Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಇದು ನಿಜನಾ

ಕುಡುಕರು ನೈಂಟಿ ಬಿಟ್ಟರೆ
ವಾಲಾಡುವರಯ್ಯ
ದೇವರು ಪೀಪಿ ತಮ್ಮಟೆ ಸದ್ದಿಗೆ
ತೇಲಾಡುವುದಯ್ಯ
ಅಂಧ ಭಕ್ತರು ಶಂಖು ಜಾಗಟೆ
ಸದ್ದಿಗೆ ತಲೆದೂಗುವರಯ್ಯ

- ರಾಜು ಹಾಸನ

18 Apr 2021, 02:52 pm

ವಾಸ್ತವ

ಒಂಟಿಯಾಗಿ ಬಂದಿರುವೆ
ಒಂಟಿಯಾಗಿ ಹೋಗುವೆ ...

ನಡುವೆ ಬಂದು ಹೋಗುವವರು ಆಡುವ ಮಾತಿಗೆ
ಕಿವಿ ಯಾಕೆ ಕೊಡುವೆ ?!

ನಿನಗೆ ಸರಿ ಅನಿಸಿದು ನೀ ಮಾಡು
ತಪ್ಪುಯೆನಿಸಿದ್ದನು ಯಾರು ಎಷ್ಟೇ ಹೇಳಿದರು ಮಾಡಬೇಡ!!


ಇಲ್ಲಿ ಯಾರು ನಮ್ಮವರಲ್ಲ
ನಮ್ಮವರು ಅಂದುಕೊಳುವವರೆಲ್ಲ
ಸಮಯಕೆ ತಕ್ಕಂತೆ ಬದಲಾಗುವವರೆ ಇಲ್ಲಿ ಎಲ್ಲ

- Kusuma N

16 Apr 2021, 10:43 pm

ಜೀವನ

ಅಂದುಕೊಂಡಾಗೆ ಆಗಬೇಕು
ಅನೋದು ಕನಸು
ಬಂದಿದನು ಒಪಿಕೊಳೋದು
ವಾಸ್ತವ
ಅಂದುಕೊಳೋದು ಒಂದು
ಆಗೋದೆ ಇನೊಂದು

ಅಂದುಕೊಳ್ಳುವುದು ಜೀವನವಲ್ಲ ..
ಹೊಂದಿಕೊಳ್ಳುವುದು
ಜೀವನ

- Kusuma N

16 Apr 2021, 10:26 pm

ವಿಸ್ಮಯ

ಖುಷಿಯ ಸಮಯಗಳು ಎಷ್ಟಿದ್ದರು ಸಾಲದು
ದುಃಖದ ಸಮಯಗಳು ಸಾಕೆಂದರು ಮುಗಿಯದು

ಖುಷಿಯಗಳಿಗೆಯಲ್ಲಿ
ಸಮಯವನ್ನು ತಡ್ದೆದಿಡಲಾಗದು
ದುಃಖದ ಪರಿಸ್ಥಿತಿಯಲ್ಲಿ
ಸಮಯವನ್ನು ನೂಕಿ ತಳ್ಳಲಾಗದು

ಸಂದರ್ಭ ಯಾವುದೇಬರಲಿ
ಸಮಯ ಸಾಗುವ ಗತಿಯಲ್ಲೆ ಸಾಗುವುದು

ಸಮಯ ನಮಗೆ ಬೇಕಾದಂತೆ ಬದಲಾಗುವುದಿಲ್ಲ
ಸಮಯದ ಗತಿಯಲ್ಲಿ ಸಾಗುತ ನಾವು
ಸಮಾದಾನದಿಂದ ಕಾಯಬೇಕು

ಕಾಲಕ್ರಮೇಣ ಎಲವೂ ಚಲಿಸಲೇಬೇಕು !

ತಾಳಿದವನು ಬಾಳಿಯಾನು ...

- Kusuma N

16 Apr 2021, 09:27 pm

ನಿಜವಲ್ಲವೇ

ಈ ಜನ ಎಷ್ಟು
ಬುದ್ದಿವಂತರು ಅಂದ್ರೆ
ಅಳಬೇಕೋ
ನಗಬೇಕೋ ಒಂದು ಗೊತ್ತಿಲ್ಲ
ಆದ್ರೆ ಈ ಮೂರ್ಖ
ಮೂಢ ಅಂಧ ಭಕ್ತರನ್ನು
ನೋಡಿ ನೋಡಿ ದಿನವಿಡಿ
ನಕ್ಕು ನಕ್ಕು ಸಾಕಾಗುತ್ತೆ ಏಕೆಂದರೆ
ಹುಟ್ಟಿದ ಮೇಲೆ
ಸಾಯುತ್ತಿವೆ ಅಂತ ಗೊತ್ತಿದ್ದರೂ
ಕಲ್ಲನ್ನು ದೇವರೆಂದು
ಪೂಜಿಸಿ ಬಿದ್ದು ಬೇಡುವುದ ನಿಲ್ಲಿಸಲ್ಲ
ಅಪ್ಪಿ ತಪ್ಪಿ ಅಲ್ಲ
ಅವರು ಏನಿದ್ದರೂ ನಿಲ್ಲಿಸುವುದು
ಅವರ ಉಸಿರು ನಿಂತ ಮೇಲೆನೆ
ಓಟ್ಟಿನಲ್ಲಿ ಮೂಢರು ಅಂಧ ಭಕ್ತರು
ಹುಟ್ಟಿದ್ದು ವ್ಯರ್ಥವಾದರು
ಸೃಷ್ಟಿಸಿ ಹೋಗುವರು ಮತ್ತಷ್ಟು
ಮೂಢ ಜನಗಳನ್ನ ಸೃಷ್ಟಿಸಿ

- ರಾಜು ಹಾಸನ

08 Apr 2021, 11:41 pm

ಜೀವನ ಇಷ್ಟೇ

ನಮ್ಮ ಕೈ ಕಾಲು
ಎಳೆದು ಬೀಳಿಸುವ
ನೂರಾರು ಸಾವಿರಾರು
ಜನರ ಮಧ್ಯ ನಮ್ಮ
ಕೈ ಕಾಲು ಹಿಡಿದು
ಮುನ್ನೆಡೆಸುವ ದೇವರು
ನೀ ಪೂಜಿಸುವ
ಕಲ್ಲಿನ ದೇವರಲ್ಲ
ನಮ್ಮ ಹೆತ್ತು ಹೊತ್ತ
ಬೆಳಸಿದ ದೇವರು
ತಂದೆ ತಾಯಿ ದೇವರು
*******ರಾಜು ಹಾಸನ*******

- ರಾಜು ಹಾಸನ

08 Apr 2021, 04:55 pm

ಆಗುವುದಿಲ್ಲ

ಗುರು ಅನ್ನೊರೂ ಅಂದುಕೊಳ್ಳಲಿ
ಆಡುವವರು ಆಡಿಕೊಳ್ಳಲಿ
ನನಗೆ ಚಿಂತೆಯಿಲ್ಲ ಏಕೆಂದರೆ
ಏನೇ ಆದರೂ ಹೋದರು
ನಮಗೆ ನಾವೇ ಆಗಬೇಕು ಹೋರೆತು
ಯಾರಿಗೂ ಯಾರು ಆಗುವುದಿಲ್ಲ

- ರಾಜು ಹಾಸನ

08 Apr 2021, 02:06 pm

ಹುಚ್ಚಾಟ

ದೇವರ ಪೂಜಿಸಿದರು
ಪೂಜಿಸದೆ ಇದ್ದರೂ
ನಿಲ್ಲದೆ ಓಡುವುದು
ನಮ್ಮ ನಿಮ್ಮ ಜೀವನ
ಆದರೆ ಹೇತ್ತವರು
ಇಲ್ಲದಿದ್ದರೆ ನಮಗೆ
ನಿಮಗೆ ಜೀವನವಿರಲಿ
ಜನ್ಮ ವೇ ಇರುವುದಿಲ್ಲ

ನೀ ದೇವರ ಪೂಜಿಸಿದರು
ಪೂಜಿಸದೇ ಇದ್ದರೂ
ಹುಟ್ಟು ಸಾವು
ಖಚಿತವಾಗಿರುವಾಗ
ದೇವರು ದೇವರೆಂಬ
ಹುಚ್ಚಾಟ ಕಿತ್ತಾಟ ಏಕೆ ?

- ರಾಜು ಹಾಸನ

07 Apr 2021, 11:03 pm

ಗೆಳಯ

ಗೆಳೆಯ ನಾನು
ನನ್ನ ಮೈ ಬಣ್ಣ ನನ್ನ ಜೀವನ
ಎಷ್ಟು ಕಲ್ಲರ್ ಫುಲ್ ಆಗಿದೆ
ಅನ್ನೊದು ಮುಖ್ಯ ಅಲ್ಲ
ನನ್ನ ನಡೆ ನುಡಿ ಮನಸ್ಸು
ಎಷ್ಟು ಕ್ಲಿಯರ್ ಫುಲ್ ಆಗಿದೆ
ಅನ್ನೊದು ಮುಖ್ಯ
***********ರಾಜು ಹಾಸನ**********

- ರಾಜು ಹಾಸನ

07 Apr 2021, 11:33 am

ಸೇವಕ

ದೇವರು ದೇವರೆಂದು
ಜೀವವಿಲ್ಲದ ಕಲ್ಲು ದೇವರಿಗೆ
ಗುಲಾಮನಾಗಬೇಡ
ಹೆತ್ತು ಹೊತ್ತು ಸಾಕಿ ಸಲಹಿದ
ತಂದೆ ತಾಯಿಗೆ
ಸೇವಕನಾಗು ಓ ಮನುಜ
********ರಾಜು ಹಾಸನ*********

- ರಾಜು ಹಾಸನ

06 Apr 2021, 11:02 pm