Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸೇವಕ

ದೇವರು ದೇವರೆಂದು
ಜೀವವಿಲ್ಲದ ಕಲ್ಲು ದೇವರಿಗೆ
ಗುಲಾಮನಾಗಬೇಡ
ಹೆತ್ತು ಹೊತ್ತು ಸಾಕಿ ಸಲಹಿದ
ತಂದೆ ತಾಯಿಗೆ
ಸೇವಕನಾಗು ಓ ಮನುಜ
********ರಾಜು ಹಾಸನ*********

- ರಾಜು ಹಾಸನ

06 Apr 2021, 11:02 pm

ರಾಧಾಕೃಷ್ಣ

♥️ಅನಂತದ ಪ್ರೀತಿಯ ಉಣಬಡಿಸಿದಳು ರಾಧೆ ಕೃಷ್ಣನಿಗೆ
ಸಮಸ್ತ ಬ್ರಹ್ಮಾಂಡವನ್ನೇ ಆಳುತ್ತಿದ್ದ ಕೃಷ್ಣನು ಸ್ವಯಂ ತಾನೇ ಮಗುವಾಗಿ ಮಲಗಿದ ರಾಧೆಯ ಮಡಿಲಿನಲ್ಲಿ ರಾಧೆಯ ಪ್ರೀತಿಗೆ ಅದರ ರೀತಿಗೆ ಕೃಷ್ಣನೋರ್ವನೆ ಸಾಟಿ♥️
❤ಕೃಷ್ಣನ ಅಸ್ತಿತ್ವ ರಾಧೆಯಿಂದ, ರಾಧೆಯ ಅಸ್ತಿತ್ವ ಪ್ರೇಮದಿಂದ,ಈ ಸೃಷ್ಟಿಯ ಅಸ್ತಿತ್ವವು ರಾಧಾಕೃಷ್ಣರ ಪ್ರೇಮದ ಸಂಕೇತವು❤

ಶ್ರೀಲಕ್ಷ್ಮೀ.....

- Sri Lakshmi

03 Apr 2021, 02:05 pm

"""" ಹೂ ಅರಳಿತು .."""

"""" ಹೂ ಅರಳಿತು .."""
ಹೇ ಹೂವೆ!
ನೀನು ಎಷ್ಟು ಸುಂದರವೆ
ನೀನು ಅಗಬಾರದೆ ನನ್ನ ಒಲವಿನ
ಧಣಿಯೇ .

ನೀನಾ ವಾಸನೆ ಕಂಡು
ಹುಡುಕುತೀರುವೆ ನಿನ್ನನ್ನು
ನೀ ಬಂದು ಸೇರಬಾರದೆ
ನನ್ನ ಮಡಿಲಿಗೆ ಇಂದು..

ನೀನು ಕಣುವೆ ಎಲ್ಲಾರ ಕಣ್ಣಿಗೆ
ಕೈ ಮುಗಿದು ಬೇಡುವೆನು ..
ಬಂದು ಸೇರು ನನ್ನ
ಮಡಿಲಿಗೆ ನೀನು ಎಂದು.

ಮುಗ್ಗು ಹೂವಾಗಿರುವೆ ನೀನು ಇಂದು
ಪ್ರಾರ್ಥಿಸುವೆ ದೇವರಲ್ಲಿ ನಾನು ಎಂದು
ಖನಿಜಾಂಶ ಮಣ್ಣಾಗಲಿ ಎಂದು

ಹೇ ಹೂವೆ!
ನೀನು ಎಷ್ಟು ಸುಂದರವೆ.

ಹರೀಶ್ ದೊಡ್ಮನಿ.









- Harish Dodmani

30 Mar 2021, 10:30 pm

ನಿನಗಾಗಿ

ಇಳಿಸಂಜೆ ಏಕಾಂತದಲ್ಲಿ ನಗುಮೊಗದಿ ಕಾದಿರುವೆ ನಿನ್ನ ಬರುವಿಕೆಗಾಗಿ ಗೆಳತಿ,
ಸ್ನೇಹ ಪ್ರೀತಿ ಎಲ್ಲದಕ್ಕೂ ನೀನೇ ನನ್ನ ಒಡತಿ,

ಮೌನದಿ ಮನೆಮಾಡಿವೆ ಹೇಳದ ಅದೆಷ್ಟೋ
ಮಾತುಗಳು ನನ್ನಲ್ಲಿ,
ಊಹಿಸಲಾಗದು ನೀನಿಲ್ಲದ ನನ್ನ ಬದುಕು ಈ ಜಗದಲಿ.

ಆಗಸದಲ್ಲಿ ಹಕ್ಕಿಯಂತೆ ಹಾರುವಾಸೆ ನಿನ್ನ ಜೊತೆಯಲಿ,
ಈ ನನ್ನ ಪ್ರೀತಿ ಎಷ್ಟೆಂದು ಹೇಳಲಾಗದು ಬರೀ ಮಾತಲಿ.

- Veena

27 Mar 2021, 09:11 pm

ಮೋಸಗಾತಿ

ಪ್ರೀತಿ ಎಂಬುದು ಸಕ್ಕರೆಯ ಸಿಹಿ ಬೆಲ್ಲ
ಸಿಹಿ ಇರುವ ತನಕ ಪ್ರೇಮಿಗಳ
ಹಾರಾಟ ತೂರಾಟ
ಆಗಸದೆತ್ತರಕ್ಕೆ ನಗುವಿನ ಸಾವರಿ
ಪ್ರೀತಿ ಪ್ರೇಮ ಮುರಿದು ಬಿದ್ದರೆ
ಕಾಣದ ಲೋಕಕ್ಕೆ ಪ್ರೇಮಿಗಳೆ ಪರಾರಿ

ನಿನ್ನ ತಿಟೆ ತೇವಲಿಗೆ
ಪ್ರೀತಿ ಕೊಂದು ನಗುತ್ತಿರುವಲ್ಲೆ ಗೆಳತಿ
ನಿನ್ನ ಮಾಯದ ಪ್ರೀತಿಗೆ
ಮರುಳಾಗಿ ಮಣ್ಣದನಲ್ಲೆ ಗೆಳತಿ
ಬಾರದಿರಲಿ ಮತ್ತೆವಾ ಪ್ರೇಮಿಗಳಿಗೆ
ಈ ನರಕದ ನೋವು ಕಾಡದಿರಲಿ
ನಗು ನಗುತ್ತಾ ಸುಖವಾಗಿ ಬಾಳು
ನೂರಾರು ಕಾಲ ನನ್ನ ಗೆಳತಿ
ಕಟ್ಟಿಕೊಂಡ ಗೆಳೆಯನಿಗೆ
ಮೋಸ ಮಾಡದಿರು ನನ್ನ ಗೆಳತಿ

- ರಾಜು ಹಾಸನ

27 Mar 2021, 02:37 pm

ದುನಿಯಾ

ದುನಿಯಾ ಮೇಲೆ
ಜೇನು ತುಂಬಿದ
ಜೇನು ಗೂಡು
ನೀನಾದರೆ
ಪ್ರೀತಿ ಪ್ರೇಮ
ಸಂಬಂಧಗಳು
ಜೇನು ಹುಳುಗಳಿದಂತೆ

ಸವಿ ಜೇನು ಇರುವ ತನಕ
ಜೇನು ಹುಳುಗಳ ಝೇಂಕಾರ
ಸವಿ ಜೇನು ಖಾಲಿಯಾದ ನಂತರ
ನೊಣಗಳ ಅಬ್ಬರ
ಈ ಪ್ರೀತಿ ಪ್ರೇಮದ ಕಥೆ ವ್ಯಥೆ ಇಷ್ಟೇ

- ರಾಜು ಹಾಸನ

25 Mar 2021, 07:23 pm

ಮನುಜ

ಜಿಂದಗಿ ಮೇಲೆ
ಬದುಕಲು ಬೇಕು
ನಯ ವಿನಯ
ಪ್ರೀತಿ ಪ್ರೇಮ ಸ್ನೇಹ ಹೋರೆತು
ಕರಗಿ ನೀರಾಗುವ
ಸಿರಿ ಸಂಪತ್ತು ಅಲ್ಲ
ಕೊಳೆತು ಮಣ್ಣಾಗುವ
ಹಣ ಅಂತಸ್ತು ಅಲ್ಲ
ಗುಡಿ ಗೋಪುರದೋಳಗಿನ
ಆಚಾರ ವಿಚಾರವಲ್ಲ
ಮನುವಾದಿಗಳ
ಗೊಡ್ಡು ಸಂಪ್ರದಾಯಗಳಲ್ಲ

- ರಾಜು ಹಾಸನ

17 Mar 2021, 05:28 pm

ಅಣ್ಣನ ಮನ ಚಿನ್ನ

ಅಣ್ಣನೆಂದರೆ ಅಣ್ಣ , ಅವನೇ ನಮ್ಮಣ್ಣ,
ನನ ಮನಸ್ಸಿಗೆ , ಇವನೇ ನಿಜವಾದ ದೊರೆಯಣ್ಣಾ,
ಅಣ್ಣನಿಲ್ಲದ ಒಂದು ಕ್ಷಣ , ಕಣ್ಣಿಲ್ಲದಂತಾಗುವುದು ನನ್ನ ಮನ ,
ಎಲ್ಲೆಲ್ಲೋ ದುಡುವನು , ಕಾಂಚಾಣ ತರುವನೋ ,
ಒಳಗೊಳಗೆ ಅಳುವನು , ನಮ್ಮನ್ನೊತ್ತು ಮೆರೆವನು,
ಅಣ್ಣನೆಂದರೆ ಅಣ್ಣ , ಅವನ ಮನ ಚಿನ್ನ.

ಅಣ್ಣನೆಂದರೆ ಅಣ್ಣ , ಅವನೇ ನಮ್ಮಣ್ಣ ,
ತಂದೆಯಂತೆ ಮನೆಯ ಕಾಯ್ದು ,
ಅಮ್ಮನಂತೆ ಮನಸ ನೇಯ್ದು ,
ಗುರುವಿನಂತೆ ಬುದ್ಧಿ ಕಲಿಸಿ ,ಎಲ್ಲ ಶಕ್ತಿ ಇಲ್ಲೆ ಸುರಿಸಿ,
ನನ್ನ ಕಾಯೋ ಸೈನಿಕ ,ಅದುವೇ ಅವನೇ ಕಾಯಕ,
ಅಣ್ಣನೆಂದರೆ ಅಣ್ಣ , ಅವನ ಮನ ಬಲು ಚನ್ನ .

ಅಣ್ಣನೆಂದರೆ ಅಣ್ಣ , ಅವನೇ ನಮ್ಮಣ್ಣ ,
ಹಿರಿಯರ ಬೇರು , ಒಲುಮೆಯ ತೇರು ,
ಕಷ್ಟಗಳ ಅಂಗಿ , ಸದಾ ನಗುವ ಭಂಗಿ ,
ಶಾಂತಿಯ ಹೊಲದಲ್ಲಿ, ಬೆವರಿನ ಮಳೆ ಹರಸಿ ,
ಬಂಗಾರದ ಬೆಳಕು ಚೆಲ್ಲುವ ಮುಖ ಬಣ್ಣ ,
ಇರುವೆಯಂತೆ ಮನೆಯ ಮಾಡಿ , ನೆರೆಯವರೆಗೆ ಅದನ ನೀಡೊ ದಾನಿಗ ...
ಅವನೇ ನನ್ನ ತಾಯಿಯ ಹಿರಿಮಗ....
----- ಜಿ.ವೀರೇಶ ಸಿರಿಗೇರಿ








- VEERESHAG

17 Mar 2021, 01:14 pm

ಮಭಕ್ತಿಯಲ್ಲ

ಬದುಕಿದ್ದಾಗ ತಂದೆ ತಾಯಿಗೆ
ಒಂದು ಬೊಗಸೆ ನೀರು
ಒಂದು ಹಿಡಿ ಅನ್ನ ಕೊಡದೆ
ಗುಡಿಯ ಮುಂದೆ
ನಿಂತು ಕುಂತು ಬೆಡಿದರೆ
ಸಿಗುವುದೇ ಮೂಢ ನಿನಗೆ ಮುಕ್ತಿ
ನಿನ್ನ ಹಸಿದ ಒಡಲಿಗೆ
ಹಾಲೆರೆದ ಬೆಳೆಸಿ ಸಲಹಿದ
ತಂದೆ ತಾಯಿಯ ಒಡಲಿಗೆ
ಹಸಿವಿನ ವಿಷವನ್ನು ಉಣಬಡಿಸಿ
ದೇವರೆಂದು ಕಲ್ಲು ಗೊಂಬೆಗೆ
ರಾಶಿ ರಾಶಿ ಹಾಲು ಸುರಿದರೆ
ಫಲಿಸುವುದೇ ಓ ಮೂಢ ನಿನಗೆ
ಬಂಗಾರದ ಬಾಳು
ಮೂಢ ಜನಗಳು
ಓ ಮೂಢ ಜನಗಳೇ
ಮುಕ್ತಿ ಎಂಬುದು
ಕಾಯಕದ ಭಕುತಿಯೇ ಹೊರೆತು
ಮೂಢನಂಬಿಕೆಯ ಮಂತ್ರಚಾರಣೆಯ
ಅಂಧಕಾರದ ಮಭಕ್ತಿಯಲ್ಲ
ತಂದೆ ತಾಯಿಯ ಸೇವೆಯೇ ದೇವರು ಸೇವೆ
ತಿಳಿಯೋ ಮಂಕುತಿಮ್ಮ
*********ರಾಜು ಹಾಸನ**********

- ರಾಜು ಹಾಸನ

09 Mar 2021, 12:06 am

ಆರಾಧಿಸಿ

ಮೂಢರು ಪೂಜಿಸಿ ಆರಾಧಿಸಿಲಿ
ಚಿನ್ನ ಬೆಳ್ಳಿ ಕಲ್ಲು ಕಂಬದ ಮರದ
ಗೊಂಬೆಯ ಮೆರವಣಿಗೆ
ಹೊತ್ತು ಸಾಗಲಿ ಊರೂರು ಬೀದಿ ಬೀದಿ
ಘರನೆ ಘರಘರನೆ ಸುತ್ತಿ ತಿರುಗಿಲಿ
ಗುಡಿಯ ಮುಂದೆ ಬಿದ್ದು ಬೇಡಲಿ
ನಾ ಇಂದು ಮುಂದು ಎಂದೆಂದಿಗೂ
ಪೂಜಿಸಿ ಆರಾಧಿಸುವ ದೇವರು
ನನ್ನ ಹೆತ್ತು ಹೊತ್ತು ಬೇಳಸಿದ
ನನ್ನ ತಂದೆ ತಾಯಿ ನನ್ನ ದೇವರು
***********ರಾಜು ಹಾಸನ************

- ರಾಜು ಹಾಸನ

08 Mar 2021, 10:52 pm