ಓದು ಓದು ಓದು
ಓದು ಬರಹ ಕಲಿತರೆ
ಜ್ಞಾನಿಯಾಗುವೇ
ಕಲಿಯದಿದ್ದರೆ
ಅಜ್ಞಾನಿಯಾಗುವೇ
ಓದು ಬರಹ ಕಲಿತು
ಜ್ಞಾನಿಯಾಗು
ಮನೆ ಬೆಳಗುವ
ದೀಪವಾಗು
ಓದು ಬರಹ ಕಲಿತರೆ
ಸ್ವಾಭಿಮಾನಿ
ಕಲಿಯದಿದ್ದರೆ ಗುಲಾಮ
ಓದು ಬರಹ ಕಲಿತರೆ
ರಾಜ ಮಹಾರಾಜನಾಗುವೆ
ಕಲಿಯದಿದ್ದರೆ
ಕಂಡವರ ಕೈ ಕಾಲಾಳಗುವೇ
******ರಾಜು ಹಾಸನ******
ಜೈ ಭೀಮ್ ಎಂದರೆ ನನ್ನ ಛಲ
ಜೈ ಭೀಮ್ ಎಂದರೆ ನನ್ನ ಬಲ
ಜೈ ಭೀಮ್ ಎಂದರೆ ನನ್ನ ಜ್ಞಾನ
ಜೈ ಭೀಮ್ ಎಂದರೆ ನನ್ನ ಸೂರ್ಯ
ಜೈ ಭೀಮ್ ಎಂದರೆ ನನ್ನ ಪ್ರಾಣ
ಜೈ ಭೀಮ್ ಎಂದರೆ ನನ್ನ ಸ್ವಾಭಿಮಾನ
ಜೈ ಭೀಮ್ ಎಂದರೆ ನನ್ನ ನ್ಯಾಯ ನೀತಿ
ಜೈ ಭೀಮ್ ಎಂದರೆ ನನ್ನ ಬದುಕು
ಜೈ ಭೀಮ್ ಎಂದರೆ ನನ್ನ ಸ್ಪೂರ್ತಿ
ಜೈ ಭೀಮ್ ಎಂದರೆ ನನ್ನ ಶಾಂತಿ
ಜೈ ಭೀಮ್ ಎಂದರೆ ನನ್ನ ಕ್ರಾಂತಿ
ಜೈ ಭೀಮ್ ಎಂದರೆ ನನ್ನ ಗುರು
ಜೈ ಭೀಮ್ ಎಂದರೆ ನನ್ನ ದೇವರು
ಜೈ ಭೀಮ್ ಎಂದರೆ ನನ್ನ ತಂದೆ ತಾಯಿ
ಜೈ ಭೀಮ್ ಎಂದರೆ ಮನುವಾದಿಗಳಿಗೆ ಭಯ
ಜೈ ಭೀಮ್ ಎಂದರೆ ಮನುವಾದಿಗಳಿಗೆ ಭೀತಿ
ಜೈ ಭೀಮ್ ಎಂದರೆ ಮನುವಾದಿಗಳಿಗೆ ನಡುಕ
ಜೈ ಭೀಮ್ ಎಂದರೆ ಮನುವಾದಿಗಳಿಗೆ ಸಿಂಹ ಸ್ವಪ್ನ
ಜೈ ಭೀಮ್ ಎಂದರೆ ಮನುವಾದಿಗಳಿಗೆ ಪರದಾಟ
ಜೈ ಭೀಮ್ ಎಂದರೆ ಮನುವಾದಿಗಳು ಓಟ
ಜೈ ಭೀಮ್ ಎಂದರೆ ಮನುವಾದಿಗಳ ಎದೆಯಲ್ಲಿ ಢವ ಢವ
ಜೈ ಭೀಮ್ ಎಂದರೆ ಮನುವಾದಿಗಳ ಜೀವ ಫುಕಾ ಫುಕಾ
ಜೈ ಭೀಮ್ ಎಂದರೆ ಗತ್ತು ಗಮ್ಮತ್ತು ತಾಕತ್ತು
ಜೈ ಭೀಮ್ ಎಂದರೆ ಇಡೀ ವಿಶ್ವಕ್ಕೆ ಗೊತ್ತು ಅವರು ಜ್ಞಾನ
ದೀನ ದಲಿತರ
ಶಕ್ತಿಯಾಗಿ
ನೊಂದ ಜನರ
ಉಸಿರಾಗಿ
ಭರವಸೆಯ
ಬೆಳಕಾಗಿ
ಜ್ಞಾನದ
ಕಿಡಿಯಾಗಿ
ಅಜ್ಞಾನವಾ
ತೊಲಗಿಸಿ
ದುಷ್ಟ ಜನರ
ಹೆಡೆಮುರಿ
ಕಟ್ಟಿದ
ಛಲ ಬಿಡದ
ಛಲವಾದಿ
ಧೀಮಂತ
ನಾಯಕ
ಭೀಮ್ ರಾವ್
******ರಾಜು ಹಾಸನ******
ಜೊತೆಗೆ ಹುಟ್ಟದಿದ್ದರೇನು
ಜೊತೆಗೆ ನಡೆದಿಲ್ಲವೇನು
ರಕ್ತ ಹಂಚಿಕೊಳ್ಳದಿದ್ದರೇನು
ರಕ್ತ ಸಂಬಂಧದಂತೆ ಹೊಂದಿಕೊಂಡಿಲ್ಲವೇನು
ನೀ ದೂರವಿದ್ದರೇನು
ನಿನ್ನ ಸ್ನೇಹ ದೂರಾದುದೇನು
ಅಂದು ಕಳೆದ ಸಮಯ
ಇಂದಿಗೂ ಸ್ಮರಣೀಯ
ನಿನ್ನೊಡನೆ ಇದ್ದ ಸಮಯ ಕಳೆದಿದೆ
ನಿನ್ನೊಡನೆ ಕಳೆದ ನೆನಪು ಅಳಿಯದು
ನೀ ಶಾಶ್ವತ
ನಿನ್ನ ಸ್ನೇಹ ಚಿರಪರಿಚಿತ.........
--ಕಲಾಕುಸುಮ
ಓದು ಬರಹ ಕಲಿತು
ಮನುವಾದಿಗಳ
ಗುಲಾಮನಾಗಬೇಡ
ಸ್ವಾಭಿಮಾನದ
ಕೂಡಿಯಾಗು
ಮೂಢನಂಬಿಕೆಯ
ಕಪಟ ಸೂತ್ರ
ತಿಳಿದು ತಿಳಿದು
ಕಂಡು ಕಂಡು
ಬೀಳಬೇಡ
ಹಗಲು ಕಂಡ ಬಾವಿಗೆ
ಶಾಶ್ವತವಲ್ಲದ ಕ್ಷಣಿಕವಾದ
ಮನುವಾದಿಗಳ
ಆಸೆ ಆಮಿಷಗಳಿಗೆ
ಜೋತು ಬಿದ್ದು
ಬಿಕ್ಷಕನಾಗಬೇಡ
ಜೊಲ್ಲು ಸುರಿಸಿ
ಸತ್ತು ಸಮಾಧಿಯಾಗಬೇಡ
ಸಂವಿಧಾನವಾ ಅರಿತು
ದಿಟ್ಟ ಹೆಜ್ಜೆ ಇಟ್ಟು
ನಡೆ ನಡೆ ನಿನ್ನ
ಬದುಕು ಬಾಳಿನ ಕಡೆ
ಗುರಿ ಸಾಧನೆಯ
ಉತ್ತುಂಗದ ಕಡೆ ಕಡೆ
*******ರಾಜು ಹಾಸನ*******