ದುಡ್ಡಿಗೆ ಬೆಲೆ ಇದ್ದರು
ಮಾನವಿಯತೆಗೆ ಬೆಲೆ
ಕಟ್ಟಲಾಗದು
ದುಡ್ಡು ದುಡಿದು
ದೊಡವನಾದರು
ದುಡ್ಡು ದೊಡ್ಡವನನ್ನು
ಉಳಿಸಿ ಬೆಳಸಿದ ದೇವರು
ದುಡಿಮೆಯ ದೇವರು
ಕಾರ್ಮಿಕ ದೇವರು
ಈ ದೇಶದ ಆಸ್ತಿ
ಆಸೆ ಕನಸುಗಳಿಗೆ
ಅಂತ್ಯವಿಲ್ಲದಿದ್ದರೂ
ಅಂತ್ಯವಿರುವ
ಅತ್ಮ ಜೀವಕ್ಕೆ ಹಣದ
ಮದಬೇಡ
ಸಿರಿ ಸಂಪತ್ತಿನ
ಜಂಬ ಬೇಡ
ಶಾಶ್ವತವಲ್ಲದ
ಹಣ ಗಂಟ್ಟಿದ್ದರು
ಬೆಲೆ ಕಟ್ಟಲಾಗದಯ್ಯಾ
ದುಡಿದು ಕೂಡಿಟ್ಟು
ಕೊಳ್ಳಲಾಗದಯ್ಯಾ
ಮನುಷ್ಯತ್ವದ ಗುಣ
ಮಾನವಿಯತೆ ಗುಣ
ಯಾರ ಖುಷಿಗೆ ಯಾರ ಒಲವಿಗೆ
ಗೋವು ಹತ್ಯೆ ನಿಷೇಧ ಕಾಯ್ದೆ
ಗೋವು ನಂಬಿ ಬದುಕು ನೆಡೆಸುವ
ಬಡ ಜನರ ರೈತ ಜನರ ಬಾಳು
ಗೋಳಾಗಿಸಿದ ಹುಚ್ಚು ಕಾಯ್ದೆ
ಮನುವಾದಿಗಳ ಮನ ಮೆಚ್ಚಿದ ಕಾಯ್ದೆ
ದೇಶಕ್ಕೆ ಬಂದು ಒದಗಿದ ದೊಡ್ಡ ಕಾಯಿಲೆ
ಧನ ಕಾಯುವವನಿಗೆ ಗೊತ್ತು
ಗೋವಿನ ಬಾಳು ಗೋಳು
ಜಾತಿ ಧರ್ಮದ ಕೊಚ್ಚೆ ಗುಂಡಿಗೆ
ಬಿದ್ದವನಿಗೇನು ಗೋತ್ತು
ಗೋವಿನ ಬದುಕು ಬಾಳು ಗೋಳು
ಗೋವಿನ ಹಾಲು ಕುಡಿದು
ವಿಷ ಕಕ್ಕವು ವಿಷ ಕಾರುವ
ಮನುವಾದಿಗಳಿಗೇನು ಗೋತ್ತು
ಗೋವು ಸಾಕುವ ಗೊಲ್ಲನ ಪಾಡು
ಬಡ ಜನರ ಹೊಟ್ಟೆ ಬಟ್ಟೆ
ಬದುಕು ಬಾಳಿನ ಪಾಡು
ಜಾತಿ ಮತ ಧರ್ಮದ
ಹುಚ್ಚು ಹೆಚ್ಚು ಹೆಚ್ಚಾಗಿ
ಜಾತಿ ಧರ್ಮದ ಅಂಧ ಜನರ
ಮೆಚ್ಚಿಸಲೆಂದು ತಂದ ಕಾಯ್ದೆ
ಮಾರಕ ಮಾರಕ ಮಾರಕ
ಹಳ್ಳಿ ದಿಲ್ಲಿಗೆ ಹರಡಿದ ಕಾಯಿಲೆ
ದೇಶಕ್ಕೆ ಅಂಟಿಕೊಂಡಿರುವ
ಮಹಾಮಾರಿ ಕಾಯಿಲೆ
ಮನುವಾದಿಗಳ ಹುಚ್ಚು ಕಾಯ್ದೆ
ರೈತರ ಕಷ್ಟವೇ ತಿಳಿಯಾದ
ಕಳ್ಳ ಸುಳ್ಳ ಮನುವಾದಿಗಳಿಗೇನು ಗೋತ್ತು
ರೈತ ಬಂಧು ಗೋವಿನ ಕಷ್ಟ ಸುಖ ಗೋಳಾಟ
ಗೋವು ಸಾಕಿದವನಿಗೆ ಗೋತ್ತೇ ಹೊರೆತು
ಬೀದಿಯಲ್ಲಿ ನಾಯಿ ನರಿ ಹಿಡಿದು
ನಡೆದು ಸಾಗುವವನಿಗೇನು ಗೋತ್ತು
ಕಲ್ಲು ಕಂಬದ ಗೊಂಬೆಗೆ
ಹಾಲು ಮೊಸರು
ಬೆಣ್ಣೆ ತುಪ್ಪ
ಸುರಿದು ಕಳೆಯುವ
ಮೂಢ ಜನರು
ದಣಿದ ಜನರು
ಜೀವ ತಣಿಸಲು
ನೀರು ಕೇಳಿದರೆ
ಮಡಿ ಮೈಲಿಗೆ ಎಂದು
ನಿರಾಕರಿಸಿ ದೂರಸರಿದು
ಬೊಗಸೆ ನೀರು
ಸುರಿದು ಎರಚುವರಯ್ಯಾ
ನೀಚ ಮನಸಿನ
ಮೂಢ ಜನಗಳು
ದಣಿದವರಿಗೆ ನೀರು
ಕೊಡದ ಮೂಢ ಜನರಿಗೆ
ದಣಿದ ವ್ಯಕ್ತಿ ಬೆವರು ಸುರಿಸಿ
ದುಡಿದು ಕೊಟ್ಟ ಅನ್ನ ಮಾತ್ರ
ಇವರ ಹೊಟ್ಟೆಗೆ ಬೇಕಯ್ಯಾ
ಇದು ಯಾವ ಧರ್ಮವೂ
ಬಡತನಕ್ಕೆ ಮೂಲ ಕಾರಣ
ಮೂಢನಂಬಿಕೆ ಆಚಾರ
ಆಚಾರ ದಿಕ್ಕರಿಸಿ
ವಿಚಾರ ಸ್ವೀಕರಿಸಿ
ಆಚಾರಕ್ಕೆಇಲ್ಲದಿರಲಿ
ನೆಲೆ ಬೆಲೆ ಮೂಲ ಬೆಲೆ
ವಿಚಾರಕ್ಕೆ ಸಿಗಲಿ
ನೆಲೆ ಬೆಲೆ ಒಳ್ಳೆ ಬೆಲೆ
ಆಚಾರಗಳು ಇದ್ದರು
ಇರಲಿ ಸೀಮಿತವಾಗಿರಲಿ
ನಿಮ್ಮ ಮನೆ ಮಂದಿರ
ಹಟ್ಟಿಯ ಒಳಗಿರಲಿ
ವಿಚಾರಗಳು ಹುಟ್ಟಿ
ಬರಲಿ ಬಯಲಿಗೆ
ಊರು ಕೇರಿ ಜಗದ
ತುಂಬೆಲ್ಲ ಹರಡಲಿ
ಜನರ ಏಳಿಗೆ ಬಯಸುವ
ದೇಶಕ್ಕೆ ಬೇಕು ವಿಚಾರವೇ
ಹೊರೆತು ಆಚಾರವಲ್ಲಾ
ಆಚಾರ ಹಣೆಗೆ ಅಂಟಿಸಿಕೊಂಡ
ಮೂಢನಂಬಿಕೆ ಮೈ ತುಂಬಿಕೊಂಡ
ದೇಶದ ಏಳಿಗೆ ಕುಂಠಿತ ಕುಂಠಿತ
ಹಾಗಾಗಿ ಆಧರಿಸಬೇಕು
ಸ್ವೀಕರಿಸಬೇಕು ಸಂವಿಧಾನದ ವಿಚಾರ
ಬಿಟ್ಟುಬಿಡಬೇಕು ತಿರಸ್ಕರಿಸಬೇಕು
ದಿಕ್ಕರಿಸಬೇಕು ಮೂಢನಂಬಿಕೆ ಆಚಾರ
ಒಡೆದು ಹೋದ ಮೋಡದ ಒಳಗಿಂದ ಮಳೆಯು ಸುರಿಯುತ್ತದೆ ! ಒಡೆದ ಹೋದ ಭತ್ತದಿಂದ ಉಣ್ಣೋ ಅಕ್ಕಿ ಸಿಗುತ್ತದೆ ! ಒಡೆದ ಹೋದ ಬೀಜದಿಂದ ಇನ್ನೊಂದು ಗಿಡ ಬೆಳೆಯುತ್ತದೆ ! ನಾವು ಮಾತ್ರವೇ ಒಡೆದುಹೋದರೆ ಚಿಂತೆಯ ಸಮುದ್ರದಲ್ಲಿ ಮುಳುಗಿ ಬಿಡುತ್ತೇವೆ! ಒಡೆದು ಹೋದ ಮನಸಿಗೆ ಪ್ರೀತಿಯೇ ಅಸ್ತ್ರ! ಒಡೆದು ಹೋದ ಬಾಳಿಗೆ ನಂಬಿಕೆಯೇ ಮಂತ್ರ! (ಹರಿಮಹೇಂದ್ರನ್)
ಗರ್ಭದಲ್ಲಿ ಭ್ರೂಣವ ಬೆಳೆಸಿದಳು! ಕರುಳು ಬಳ್ಳಿಯ ಮೂಲಕ ಊಟವ ಉಣಿಸಿದಳು! ಗಂಡೋ ಹೆಣ್ಣೋ ಗೊತ್ತಿಲ್ಲದೆ ಪ್ರೀತಿಸಿದಳು! ಒಂಬತ್ತು ತಿಂಗಳು ಕಷ್ಟಪಟ್ಟು ರಕ್ಷಣೆ ಮಾಡಿದಳು! ಜನನವ ಕೊಟ್ಟು ಈ ಭೂಮಿಗೆ ಪರಿಚಯಿಸಿದಳು! ಹೆರಿಗೆಯ ನೋವು ನಮ್ಮೆಲ್ಲರ ಸೃಷ್ಟಿ! ಅಮ್ಮ ಎನ್ನುವ ಕೂಗೆ ಶಕ್ತಿ! (ಹರಿಮಹೇಂದ್ರನ್)