ಕಾಲ್ ಎಳೆಯುತ್ತಿದೆ ಯವನವು
ಮನಸು ಕರುಗುವ ರೀತಿಯಲಿ
ಸುಮ್ ಸುಮ್ ನೇ ನಗುವುದು ಸುಮ್ ಸುಮ್ ನೇ ಅಳುವುದು
ಯಾರಬಳಿ ತಿಳಿಸಲಿ ಇದು ನನ್ನ ವ್ಯಥೆ ಉಂಟು
ಕೆರೆದು ಕೆರೆದು ಗಾಯವದಂತೆ ಕಿರಿಚುವುದು ಹೃದಯ
ನಾ ಕಂಡ ಕನಸಲ್ಲೆ ಮಾನಸಿಕ ಅಸ್ವಸ್ಥ ನಗಿರುವೆ
ಅವಳ ಮುಖದಲ್ಲಿ ನಾಚಿಕೆ
ಮರ ಸುತ್ತುವ ಆಸೆಯೂ ತಂದಿದೆ
ಬೆವರಿಳಿಸಿ ಬೆನ್ಮುರಿದು ನೆಂಗಡ್ಲೆ ಬೆಳೆದಂತೆ
ನನ್ನ ಪ್ರೀತಿಯ ಬೆಳೆಸಬೇಕೆಂಬ ಆಸೆಯೂ ಹೆಚ್ಚಿದೆ ಮನಸಲಿ
ಅವಳ ಮುಖದಲ್ಲಿ ಚಂದಿರನನ್ನು ಕಂಡು ನನ್ನ ಹೆದೆಯಲಿ ಅವಳ ಮಂದಿರವುಕಟ್ಟಿ ಪೂಜಿಸುವ ಸಂದರ್ಭ ನನ್ನದು
ಉಳಿಯುವುದೋ ಈ ಪ್ರೇಮ ಅಳಿಯುವುದೋ ಈಪ್ರೇಮ
ಮರಭೂಮಿಯಲ್ಲಿ ತಾವರೆಯ ಬಳ್ಳಿಯು ಚಿಗೂರಿರಲು
ಮನಸುಂಟು ಕನಸುಂಟು ಅದೇ ದಾರಿಯಲಿ ಚುಚ್ಚುವ ಮುಳುಂಟು
ಯಾರಿಗೂ ತಿಳಿಸದೆ ಕಾಣೆಯಾದಂತ್ತೆ ಮನಸು ಕಾಣೆಯಾಗಿರಲು...
ಎಲ್ಲೆಲ್ಲೂ ಕೊರೋಣ...!!
ಜೀವನ ನಡೆಸಲು ತುಂಬಾ ಕಠಿಣ...!!
ಪ್ರತಿದಿನವು ಸಾವಿರ ದಾಟುತ್ತಿದೆ ಮರಣ...!!
ಹೀಗೆ ಮುಂದುವರೆದರೆ ಕ್ರಮೇಣ..!!
ಇಂದಲ್ಲಾ ನಾಳೆ ನಮ್ಮದು ಹೋಗಬಹುದು ಪ್ರಾಣ..!!
ಅದಕ್ಕೆ ಯಾವಾಗಲೂ ಹಾಕಿರಿ ಮಾಸ್ಕು..!!
ಇಲ್ಲವೆ ನಮ್ಮ ಜೀವಕೆ ತುಂಬಾ ರಿಸ್ಕು..!!
ನೀವು ಹೇಳುತ್ತಿರುವುದು ನಿಜಾನೆ
ನಾನು ಬದಲಾಗಿದ್ದೇನೆ.
ಅದ್ಯಾರೋ ತೀರಿಹೋದರು ಮರಗುತ್ತಿದ್ದೆ
ಹೀಗೀಗಾ ಹೆಚ್ಚು ಮರೆಯುತ್ತಿದ್ದೇನೆ,
ಎಲ್ಲಾ ನಮ್ಮದು, ನಮ್ಮವರು ಎಂಬ ಭ್ರಮೇಲಿ ಬದುಕುತ್ತಿದ್ದೆ..
ಹೀಗಿಗಾ ಎಲ್ಲವೂ ಕ್ಷಣಿಕ ಅನ್ನೋ ಸತ್ತ್ಯವನ್ನು ಅರಿತಿದ್ದೇನೆ..
ನಾನು ಬದಲಾಗಿರೋದೂ ನಿಜಾನೆ!
ಹಾಗಾಗ ಮೂಡುತ್ತಿದ್ದ ನೋವಿನ ಕಂಬನಿಯನ್ನ..
ಮುಗುಳುನಗೆಯೊಂದಿಗೆ ಮರೆಮಾಚಿರುವೆ..
ನೋವನ್ಯಾರು ಕೇಳುವರು ಹೇಳಿ! ನಗುವಿದ್ದರೆ ಮುಖದಲ್ಲಿ ..
ಪರಿಚಿತವಾದರು ಅಪರಿಚಿತ
ನನ್ನದೇ ಇದ್ದರೂ ನನ್ನದಲ್ಲದ ಭಾವ..
ದಾರಿ ಗೊತ್ತಿದ್ದರೂ ನಕ್ಷೆಯ ಹುಡುಕಾಟ
ನನ್ನದೇ ಬದುಕು ನನ್ನದಲ್ಲದ ಪಯಣ
ಗುರಿಯಿದ್ದರೆ ಗುರು ಹುಡುಕುವ ಯತ್ನ
ಗುರು ಸಿಕ್ಕರೂ ಗುರಿಯನ್ನೆ ಬದಲಾಯಿಸುವ ಆತುರ
ಬದುಕಿನ ದಾಹಕ್ಕೆ ಮನಸ್ಸಿನ ಕುಣಿತಕ್ಕೆ
ಬೇಕೇನಿಸುವುದು ಬೇಡಗಳೆಲ್ಲವೂ
ಮರುಭೂಮಿಯಲ್ಲಿ ನೀರು ಇದ್ದಂತೆ/ಸಿಕ್ಕಂತೆ..
ಕಾಲಾ ಎಲ್ಲವನ್ನೂ ಎಲ್ಲರಿಗೂ ಕಲಿಸುತ್ತದೆ
ಕಾಯಬೇಕಷ್ಟೇ...
ಏನೇ ಹೇಳಿ
ನಾ ಬದಲಾಗಿರುವುದು ನಿಜಾನೆ!
ಇದು ನಿಮಗೂ ಗೊತ್ತು
ಯಾಕಂದ್ರೆ ಬದಲಾವಣೆಗೆ
ಕಾರಣ ನೀವೇ ತಾನೇ!..