Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೆಣ್ಣು ಮನೆಯ ಕಣ್ಣು

ಹೆಣ್ಣು ಮಗುವಾಗಿ ಜನಿಸುವಳು
ಕುಟುಂಬದ ಮನದಲ್ಲಿ ನೆಲೆಸುವಳು
ಸದಾ ನಕ್ಕು ನಲಿಸುವಳು
ಮನೆಯ ಜ್ಯೋತಿಯ ಬೆಳಗಿಸುವಳು
ಹೆಣ್ಣು ಬರೀ ಹೆಣ್ಣಲ್ಲ ಅವಳು ಮನೆಯ ಕಣ್ಣು

ಅಪ್ಪನ ಪ್ರೀತಿಯ ಸುತೆಯು
ಅಮ್ಮನ ಮುದ್ದಿನ ಮಗಳು
ಸಹೋರತೆಯ ಅಕ್ಕರೆಯ ಅರಗಿಣಿಯು
ಊರಿನ ಹೆಮ್ಮೆಯ ಗರಿಯು
ಹೆಣ್ಣು ಬರೀ ಹೆಣ್ಣಲ್ಲ ಅವಳು ಮನೆಯ ಕಣ್ಣು

ಭೂಮಿ ತೂಕದ ಸಹನೆ ಇವಳದು
ಕಷ್ಟದಲೂ ಸದಾ ನಗುವವಳು
ಗಂಡನ ಎರಡನೇ ತಾಯಿಯೇ ಪತ್ನಿಯು
ಮಗುವಿನ ಪಾಲಿನ ಜೀವಂತ ದೇವರು
ಹೆಣ್ಣು ಬರೀ ಹೆಣ್ಣಲ್ಲ ಅವಳು ಮನೆಯ ಕಣ್ಣು

ಮನೆಯ ಏಳಿಗೆಗಾಗಿ ಬೆಳುಗುವಳು ಆರುತಿ
ಹಬ್ಬುವುದು ಎತ್ತರಕ್ಕೆ ಎಲ್ಲೆಡೆಯೂ ಕಿರುತಿ
ಕಾಪಾಡುವಳು ಮನೆತನದ ಸಂಸ್ಕೃತಿ
ಇದುವೇ ಹೆಣ್ಣಿನ ಸಹಜ ಪಕೃತಿ
ಹೆಣ್ಣು ಬರೀ ಹೆಣ್ಣಲ್ಲ ಅವಳು ಮನೆಯ ಕಣ್ಣು

ಚಿವುಟದಿರಿ ಪ್ರಪಂಚ ಕಾಣದ ಹೆಣ್ಣು ಭ್ರೂಣವ
ಕಸಿಯದಿರಿ ವಿವಾಹದಿಂದ ಅವಳ ಬಾಲ್ಯವ
ಎಸಗದಿರಿ ಹೆಣ್ಣಿನ ಮೇಲೆ ಅತ್ಯಾಚಾರವ
ನೀಡದಿರಿ ವರದಕ್ಷಣೆಯ ಕಿರುಕುಳವ
ಹೆಣ್ಣಿಗೆ ತಲೆಬಾಗಿರಿ ಗೌರವದಿಂದ
ಹೆಣ್ಣು ಬರೀ ಹೆಣ್ಣಲ್ಲ ಅವಳು ಮನೆಯ ಕಣ್ಣು

- Pooja k s

08 Mar 2021, 12:56 am

ನನ್ನವಳು

ಕೊಂಚ್ ಮಾತಿಗೂ ಕೋಪಗೂಳುವವಳು..
ಮತ್ತೆ ಸಿಹಿ ನಗೆ ಬೀರುವವಳು..
ಕನಸಲ್ಲಿ ಬಂದು ಕಾಡುವವ‌ಳು..
ಅವಳೇ ನನ್ನವಳು..

- Badboydevil Manju

06 Mar 2021, 11:35 am

ನಾ ಹೋಗುತಿದ್ದೆ ನನ್ನ ಪಾಡಿಗೆ

ನಾ ಹೋಗುತಿದ್ದೆ ನನ್ನ ಪಾಡಿಗೆ
ಬಂದಳವಳು....
ಬರುತಿದ್ದಳು ನನ್ನ ಕಡೆಗೆ...
ಕೊಟ್ಟಳವಳು ಒಂದು ಸಿಹಿ ನಗೆ..
ನಾ ತಿಳಿದೇ ಅದು ನನಗೆ...
ಆದರೆ
ಅವಳು ಕೊಟ್ಟಿದ್ದು ನನ್ನ ಹಿಂದೆ ಬರುವ ಅವಳ ತಂಗಿಗೆ.....!

- Badboydevil Manju

06 Mar 2021, 11:05 am

ದೂಷಿಸಿ ಜರಿಯದಿರು ನನ್ನ

ಮಣ್ಣಿನಲಿ ಬಿದ್ದಿರುವ
ಭತ್ತದ ಕಣವೆಂದು
ದೂಷಿಸಿ ಜರಿಯದಿರು
ನೀ ನನ್ನ....

ಮಣ್ಣನಲೇ ನಾ ಮೊಳೆತು
ಸಸಿಯಾಗಿ ತೆನೆದೂಗಿ
ನೀಡುವೆನು ನಿನಗೆ
ನಾ ಅನ್ನ....

- ಪಿ.ಜಿ.ಜ್ಯೋತಿ

02 Mar 2021, 02:01 pm

ಬದಲಾಗುತ್ತದೆ ಜನ ಮನ,

ಕಾಲ ನಿಯಮ



ಬದಲಾಗುತ್ತದೆ ಜನ ಮನ,ಜಗತ್ತಲ್ಲ ನಡೆದು ಬಂದ ಹೆಜ್ಜೆಗಳು ಮಾಸಿವೆ,ಪಾದಗಳು ಹೊಸ ಉರುಪಿನಿಂದ ಬಹುದೂರ ಸಾಗಿವೆ.

ಈಗ ಮಾಸಲು ನೆನಪುಗಳಷ್ಟೇ ಓಡುತ್ತಿರುವ ಯೋಚನೆ ವಿವೇಚನೆ ಒಂದೊಂದೇ ಹೆಜ್ಜೆ ದೂರವಾಗುತ್ತಿವೆ, ಕೈ ಚಾಚಿ ಕರೆದೊಯ್ಯಲು ಮನಸ್ಸಿಲ್ಲ,ಸದಾ ಮನಸಲ್ಲೇ ಇದ್ದೀರಿ ಅನ್ನುತ್ತಿದೆ ಜನವೆಲ್ಲಾ.

ಹೂ ಅರಳಿದಾಗ ಇದ್ದ ಮೊಬತ್,ಈಗ ಬರವಣಿಗೆಯಲ್ಲಿ ಮೂಡಿ ಬರುತ್ತಿದೆ ಹಂತ ಹಂತವಾಗಿ ಖಾಸಾ ಬಾತ್,ಉಪ್ಪು ಹುಳಿಯಿರದ ಸಪ್ಪೆ ಊಟದಂತೆ,ಕಾಡುತ್ತಿವೆ ಹಲವಾರು ಚಿಂತೆ.

ಓದಲಷ್ಟೇ ಚೆಂದ ಪ್ರೇಮ ಕಹಾನಿ,ನಾವೇ ಅದರ ಪಾತ್ರಗಳೆಂದು ಗೊತ್ತಾದಾಗ ಆಗುತ್ತಿದ್ದೇವೆ ಮೌನಿ,ಕಾರಣ ಪ್ರೇಮ ಮೂರ್ತಿ ಮಸಕು ಮಸುಕಾಗಿ ಕಾಣುತ್ತಿದೆ ದೂರ ಸಾಗಿ ಬಂದ ನಮಗೆ.

ಈಗಷ್ಟೇ ಬಂದ ಸುದ್ಧಿ ಹಲವಾರೋಗಗಳಿಗೆ ತುತ್ತಾಗಿದ್ದಾನೆ ಪಾಗಲ್ ಪ್ರೇಮಿ, ಪರೀಕ್ಷಿಸಲು ರಕ್ತವೆ ಇರದ ಅನಾಮಿ,ಬಸಿದು ಬರೆದ ರಕ್ತದ ಪ್ರೇಮ ಪಾತ್ರಗಳೇ ಇವನ್ನೆಬ್ಬಿಸಿದ ಸುನಾಮಿ.

ಮತ್ತದೇ ನೆಲ ಹಲವು ಹೃದಯಗಳಿಗೆ ಜನನ, ಅರಳಿ ನರಳುವವು ಎಷ್ಟೋ,ನಗುವವು ಎಷ್ಟೋ ಲೆಕ್ಕವಿಡಲಾಗದ ನೆಲದವ್ವ ಮತ್ತೆ ಮೌನಿ, ಮರಳಲ್ಲಿ ಮರೆಯಾದ ಹೆಜ್ಜೆ ಗುರುತುಗಳಂತೆ.

- ನಂದು

01 Mar 2021, 04:19 pm

ಬಾಳ ಸಂಗಾತಿ

ಮಾಧುರ್ಯದ ಆ ನಿನ್ನ ಮಾತು
ನನ್ನ ಬಾಳಲ್ಲಿ ಮಂದಹಾಸವ ತಂದಿದೆ...
ಚಂದ್ರನನ್ನು ತಂದು ಕೈಗೆ ಇಡೆಲೇ ಎನ್ನಲಾರೆ
ಆ ಬೆಳದಿಂಗಳ ಕತ್ತಲಲ್ಲಿ ನಿನ್ನ ಕೈ ತುತ್ತು ತಿನ್ನುವಾಸೆ..
ಕತ್ತಲೆ ಆವರಿಸಿದ ನನ್ನೀ ಬಾಳಲ್ಲಿ
ಮಿಂಚಾಗಿ ಬಂದು ದೀವಿಗೆಯಂತೆ ಮನವ ಬೆಳಗಿಸಿದೆ...!
ಮೌನದಲ್ಲೆ ನನ್ಮನವನ್ನ ನಿನ್ನೆಡೆಗೆ ಸೆಳೆದೆ
ಮನ ಪೂರ ನೀ ಆವರಿಸಿ ನೆಲೆಯಾಗಿ ಕುಂತೆ.!
ಅದೇ ಎಷ್ಟೇ ಕಷ್ಟ ಬರಲಿ ನಮ್ಮ ನಡುವಿನ
ಪ್ರೀತಿಗೆ ಕೊನೆಯಾಗದಿರಲಿ...!
ಕಷ್ಟವೋ ಸುಖವೋ ನೆಮ್ಮದಿಯ ಜೀವನ
ಸಾಗಿಸಿಬಿಡುವ ನಿನಗೆ ನಾನು ನನಗೆ ನೀ ಎಂದು...!
ಮನದ , ಮನೆಯ ಒಡೆತಿಯಾಗಿ ಆಯ್ಕೆಯಾದೆ
ನನ್ನ ಆಯ್ಕೆ ಸರಿಯಾಗಿದೆ ಇಂದೂ ಎಂದೂ ಎಂದೆಂದಿಗೂ ನೀನೇ ನನ್ನ ಬಾಳ ಸಂಗಾತಿಯೆಂದೂ...!
ನಾವಾಗಬೇಕು ಸತಿ ಪತಿಯಾಗಿ ಎಂದೆಂದಿಗೂ
ಬರೆದೆ ನಾ ಇಂದೂ ನನ್ನೊಲವಿನ ಜೀವಕ್ಕೊಂದು
ನನ್ನೀ ಒಲವ ವರ್ಣಿಸಲು ಪದಗಳು ಸಾಲದು ಪುಟಗಳು ಎಣಿಸಲಾಗದು
ನನ್ಮನದ ಒಲವಿಗೆ ಪುಟ್ಟ ಉಡುಗೊರೆಗೆ ನಿನಗೆಂದು..!
ಇಂದಿಗೆ ಮಾತ್ರ ಸೀಮಿತವಲ್ಲ ಈ ಉಡುಗೊರೆ ಜೀವನ ಪೂರ ನೆನೆಪಿನ ಅಂಗಳದಲ್ಲಿ ನಮ್ಮ ಜೋಡಿ ರಾರಾಜಿಸಬೇಕು...
ಹೇ ಒಲವೇ ಹಿಡಿಸಿತೆ ನನ್ನೀ ಪುಟ್ಟ ಕವನ....!!

- sharan

16 Feb 2021, 08:29 am

ಪ್ರೀತಿ

ಅಲ್ಲಿಹುದು,
ಇಲ್ಲಿಹುದು,
ಎಲ್ಲಿಹುದು ಪ್ರೀತಿ ?
ಅಣುವಾದಿ ಅನಂತದೊಳಡಗಿಹುದು ಪ್ರೀತಿ

ಬಸಿರ ಪೊತ್ತು ಹಡೆದವಳ ಮಡಿಲೊಳಗೆ ಪ್ರೀತಿ
ಭುಜದಿ ಹೊತ್ತು ನಡೆದವನ ತೋಳೊಳಗೆ ಪ್ರೀತಿ
ಅಕ್ಕರದಿ ಅಕ್ಷರಮಿತ್ತ ಗುರುವೊಳಗೆ ಪ್ರೀತಿ
ತಾಯ್ನುಡಿಯ ಸವಿಜೇನ ಸುಧೆಯೊಳಗೆ ಪ್ರೀತಿ

ಸೋದರಿಕೆಯಾದರದ ಅಪ್ಪುಗೆಯೆ ಪ್ರೀತಿ
ಮನದನ್ನೆಯುಂಗುರದ ಒಪ್ಪುಗೆಯೆ ಪ್ರೀತಿ
ಅಳುವ ಕಂದನ ತೊದಲು ನುಡಿಗಳದು ಪ್ರೀತಿ
ಉಳುವ ರೈತನ ಬೆವರ ಹನಿಗಳದು ಪ್ರೀತಿ

ಹರ ಕುಣಿದ, ಹರಿ ತಿರಿದ, ರವಿ ಸುರಿದ, ಕವಿ ಬರೆದ
ಎಲ್ಲಕ್ಕು ಮೊದಲಾಗಿ ಕಾರಣವು ಪ್ರೀತಿ,
ವಸುಂಧರೆಯ ಒಡಲೊಳಗು ಸದಾ ಮೊರೆವ ಕಡಲೊಳಗು
ತುಂಬಿಹುದು ಆನಂದದಿoಬುಗೆಯ ಪ್ರೀತಿ,

ನಾನಳಿಯೆ, ನೀನಳಿಯೆ, ಜನರಳಿಯೆ, ಜಗವಳಿಯೆ
ಇದಕುಂಟೆ ಆದಿ ?
ಇದಕುಂಟೆ ಅಂತ್ಯ ?
ಯುಗಕಳೆದು ಮಗದೊಂದು ಯುಗಮುಗಿಯೆ
ಬಿರಿಯುವುದು ಪ್ರೀತಿ......
ಮೆರೆಯುವುದು ಪ್ರೀತಿ.....
ಭೋರ್ಗರೆಯುವುದು ಪ್ರೀತಿ...........


- Darshan Bidare

14 Feb 2021, 01:54 pm

ನಿಷ್ಕಲ್ಮಶ ಪ್ರೀತಿ

ನಿನ್ನ ನಿಷ್ಕಲ್ಮಶ ಕಣ್ಣೋಟ,
ಸೆಳೆಯಿತು ಗೆಳೆಯ ಅದುವೇ ನನ್ನ ನಿನ್ನತ್ತ,
ನಿನಗೆ ಹೇಳಲಾಗದ ನನ್ನ ಪ್ರೀತಿಯ,
ಹೇಗೆ ನೀ ಅರಿತೇ ಗೆಳೆಯ,

ನಿನ್ನ ನಿಷ್ಕಲ್ಮಶ ಪ್ರೀತಿಗೆ ಇಲ್ಲ ಸರಿಸಾಟಿ,
ಗೆಳೆಯ ನನ್ನ ನಮಸ್ಕಾರಗಳು ನಿನಗೆ ಕೋಟಿ ಕೋಟಿ.

- Veena

11 Feb 2021, 08:27 pm

ಧಣಿ

ದೇವಾಲಯ ಸುತ್ತಿ
ಮೂರ್ಖನಾಗಬೇಡ
ಶಾಲೆಗೆ ಕಲಿತು
‌‌ ಜಾಣನಾಗು
ಕಲ್ಲು ಪೂಜಿಸುವ
ಮೂಢ ಮನುವಾದಿಯಾಗಬೇಡ
ಎಲ್ಲರನ್ನೂ ಗೌರವಿಸುವ
ಮಾನವತಾವಾದಿಯಾಗು
ನೀ ಯಾರನ್ನು ಯಾವ
ಜಾತಿ ಧರ್ಮ ಅನುಸರಿಸಬೇಡ
ನಿನ್ನನೇ ಅನುಸರಿಸುವಂತ
ದೊಡ್ಡ ಜ್ಞಾನಿಯಾಗು
ಗುಡಿ ಗೋಪುರಕ್ಕೆ
ದೇಣಿಗೆ ಕೊಟ್ಟು ದಡ್ಡನಾಗಬೇಡ
ದಣಿದವನಿಗೆ ಅನ್ನ
ಕೊಡುವ ಧಣಿಯಾಗು

- ರಾಜು ಹಾಸನ

08 Feb 2021, 08:30 pm

ಹೃದಯದ ಪಿಸುಮಾತು...

ಭಾವನೆಯೇ ಬದುಕಿನ ಬಣ್ಣ...
ತಂಪು ಗಾಳಿಯ ದಾಳಿಗೆ,
ಮಾತನಾಡುತ್ತಿದೆ ಕಣ್ಣರೆಪ್ಪೆಯು
ಕೂದಲಿನ ಜೊತೆಗೆ,
ನಿದ್ದೆಯು ಬರುತ್ತಿಲ್ಲ ನನ್ನ ಕಣ್ಣಿಗೆ,
ಮುತ್ತಿಡಬೇಕಾಗಿದೆ ನೀ
ನನ್ನಯ ತುಟಿಯೆಂಚಿಗೆ,
ನಿದ್ದೆಯಲ್ಲೂ ಈ ಹೃದಯಕ್ಕೆ
ನಿನ್ನದೆ ಹೊಚ್ಚಿಗೆ,
ಮನಸ್ಸಿನಲ್ಲೂ ಮೌನ ಆವರಿಸಿದೆ
ಕಾರಣ ನೀ ಬಂದೆ ನನ್ನಯ ಕನಸಿಗೆ,
ಜೀವನದ ಅದ್ಯಾಯದಲ್ಲಿ ನನ್ನನ್ನ
ಮೊದಲನೇಯ ಪುಟವಾಗಿಟ್ಟುಕೋ,
ಇದೆ ನೀ ನನಗೆ ನೀಡುವ ಸಲುಗೆ...
ರೋಹಿಣಿ M....

- Rohini barki

06 Feb 2021, 09:38 pm