kavya. k

04 May 2021, 11:19 am

ಲಾಕ್ ಡೌನ್

ಕೇಳುತ್ತಿದ್ದರೆ ಲಾಕ್ ಡೌನ್ ಪದ..!!
ಮನೆಯೊಳಗೆ ಕೂಡಿ ಹಾಕಿದಂತಿದೆ ಸದಾ..!!
ಅಂದು ವಾರಕ್ಕೊಮ್ಮೆ ರಜಾ ಸಿಗುತ್ತಿದ್ದರೆ ಮಜವೊ ಮಜಾ...!!
ಇಂದು ವಾರವೆಲ್ಲ ಸಿಕ್ಕರೂ ರಜಾ ಮನಸಿಗೆ ನಿಡಿದಂತಾಗಿದೆ ಸಜಾ..!!

- Harish Gowda

03 May 2021, 06:53 pm

ಹುಡುಕಾಟ

ಹುಡುಗಿಯರ ಹುಡುಕಿದ್ದು ಸಾಕಪ್ಪ ಸಾಕು..!!
ಬ್ರೋಕರ್ ಗಳಿಗೆ ಹಣಕೊಟ್ಟು ಹೆಕ್ಕುಟ್ಟೊಗಿದ್ದು ಸಾಕು..!!
ನಮಗಿರಬೇಕು ಸರಿಯಾದ ಬ್ಯಾಕ್ ಗ್ರೌಂಡು...!!
ಇಲ್ಲವೆ ಸುತ್ತಿಸ್ತಾರೆ ಊರ್ ತುಂಬಾ ರೌಂಡು...!!
ಇದ್ದರೆ ಸರ್ಕಾರಿ ಕೆಲಸ...!!
ಹುಡುಗಿಯರು ಅಂಕಲ್ ಗಳನ್ನು ಮದುವೆಯಾಗುತ್ತಾರೆ ಈ ದಿವಸ..,!!

- Harish Gowda

03 May 2021, 06:41 pm

ಅರಳಿಕಟ್ಟೆ

ನಾವು ಆಡಿ ಬೆಳೆದಂತ ಅರಳಿಕಟ್ಟೆ..!!
ನೀ ಇದ್ದಾಗ ಪಶುಪಕ್ಷಿಗಳಿಗೆ ಆಶ್ರಯ ಕೊಟ್ಟೆ..!!
ಇಂದು ರಸ್ತೆ ಅಗಲಿಕರಣಕ್ಕೆ ನೀ ಧರೆಗುರಳಿ ಬಿಟ್ಡೆ..!!
ಅರಳಿಮರವೆ ನಿನ್ನ ನೋಡುತ್ತಿದ್ದರೆ ಹೊಡೆವುದು ನನ್ನ ಕಣ್ಣೀರ ಕಟ್ಟೆ..!!
ಅರಳಿಮರವಿಲ್ಲದೆ ನಮ್ಮೂರು ಬನಘಟ್ಟ...!!
ಬದಲಾಗಿದೆ ಈಗ ನಮ್ಮೂರಿನ ವೃತ್ತದ ಕಾಲಘಟ್ಟ...!!!

- Harish Gowda

03 May 2021, 06:33 am

ನಂಬಿ ಮರುಳಾಗದಿರು ಮನವೆ

ಎದೆಯ ತುಂಬೆಲ್ಲ ಅವಳ ನಾದ.ದನಿ.ಮೋಸದ ನಗುವಿನ ಹಂಚಿನಲ್ಲಿ ಕಗ್ಗ ಕತ್ತಲೆ ಯ ವಿಷಕಾರಿ ಹಾವೊಂದು ಪಿಸುಗುಡುತ್ತಿತಂದು ಮೊದಲೆ ಎಚ್ವರಿಕ್ಕೆ ಇತ್ತು.....
ನನ್ನ ಪ್ರೀತಿಯ ಹೂವೆಂದು ಕೈಗೆತ್ತಿಕೊಂಡ ಹೂ ಹಿಂದೆ ವಿಷಕಾರಿ ಜೇನೊಂದು ಮುತ್ತು ಕೊಡುತ್ತೆಂದು ಭಾವಿಸಿಯೆ ಇರಲ್ಲಿಲ್ಲ....

ಕನಸ್ಸುಗಳ ಲೋಕದಲ್ಲಿ ಮರೆಯಾಗಿ ಮೌಢ್ಯದ ಒಳಗೆ ನಾನಗಿಯೇ ಜಾರಿ ಬೀಳುವೆನೆಂದು ಪರಿವಿಲ್ಲ ..ಮನವೇ ಪ್ರೀತಿಸಿ ಮನಸದೊಳಗೆ ಸ್ಮಶಾನವ ಕಟ್ಟಿ ಕೊರಗದಿರು ಹಳೆಯ ಪಾತ್ರೆ ಹಂಚಿನಂತೆ ಅಲಂಕಾರವಿಲ್ಲದಿದ್ದರೂ ಅಹಂಕಾರ ತೋರುವ ಹೆಣ್ಣನು ತೊರೆದು ....

ನಿನ್ನ ಜೀವ ರೂಪಿಸಿಕೋ.....
ನಂಬಿ ಮರಳಾಗದಿರು ಮನವೇ ....

ಸಂತೋಷ್ ಗಾಂಧಿ

- santhosh Gandhi

03 May 2021, 01:34 am

ಮುಸ್ಸಂಜೆ

ಕೆಂಪಡರಿದ ಆಗಸದಲಿ
ಕವಿದಿಹ ಹೊಸ ಮಾಯೆ
ಕ್ಷಣ ಕ್ಷಣವೂ ಕಳೆ ತುಂಬುತಿಹ
ಕನಸಿನ ಸವಿ ಛಾಯೆ|

ಕವಿ ಮನಸಿನ ಕದ ತೆರೆಯಿತು
ಕರ ಚಾಚಿತು ನಿನ್ನ ಕರೆಗೆ
ಕಂಗಳು ತಾ ಸ್ಪುರಿಸಿತು
ಕಂಡ ಸಂತೋಷವನಿಳೆಗೆ|

ಕಂಪಿನ ಹೊಸ ಲೋಕಕೆ
ಕರೆದಿದೆ ಆ ಮೇಘ
ಕಲ್ಪನೆಯ ಸ್ವರ್ಗವನು
ಕಾಣುವ ಶುಭಯೋಗ||

- Asha N M

01 May 2021, 11:36 pm

ಓ ನನ್ನ ನಲ್ಮೆಯ ಗೆಳೆಯ

ಓ ನನ್ನ ನಲ್ಮೆಯ ಗೆಳೆಯ,
ನಿನಗಾಗಿಯೇ ಮಿಡಿಯುವುದು ಈ ನನ್ನ ಹೃದಯ,
ಎಂದೆಂದಿಗೂ ನೀನೇ ನನ್ನ ಇನಿಯಾ,
ಅರಿತುಕೋ ಇನ್ನಾದರೂ ನನ್ನ ಪ್ರೀತಿಯ.

- Veena

01 May 2021, 09:26 pm

*ನನಗೂ ತಾಯಿ ಬೇಕೆನಿಸುತ್ತಿದೆ*

ನನಗೂ ತಾಯಿ ಬೇಕು
ನನ್ನ ಎತ್ತಿ ಮುದ್ದಾಡುವ
ತಿಂಡಿ ತಿನ್ನಿಸಿ ಊಟ ನೀಡಿ
ನೀರು ಕುಡಿಸಿ ಸಂತೃಪ್ತಿ ಪಡುವ
ನನ್ನನ್ನು ನೋಡಿ ಆನಂದಿಸುವ ತಾಯಿ ಬೇಕು ಎನಿಸುತ್ತದೆ.

ನೀನಿಲ್ಲದ ಮೂರುದಶಕಗಳ
ಬದುಕು ಬರಡು ಎನಿಸುತ್ತಿದೆ
ಅಸಾಯಕತೆ, ಏಕಾಂಗಿತನಗಳ
ಸವಾಲುಗಳನ್ನು ಎದುರಿಸಿ
ಬದುಕು ಸಾಕೆನಿಸುತ್ತಿದೆ.

ನೀನಿಲ್ಲದ ಬದುಕಿನಲ್ಲಿ
ತಪ್ಪಿತಸ್ಥ ಎಂಬ ಭಾವದಲ್ಲಿ
ಬದುಕುತ್ತಿರುವೆ, ನೀನಿದ್ದರೆ ತಪ್ಪು ಮಾಡಿದಾಗ ಕಿವಿ ಹಿಂಡುತ್ತಿದ್ದೆ
ಸಲಹೆನೀಡಿ ಸಲುಹುತ್ತಿದ್ದೆ.

ನಮ್ಮನ್ನು ಏಕೆ ಬಿಟ್ಟು
ಹೋಗಿರುವೆ ಅಮ್ಮ,
ನೀ ಮಾಡಿದ ಬಿಸಿಯೂಟದ
ಕೈ ತುತ್ತು ತಿನ್ನುವಾಸೆ,
ನಿನ್ನ ಮಮತೆಯ ಮಡಿಲಲ್ಲಿ
ಮಲಗುವ ಆಸೆ,
ನನ್ನನ್ನು ಬರಸೆಳೆದು ಮುದ್ದಾಡಿದೊಡೆ ರೋಮಾಂಚನಗೊಳ್ಳುವ ಆಸೆ,
ನಿನ್ನ ಭಾವ ಬೆಸುಗೆಯ ಬಂಧನದಲ್ಲಿ ಕನಸು ಕಾಣುವ ಆಸೆ.

ನೀನು ಇಲ್ಲದಿದ್ದರೂ ನಿನ್ನ ಪರಿಶ್ರಮದ ಹೋರಾಟದ ಬದುಕಿಗೆ ಜಯ ತಂದುಕೊಟ್ಟವರು ನಾವು.
ನಿನ್ನ ಹೆಸರು ಉಳಿಸಿದವರು
ನಿನ್ನ ಕೀರ್ತಿ ಬೆಳೆಸಿದವರು,
ನೀ ಜೀವಂತವಾಗಿದ್ದರೆ ನಮ್ಮ ಜಯವ ನೋಡಿ ಖುಷಿ ಪಡುತ್ತಿದ್ದೆ
ಸಂಭ್ರಮದಿ ಸಡಗರಪಡುತ್ತಿದ್ದೆ.
ನನಗೂ ತಾಯಿ ಬೇಕೆನಿಸುತ್ತಿದೆ.
✍️✍️ಮಹೇಶ್... ಶಿಕ್ಷಕರು

- MAHESH.हिन्दीशिक्षक

28 Apr 2021, 11:14 pm