Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪಾಠ ಪಾಠ

ಹುಟ್ಟಿದಾಗ ಬರುವುದು ಜಾತಕ
ಸತ್ತಾಗ ಬರುವುದು ಸೂತಕ
ಹುಟ್ಟು ಸಾವಿನ ಮಧ್ಯೆ
ನೆಡೆಯುವುದು ಭರ್ಜರಿ ನಾಟಕ
ಹಸಿದವರಿಗೆ ಬಡತನದ ನರಕ
ಕೊಬ್ಬಿದವರಿಗೆ ಜೀವನ ಸಾರ್ಥಕ
ದುಡಿಮೆಯೇ ನಮ್ಮ ಕಾಯಕ
ಇಷ್ಟೆ ಮನುಜ ಜನ್ಮದ ಯಾಚಕ


ಬಣ್ಣ ಹಚ್ಚದೆ
ನೃತ್ಯ ನಾಟಕ ಮಾಡುವ
ನವರಂಗಿ ಆಟವಾಡುವ
ಮನುವಾದಿಗಳಿಗೆ
ಕಲಿಸಬೇಕಾಗಿದೆ
ಜೀವನದ ಪಾಠ ಪಾಠ

- ರಾಜು ಹಾಸನ

28 Dec 2020, 06:58 pm

ನಿಟ್ಟುಸಿರು

ಬಡವ ಶೋಷಿತರ
ತಂಟ್ಟೆಗೆ ಬಂದರೆ
ಕೈ ಕಾಲು ಮುರಿದು
ಹೋಗೆ ಆಡಿಸಿ
ಚಟ್ಟ ಪಟ್ಟ ಕಟ್ಟಿ
ತಮ್ಮಟೆ ಬರಿಸುವೆವು
ಮನುವಾದಿಗಳ
ಹೆಣದ ಹಿಂದೆ ಮುಂದೆ

ಸುಮ್ಮನಿದ್ದಾರೆ ಸರಿ ಸರಿ
ಕೆಣಕಿದರೆ ರುಂಡ ಮುಂಡ
ಬೀಳುವುದು ಗ್ಯಾರಂಟಿ
ನೊಂದ ಜನರ ಕಣ್ಣಲ್ಲಿ
ಕಣ್ಣೀರು ವರಿಸದಿದ್ದರು
ತರಿಸಬೇಡಿ ತರಿಸಿದರೆ
ಹರಿಯುವುದು ಮನುವಾದಿಗಳ
ರಕ್ತದ ಹೊಳೆ ಹೊಳೆ ಹೊಳೆ

ಕೆರಳಿಸಬೇಡಿ ಕೆರಳಿಸಬೇಡಿ
ಮಲಗಿದ ಮಾದ ಗಜಗಳ
ನೊಂದ ಬಡ ಜನರ
ಕೆರಳಿಸಿ ದಿಕ್ಕಾಪಾಲಾಗಿ
ಹಳ್ಳ ಕೊಳ್ಳ ಬಿದ್ದು
ಓಡೋಡಿ ಬಚ್ಚಿಕೊಂಡರು
ಮರೆಯಬೇಡಿ ಬರೆದು
ಇಟ್ಟುಕೊಳ್ಳಿ ಮನುವದಿಗಳೆ
ನಿಮ್ಮ ಹಣೆ ಎದೆಯ ಮೇಲೆ
ಕೆರಳಿದ ಮಾದ ಗಜಗಳು
ನೊಂದ ಬಡ ಜನರು
ಮುನಿದು ಕೈ ಕಾಲಿಟ್ಟರೆ
ಅಪ್ಪಚ್ಚಿ ಆಗಿ ಹೋಗುವಿರಿ
ತಾಳಾ ತಾಳಾ ಪಾತಾಳ ಲೋಕ

ಹೆದರಿಸಿ ಬೆದರಿಸಿ
ಓಡಿಸಲು ಬರಬೇಡಿ ಬಂದರೆ
ಬಡವರ ನಿಟ್ಟುಸಿರು
ಬೆಂಕಿ ಬಿರುಗಾಳಿಯಾಗಿ
ಸುಂಟರಗಾಳಿಯಾಗಿ
ಬಡಿದೆದ್ದು ಸಿಡಿದೆದ್ದು
ಸುಟ್ಟಾಕುವುದು
ಮನುವಾದಿಗಳ ಹೆಣ
*********ರಾಜು ಹಾಸನ*********

- ರಾಜು ಹಾಸನ

28 Dec 2020, 01:11 pm

ದೊರೆ ದೊರೆ

ದೊರೆ ದೊರೆ
ಊರು ಕೇರಿ
ರಾಜ್ಯ ದೇಶ
ಸರ್ಕಾರ ಆಳುವ
ಗಣಿ ಧಣಿ
ಚಿಕ್ಕ ದೊಡ್ಡ
ದೊರೆಯಾದರೆ
ದೊರೆ ದೊರೆ
ದೊರೆಗಳನ್ನಳುವಾ
ರಾಜ ಮಹಾರಾಜ
ದೊರೆ ದೊರೆ
ಬಾಬಾ ಸಾಹೇಬ್
ಭೀಮ್ ರಾವ್
ನನ್ನ ದೊರೆ ನನ್ನ ದೊರೆ
*******ರಾಜು ಹಾಸನ*******

- ರಾಜು ಹಾಸನ

28 Dec 2020, 10:46 am

ಗೀತೆ ರಚನೆ ಪ್ರಯತ್ನ

ಹೆತ್ತವರನ್ನು
ಬಿಟ್ಟು ಬಂದ ಮೇಲೆ
ಮತ್ತೆನು ಬಿಡುವುದು ಬಾಕಿಯಿದೆ
ಆಗಿದ್ದು ಆಯ್ತು ಎದ್ದೆಳು ಕಂದ
ಹೊತ್ತಾಯಿತು ಹೋಗು ಮನೆಗೆ

ಮನೆಯ ಕಡೆಯಿಂದ ಬಂದಿದೆ
ಒಂದು ಕರೆಯ ಕೂಗು
ಅಪ್ಪ ಅವ್ವನ ಬೆಚ್ಚನೆ ಪ್ರೀತಿ
ಇಲ್ಲಿ ಸಿಗದು ನಿಂಗಿನ್ನು

ನಿನಗಿದು ಬೆಕಿತ್ತಾ ಕಂದ
ವಾಪಸ್ಸು ಹೊಂಟೊಗು ಮನೆಗೆ

ಬಟ್ಟೆ ತಕೋ ಗಂಟ್ಟು ಕಟ್ಟು
ದಾರಿ ನೋಡಿ ಮನೆಗೆ ನಡಿ

ಎಲ್ಲಿಗೆ ಹೋದ್ರು ಇದ್ದು ಸತ್ತಂಗೆ
ಮನೆಯಲ್ಲೇ ನಿನ್ನ ಉಸಿರಿದೆ
ಹುಟ್ಟಿ ಬೆಳೆದು ಆಡಿ ಬಂದ
ಕಟ್ಟಿದ ಮನೆಯಿದೆ

ಕಿತ್ತೋದ ಕನಸಿಗೆ ಹಳದ್ ಆಸೆಗೆ
ಪ್ರೀತಿಗೆ ಬಿದ್ದು ಬೀದಿಗೆ ಬಂದೆ
ಊರು ಬಿಟ್ಟು ಬಂದು
ತಿಪ್ಪೆ ಗುಂಡಿಯ ಮೇಲಿನ
ತೆಂಗಿನ ಮರದ ಎಳೆನೀರು ನಿನಾದೆ

ಮನೆಗೆ ತಂಗಿ ಬರುತ್ತಾಳೋ
ಮಗನಿಗೆ ಹೆಸರು ಇಟ್ಟಳೋ
ಈ ಸಲ ಬಾರಿ ಮಳೆಯಂತೆ
ಅತ್ತೆಯ ಮಗನ ಮದ್ವೆಯಂತೆ
ಮಾವ ಬಿಲ್ಡಿಂಗ್ ಕಟ್ನಂತೆ
ಚಿಕ್ಕ ತಾತಂಗೆ ಉಸರಿಲ್ವಿಂತೆ
ತಂಗಿಯ ಮಗಳು ಕೆಳ್ತಳೋ
ಆಗಾಗ ನಿನಗೆ ಬೈತಳೋ
ನಿನಗೂ ಸಂಸಾರ ಇದೆ
ವಾಪಾಸು ಹೊಂಟೊಗು ಮನೆಗೆ

ಅವರಿವರ ನೆನಪು ಕಣ್ಣ್ ಕಟ್ಟಿದಂಗೆ
ಕನಸು ಕಾಣಿಸಿಕೊಳ್ಳೋದ್ಯಾಕೆ
ಅಪ್ಪ ಅವ್ವ ಕನಸಿಗೆ ಬಂದು
ಕಣ್ಣೊರೆಸಿ ಅಪ್ಪಿ ಕರೆದು ಬಾ
ಅಂದಂಗೆ ಆಗೋದ್ಯಾಕೆ
ಮಾತು ಕೊಟ್ಟು ಕೆಟ್ಟವನು
ಎಲ್ಲಿಗೆ ಹೋದ್ರು ನಿಮ್ಮದೆ ಧ್ಯಾನ
ಬಂದೆ ಬರ್ತೀನಿ ಊರಿಗೆ
ಬಂದು ಸೇರುತ್ತಿನಿ ಮನೆಗೆ

ಚಡ್ಡಿ ದೋಸ್ತ್ ರೆಲ್ಲ ಕಾಯ್ತಾವರೊ
ಅಕ್ಕ ಪಕ್ಕದ ಜನ ಕೆಳತ್ತಾವರೊ
ಕಲಿಸಿದ ಮಿಸು ಸ್ಕೋಲ್ ಬಿಟ್ರು
ತಂಗಿಯ ಗಂಡ ಸರಿಯಾದ
ಹಾಳೆ ಮನೆ ಮುರ್ದೋಗಿದೆ
ಅವ್ವಂಗೆ ಕಾಯಿಲೆ ಮೊನ್ನೆ ಇಂದ
ಅಪ್ಪಂಗೆ ಕೆಲಸ ಸಾಕಗಿದೆ
ತಂಗಿಗೆ ನಿನ್ದೆ ಯೊಚ್ನೆ
ಅದಗೆಟ್ಟಿದೆ ಬದುಕು
ವಾಪಸ್ಸು ಹೊಂಟೊಗು ಮನೆಗೆ

ಬಟ್ಟೆ ತಕೋ ಗಂಟ್ಟು ಕಟ್ಟು
ದಾರಿ ನೋಡಿ ಮನೆಗೆ ನಡಿ

- ರಾಜು ಹಾಸನ

28 Dec 2020, 12:45 am

ಒಲವು

ವನದೋಳು ಹಕ್ಕಿಗಳ ಜೇಂಕಾರ,
ಬಳ್ಳಿಗಳಿಗೆ ಮರಗಳ ಸಹಕಾರ,
ಇದು ಪ್ರಕೃತಿಯ ವಲವಿನ ಮಹಪೂರ,
ಎರಡು ಹೃದಯಗಳು ಬೆರೆತಾಗ ಪ್ರೀತಿಯ ಸಾಕ್ಷಾತ್ಕಾರ, (ಸತೀಶ್ ಸಾರಗೋಡು )

- sathish

27 Dec 2020, 01:39 pm

ನಂಬಿಕೆ ಉಂಟು

ಹಾರುವೆ ಹಾರುವೆ
ಮುಗಿಲೆತ್ತರಕ್ಕೆ ಹಾರಿ
ಗುರಿ ಮುಟ್ಟುವೇ
ಒಂದಲ್ಲ ಒಂದು ದಿನ
ಸತ್ತು ಸಮಾಧಿ
ಮಣ್ಣಾಗುವ ಮುನ್ನ
ಕಿತ್ತು ತಿನ್ನುವ
ಕಡು ಬಡತನವಿದ್ದರೂ
ಕಾಸು ಇಲ್ಲದ
ಖಾಲಿ ಕಿಸೆ ಆದರೂ
ಛಲದ ಬಲ ಉಂಟು
ಜ್ಞಾನದ ಬೆಳಕೂಂಟು
ಸ್ವಾಭಿಮಾನದ
ಬದುಕೂಂಟು
ಓದು ಬರಹದ
ಅರಿವು ಉಂಟು
ಸಾಧನೆಯ ಸಾಧಿಸು
ಸಾವಲು ಉಂಟು
ಕನಸು ನನಸಿನಾ
ರೆಕ್ಕೆ ಪುಕ್ಕ ಕಟ್ಟಿ
ಹಾರುವ ಹಾರುವೇ
ಆಗಸಕ್ಕೆ ಹಾರುವ
ಮನಸ್ಸು ಉಂಟು
ಬೆಂಕಿ ಬಿರುಗಾಳಿ ಬಂದರು
ಎದುರಿಸಿ ದಡ ಸೇರುವ
ಭರವಸೆ ಉಂಟು
ಗುರಿ ಮುಟ್ಟುವ
ನಂಬಿಕೆ ಉಂಟು
*********ರಾಜು ಹಾಸನ*********

- ರಾಜು ಹಾಸನ

26 Dec 2020, 11:05 pm

ನಿನಗಾಗಿ ಈ ಹಾಡು


ನನ್ನೊಳಗೆ ನನ್ನ ಎದೆಯೊಳಗೆ
ಹುದುಗಿದ ಹಾಡಿದು ನಿನಗಾಗಿ
ಬದುಕಿನಲಿ ಈ ಬವಣೆಯಲಿ
ಸವೆಸಿದ ಜಾಡಿದು ನಿನಗಾಗಿ...

ತಿರು ತಿರುಗಿ ಮತ್ತೆ ಮರು ಮರುಗಿ
ಒರಗಿದೆ ನಿನ್ನೆದೆ ಗೂಡಿನಲಿ...
ಪ್ರೀತಿಯ ಅಪ್ಪುಗೆ ಆ ಸವಿ ನೆನಪಿಗೆ
ಮೆರಗನು ತಂದಿದೆ ನಾಡಿಯಲಿ..

ಕಾರಣ ನೂರಿದೆ ಮೌನದ ಹಂಗಿದೆ
ಸ್ವರವಿದು ತಗ್ಗಿದೆ ಕೊರಳಿನಲಿ
ಭಾರದ ಭಾವವು ಎದೆಯಲಿ ನಿಂತು
ಹೆರವಲು ಬಯಸಿದೆ ಧ್ವನಿಗಾಗಿ

ಆಡಿದ ಮಾತಿಗೆ ನಿಂತರೆ ಹೇಗೆ.?
ಕಾಡಿದೆ ದಿನವಿಡೀ ಮನಸಿನಲಿ
ಗೂಡನು ತೊರೆಯಲು ನಿಂತರೆ ಹೇಗೆ.?
ಬಡಿತವು ಏರಿದೆ ಹೃದಯದಲಿ..

ಕ್ಷಮೆಗಾಗಿ ಈ ಹಾಡು
ನಮಗೇಕೆ ಈ ಪಾಡು
ಜೋಡಿಯಲಿ ಹಾಡೋಣ
ಕೂಡಿ ನಲಿದಾಡೋಣ...

ಜಗದೀಶ ತಿಗರಿ ಹೊಳಗುಂದಿ

- Jagadeesh tigari

26 Dec 2020, 05:59 pm

ದುಡಿಯಿರಿ

ದುಡಿಯಿರಿ
ದಡಿಯಿರಿ
ದುಡ್ಡು ದುಡಿದು
ದೊಡ್ಡವರಾಗಿ
ಬೆಳೆಯಿರಿ ಬೆಳೆಯಿರಿ
ಮುಗಿಲೆತ್ತರಕ್ಕೆ
ಬೆಳೆದು ನೆರಳಾಗಿ
ನಿಲ್ಲಿರಿ ನಿಲ್ಲಿರಿ
ಮನುವಾದಿಗಳ
ಗುಲಾಮಗಿರಿಗೆ
ಸೆಡ್ಡು ಹೊಡೆದು
ಎದ್ದು ನಿಲ್ಲಿರಿ
ಏಟಿಗೆ ಏಟು
ತಿರುಗೇಟು ಕೊಟ್ಟು
ದುಷ್ಟ ಜನರ
ಹಿಮ್ಮೆಟ್ಟಿಸಿರಿ
ಬದುಕಿರಿ ಬದುಕಿರಿ
ಸ್ವಾಭಿಮಾನಿಯಾಗಿ
ಬದುಕಿ ಬಾಳಿರಿ
ಜೈ ಭೀಮ್ ಜೈ ಭೀಮ್

- ರಾಜು ಹಾಸನ

26 Dec 2020, 02:37 pm

ಯಾಕೆ ಹೀಗೆ

ಅಸೂಹೆ,ಅಹಂ ,ಆವೇಶಗಳು
ತಳ್ಳುತ್ತಲಿವೆ ಅಜ್ಞಾನದ ಕೂಪಕ್ಕೆ
ನೀಡುವ ಉಪದೇಶವ
ಪಾಲಿಸಲಾಗದ ಆವೇಶ
ಮಡಿಲ ಕೆಂಡವಾಗಿ
ಸುಡುತಿದೆ ಪ್ರತಿದಿವಸ
ಆವೇಶಕ್ಕೆ ಬಲಿಯಾಗದೆ
ಆಲೋಚಿಸಿ ನೋಡು
ಜೀವನದ ಮರ್ಮ ತಿಳಿಯುವುದು.

- ಶಕುಂತಲಾ

25 Dec 2020, 09:54 pm

ಸುನುಡಿ

ಮಾತಿಗಿಂತ ಕೃತಿ ಮೇಲು
ಕೃತಿಯಿಂದ ಚಂದ ಬಾಳು
ಮಾತಿಂದ ಮನೆ ಹಾಳು
ಮಾತಾಗಲಿ ಮುತ್ತಿನ ಹರಳು

ಮಾತೊಂದೇ ಸಾಧನೆಯಲ್ಲ
ಸಾಧನೆ ಮಾತಾಗಬೇಕಲ್ಲ
ಸತ್ತಾಗ ಇಹರೆಲ್ಲರ
ಮಾತಲಿ ಮುತ್ತಗಬೇಕಲ್ಲ

ಸದರ ಸಲಿಗೆಯಲಿ
ಸವಿನುಡಿಯು
ರಸನೆಯಲಿ ರಸವಾಗಿ
ಹೊರಚೆಲ್ಲಲಿ

ಘಮ ಘಮದಲಿ
ಹೊರಸೂಸುವ
ಸುಮಸುಗಂಧವಾಗಲಿ
ಸುನುಡಿಗಳ ಸಂಗೀತ...

ಜಗದೀಶ ತಿಗರಿ ಹೊಳಗುಂದಿ

- Jagadeesh tigari

25 Dec 2020, 09:46 am