Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸದಾ ನಾ.!


ಸದಾ ನಗು ಮುಖವಂತೆ ನನ್ನದು,
ಹೌದು ನನ್ನದು ನಗು ಮುಖವೇ....
ನನ್ನೊಳಗೆ ಎದ್ದಿರುವೆ ಸುನಾಮಿಗೆ
ನಾನೇ ಕಣ್ಣ ರೆಪ್ಪೆಗೆ ಒತ್ತೊತ್ತಾಗಿ ಕಟ್ಟಿಹ
ಅಣೆಕಟ್ಟು ಕಾಣದಂತ ನಗು ಮುಖ!

ಸದಾ ಚಟ-ಪಟ ಮಾತಂತೆ ನನ್ನದು,
ಹೌದು ನಾ ಸದಾ ಮಾತನಾಡುತ್ತಿರುವೆ...
ಬೇಡದ ಮೌನಗಳು ನನ್ನೊಳಗೆ ಬೇರೂರಿರಲು
ಮಾತನಾಡುವಂತೆ ನಟಿಸಿ ಮೌನಕ್ಕೆ
ನೀರ ಹಾಯಿಸದ ಮಾತು ನನ್ನದು!

ಸದಾ ಜಾಗರೂಕ ಹೆಣ್ಮನವಂತೆ ನನ್ನದು,
ಹೌದು ನಾ ಸದಾ ಜಾಗರೂಕತೆಯಿಂದಿರುವೆ..
ಒಂದಷ್ಟು ಅಜಾಗರೂಕತೆಗಳಿಂದ ತಿಂದ ಹೊಡೆತವ
ಮತ್ತೆ ಮರಳಿ ತಿನ್ನುವ ಶಕ್ತಿ ಇಲ್ಲದ
ಅಸಹಾಯಕ ಜಾಗರೂಕತೆ ನನ್ನದು!

- ಅಕ್ಷತ

23 Dec 2020, 08:54 am

ಜಗಜ್ಯೋತಿ ಜ್ಞಾನಜ್ಯೋತಿ

ಖಡ್ಗ ಗುರಾಣಿ ಹಿಡಿದು
ಮನುವಾದಿಗಳು
ಯಾತ್ರೆ ದಂಡಯಾತ್ರೆ
ತಂತ್ರ ಕುತಂತ್ರ ಮಾಡಿ
ಕಿತ್ತುಕೊಂಡರು
ಜನಗಳ ಜೀವಾ ಮಾನ
ಉರುಳಿಸಿದರು
ಜನಗಳ ಹೆಣ
ಬದುಕಿನ ಕಣ
ಜಗಜ್ಯೋತಿ ಜ್ಞಾನಜ್ಯೋತಿ
ಬಾಬಾ ಸಾಹೇಬರು
ಲೇಖನಿ ಹಿಡಿದು
ಸಂವಿಧಾನ ಗ್ರಂಥ
ಬರೆದು ಕೊಟ್ಟರು
ಕುಡಿಯಲು ನೀರು
ಜೀವಿಸಲು ಉಸಿರು
ಹೇಳಿ ತಿಳಿಸಿ ಕೊಟ್ಟರು
ಬದುಕವಾ ರೀತಿ ನಿಯಮ
ನ್ಯಾಯ ನೀತಿ ಸ್ವಾಭಿಮಾನ
ಓದು ಬರಹ ಕಲಿತು
ಸ್ವಾತಂತ್ರವಾಗಿ ಬದುಕಿ
ಬಾಳಲು ಬಿಟ್ಟರು
ಸಮಾನತೆಯ ಹಕ್ಕು ಕೊಟ್ಟು
ಭೀಮ ರಾವ್ ಭೀಮ ರಾವ್

- ರಾಜು ಹಾಸನ

23 Dec 2020, 12:18 am

ಮನುವಾದಿಗಳೇ

ದೀನ ದಲಿತರ ಸೂರ್ಯ
ಜೈ ಭೀಮ್ ಜೈ ಭೀಮ್
ಝೇಂಕಾರ ಜೈಕಾರ
ಹೊತ್ತಿ ಉರಿಸುವುದು
ಮನುವಾದಿಗಳ ಹೊಟ್ಟೆ
ಉರಿದೂರಿದು ಸಾಯಲಿ
ಸತ್ತು ಬಿದ್ದು ಬೀಳಲಿ
ಮನುಷ್ಯತ್ವ ಇಲ್ಲದ
ಮನುವಾದಿಗಳ ಹೆಣ
ದುಷ್ಟ ನೀಚ ಮನುವಾದಿಗಳೆ
ಹೊಟ್ಟೆ ಉರಿದುಕೊಂಡು
ಸಾಯುವ ಬದಲು ತಿದ್ದಿಕೊಳ್ಳಿ
ನಿಮ್ಮ ಕೆಟ್ಟ ನಡೆ ನುಡಿ
ಎಚ್ಚರ ಎಚ್ಚರವಿರಲಿ
ಮನುವಾದಿಗಳೇ ಅಂಕು
ಡೊಂಕಿನ ತಳುಕು ಬಳುಕಿನ
ನಡೆ ನುಡಿ ಹೆಜ್ಜೆ ಇಟ್ಟರೇ
ಹೊಟ್ಟೆ ಬುರುಡೆ ಹೊಡೆದು
ಕಟ್ಟಿಬಿಡುವೆವು
ನಿಮ್ಮ ಸತ್ತ ಹೆಣದ ಮೇಲೆ
ಅರಾಡಿ ಮೂರಾಡಿ ಕಟ್ಟೆ
ಎಚ್ಚರ ಎಚ್ಚರ ಮನುವಾದಿಗಳೇ
***********ರಾಜು ಹಾಸನ***********

- ರಾಜು ಹಾಸನ

21 Dec 2020, 11:53 pm

ಮಡಿಲಲಿ...

ಮಡಿಲಲಿ ತಲೆಯೂ
ಹೀಗೆ ಇರಲಿ
ಕವಿದ‌ ಇರುಳು
ಸರಿದು ಬಿಡಲಿ

ತಲೆಯ ನೇವರಿಸಿತಿರು
ಮನವೂ ಮಲಗಲಿ
ಕತ್ತಲಿಗೂ ನಿದ್ರೆಯತ್ತಿ
ಹೊಂಬೆಳಕಾಗಲಿ

ತಟ್ಟು ತಟ್ಟು ತನುವ
ಮನವು ಹಗುರಾಗಲಿ
ಕಾಡುವ ನೋವುಗಳಿಗೆ
ಕೊಂಚ ಭಯ ತರಲಿ

ಸಿಹಿ ಮುತ್ತೊಂದು
ನೊಸಲಿನ‌ ಪಾಲಿಗಿರಲಿ
ತುಟಿಯಂಚಲಿ ನಸುನಗೆ
ಮಳೆ ಹನಿಯಲಿ

ಜಾರುವ ಮುಂಗುರುಳ
ಕೈ ನಯವಾಗಿ ಸರಿಸಲಿ
ಮುಚ್ಚಿದ ಕಣ್ಣ ತುಂಬಾ
ಕನಸ ಫಸಲಾಗಲಿ

ಕಾಡಿಸುವ ಗೆಳತಿಗೆ
ಲಾಲಿ ಹಾಡೊಂದಿರಲಿ
ಪ್ರೇಮದ‌ ಪರಿಗೆ
ಜಗವೇ ಮಡಿಲಾಗಲಿ

- ಶ್ರೀಕಾವ್ಯ

21 Dec 2020, 11:26 pm

ಒಲಿದರೆ ನಾರಿ ಮುನಿದರೆ ಮಾರಿ

ಓ ಹೆಣ್ಣೆ ಓ ಹೆಣ್ಣೆ
ದೇವರು ದೇವರೆಂದು
ಕಲ್ಲ ಕಂಬವ ಸುತ್ತಿ
ಪೂಜಿಸಿ ಆರಾಧಿಸುವೇಕೆ
ನಿನಗೆ ಓದು ಬರಹದ
ಹಕ್ಕು ಕೊಟ್ಟ ದೇವರು
ಬಾಬಾ ಸಾಹೇಬರ
ಅರಿಯದೆ ಅಜ್ಞಾನದ
ಗುಂಡಿಗೆ ಬೀಳುವೇ ಏಕೆ
ಓ ಹೆಣ್ಣೆ ಓ ಹೆಣ್ಣೆ ಓ ನನ್ನ ಹೆಣ್ಣೆ

ದೇವರು ದೇವರು
ದೇವರೇನ್ನುವಾ ನಿನ್ನ
ದೇವರು ಬಂದು ಕೊಡಲಿಲ್ಲ
ನಿನಗೆ ಸ್ವಾತಂತ್ರ ಸಮಾನತೆ
ಆಚಾರ ವಿಚಾರದ ಹಗ್ಗ ಕಟ್ಟಿ
ಮೂಢನಂಬಿಕೆಯ ಮೂಗುದಾರ
ಬಿಗಿದು ಉಸಿರುಗಟ್ಟಿಸಿ
ಕೈ ಕಾಲು ಮೈ ಮೂಳೆ ಮುರಿದು
ನಾಲ್ಕು ಗೋಡೆಗಳ
ಮಧ್ಯೆ ಕುರಿಸಿ ಬಂಧಿಸಿದ ದೇವರ
ಹಾಡಿ ಹೊಗಳುವೇ ಏಕೆ
ಓ ನನ್ನ ನಾರಿಮಣಿಯೇ

ಗಂಡು ಹೆಣ್ಣಿನ
ಬೇಧ ಭಾವ ಬೀಜ ಬಿತ್ತಿ
ಶೋಷಿಸಿದಾ ದೇವರ
ಪೋಷಿಸಿ ಕೊಂಡಾಡುವೇ ಏಕೆ
ಓ ನನ್ನ ಮರುಳೆ
ಗಂಡು ಹೆಣ್ಣು ಲಿಂಗ
ಬೇರೆಯಾದರು
ಕನಸು ಮನಸು ಜೀವಾ
ಒಂದೇ ಒಂದೇ ಎಂದು
ಸಮಾನತೆ ಬೆಳಕು ಚೆಲ್ಲಿ
ಸ್ವಾತಂತ್ರ ತಂದುಕೊಟ್ಟ
ಬಾಬಾಸಾಹೇಬರ ಮರೆಯಬೇಡ
ಮರೆತು ಬಾಳಬೇಡ
ಆರಾಧಿಸಿ ಪೂಜಿಸು ಓ ನನ್ನ ಹೆಣ್ಣೆ

ಬಾಬಾ ಸಾಹೇಬರ
ಜ್ಞಾನದ ಕಿಡಿ ಹೊತ್ತಿಸಿ
ಸಂವಿಧಾನವ ಅರಿತು
ನೀ ಓದು ಬರಹ ಕಲಿತು
ಅಧಿಕಾರದ ಚುಕ್ಕಾಣಿ ಹಿಡಿದು
ಮುಗಿಲೆತ್ತರಕ್ಕೆ ಬೆಳೆದು ನಿಂತರೆ
ಮನುವಾದಿಗಳ ಕುತಂತ್ರ
ಅಲ್ಲೋಲ ಕಲ್ಲೋಲ
ದುಷ್ಟ ರಾಕ್ಷಸರ ಹುನ್ನಾರ
ಅತಂತ್ರ ಅತಂತ್ರ ಅತಂತ್ರ
ತಿಳಿದು ಬಾಳಿ ಬದುಕಿ
ಪೂಜಿಸಿ ಆರಾಧಿಸು ಓ ಹೆಣ್ಣೆ
*********ರಾಜು ಹಾಸನ*********

- ರಾಜು ಹಾಸನ

21 Dec 2020, 06:49 pm

ಭೀಮ್ ರಾವ್

ಜ್ಞಾನದ ಬೆಳಕು ಚೆಲ್ಲಿ
ಛಲದ ಬಲ ತುಂಬಿ
ಶಿಕ್ಷಣ ಸಂಘಟನೆ ಕಟ್ಟಿ
ಹೋರಾಟ ಚಳುವಳಿ ನಡೆಸಿ
ಮನುವಾದಿಗಳ ಸಂಹಾರಕ್ಕೆ
ದಿನ ದಲಿತರ ಏಳಿಗೆಗೆ
ಸ್ತ್ರೀ ಶೋಷಿತರ ರಕ್ಷಣೆ
ಸಂರಕ್ಷಣೆಗೆ ಪ್ರಾಣ ಒತ್ತೆ ಇಟ್ಟು
ಜೀವನವನ್ನೇ ಮುಡಿಪಾಗಿಟ್ಟು
ಹೋರಾಡಿದ ಛಲವಾದಿ
ಛಲವಾ ಬಿಡದೆ ಹೆಜ್ಜೆ ಇಟ್ಟು
ನ್ಯಾಯ ನೀತಿಯ ಇಡಿದು
ಮುನ್ನುಗ್ಗಿ ನಡೆದು ಘರ್ಜಿಸಿದ
ಭೀಮ ರಾವ್ ಭೀಮ ರಾವ್

ಸಂವಿಧಾನವೇ ನನ್ನ ಶಕ್ತಿಯು
ನ್ಯಾಯ ನೀತಿಯೇ ನನ್ನ ಜೀವನ
ಬಾಬಾ ಸಾಹೇಬರೇ ನನ್ನ ಜೀವವೂ
ಸಿಡಿಲು ಗುಡುಗು ಭೀಮ ಘರ್ಜನೆ
ಬದುಕು ಬಾಳಿನಲ್ಲಿ ಬೇರೆತು ಹೋದ
ಜೀವಾ ಭಾವದಲ್ಲಿ ಕೂಡಿ ಹೋದ
ಜಗದ್ ಜ್ಯೋತಿಯೇ ನಿಮಗೆ ಶರಣು
ದಲಿತ ಸೂರ್ಯ ಮಹಾನಾಯಕ
ಬಾಬಾ ಸಾಹೇಬರೇ
ನಿಮಗೆ ಋಣಿ ಕೋಟಿ ನಮನ

ಮನುವಾದಿಗಳ ಮುಖವಾಡ ಕಳಚಿ
ಪುಸ್ತಕ ಲೇಖನಿ ಖಡ್ಗ ಹಿಡಿದು
ದುಷ್ಟರ ರುಂಡ ಮುಂಡ ಚೆಂಡಾಡಿ
ಸಮಾನತೆಯ ಬೆಳಕು ಚೆಲ್ಲಿ
ಮನುವಾದಿಗಳೇ ಮುಗಿಬಿಳಲಿ
ದುಷ್ಟ ಜನರೇ ಅಡ್ಡಿ ಬಂದರೂ
ಛಲವಾ ಬಿಡದೆ ಹೆಜ್ಜೆ ಇಟ್ಟು
ನ್ಯಾಯ ನೀತಿಯ ಇಡಿದು
ಮುನ್ನುಗ್ಗಿ ನಡೆದು ಘರ್ಜಿಸಿದ
ಭೀಮ ರಾವ್ ಭೀಮ ರಾವ್

- ರಾಜು ಹಾಸನ

21 Dec 2020, 10:42 am

ಬಾನಂಗಳದಲ್ಲಿ ಚಂದಿರ

ಬಾನಂಗಳದ ಚಂದಿರನಲ್ಲಿ ನಾ ಕಂಡೆ
ಸುಂದರ ಚಿಕ್ಕ ಬಿಂಬವನು !!
ಆ ಬಿಂಬದಲಿ ಮೂಡಿವೆ
ಎಣಿಕೆಯಿಲ್ಲದ ಅಂದವಾದ ನಕ್ಷತ್ರಗಳು !!

ಆ ನಕ್ಷತ್ರಗಳಲ್ಲಿಯೂ ಹೊಳೆಯುತ್ತಿತು
ಒಂದು ಅಂದವಾದ ನಕ್ಷತ್ರ, ಎಷ್ಟೊಂದು ಸುಂದರ !!
ಎನ್ನುವುದೇ ನಿಜಕ್ಕೂ ಅದ್ಭುತ !!

ಆ ಅದ್ಭುತ ನಕ್ಷತ್ರದಲ್ಲಿ ನಾ ಕಂಡೆ ನನ್ನದೇ ಬಿಂಬವನು
ಆ ಬಿಂಬವನು ನೋಡಿ ಮೃೆಮರೆತೆ ನನ್ನೊಲಮೆಯ ಲೋಕವನು.

- Shilpa G

20 Dec 2020, 04:56 pm

ಜ್ಞಾನದ ಬೆಳಕು

ಸೂರ್ಯ ಚಂದ್ರರೇ
ಭೂಮಿಗೆ ಬೆಳಕಾದರೂ
ಜನರ ಮನದ
ಜ್ಞಾನದ ಬೆಳಕು
ಬಾಬಾ ಸಾಹೇಬ್
ಭೀಮ್ ರಾವ್ ರವರು

ಸೂರ್ಯ ಚಂದ್ರರೇ
ಮುಳುಗಿ ಉದಯಿಸಿದರು
ಕತ್ತಲು ಕರಗಿ ಹೊತ್ತಾದರೂ
ಹೊತ್ತು ಕರಗಿ ಕತ್ತಲಾದರೂ
ದಿನಬೆಳಗಾದರೂ
ವರುಷಗಳೆ ಉರುಳಿದರು
ಹೊತ್ತಿ ಉರಿಯುತ್ತಿರುವ
ನಂದಾದೀಪ ಜ್ಞಾನ ಜ್ಯೋತಿ
ಬಾಬಾ ಸಾಹೇಬ್
ಭೀಮ್ ರಾವ್ ರವರು
********ರಾಜು ಹಾಸನ******

- ರಾಜು ಹಾಸನ

20 Dec 2020, 02:40 pm

ನನ್ನಾಸೆ....

ಬರಬಹುದು ನನಗು ಕನಸು
ನಾಳೆ ನನ್ನದೆನ್ನುವ ಬದುಕು
ಆದರು ನಾ ಮರೆತು ಬಿಡುವೆ
ಆ ಕನಸು ನೆನ್ನೆಯದೆಂದು....


ಸುಳಿದಾಡಬಹುದು
ನನ್ನಲ್ಲೆ ಬಂಧವು
ನನ್ನೊಡನೆ ನನಗಾಗಿ ಅಲ್ಲದಿದ್ದರು
ಆದರು ನಾ ಸುಳಿದಾಡುವೆ
ನನ್ನವರು ನನಗಾಗಿ ಎಂದು.....


ಇರಬಹುದು ನನ್ನೊಳಗೆ
ನನ್ನ ನಾನೆ ಮರೆತು ಎಲರಿಗಾಗಿ
ಆದರು ನಾ ಅಲೆದಾಡುವೆ
ತನ್ನ ತನವ ಅರಿಯಲೆಂದು........


ಬದುಕು ನನ್ನದೆ ಇರಬಹುದು
ಆದರು ಬದುಕಿನೊಳಗೆ ನಾನೆ
ಮರೆಯಾಗಿರುವೆ ನಾನೆಂದು
ನನ್ನೆ ಹುಡುಕದೆ ಹಾಗೆ.......

ಅರಿಯದೆ ಇರಬಹುದು
ನನ್ನವನ ಅಂತರಾಳ
ಆದರು ನಾ ಇದ್ದು ಬಿಡುವೆ
ಅವನಂತೆ ಎಂದಿಗು ಅವನೊಂದಿಗೆ.....





- ರಾಗಸಿರಿ....

19 Dec 2020, 07:44 pm

ಮಗು

ನೀ ಪೂಜಿಸುವ ದೇವರು
ಆರಾಧಿಸಿದರು ಬರುವುದಿಲ್ಲ
ಬಂದು ಕೊಡುವುದಿಲ್ಲ
ಕೊಟ್ಟು ಕಾಯುವುದಿಲ್ಲ
ನಿನ್ನ ಬದುಕು ಬಾಳು
ನೀ ಸತ್ತಾಗ ಓಡಿ ಬರುವುದಿಲ್ಲ
ಬಂದು ಆಳುವುದಿಲ್ಲ
ಹೆಗಲಿಗೆ ಹೆಗಲು ಕೊಟ್ಟು
ಹೊರುವುದಿಲ್ಲ ನಿನ್ನ ದೇಹ
ನಿನ್ನ ಹೆಣದ ಹಿಂದೆ ಮುಂದೆ
ಬರುವುದಿಲ್ಲವಾದರು
ದೇವರು ದೇವರೆಂದು ಗುಲಾಮ
ದಾಸನಾಗುವ ಬದಲು
ನಿನ್ನ ರಕ್ಷಿಸಿ ಸಂರಕ್ಷಿಸಿ ಸುರಕ್ಷಿಸಿ
ಪೋಷಿಸಿ ಬೆಳೆಸಿದ ದೇವರು
ಬಾಬಾ ಸಾಹೇಬ್ ಭೀಮ್ ರಾವ್ ರವರ
ಜ್ಞಾನದ ಕಿಡಿಯಾಗು
ಸಮಾನತೆಯ ಮಗುವಾಗು

- ರಾಜು ಹಾಸನ

18 Dec 2020, 10:32 pm